ಕರ್ನಾಟಕ

karnataka

ETV Bharat / sukhibhava

ಸಾಮಾಜಿಕ ಮಾಧ್ಯಮದ ಬಳಲಿಕೆಯು ತಪ್ಪು ಸುದ್ದಿಗಳನ್ನು ನಂಬುವಂತೆ ಮಾಡುತ್ತದೆ; ಅಧ್ಯಯನ - ಆನ್​ಲೈನ್​ನಲ್ಲಿ ಹಂಚಿಕೊಳ್ಳುತ್ತಾರೆ

ಅತಿ ಹೆಚ್ಚು ಸಾಮಾಜಿಕ ಮಾಧ್ಯಮಗಳ ಬಳಕೆಯಿಂದಾಗಿ ಜನರು ತಪ್ಪು ಮಾಹಿತಿಯನ್ನು ನಂಬುತ್ತಾರೆ ಎಂದು ಅಧ್ಯಯನ ತಿಳಿಸಿದೆ.

Social media fatigue leads to believing fake news
Social media fatigue leads to believing fake news

By ETV Bharat Karnataka Team

Published : Oct 3, 2023, 2:04 PM IST

ಸಿಂಗಾಪೂರ್​​:ಸಾಮಾಜಿಕ ಮಾಧ್ಯಮಗಳಿಂದ ಬಳಲಿದ ಅಥವಾ ಅತಿ ಹೆಚ್ಚು ಬಳಕೆ ಮಾಡುವ ಜನರು ತಪ್ಪು ಮಾಹಿತಿಗಳನ್ನು ನಂಬಿ ಅದನ್ನು ಆನ್​ಲೈನ್​ನಲ್ಲಿ ಹಂಚಿಕೊಳ್ಳುತ್ತಾರೆ ಎಂದು ಅಧ್ಯಯನ ತಿಳಿಸಿದೆ.

ಕೋವಿಡ್​ 19 ಸುಳ್ಳು ಸುದ್ದಿಗಳನ್ನು ಉದಾಹರಣೆಯಾಗಿರಿಸಿ ಅಧ್ಯಯನದಲ್ಲಿ ಬಳಕೆ ಮಾಡಲಾಗಿದೆ. ನಾರ್ಸಿಸ್ಟಿಕ್​ ವ್ಯಕ್ತಿತ್ವದ ಅನುಭವಗಳಿಂದ ಸಾಮಾಜಿಕ ಮಾಧ್ಯಮದ ಬಳಲಿಕೆಗೆ ಒಳಗಾಗಿರುವ ಜನರು ತಪ್ಪು ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ.

ಈ ಅಧ್ಯಯನವನ್ನು ಜರ್ನಲ್​ ಸೈಂಟಿಫಿಕ್​ ರಿಪೋರ್ಟ್​ನಲ್ಲಿ ಈ ಅಧ್ಯಯನವನ್ನು ಪ್ರಕಟಿಸಲಾಗಿದೆ. ಸಿಂಗಾಪೂರ್​​​, ಯುನೈಟೆಡ್​ ಸ್ಟೇಟ್​​, ಮಲೇಷ್ಯಾ, ಚೀನಾ, ಥೈಲ್ಯಾಂಡ್​ ಮತ್ತು ವಿಯೆಟ್ನಾ, ಇಂಡೋನೆಷ್ಯಾ ಮತ್ತು ಫಿಲಿಫೈನ್ಸ್​ ದೇಶಗಳಲ್ಲಿ ಸುಮಾರು 8000 ಮಂದಿಯ ಸಮೀಕ್ಷೆ ನಡೆಸಿ, ಈ ಅಧ್ಯಯನ ಪ್ರಕಟಿಸಲಾಗಿದೆ.

ಮಿಲಿಯನ್​ಗಟ್ಟಲೆ ಜನರು ಸಾಮಾಜಿಕ ಮಾಧ್ಯಮಗಳನ್ನು ಸುದ್ದಿ, ಮನೋರಂಜನೆಗೆ ಮತ್ತು ಸಂವಹನ ಮಾದರಿಗೆ ಬಳಕೆ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಾಮಾಜಿಕ ಮಾಧ್ಯಮದ ಬಳಲಿಕೆ ಮತ್ತು ಅದರ ಪರಿಣಾಮಗಳನ್ನು ಪರಿಹರಿಸುವುದು ಅಗತ್ಯವಾಗಿದೆ ಎಂದು ಸಿಂಗಾಪೂರ್​ನ ನಾನ್ಯಯಂಗ್​ ಟೆಕ್ನಾಲಾಜಿಕಲ್​ ಯುನಿವರ್ಸಿಟಿ ಸಂಶೋಧಕರು ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮದ ಓವರ್​ಲೋಡ್​​: ಸಾಮಾಜಿಕ ಮಾಧ್ಯಮದ ಬಳಲಿಕೆಯು ಅದರ ಬಳಕೆದಾರರಲ್ಲಿ ಮಾಹಿತಿಗಳನ್ನು ಓವರ್​​ಲೋಡ್​ ಮಾಡುವ ಪರಿಣಾಮ ಅವರಲ್ಲಿ ಅರಿವಿನ ತೀರ್ಮಾನ ನಡೆಸುವ ಸಾಮರ್ಥ್ಯವನ್ನು ಅಡ್ಡಿ ಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಪ್ರತಿಯೊಬ್ಬರು ತಪ್ಪು ಮಾಹಿತಿಗಳನ್ನು ಎದುರಿಸುವಲ್ಲಿ ಟೀಕಾತ್ಮಕ ಮೌಲ್ಯಮಾಪನ ನಡೆಸುವಲ್ಲಿ ಸಂಕಷ್ಟ ಅನುಭವಿಸುತ್ತಾರೆ. ಅದು ಕೋವಿಡ್​​ 19 ವಿಷಯ ಇರಬಹುದು ಅಥವಾ ಇನ್ನಿತರ ವಿಷಯವೇ ಇರಬಹುದು ಎಂದು ಅಧ್ಯಯನದ ಪ್ರಮುಖ ಲೇಖಕರಾದ ಸೈಫುದ್ದೀನ್​ ಅಹ್ಮದ್​​ ತಿಳಿಸಿದ್ದಾರೆ.

ಮತ್ತೊಂದು ವಿವರಣೆಯಲ್ಲಿ ಸಾಮಾಜಿಕ ಮಾಧ್ಯಮದ ಬಳಲಿಕೆ ಎಂಬುದು ಸಾಮಾಜಿಕ ಮಾಧ್ಯಮದ ವಿವಾದಾತ್ಮಕ, ಸೆನ್ಸೇಷನಲ್​ ಮತ್ತು ಭಾವನಾತ್ಮಕ ವಿಚಾರದಲ್ಲಿ ಅಲ್ಗೋರಿಧಮ್​ ಕಾರ್ಯಾಚರಣೆ ನಡೆಸುತ್ತವೆ ಎಂಬುದಾಗಿದೆ. ಇಂತಹ ವಿಷಯಗಳಿಗೆ ಪದೇ ಪದೇ ಎದುರಾಗುವುದು ವೈಯಕ್ತಿಕವಾಗಿ ನಿಖರತೆ ಗ್ರಹಿಸಲು ಕಾರಣವಾಗುತ್ತದೆ.

ಎಂಟು ದೇಶಗಳಲ್ಲಿ ನಾರ್ಸಿಸಮ್​ ಹೆಚ್ಚಿರುವ ವ್ಯಕ್ತಿಗಳಲ್ಲಿ ಕಡಿಮೆ ಅರಿವಿನ ಸಾಮರ್ಥ್ಯವಿದ್ದು ಸಾಮಾಜಿಕ ಮಾಧ್ಯಮದ ಬಳಲಿಕೆಯ ಪರಿಣಾಮ ಅವರು, ತಪ್ಪು ಮಾಹಿತಿಗಳನ್ನು ಹಂಚಿಕೊಳ್ಳುವ ಸಾಧ್ಯತೆ ಇದೆ ಎಂದು ತಂಡ ಪತ್ತೆ ಮಾಡಿದೆ. ಹೆಚ್ಚಿನ ಬಳಲಿಕೆ ಮಟ್ಟದಿಂದ ಈ ವ್ಯಕ್ತಿಗಳು ಟೀಕಾತ್ಮಕ ಚಿಂತನೆ ನಡೆಸದೇ ಸಾಮಾಜಿಕ ಪ್ರಭಾವ ಮತ್ತು ಗಮನ​ ನೀಡುವ ಉದ್ದೇಶದಿಂದ ತಪ್ಪು ಮಾಹಿತಿಗಳನ್ನು ಹಂಚಿಕೊಳ್ಳುತ್ತಾರೆ. ಈ ತಪ್ಪು ಮಾಹಿತಿ ಹಂಚಿಕೊಳ್ಳುವ ಪ್ರವೃತ್ತಿಯು ಸೆನ್ಸೇಷನಲ್​ ಮತ್ತು ವಿವಾದಾತ್ಮಕ ವಿಷಯಗಳನ್ನು ಹೊಂದಿರುವ ಸಾಧ್ಯತೆ ಇದ್ದು, ಇದು ಪ್ರೇಕ್ಷಕರ ಬಲವಾದ ಭಾವನೆಗಳ ಪ್ರತಿಕ್ರಿಯೆಯನ್ನು ಹೊಂದಿರುತ್ತದೆ ಎಂದು ಅಹ್ಮದ್​ ವಿವರಿಸಿದ್ದಾರೆ.

ಈ ಫಲಿತಾಂಶಗಳು ನಿಯಮ ರೂಪಿಸುವವರಿಗೆ ಮತ್ತು ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ತಪ್ಪು ಮಾಹಿತಿ ಹರಡುವಿಕೆಯನ್ನು ನಿರ್ಬಂಧಿಸಲು ಮತ್ತು ಡಿಜಿಟಲ್​ ಸಾಕ್ಷರತೆಯ ಹೆಚ್ಚಿಸುವ ನಿಯಮಗಳನ್ನು ಅಳವಡಿಸಿಕೊಳ್ಳುವಂತೆ ತಿಳಿಸುತ್ತವೆ. ಜೊತೆಗೆ ಸಾಮಾಜಿಕ ಮಾಧ್ಯಮದ ಬಳಲಿಕೆಯನ್ನು ಕಡಿಮೆ ಮಾಡುವ ಗುರಿಗಳನ್ನು ಹೊಂದಿರುವುದಾಗಿ ಸಂಶೋಧನೆ ಸೂಚಿಸಿದೆ.

ಇದನ್ನೂ ಓದಿ: ಶೇ 50ರಷ್ಟು ಸಾವು ಕಡಿಮೆ ಮಾಡುತ್ತದೆ ಹೊಸ ಕ್ಯಾನ್ಸರ್​ ಇಂಪ್ಲಾಟ್​ ಟೆಕ್ನಾಲಜಿ

ABOUT THE AUTHOR

...view details