ಸಿಡ್ನಿ: ಕಡಿಮೆ ನಿದ್ರೆ, ಹಗಲು ಹೊತ್ತಿನಲ್ಲಿ ಸಣ್ಣ ನಿದ್ದೆ, ಶಿಫ್ಟ್ ಕೆಲಸ ಮತ್ತು ದೀರ್ಘ ನಿದ್ರಾ ಅವಧಿಗಳು ರಕ್ತದೊತ್ತಡ ಮತ್ತು ಹೃದಯ ರಕ್ತನಾಳ ಸಮಸ್ಯೆ ಅಪಾಯದೊಂದಿಗೆ ಸಂಬಂಧ ಹೊಂದಿವೆ ಎಂದು ಹೊಸ ಅಧ್ಯಯನ ತಿಳಿಸಿದೆ.
ನೇಚರ್ ಕಮ್ಯೂನಿಕೇಷನ್ನಲ್ಲಿ ಪ್ರಕಟವಾದ ಈ ಅಧ್ಯಯನ ವರದಿಯಲ್ಲಿ ವಯಸ್ಸು, ಲಿಂಗ ಮತ್ತು ದೇಹ ತೂಕ ಸೂಚ್ಯಂಕ (ಬಿಎಂಐ) ಹೃದಯದ ಲಯ-ನಡವಳಿಕೆ ಬದಲಾವಣೆ ಸೇರಿದಂತೆ ಹಲವು ಅಂಶಗಳು ಸ್ವತಂತ್ರವಾಗಿ ರಕ್ತದೊತ್ತಡ ನಿಯಂತ್ರಣದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ ಎಂಬುದನ್ನು ಅಧ್ಯಯನದಲ್ಲಿ ತೋರಿಸಲಾಗಿದೆ.
ಹೊಂದಾಣಿಕೆ ನಿದ್ರೆ ಆರೋಗ್ಯ/ನೈಟ್ ಶಿಫ್ಟ್ಗಳು ಎಲ್ಲ ವಯೋಮಾನದ ಪುರುಷ ಮತ್ತು ಮಹಿಳೆಯರಲ್ಲಿ ರಕ್ತದೊತ್ತಡಕ್ಕೆ ಕಾರಣವಾಗಬಹುದು ಎಂಬುದನ್ನು ಪತ್ತೆ ಮಾಡಿದ್ದೇವೆ ಎಂದು ಅಧ್ಯಯನದ ಪ್ರಮುಖ ಲೇಖಕ ಮೆಲ್ಬೋರ್ನಾದ ಬೇಕರ್ ಹಾರ್ಟ್ ಆ್ಯಂಡ್ ಡಯಾಬಿಟೀಸ್ ಇನ್ಸುಟಿಟ್ಯೂಟ್ನ ಅಸೋಸಿಯೇಟ್ ಪ್ರೊಫೆಸರ್ ಮೊರ್ಗ್ ಯಂಗ್ ಹೇಳಿದ್ದಾರೆ.
ಸಿಂಕ್ರೊನೈಸ್‌ನಿಂದ ಹೊರಗಿರುವ ಸಿರ್ಕಾಡಿಯನ್ ಲಯವು ಸ್ವಲ್ಪಮಟ್ಟಿಗೆ ರಕ್ತದೊತ್ತಡದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬುದನ್ನು ನಾವು ಪತ್ತೆ ಹಚ್ಚಿದ್ದೇವೆ ಎಂದು ಯಂಗ್ ತಿಳಿಸಿದ್ದಾರೆ. ಈ ಅಧ್ಯಯನದಲ್ಲಿ, ನೈಟ್ ಶಿಫ್ಟ್ ಕೆಲಸ ಮಾಡುವವರು ಐದು/ ಆರು ಗಂಟೆಗಿಂತ ಕಡಿಮೆ ನಿದ್ರೆ ಮಾಡುವುದನ್ನು ಪತ್ತೆ ಮಾಡಿದ್ದು, ಅವರು ಹೆಚ್ಚಿನ ಅಪಾಯದಲ್ಲಿದ್ದಾರೆ. ಬೆಳಿಗ್ಗೆ ಮತ್ತು ರಾತ್ರಿಯ ಮಿಕ್ಸೆಡ್ ಶಿಫ್ಟ್ನಲ್ಲಿ ಕೆಲಸ ಮಾಡುವವರಲ್ಲೂ ಕೂಡ ರಕ್ತದೊತ್ತಡ ಅಭಿವೃದ್ಧಿಯಾಗಿರುವುದು ಕಾಣಬಹುದು. ಮತ್ತೊಂದು ಆಸಕ್ತಿಕರ ಅಂಶವೆಂದರೆ, ದೀರ್ಘಕಾಲದ ನಿದ್ರಾವಧಿ ಕೂಡ ಸಿರ್ಕಾಡಿಯನ್ ಲಯವನ್ನು ಅಡ್ಡಿಪಡಿಸುವುದನ್ನು ಕಾಣಬಹುದು ಎಂದು ಮಾಹಿತಿ ನೀಡಿದ್ದಾರೆ.