ಬೆಂಗಳೂರು: ಹಾಲು ಆರೋಗ್ಯಕರ ಜೊತೆಗೆ ಸೌಂದರ್ಯ ವರ್ಧಕವಾಗಿಯೂ ಕೆಲಸ ಮಾಡುತ್ತದೆ. ಹಾಲಿನಲ್ಲಿರುವ ಅಂಶ ಚರ್ಮವನ್ನು ಮೃದುಗೊಳಿಸಿ, ಕಾಂತಿಯುತವಾಗಿಸುವಲ್ಲಿ ಪ್ರಮುಖವಾಗಿದೆ. ಇದೇ ಕಾರಣಕ್ಕೆ ಹಾಲನ್ನು ಸೌಂದರ್ಯ ವರ್ಧಕದಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಅದರಲ್ಲೂ ವಿವಿಧ ರೀತಿಯ ಮೇಕಪ್ ಮತ್ತು ಫೇಸ್ ಪ್ಯಾಕ್ನಲ್ಲಿ ಹಾಲು ಅತಿಮುಖ್ಯವಾಗಿದೆ. ಮನೆಯಲ್ಲಿಯೇ ನೀವು ಫೇಸ್ ಪ್ಯಾಕ್ ಮಾಡಿ ನೈಸರ್ಗಿಕವಾಗಿ ತ್ವಚೆಯ ಅಂದವನ್ನು ಕಾಪಾಡಿಕೊಳ್ಳುವುದಾದರೆ, ಈ ರೀತಿಯಾಗಿ ಹಾಲಿನ ಬಳಕೆ ಮಾಡುವುದು ಉತ್ತಮ.
ಹಾಲಿನಲ್ಲಿರುವ ಲ್ಯಾಕ್ಟಿಕ್ ಆಮ್ಲ ಚರ್ಮದ ಆಳಕ್ಕೆ ಇಳಿದು ಮುಖವನ್ನು ಸ್ವಚ್ಛಗೊಳಿಸುವುದರ ಜೊತೆಗೆ ಅದು ಮಾಶ್ಚರೈಸರ್ ಅನ್ನು ಕಾಪಾಡುತ್ತದೆ. ಜೊತೆಗೆ ಮುಖದ ಕಾಂತಿಯನ್ನು ಹೊಳೆಯುವಂತೆ ಮಾಡುತ್ತದೆ.
ನೆರಿಗೆ ನಿವಾರಣೆ: ವಯಸ್ಸಾದಂತೆ ಮುಖದಲ್ಲಿ ನೆರಿಗೆ ಮೂಡುವುದು ಸಹಜ. ಆದರೆ, ಅವಧಿ ಪೂರ್ವವಾಗಿ ಮೂಲಕ ಸುಕ್ಕು ಅಂದವನ್ನು ಹಾಳು ಮಾಡುತ್ತದೆ. ಮುಖದಲ್ಲಿ ಚರ್ಮ ಸುಕ್ಕುಗಟ್ಟದಂತೆ ಕಾಪಾಡುವಲ್ಲಿ ಹಾಲು ಅವಶ್ಯವಾಗಿದೆ. ಈ ಹಿನ್ನೆಲೆ ಸ್ನಾನ ಮಾಡುವ ಮುನ್ನ ನೀರಿಗೆ ಒಂದೆರಡು ಸ್ಪೂನ್ ಹಾಲನ್ನು ಸೇರಿಸಿ ಸ್ನಾನ ಮಾಡುವುದರಿಂದ ಹೆಚ್ಚಿನ ಪ್ರಯೋಜನ ಸಿಗಲಿದೆ. ಇದರಿಂದ ಚರ್ಮ ನಯ ಮತ್ತು ಮೃದುವಾಗುತ್ತದೆ.
ಕಲೆ ನಿವಾರಣೆ: ಹಾಲಿನಲ್ಲಿ ಕಂಡು ಬರುವ ಬೀಟಾ ಹೈಡ್ರಾಕ್ಸಿ ಆಮ್ಲ ಎಫ್ಫೋಲಿಯೇಟಿಂಗ್ ರೀತಿ ಕಾರ್ಯ ನಿರ್ವಹಿಸುತ್ತದೆ. ಚರ್ಮದ ಕಾಳಜಿ ವಿಷಯಕ್ಕೆ ಬಂದರೆ, ಚರ್ಮದಲ್ಲಿ ಎಫೋಲಿಯೆಡೆಟ್ ಇರಬೇಕು. ಹಾಲನ್ನು ನೇರವಾಗಿ ದೇಹಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ಇದನ್ನು ಪಡೆಯಬಹುದು. ಹಾಲನ್ನು ಕಡಲೆ ಹಿಟ್ಟು ಅಥವಾ ಅಕ್ಕಿ ಹಿಟ್ಟಿಗೆ ಬೆರೆಸಿ ಸ್ಕ್ರಬ್ ರೀತಿ ದೇಹ, ಮುಖಕ್ಕೆ ಬಳಕೆ ಮಾಡುವುದರಿಂದ ಇದು ಚರ್ಮದಲ್ಲಿನ ಕಲೆಗಳನ್ನು ನಿವಾರಣೆ ಮಾಡುವ ಜೊತೆಗೆ ಅನ್ಇವನ್ ಸ್ಕಿನ್ ಟೋನ್ ಅನ್ನು ಕಡಿಮೆ ಮಾಡುತ್ತದೆ.
ಟ್ಯಾನ್ ನಿವಾರಣೆ: ಬೇಸಿಗೆ ಬಿಸಿಲಿನಿಂದ ಚರ್ಮ ಬೇಗ ತೇವಾಂಶ ಕಳೆದುಕೊಂಡು ಶುಷ್ಕಗೊಳ್ಳುತ್ತದೆ. ಜೊತೆಗೆ ಬಿಸಿಲಿನಿಂದ ಟ್ಯಾನ್ ಆಗುತ್ತದೆ. ಬಿಸಿಲಿನಿಂದ ಹಾನಿಗೊಂಡ ಚರ್ಮವನ್ನು ಹಾಲಿನಲ್ಲಿರುವ ಲ್ಯಾಕ್ಟಿಕ್ ಅಂಶ ಸರಿಪಡಿಸುತ್ತದೆ. ಇದಕ್ಕಾಗಿ ಮಾಡಬೇಕಿರುವುದು ಎಂದರೆ, ಒಂದು ಬಟ್ಟಲಲ್ಲಿ ಹಸಿ ಹಾಲನ್ನು ಪಡೆದು, ಅದನ್ನು ಹತ್ತಿಯಲ್ಲಿ ಅದ್ದಿ ಮುಖಕ್ಕೆ ಹಚ್ಚಿರಿ. 10 ನಿಮಿಷದ ಬಳಿಕ ತಣ್ಣೀರಿನಿಂದ ಮುಖ ತೊಳೆಯುವುದರಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಇದರಿಂದ ಚರ್ಮವೂ ಶುಭ್ರಗೊಂಡು ಹಗುರಾಗುತ್ತದೆ.
ಡೆಡ್ ಸ್ಕಿನ್ ನಿವಾರಣೆ: ಇನ್ನು ಶ್ರೀಗಂಧಕ್ಕೆ ಒಂದು ಸ್ಪೂನ್ ಹಾಲನ್ನು ಬೆರೆಸಿ, ಚೆನ್ನಾಗಿ ಮಿಶ್ರಣ ಮಾಡಿ ಅದನ್ನು ಕೂಡ ಫೇಸ್ ಪ್ಯಾಕ್ನಂತೆ ಬಳಕೆ ಮಾಡಬಹುದು. ಜೊತೆಗೆ ದೈನಂದಿನ ವಾಯು ಮಾಲಿನ್ಯ ಮತ್ತಿತರ ಕಾರಣದಿಂದ ಉಂಟಾಗುವ ಡೆಡ್ ಸ್ಕಿನ್ ನಿವಾರಣೆಗೆ ಸಹಾಯ ಮೂಡುತ್ತದೆ. ಶ್ರೀಗಂಧ ಮುಖದಲ್ಲಿನ ಕೊಳೆ, ಚರ್ಮದ ಸತ್ತ ಕೋಶಗಳನ್ನು ತೆಗೆದು ಹಾಕುವಲ್ಲಿ ಸಹಾಯ ಮಾಡುತ್ತದೆ. ಈ ರೀತಿ ನಿಯಮಿತವಾಗಿ ಮಾಡುವುದರಿಂದ ಮುಖದಲ್ಲಿನ ಕಲೆ ಹಾಗೂ ಮೊಡವೆಗಳು ಮಾಯವಾಗುತ್ತವೆ. ಇದು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.
ಇದನ್ನೂ ಓದಿ: ನಿದ್ದೆ ಸಮಸ್ಯೆಯಿಂದ ಬಳಲುತ್ತಿದ್ದರೆ, ಈ ಆಹಾರಗಳು ನಿಮ್ಮ ಡಯಟ್ನಲ್ಲಿರಲಿ!