ಕರ್ನಾಟಕ

karnataka

ETV Bharat / sukhibhava

ಕೇರಳದಲ್ಲಿ ಕೋವಿಡ್​ನ ಅನಗತ್ಯ ಆತಂಕ ಸೃಷ್ಟಿ ಯತ್ನ; ವೀಣಾ ಜಾರ್ಜ್​ - ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್​

ರಾಜ್ಯದಲ್ಲಿ ಕೋವಿಡ್​ ಕುರಿತು ಅಧಿಕಾರಿಗಳು ನಿರಂತರ ಕಣ್ಗಾವಲಿಟ್ಟು, ಎಲ್ಲ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ದಾರೆ.

Some vested interests are trying to spread a panic of the spread of Covid in Kerala
Some vested interests are trying to spread a panic of the spread of Covid in Kerala

By ETV Bharat Karnataka Team

Published : Dec 19, 2023, 4:15 PM IST

ತಿರುವನಂತಪುರಂ:ಕೇರಳದಲ್ಲಿ ಕೋವಿಡ್​ ಹರಡಿದೆ ಎಂಬ ಸುದ್ದಿಯನ್ನು ಕೆಲವು ಫಟ್ಟಭದ್ರ ಹಿತಾಸಕ್ತಿಗಳು ಹರಡುವ ಪ್ರಯತ್ನ ಮಾಡುವ ಮೂಲಕ ಆತಂಕ ಸೃಷ್ಟಿ ಯತ್ನ ನಡೆಸಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್​ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಕೆಲವು ಫಟ್ಟಭದ್ರ ಹಿತಾಸಕ್ತಿ ಹೊಂದಿರುವವರು ರಾಜ್ಯದಲ್ಲಿ ಕೋವಿಡ್​ ಹರಡಿದೆ ಎಂದು ಆತಂಕ ಹೆಚ್ಚಿಸುವ ಕೆಲಸ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಕೋವಿಡ್​ ಕುರಿತು ಅಧಿಕಾರಿಗಳು ನಿರಂತರ ಕಣ್ಗಾವಲಿಟ್ಟು, ಎಲ್ಲಾ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ನವೆಂಬರ್​ನಿಂದ ಸಂಗ್ರಹಿಸಲಾದ ಎಲ್ಲಾ ಮಾದರಿಗಳನ್ನು ಪರೀಕ್ಷೆಗಳಿಗೆ ಕಳುಹಿಸಲಾಗಿದೆ ಎಂದರು.

ಕಳೆದ ತಿಂಗಳು ಕೆಲವು ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಈ ವೇಳೆ 79 ವರ್ಷದ ರಾಜ್ಯ ರಾಜಧಾನಿಯ ವ್ಯಕ್ತಿಯಲ್ಲಿ ಕೋವಿಡ್​ ದೃಢಪಟ್ಟಿದ್ದು, ಅದರಲ್ಲಿ ಜೆಎನ್​1 ತಳಿ ಇರುವುದು ಕಂಡು ಬಂದಿತ್ತು. ಅವರು ಹೋಮ್​ ಐಸೋಲೇಷನ್​ಗೆ ಒಳಗಾಗಿ ಇದೀಗ ಚೇತರಿಕೆ ಕಂಡಿದ್ದು, ಆರೋಗ್ಯವಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಕಳೆದ ತಿಂಗಳ ಭಾರತದಿಂದ ಸಿಂಗಾಪೂರ್​​ಗೆ ಪ್ರಯಾಣಿಸಿದ 15 ಮಂದಿಯಲ್ಲಿ ಜೆಎನ್​1 ತಳಿ ದೃಢಪಟ್ಟಿತ್ತು. ಅದರ ಅರ್ಥ ಕೇರಳದಲ್ಲಿ ಮಾತ್ರವಲ್ಲದೇ ಸೋಂಕು ಇತರ ರಾಜ್ಯದಲ್ಲಿಯೂ ಇದೆ ಎಂದು. ನಮ್ಮ ಪ್ರೋಟೋಕಾಲ್​ನಿಂದಾಗಿ ನಾವು ಅದನ್ನು ಪತ್ತೆ ಮಾಡಿದೆವು. ಡಿಸೆಂಬರ್​ 13 ರಿಂದ 16ರವರೆಗೆ ಎಲ್ಲಾ ಸ್ಥಳದಲ್ಲಿ ನಮ್ಮ ವ್ಯವಸ್ಥೆಯು ತಪಾಸಣೆ ನಡೆಸಿದೆ. 1,192 ಆಸ್ಪತ್ರೆಗಳಲ್ಲಿ ಸೌಲಭ್ಯ ಲಭ್ಯತೆ ಪರಿಶೀಲನೆ ಮಾಡಲಾಗಿದೆ. ಸದ್ಯ 1,957 ಬೆಡ್​​, 2,454 ಐಸಿಯು ಬೆಡ್​​ ಮತ್ತು 937 ವೆಂಟಿಲೇಟರ್​​ ಬೆಡ್​​ ವ್ಯವಸ್ಥೆ ಮಾಡಲಾಗಿದೆ. ಈ ಹಿನ್ನೆಲೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ ಎಂದರು

ಸದ್ಯ ದೇಶದಲ್ಲಿ 1,828 ಸಕ್ರಿಯವಾದ ಪ್ರಕರಣಗಳಿದ್ದು, ಕೇರಳದಲ್ಲಿ 1,634 ಪ್ರಕರಣಗಳು ಕಂಡು ಬಂದಿದೆ. ಭಾನುವಾರ ಕೇರಳದಲ್ಲಿ ಹೊಸದಾಗಿ 11 ಕೋವಿಡ್​ ಪ್ರಕರಣ ದಾಖಲಾಗಿದೆ. ಇದರ ಜೊತೆಗೆ ಒಂದು ಕೋವಿಡ್​ ಸೋಂಕಿನ ಸಾವು ಕೂಡ ದಾಖಲಾಗಿದೆ.

ಕೋವಿಡ್​ 19 ಉಪ ತಳಿ ಆಗಿರುವ ಜೆಎನ್​1 ಭಾರತದಲ್ಲಿ ಮೊದಲ ಬಾರಿಗೆ ಕೇರಳದಲ್ಲಿ ಡಿಸೆಂಬರ್​ 8ರಂದು ಪತ್ತೆಯಾಗಿದೆ. ಕೋವಿಡ್​ 19ನ ಉಪತಳಿ ಜೆಎನ್​1 ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಭಾರತೀಯ ಸಾರ್ಸ್​-ಕೋವ್​-2 ಜಿನೋಮ್​ ಒಕ್ಕೂಟದ ಮುಖ್ಯಸ್ಥ ಡಾ ಎನ್​ ಕೆ ಆರೋರಾ ತಿಳಿಸಿದ್ದಾರೆ.(ಐಎಎನ್​ಎಸ್​)

ಇದನ್ನೂ ಓದಿ:JN.1 ತಳಿ ಮೇಲೆ ಕಣ್ಗಾವಲಿಡಿ, ಕೋವಿಡ್​ ಏರಿಕೆ ಕಾಣದಂತೆ ಜಾಗ್ರತೆ ವಹಿಸಿ; ರಾಜ್ಯಗಳಿಗೆ ಕೇಂದ್ರದ ಸೂಚನೆ

ABOUT THE AUTHOR

...view details