ನವದೆಹಲಿ: 10 ರಿಂದ 16 ವರ್ಷದ ಮಕ್ಕಳು ಅತಿಯಾದ ಇನ್ಸ್ಟಾಗ್ರಾಂ, ಯೂಟ್ಯೂಬ್ ಮತ್ತು ಫೇಸ್ಬುಕ್ ಬಳಕೆಯು ಅವರಲ್ಲಿ ಆತಂಕ ಮತ್ತು ಖಿನ್ನತೆ ಲಕ್ಷಣ ಬೆಳೆಸಲು ಸಾಧ್ಯವಿಲ್ಲ ಎಂದು ಹೊಸ ಅಧ್ಯಯನ ತಿಳಿಸಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಆತಂಕ ಮತ್ತು ಖಿನ್ನತೆ ಪ್ರಕರಣಗಳು ಹೆಚ್ಚಾಗುತ್ತಿದೆ. ಸಾಮಾಜಿಕ ಮಾಧ್ಯಮಗಳ ಬಳಕೆ ಕೂಡ ಹೆಚ್ಚುತ್ತಿದೆ ಎಂಬ ನಂಬಿಕೆ ಇದೆ ಎಂದು ನಾರ್ವೇಜಿಯನ್ ಯೂನಿವರ್ಸಿಟಿ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯ ಮನೋ ವಿಜ್ಞಾನ ವಿಭಾಗದ ಪ್ರಧ್ಯಾಪಕರಾದ ಸಿಲ್ಜೆ ಸ್ಟೈನ್ಸ್ಬೆಕ್ ತಿಳಿಸಿದ್ದಾರೆ.
ಈ ಅಧ್ಯಯನದ ಕುರಿತು ಕಂಪ್ಯೂಟರ್ಸ್ ಇನ್ ಹ್ಯೂಮನ್ ಬಿಹೇವಿಯೋದಲ್ಲಿ ಪ್ರಕಟಿಸಲಾಗಿದೆ. ಇದರಲ್ಲಿ ಯುವ ಜನರು ಸಾಮಾಜಿಕ ಮಾಧ್ಯಮದ ಬಳಕೆಯು ಅವರಲ್ಲಿ ಆಗಾಗ್ಗೆ ಗಟ್ಟಿ ಭಾವನೆಯನ್ನು ಸೃಷ್ಟಿಸಿದೆ. ಈ ವಿಚಾರ ಸಂಬಂಧ ಪೋಷಕರು ಮತ್ತು ವೃತ್ತಿಪರರಲ್ಲಿ ಸಾಕಷ್ಟು ಕಾಳಜಿ ಇದೆ ಎಂದು ಸ್ಟೈನ್ಸ್ಬೆಕ್ ತಿಳಿಸಿದ್ದಾರೆ.
ನಾರ್ವೆಯ ಟ್ರೊಂಡೆಮ್ ನಗರದ 800 ಮಕ್ಕಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದ್ದು, ಸಾಮಾಜಿಕ ಮಾಧ್ಯಮದ ಬಳಕೆ ಮತ್ತು ಮಾನಸಿಕ ಅಸ್ವಸ್ಥತೆಯ ರೋಗಲಕ್ಷಣಗಳ ಕುರಿತು ಆರು ವರ್ಷಗಳ ಕಾಲ ಅಧ್ಯಯನ ನಡೆಸಲಾಗಿದೆ. ಮಕ್ಕಳು 10 ವರ್ಷದಿಂದ 16 ವರ್ಷ ಆಗುವವರೆಗೆ ಪ್ರತಿ ವರ್ಷ ಅವರ ದತ್ತಾಂಶ ಸಂಗ್ರಹಿಸಲಾಗಿದೆ.
ಮಕ್ಕಳು ಮತ್ತು ಅವರ ಪೋಷಕರಲ್ಲೂ ಕೂಡ ಸಂದರ್ಶನದ ವೇಳೆ ಖಿನ್ನತೆ ಮತ್ತು ಆತಂಕದಂತಹ ಲಕ್ಷಣಗಳನ್ನು ಪತ್ತೆ ಮಾಡಲಾಯಿತು. ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ಗಳನ್ನು ಮಾಡಿದಾಗ ಲೈಕ್ ಮತ್ತು ಕಮೆಂಟ್ ವಿಚಾರದಲ್ಲಿ ಹುಡುಗ ಮತ್ತು ಹುಡುಗಿಯರಲ್ಲಿ ಒಂದೆ ರೀತಿಯ ಫಲಿತಾಂಶಗಳು ಕಂಡು ಬಂದವು.