Skipping Health Benefits : ಅನೇಕರು ಅಧಿಕ ತೂಕ ಮತ್ತು ಬೊಜ್ಜಿನ ಸಮಸ್ಯೆದಿಂದ ಬಳಲುತ್ತಿದ್ದಾರೆ. ತೂಕ ಇಳಿಸಿಕೊಳ್ಳಲು ಹಲವು ರೀತಿಯ ವ್ಯಾಯಾಮಗಳನ್ನು ಮಾಡುತ್ತಾರೆ. ಆದರೆ, ತೂಕವನ್ನು ವೇಗವಾಗಿ ಇಳಿಸಲು ಉತ್ತಮ ವ್ಯಾಯಾಮ ಯಾವುದು ಎಂಬುದು ಅನೇಕರಿಗೆ ತಿಳಿದಿಲ್ಲ. ಪ್ರತಿಯೊಂದು ರೀತಿಯ ವ್ಯಾಯಾಮವು ಪ್ರತಿ ವ್ಯಕ್ತಿಗೆ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ 'ಸ್ಕಿಪ್ಪಿಂಗ್' ಎಂಬುದು ದೇಹದ ಎಲ್ಲ ಪ್ರಕಾರಗಳಿಗೆ ಉತ್ತಮವಾಗಿ ಕಾರ್ಯನಿರ್ವಹಿಸುವ ವ್ಯಾಯಾಮವಾಗಿದೆ.
ಕೆಲವರು ತೂಕವನ್ನು ಕಳೆದುಕೊಳ್ಳುವ ಸಂಬಂಧ ವ್ಯಾಯಾಮದ ಜೊತೆಗೆ ಡಯಟ್ ಪದ್ಧತಿಯನ್ನು ಅನುಸರಿಸುತ್ತಾರೆ. ಸ್ಕಿಪ್ಪಿಂಗ್ ಎಲ್ಲರೂ ಅನುಸರಿಸುವ ವ್ಯಾಯಾಮದ ಅತ್ಯುತ್ತಮ ರೂಪವಾಗಿದೆ. ಸ್ಕಿಪ್ಪಿಂಗ್ಗಾಗಿ ಹೆಚ್ಚು ಖರ್ಚು ಮಾಡುವ ಅಗತ್ಯವಿಲ್ಲ. ಜಿಮ್‌ಗೆ ಹೋಗುವವರಿಗೆ ಇದು ಬಹಳ ಉಪಯುಕ್ತ. ಈ ವ್ಯಾಯಾಮಕ್ಕೆ ಕೇವಲ ಒಂದು ಹಗ್ಗ ಮತ್ತು ಒಂದು ಜೋಡಿ ಶೂ ಇದ್ರೆ ಸಾಕು. ಆದರೆ ನಿತ್ಯ ಸ್ಕಿಪ್ಪಿಂಗ್ ಮಾಡುವುದರಿಂದ ನಮ್ಮ ದೇಹದ ಅಂಗಾಂಗಗಳ ಕಾರ್ಯನಿರ್ವಹಣೆ ಸುಧಾರಿಸುತ್ತದೆ ಎನ್ನುತ್ತಾರೆ ತಜ್ಞರು.
ಖಂಡಗಳ ಶಕ್ತಿ ಹೆಚ್ಚಳ.. (Skipping Muscle Benefits):ನಿಯಮಿತವಾಗಿ ಸ್ಕಿಪ್ಪಿಂಗ್ ಮಾಡುವುದರಿಂದ ದೇಹಕ್ಕೆ ಒಳ್ಳೆಯದು. ಇದರಿಂದಾಗಿ ದೇಹದಲ್ಲಿ ಕ್ಯಾಲೊರಿಗಳನ್ನು ಬರ್ನ್ ಆಗುತ್ತವೆ. ಅಷ್ಟೇ ಅಲ್ಲ ಖಂಡಗಳು ಅಥವಾ ಸ್ನಾಯುಗಳು ಬಲಗೊಳ್ಳುತ್ತವೆ. ಕೈಗಳು ಮತ್ತು ಕಾಲುಗಳು ಜೊತೆಗೆ ವರ್ಕೌಟ್ ಆಗುವುದರಿಂದ ದೇಹ ಸಹ ಫಿಟ್ ಆಗಿರುತ್ತದೆ.
ಹಾರ್ಟ್ ಫಿಟ್ (Skipping Health Benefits..) :ಸ್ಕಿಪ್ಪಿಂಗ್ನಿಂದ ದೇಹದ ತೂಕ ಕಡಿಮೆ ಆಗುವುದರ ಜೊತೆ ಹೃದಯ ಸ್ನಾಯುಗಳನ್ನು ಬಲಗೊಳ್ಳುತ್ತವೆ. ಸ್ಕಿಪ್ಪಿಂಗ್ ವೇಳೆ ನಾವು ಜಂಪ್ ಮಾಡುವುದರಿಂದ ಹೃದಯ ಬಡಿತ ಮತ್ತು ಉಸಿರಾಟದ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ಹೃದಯ ಮತ್ತು ಶ್ವಾಸಕೋಶದ ಕಾರ್ಯ ಸುಧಾರಣೆಗೊಳ್ಳುತ್ತದೆ. ಅಷ್ಟೇ ಅಲ್ಲ ದೇಹದ ಎಲ್ಲ ಭಾಗಗಳಿಗೂ ರಕ್ತ ಮತ್ತು ಆಮ್ಲಜನಕ ಪೂರೈಕೆ ಸರಳವಾಗಿ ಮತ್ತು ಅಡತಡೆವಿಲ್ಲದೆ ಸರಾಗವಾಗಿ ನಡೆಯುತ್ತದೆ.