ಕರ್ನಾಟಕ

karnataka

ETV Bharat / sukhibhava

Tips For Pregnant : ಧೂಮಪಾನ ಮಾಡುವ ಗರ್ಭಿಣಿಯರಿಗೆ ಸಣ್ಣ ಗಾತ್ರದ ಮಕ್ಕಳ ಜನನ.. ಅಧ್ಯಯನ

ಒಂದು ವೇಳೆ ಮೊದಲ ಗರ್ಭ ಧರಿಸುವ ವೇಳೆ ಧೂಮಪಾನಿಯಾಗಿದ್ದು, ಎರಡನೇ ಗರ್ಭಧಾರಣೆ ವೇಳೆ ಧೂಮಪಾನವನ್ನು ತ್ಯಜಿಸಿದ್ದರೂ, ಎರಡನೇ ಮಗು ಗಾತ್ರದಲ್ಲಿ ಚಿಕ್ಕದಾಗಿರುತ್ತದೆ ಎಂದು ಮತ್ತೊಂದು ಅಚ್ಚರಿಯ ವಿಚಾರವನ್ನು ಸಂಶೋಧನೆ ಬಹಿರಂಗಪಡಿಸಿದೆ..

Smoking during pregnancy linked to smaller babies in the future
Tips For Pregnant: ಧೂಮಪಾನ ಮಾಡುವ ಗರ್ಭಿಣಿಯರಿಗೆ ಸಣ್ಣ ಗಾತ್ರದ ಮಕ್ಕಳ ಜನನ.. ಅಧ್ಯಯನ

By

Published : Jan 7, 2022, 3:06 PM IST

ಧೂಮಪಾನ ಹಲವು ರೋಗಗಳಿಗೆ ಮೂಲ. ಧೂಮಪಾನದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಈಗಲೂ ಸಂಶೋಧನೆಗಳು ನಡೆಯುತ್ತಿವೆ. ಇತ್ತೀಚೆಗೊಂದು ಸಂಶೋಧನೆ ನಡೆದಿದ್ದು, ಗರ್ಭಿಣಿಯರ ಮೇಲೆ ಧೂಮಪಾನದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಕೆಲ ಮಾಹಿತಿಯನ್ನು ಬಹಿರಂಗಪಡಿಸಿದೆ.

ಮೊದಲ ಬಾರಿಗೆ ಗರ್ಭ ಧರಿಸುವ ವೇಳೆಯಲ್ಲಿ ಮಹಿಳೆಯರು ಧೂಮಪಾನಿಗಳಾಗಿದ್ದರೆ, ಅವರಿಗೆ ಹುಟ್ಟುವ ಎರಡನೇ ಮಗು ಧೂಮಪಾನ ಮಾಡದ ಮಹಿಳೆ ಪಡೆಯುವ ಮಗುವಿಗಿಂತ ಗಾತ್ರದಲ್ಲಿ ಚಿಕ್ಕದಾಗಿರುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ.

ಮೊದಲು ಗರ್ಭ ಧರಿಸಿದ್ದಾಗ ಧೂಮಪಾನ ಮಾಡುವುದರಿಂದ ಮಗುವಿನ ಮೇಲೆ ಬೀರುವ ವ್ಯತಿರಿಕ್ತ ಪರಿಣಾಮ ಕಡಿಮೆ ಇರುತ್ತದೆ. ಎರಡನೇ ಗರ್ಭ ಧರಿಸುವ ವೇಳೆಗೆ ಮಹಿಳೆ ಧೂಮಪಾನವನ್ನು ತ್ಯಜಿಸಿದ್ದರೂ, ಅದು ಮಗುವಿನ ಗಾತ್ರದ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧನೆ ಹೇಳಿದೆ.

ಧೂಮಪಾನ ತ್ಯಜಿಸಿದ್ದರೂ :ಒಂದು ವೇಳೆ ಮೊದಲ ಗರ್ಭ ಧರಿಸುವ ವೇಳೆ ಧೂಮಪಾನಿಯಾಗಿದ್ದು, ಎರಡನೇ ಗರ್ಭಧಾರಣೆ ವೇಳೆ ಧೂಮಪಾನವನ್ನು ತ್ಯಜಿಸಿದ್ದರೂ, ಎರಡನೇ ಮಗು ಗಾತ್ರದಲ್ಲಿ ಚಿಕ್ಕದಾಗಿರುತ್ತದೆ ಎಂದು ಮತ್ತೊಂದು ಅಚ್ಚರಿಯ ವಿಚಾರವನ್ನು ಸಂಶೋಧನೆ ಬಹಿರಂಗಪಡಿಸಿದೆ.

ಈಗಿನ ಸಂಶೋಧನೆಯಲ್ಲಿ ದೃಢಪಟ್ಟ ಮತ್ತೊಂದು ಅಂಶವೆಂದರೆ, ಒಂದು ವೇಳೆ ಸಣ್ಣ ಗಾತ್ರದ ಮಗುವಿಗೆ ಮಹಿಳೆ ಜನ್ಮ ನೀಡಿದರೂ, ಮಗುವಿನ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಇರುವುದಿಲ್ಲ ಎಂದು ಸಂಶೋಧನಾ ವರದಿ ತಿಳಿಸಿದೆ.

ಮೊದಲ ಎರಡು ಗರ್ಭಧಾರಣೆಯ ವೇಳೆ ದಿನಕ್ಕೆ 10 ಅಥವಾ ಅದಕ್ಕಿಂತ ಹೆಚ್ಚು ಸಿಗರೇಟುಗಳನ್ನು ಸೇದುವ ತಾಯಿಗೆ ಸಣ್ಣ ಗಾತ್ರದಲ್ಲಿ ಮಕ್ಕಳು ಜನಿಸುತ್ತವೆ ಎಂದು ಹೇಳಲಾಗಿದೆ. ಇದನ್ನು ಎಸ್​ಜಿಎ (SGA-Small for Gestational Age) ಎಂದು ವೈದ್ಯಕೀಯ ಪರಿಭಾಷೆಯಲ್ಲಿ ಕರೆಯುತ್ತಾರೆ.

'ಮಹಿಳೆಯರಿಗೆ ಧೂಮಪಾನದ ದುಷ್ಪರಿಣಾಮದ ಅರಿವು ಅಗತ್ಯ': ಈ ಸಂಶೋಧನೆಯ ನೇತೃತ್ವವಹಿಸಿದವರು ಇಂಗ್ಲೆಂಡ್​​ನ ಸೌತಾಂಪ್ಟನ್ ವಿಶ್ವವಿದ್ಯಾನಿಲಯದ ಸಾರ್ವಜನಿಕ ಆರೋಗ್ಯ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ. ನಿಸ್ರೀನ್ ಅಲ್ವಾನ್. ಮಹಿಳೆಯರಿಗೆ ಗರ್ಭಧಾರಣೆಯ ಮೊದಲು ಧೂಮಪಾನವನ್ನು ತ್ಯಜಿಸಲು ಮತ್ತು ಮಗುವಿನ ಜನನ ನಂತರ ಧೂಮಪಾನವನ್ನು ಮತ್ತೆ ಆರಂಭಿಸದಂತೆ ಮಾಡಬೇಕಿದೆ. ಇದನ್ನು ಕಾರ್ಯ ರೂಪಕ್ಕೆ ತರಲು ಕೆಲವು ಸಂಪನ್ಮೂಲಗಳ ಅಗತ್ಯವಿದೆ ಎಂದು ಡಾ. ನಿಸ್ರೀನ್ ಅಲ್ವಾನ್ ಅಭಿಪ್ರಾಯ.

ಈ ಸಂಶೋಧನೆಗಾಗಿ ಸಂಶೋಧನಾ ತಂಡವು 2003 ಮತ್ತು 2018ರಲ್ಲಿ ಸೌತಾಂಪ್ಟನ್ ಮತ್ತು ಹ್ಯಾಂಪ್‌ಶೈರ್‌ ನಗರಗಳ ಸುತ್ತಮುತ್ತಲೂ ವಾಸವಿದ್ದ ಸುಮಾರು 17 ಸಾವಿರ ತಾಯಂದಿರ ಮಾಹಿತಿಯನ್ನು ಅಧ್ಯಯನ ಮಾಡಿದೆ.

ಅಕಾಡೆಮಿ ಆಫ್ ಮೆಡಿಕಲ್ ಸೈನ್ಸಸ್, ವೆಲ್‌ಕಮ್ ಟ್ರಸ್ಟ್ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಹೆಲ್ತ್ ರಿಸರ್ಚ್ (NIHR) ಮತ್ತು ಸೌತಾಂಪ್ಟನ್ ಬಯೋಮೆಡಿಕಲ್ ರಿಸರ್ಚ್ ಸೆಂಟರ್​ ಈ ಸಂಶೋಧನೆಯಲ್ಲಿ ಪಾಲ್ಗೊಂಡಿವೆ. ಈ ಸಂಶೋಧನಾ ವರದಿ PLOS One Journal ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಗಮನಿಸಬೇಕಾದ ಅಂಶವೆಂದರೆ ಇಲ್ಲಿಯವರೆಗೆ ಮಹಿಳೆ ಧೂಮಪಾನ ಮಾಡುವುದರಿಂದ ಆಕೆಯ ಗರ್ಭದ ಮೇಲೆ ಅಥವಾ ಮಗುವಿನ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳು ಲಭ್ಯವಿಲ್ಲ.

ಇದನ್ನೂ ಓದಿ:ಸುರಕ್ಷಿತ, ಆರೋಗ್ಯಕರ ಗರ್ಭಧಾರಣೆಗಾಗಿ ಇಲ್ಲಿವೆ ಪ್ರಮುಖ ಸಲಹೆಗಳು

ABOUT THE AUTHOR

...view details