ಕರ್ನಾಟಕ

karnataka

ETV Bharat / sukhibhava

ಧೂಮಪಾನ ನಿಲ್ಲಿಸುವ ಔಷಧ ಮಹಿಳೆಯರಲ್ಲಿನ ಪಾರ್ಕಿಸನ್​ಗೆ ಔಷಧಿಯಾಗಬಲ್ಲದು! - ಪಾರ್ಕಿಸನ್​ಗೆ ಔಷಧಿ

ಸೈಟಿಸಿನ್ ನಿಕೋಟಿನ್​ನಂತೆ ಪರಿಣಾಮಕಾರಿಯಾಗಿ ಸಕ್ರಿಯಗೊಳಿಸುವುದಿಲ್ಲ ಹೀಗಾಗಿ ಅದು ಪಾರ್ಕಿನ್ಸನ್ ಕಾಯಿಲೆಗೆ ಚಿಕಿತ್ಸೆ ನೀಡಲು ಅಥವಾ ಮಹಿಳೆಯರಲ್ಲಿ ಅದರ ಬೆಳವಣಿಗೆಯನ್ನು ನಿಲ್ಲಿಸಲು ಸಹಾಯ ಮಾಡುತ್ತದೆ ಎಂದು ಯುಎಸ್ ನ ಟೆಕ್ಸಾಸ್ ಎ & ಎಂ ವಿಶ್ವವಿದ್ಯಾಲಯದ ಸಂಶೋಧಕ ಭಾರತೀಯ ಮೂಲದ ರಾಹುಲ್ ಶ್ರೀನಿವಾಸನ್ ಹೇಳಿದ್ದಾರೆ.

women
ಧೂಮಪಾನ

By

Published : Mar 6, 2021, 1:27 PM IST

ಧೂಮಪಾನದ ನಿಲುಗಡೆ ಔಷಧವಾದ ಸೈಟಿಸಿನ್ - ಪಾರ್ಕಿನ್ಸನ್ ಕಾಯಿಲೆಗೆ ಚಿಕಿತ್ಸೆ ನೀಡಲು ಅಥವಾ ಮಹಿಳೆಯರಲ್ಲಿ ಅದರ ಬೆಳವಣಿಗೆಯನ್ನು ನಿಲ್ಲಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.

ಜರ್ನಲ್ ಆಫ್ ನ್ಯೂರೋಕೆಮಿಸ್ಟ್ರಿಯಲ್ಲಿ ಪ್ರಕಟವಾದ ಈ ಅಧ್ಯಯನವು ಪ್ರಾಣಿ ಆಧಾರಿತ ಪರೀಕ್ಷಿತ ಮಾದರಿಯಲ್ಲಿ, ಮಹಿಳೆಯರಲ್ಲಿ ಡೋಪಮೈನ್ ನ್ಯೂರಾನ್‌ಗಳ ನಷ್ಟವನ್ನು ಕಡಿಮೆ ಮಾಡುತ್ತದೆ ಎಂದು ತೋರಿಸಿದೆ, ಇದು ಪಾರ್ಕಿನ್ಸನ್ ಕಾಯಿಲೆಗೆ ಚಿಕಿತ್ಸೆ ನೀಡಲು ಈ ಔಷಧವನ್ನು ಬಳಸಬಹುದು ಎಂಬುದಕ್ಕೆ ಇದು ಒಂದು ಸಾಕ್ಷಿಯಾಗಿದೆ ಎಂಬುದನ್ನು ಸೂಚಿಸುತ್ತದೆ.

ಸೈಟಿಸಿನ್ ನಿಕೋಟಿನ್​ನಂತೆ ಪರಿಣಾಮಕಾರಿಯಾಗಿ ಸಕ್ರಿಯಗೊಳಿಸುವುದಿಲ್ಲ ಎಂದು ಯುಎಸ್​​​​​​​ನ ಟೆಕ್ಸಾಸ್ ಎ & ಎಂ ವಿಶ್ವವಿದ್ಯಾಲಯದ ಸಂಶೋಧಕ ಭಾರತೀಯ ಮೂಲದ ರಾಹುಲ್ ಶ್ರೀನಿವಾಸನ್ ಹೇಳಿದ್ದಾರೆ.

ಸೈಟಿಸೈನ್ ನೈಸರ್ಗಿಕ ಸಂಯುಕ್ತವಾಗಿರುವುದರಿಂದ, ಸಾಕಷ್ಟು ಮುಕ್ತವಾಗಿ ಲಭ್ಯವಿದೆ ಮತ್ತು ಸಾಕಷ್ಟು ಅಗ್ಗವಾಗಿದೆ, ಈ ಚಾಪೆರೊನಿಂಗ್ ಪರಿಕಲ್ಪನೆಯನ್ನು ರೋಗದ ಪ್ರಾಣಿಗಳ ಮಾದರಿಯಲ್ಲಿ ಪರೀಕ್ಷಿಸಲು ನಿರ್ಧರಿಸಿದೆ ಎಂದು ಶ್ರೀನಿವಾಸನ್ ಹೇಳಿದರು.

ಸೈಟಿಸೈನ್ ನೀಡಲಾದ ಪ್ರಾಣಿಗಳ ಮಾದರಿಗಳ ಮೇಲೆ ಯಾವುದೇ ರೀತಿಯ ರಕ್ಷಣಾತ್ಮಕ ಪರಿಣಾಮವಿದೆಯೇ ಎಂದು ನೋಡಲು ಸಂಶೋಧಕರು ವರ್ತನೆಯ ಸರಣಿ ಪ್ರಯೋಗಗಳನ್ನು ನಡೆಸಿದರು. ಸೈಟಿಸಿನ್ ಮತ್ತು ಎಸ್ಟ್ರಾಗನ್ ಸಂಯೋಜನೆಯು ಸೈಟಿಸಿನ್ ಗಿಂತ ಬಲವಾದ ರಕ್ಷಣಾತ್ಮಕ ಪರಿಣಾಮ ಉಂಟುಮಾಡುತ್ತದೆ ಮತ್ತು ಎಸ್ಟ್ರಾಗನ್ ಮಾಡುವುದಿಲ್ಲ ಎಂದು ಅವರು ಕಂಡು ಹಿಡಿದರು.

ಹೆಣ್ಣು ಪ್ರಾಣಿಗಳ ಮಾದರಿಗಳಲ್ಲಿ ಮಾತ್ರ ಇದರ ಪರಿಣಾಮ ಏಕೆ ಸಂಭವಿಸಿದೆ ಎಂಬುದನ್ನು ಇದು ವಿವರಿಸುತ್ತದೆ, ಏಕೆಂದರೆ ಪುರುಷರಲ್ಲಿ ಗಮನಾರ್ಹ ಪ್ರಮಾಣದ ಈಸ್ಟ್ರೊಜೆನ್ ಇರುವುದಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.

ಅವರ ಸಂಶೋಧನೆಗಳು ಪ್ರಸ್ತುತ ಹೆಣ್ಣುಮಕ್ಕಳಿಗೆ ಮಾತ್ರ ಅನ್ವಯವಾಗಿದ್ದರೂ, ಗಂಡು ಮತ್ತು ಋತುಬಂಧಕ್ಕೊಳಗಾದ ಹೆಣ್ಣುಮಕ್ಕಳಿಗೆ(postmenopausal females) ಸಹ ಪರಿಹಾರಗಳನ್ನು ಕಂಡುಹಿಡಿಯಲು ಸಂಶೋಧಕರು ಯೋಜಿಸುತ್ತಿದ್ದಾರೆ.

ABOUT THE AUTHOR

...view details