ಮಾನವ ಸಂಘ ಜೀವಿ. ಅನೇಕ ವೇಳೆ ಎಲ್ಲಾ ಸಂಘಗಳನ್ನೂ ತೊರೆದು ಆತ ಪ್ರತ್ಯೇಕವಾಗಿ ಜೀವಿಸಲು ಮುಂದಾಗುತ್ತಾನೆ. ಇದನ್ನೇ ಸಾಮಾಜಿಕ ಪ್ರತ್ಯೇಕೀಕರಣ ಎನ್ನುವರು. ಆದರೆ, ಹೀಗೆ ಬದುಕುವುದು ಸುಲಭವಲ್ಲ. ದಿನದಲ್ಲಿ 8 ಗಂಟೆಗಳ ಕಾಲ ಸಾಮಾಜಿಕ ಸಂಪರ್ಕಕ್ಕೆ ವ್ಯಕ್ತಿ ಬಾರದೇ ಹೋದರೆ ವ್ಯಕ್ತಿಯ ದೇಹದ ಶಕ್ತಿ ಕಡಿಮೆಯಾಗುತ್ತದೆ. ಹೇಗೆ ಎಂಟು ಗಂಟೆಗಳ ಕಾಲ ಆಹಾರ ಸೇವಿಸದೇ ಇದ್ದರೆ ನಿಶಕ್ತಿ ಹೊಂದುತ್ತೇವೋ ಅದೇ ರೀತಿಯ ಪರಿಣಾಮವನ್ನು ಸಾಮಾಜಿಕ ಸಂಪರ್ಕ ಕಡಿತದಲ್ಲಿ ಕಾಣಬಹುದು ಎಂದು ಸಂಶೋಧನೆ ಹೇಳುತ್ತದೆ.
ಕೋವಿಡ್ ಲಾಕ್ಡೌನ್ ಗುರಿಯಾಗಿಸಿಕೊಂಡು ಈ ಸಂಶೋಧನೆ ನಡೆಸಲಾಗಿದೆ. ಸೈಕಾಲಾಜಿಕಲ್ ಸೈನ್ಸ್ನಲ್ಲಿ ಅಧ್ಯಯನ ಪ್ರಕಟವಾಗಿದೆ. ಇದರನುಸಾರ, ವ್ಯಕ್ತಿಯಲ್ಲಿ ಕಾಡುವ ಶಕ್ತಿಗೆ ಸಾಮಾಜಿಕ ಸಂಪರ್ಕದ ಕೊರತೆ ಕಾರಣವಾಗುತ್ತದೆ. ಸಾಮಾಜಿಕ ವ್ಯಕ್ತಿತ್ವದ ಭಾಗಿದಾರಿಕೆಯ ಮೇಲೂ ಕೂಡ ಇದು ಪರಿಣಾಮ ಉಂಟು ಮಾಡುತ್ತದೆ.
ಕೆಲವು ಗಂಟೆಗಳ ಬಳಿಕ ನಾವು ಆಹಾರ ಸೇವಿಸದೇ ಹೋದರೆ, ಅನೇಕ ಜೈವಿಕ ಪ್ರಕ್ರಿಯೆಗಳು ಆರಂಭವಾಗಿ ಹಸಿವಿನ ಅನುಭವವಾಗುತ್ತದೆ. ಅದೇ ರೀತಿ, ಸಾಮಾಜಿಕ ಸಂಪರ್ಕದ ಕೊರತೆಯೂ ಕೂಡ ಮಿದುಳಿನಲ್ಲಿ ಹಸಿವಿನ ಭಾವನೆ ಮೂಡಿಸುತ್ತದೆ. ಇದು ಮರು ಸಂಪರ್ಕಕ್ಕೆ ಪ್ರೇರಣೆ ಮಾಡುತ್ತದೆ.
ಆಸ್ಟ್ರಿಯಾದ ವಿಯೆನ್ನಾ ವಿಶ್ವವಿದ್ಯಾಲಯ ಇಂಥದ್ದೊಂದು ಸಂಶೋಧನೆ ಮಾಡಿದ್ದು, ಸಾಮಾಜಿಕ ಹೊಮಿಯೊಸ್ಟಾಸಿಸ್ ಹೈಪೊಥಿಸಿಸ್ ಪ್ರಕಾರ, ಹೊಮಿಯೊಸ್ಟಾಸ್ಟಿಕ್ ವ್ಯವಸ್ಥೆ ತಕ್ಷಣ ಸಾಮಾಜಿಕ ಸಂಪರ್ಕದ ಅಗತ್ಯತೆಯನ್ನು ಒತ್ತಿ ಹೇಳಿಸುತ್ತದೆ. ಆದಾಗ್ಯೂ, ಸಾಮಾಜಿಕ ಪ್ರತ್ಯೇಕಿಕರಣಕ್ಕೆ ಮನೋವೈಜ್ಞಾನಿಕ ಪ್ರತಿಕ್ರಿಯೆಯ ಕುರಿತು ಅಲ್ಪ ಮಾಹಿತಿ ಇದೆ.