ನ್ಯೂಯಾರ್ಕ್( ಅಮೆರಿಕ): ಧೂಮಪಾನವೂ ಕೇವಲ ನಿಮ್ಮ ಹೃದಯ ಮತ್ತು ಶ್ವಾಸಕೋಶಕ್ಕೆ ಮಾತ್ರ ಹಾನಿ ಮಾಡುವುದಿಲ್ಲ. ಇದು ನಿಮ್ಮ ಮಿದುಳನ್ನು ಶಾಶ್ವತ ಕುಗ್ಗುವಿಕೆಗೆ ಕಾರಣವಾಗುತ್ತದೆ. ಅಲ್ಲದೇ, ಧೂಮಪಾನ ತ್ಯಜಿಸಿದರೂ ಇದನ್ನು ಸರಿಪಡಿಸಲಾಗದ ರೀತಿಯಲ್ಲಿ ಹಾನಿ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ.
ಧೂಮಪಾನ ಬಿಡುವುದರಿಂದ ಮಿದುಳಿನ ಟಿಶ್ಯೂ ಮೇಲೆ ಆಗುವ ಹಾನಿಯನ್ನು ತಡೆಯಬಹುದಾಗಿದೆ. ಅಲ್ಲದೇ, ಧೂಮಪಾನ ನಿಲ್ಲಿಸುವುದರಿಂದ ಈಗಾಗಲೇ ಕುಗ್ಗಿರುವ ಮಿದುಳಿನ ಮೂಲ ಗಾತ್ರಕ್ಕೆ ಅದನ್ನು ತರಲು ಸಾಧ್ಯವಿಲ್ಲ ಎಂದು ಅಧ್ಯಯನ ತಿಳಿಸಿದೆ. ಈ ಅಧ್ಯಯನವನ್ನು ಜರ್ನಲ್ ಬಯೋಲಾಜಿಕಲ್ ಸೈಕಿಯಾಟ್ರಿ; ಗ್ಲೋಬಲ್ ಓಪನ್ ಸೈನ್ಸ್ನಲ್ಲಿ ಪ್ರಕಟಿಸಲಾಗಿದೆ.
ವಯೋ ಸಂಬಂಧಿ ಅರಿವಿನ ಕೊರತೆ ಮತ್ತು ಅಲ್ಝೈಮರ್ ರೋಗದ ಅಪಾಯವನ್ನು ಈ ಧೂಮಪಾನವೂ ಯಾಕೆ ಹೊಂದಿದೆ ಎಂಬುದನ್ನು ಈ ಅಧ್ಯಯನ ತಿಳಿಸಿದೆ. ಸಾಮಾನ್ಯವಾಗಿ ಜನರ ಮಿದುಳು ನೈಸರ್ಗಿಕವಾಗಿ ತಮ್ಮ ಮೌಲ್ಯವನ್ನು ವಯಸ್ಸಾದಂತೆ ಕಳೆದುಕೊಳ್ಳುತ್ತದೆ. ಧೂಮಪಾನದಿಂದ ವಯಸ್ಸಿಗೆ ಮುಂಚೆಯೇ ಮಿದುಳಿನ ಮೇಲೆ ಪರಿಣಾಮ ಹೊಂದುತ್ತದೆ ಎಂದು ಸೆಂಟ್ ಲೂಯಿಸ್ನಲ್ಲಿನ ವಾಷಿಂಗ್ಟನ್ ಯುನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ ತಿಳಿಸಿದೆ.
ಇತ್ತೀಚಿನವರೆಗೆ ವಿಜ್ಫಾನಿಗಳು ಶ್ವಾಸಕೋಶ ಮತ್ತು ಹೃದಯದ ಮೇಲಿನ ಹಾನಿಯನ್ನು ಮಾತ್ರ ಗಮನಿಸಿದ್ದಾರೆ. ಇದೀಗ ಮಿದುಳಿನ ಮೇಲೆ ಧೂಮಪಾನದ ಪರಿಣಾಮ ಗಮನಿಸಿದ್ದಾರೆ ಎಂದು ವಿಶ್ವವಿದ್ಯಾಲಯದ ಸೈಕಿಯಾಟ್ರಿಕ್ ಪ್ರೊಫೆಸರ್ ಲೌರಾ ಜೆ ಬೈರುತ್ ತಿಳಿಸಿದ್ದಾರೆ.