ಸೈಕೆಡೆಲಿಕ್ ಅಣಬೆಗಳ ಪ್ರಾಥಮಿಕ ಅಂಶ ಸೈಲೋಸಿಬಿನ್ ಅನ್ನು ವಿವಿಧ ವೈದ್ಯಕೀಯ ಚಿಕಿತ್ಸೆಯ ಸಣ್ಣ ಡೋಸ್ಗಳಲ್ಲಿ ಬಳಕೆ ಮಾಡಬಹುದು ಎಂದು ಸದರ್ನ್ ಡೆನ್ಮಾರ್ಕ್ ಯುನಿವರ್ಸಿಟಿಯ ಇತ್ತೀಚಿನ ಅಧ್ಯಯನಗಳು ತಿಳಿಸಿವೆ.
ಸಾಂಪ್ರದಾಯಿಕ ಸೈಲೋಸಿಬಿನ್ ರಾಸಾಯನಿಕವನ್ನು ದೀರ್ಘಕಾಲದಲ್ಲಿ ಗುರುತಿಸಲಾಗಿದ್ದು, ಇದೀಗ ಸಂಶೋಧಕರು ಇದು ಮನೋವೈಜ್ಞಾನಿಕ ಸ್ಥಿತಿಗಳನ್ನು ಉಪಶಮನ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಅದರಲ್ಲೂ ನಿರ್ಧಿಷ್ಟವಾಗಿ ವ್ಯಸನ ಮತ್ತು ಖಿನ್ನತೆಯಂತಹ ಸಮಸ್ಯೆಗಳ ಚಿಕಿತ್ಸೆ ಅಧಿಕ ಡೋಸ್ನ ಸೈಲೋಸಿಬಿನ್ ಸಂಯೋಜಿಸಬಹುದು ಎಂದಿದ್ದಾರೆ.
ಥೆರಪ್ಯೂಟಿಕ್ ಚಿಕಿತ್ಸೆಗಳಲ್ಲಿ ರೋಗಿಯು ಸಂಪೂರ್ಣ ಚಿಕಿತ್ಸಕ ತಯಾರಿಕೆಯ ನಂತರ ಸೈಲೋಸಿಬಿನ್ ಅನ್ನು ತೆಗೆದುಕೊಳ್ಳುತ್ತಾರೆ. ತರಬೇತಿ ಪಡೆದ ಚಿಕಿತ್ಸಕರೊಂದಿಗೆ ಬೆಂಬಲ ವಾತಾವರಣದಲ್ಲಿ ಸೈಕೆಡೆಲಿಕ್ ಅನುಭವವನ್ನು ಪಡೆಯುತ್ತಾರೆ. ಇದನ್ನು ಚಿಕಿತ್ಸಾ ಅವಧಿಗಳಲ್ಲಿ ಸಂಯೋಜಿಸಲಾಗಿದೆ. ಆಸ್ಪತ್ರೆಗಳಲ್ಲಿ ರೋಗಿಗಳ ಜೊತೆಯಲ್ಲಿ ಇಲಿಗಳ ಮೇಲೆ ಈ ಪ್ರಯೋಗವನ್ನು ಆಯೋಜಿಸಲಾಗಿದೆ.
ಇಲಿಗಳ ಮೇಲೆ ಅಧ್ಯಯನ: ಈ ಅಧ್ಯಯನವನ್ನು ನೇಚರ್ - ಮೊಲೆಕ್ಯೂಲರ್ ಸೈಕಿಯಾಟ್ರಿಕ್ನಲ್ಲಿ ಪ್ರಕಟಿಸಲಾಗಿದೆ. ದಕ್ಷಿಣ ಡೆನ್ಮಾರ್ಕ್ ವಿಶ್ವವಿದ್ಯಾನಿಲಯದಲ್ಲಿ ಕ್ಲಿನಿಕಲ್ ಫಿಸಿಯಾಲಜಿ ಮತ್ತು ನ್ಯೂಕ್ಲಿಯರ್ ಮೆಡಿಸಿನ್ ಸಂಶೋಧನಾ ಘಟಕದ ಸಹಾಯಕ ಪ್ರೊಫೆಸರ್ ಮೈಕೆಲ್ ಪಾಲ್ನರ್ ಮತ್ತು ಪಿಎಚ್‌ಡಿ ವಿದ್ಯಾರ್ಥಿ ಕ್ಯಾಟ್ ಕಿಲೆರಿಚ್ ಇಲಿಗಳ ಮೇಲೆ ಇದರ ಪರಿಣಾಮ ಕುರಿತು ಅಧ್ಯಯನ ನಡೆಸಿದ್ದಾರೆ.
ಅವರ ಗಮನವೂ ಸಾಮಾನ್ಯ ಡೋಸ್ಗಳಲ್ಲಿ ಬಳಕೆ ಮಾಡುವುದಕ್ಕಿಂತ ಪುನರಾವರ್ತಿತ ಕಡಿಮೆ ಪ್ರಮಾಣದ ಸೈಲೋಸಿಬಿಸ್ ಅನ್ನು ನೀಡುವುದರ ಮೇಲಿದೆ. ಇದನ್ನು ಸಾಮಾನ್ಯವಾಗಿ ಮೈಕ್ರೋಡೋಸಿಂಗ್ ಎಂದು ಕರೆಯಲಾಗುವುದು.