ಕೊರೊನಾ ಬಿಕ್ಕಟ್ಟು ಎದುರಾದಾಗಿಂದ ಮಾಸ್ಕ್ಗಳ ಬಳಕೆ ತುಂಬಾ ಸಾಮಾನ್ಯವಾಗಿದೆ ಮತ್ತು ಅವುಗಳ ಬಳಕೆಯಿಂದ ಚರ್ಮಕ್ಕೆ ಉಂಟಾಗುವ ಅಲರ್ಜಿಯ ಸಂಭವ ಹೆಚ್ಚಾಗಿದೆ. ಮುಖಗವಸುಗಳಲ್ಲಿ ಬಳಸುವ ಸ್ಪಾಂಜ್ ಸ್ಟ್ರಿಪ್ ಸೇರಿದಂತೆ ವಿವಿಧ ಉತ್ಪನ್ನಗಳ ಉತ್ಪಾದನೆಯಲ್ಲಿ ಸಾಮಾನ್ಯವಾಗಿ ಬಳಸಲಾಗುವ ಪಾಲಿಯುರೆಥೇನ್‌ಗಳು ಅಲರ್ಜಿಕ್ ಕಾಂಟ್ಯಾಕ್ಟ್ ಡರ್ಮಟೈಟಿಸ್ (ಎಸಿಡಿ) ಗೆ ಕಾರಣವಾಗಬಹುದು.
ಮಾಸ್ಕ್ಗಳು, ಕೈಗವಸುಗಳು ಮತ್ತು ಹ್ಯಾಂಡ್ ಸ್ಯಾನಿಟೈಸರ್‌ಗಳಿಂದ ಅಲರ್ಜಿಕ್ ಕಾಂಟ್ಯಾಕ್ಟ್ ಡರ್ಮಟೈಟಿಸ್:
ಫೇಸ್ ಮಾಸ್ಕ್ಗಳು ತುಂಬಾ ಬಿಗಿಯಾಗಿರುತ್ತವೆ ಅಥವಾ ಅವರು ನಮ್ಮ ಚರ್ಮಕ್ಕೆ ಸರಿಹೊಂದದ ಬಟ್ಟೆಯಿಂದ ಮಾಡಲ್ಪಟ್ಟಿದ್ದು ಮುಖದ ಮೇಲೆ ಕಿರಿಕಿರಿ ಉಂಟುಮಾಡುತ್ತದೆ. ಕೆಲವು ಮಾಸ್ಕ್ಗಳು ನಿಮ್ಮ ಮುಖದ ಮೇಲಿನ ನೈಸರ್ಗಿಕ ತೇವಾಂಶವನ್ನು ಹೀರಿಕೊಳ್ಳುತ್ತವೆ ಮತ್ತು ಇದರಿಂದ ನಿಮ್ಮ ಚರ್ಮ ಒಣಗುತ್ತದೆ. ಅಂತಹ ಮುಖದ ಎಸ್ಜಿಮಾದ ಲಕ್ಷಣಗಳು ಕೆಂಪು ಅಥವಾ ಮಸುಕಾದ ಚರ್ಮ, ತುರಿಕೆ, ಅಥವಾ ಸುಡುವ ರೀತಿಯ ಅನುಭವವಾಗುತ್ತದೆ.
ಆಗಾಗ್ಗೆ ಕೈ ತೊಳೆಯುವುದು ಮತ್ತು ಹ್ಯಾಂಡ್ ಸ್ಯಾನಿಟೈಸರ್‌ಗಳ ಬಳಕೆಯಿಂದಾಗಿ ಅಲರ್ಜಿಕ್ ಕಾಂಟ್ಯಾಕ್ಟ್ ಡರ್ಮಟೈಟಿಸ್:
ನೀರು ಮತ್ತು ಆರ್ದ್ರ ವಾತಾವರಣಕ್ಕೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಚರ್ಮದ ಸೂಕ್ಷ್ಮತೆ ಹೆಚ್ಚಾಗುತ್ತದೆ. ರಾಸಾಯನಿಕ ಬಳಸಿ ತಯಾರಿಸಿದ ಸಾಬೂನುಗಳನ್ನು ಪದೇ ಪದೆ ಬಳಸುವುದರಿಂದ ಚರ್ಮದ ಮೇಲ್ಮೈ ತೈಲ ಹೋಗಿ ಕಾಂಟ್ಯಾಕ್ಟ್ ಡರ್ಮಟೈಟಿಸ್‌ಗೆ ಕಾರಣವಾಗಬಹುದು.
ನೀರು ಮತ್ತು ಸಾಬೂನು ಲಭ್ಯವಿಲ್ಲದಿದ್ದರೆ ಕನಿಷ್ಠ ಶೇ60ರಷ್ಟು ಆಲ್ಕೋಹಾಲ್ ಹೊಂದಿರುವ ಹ್ಯಾಂಡ್ ರಬ್‌ಗಳನ್ನು ಬಳಸುವುದು ಸಮಂಜಸವಾದ ಪರ್ಯಾಯವಾಗಿದೆ ಎಂದು WHO ಹೇಳುತ್ತದೆ; ಈ ಉತ್ಪನ್ನಗಳನ್ನು ಆಗಾಗ್ಗೆ ಬಳಸುವುದರಿಂದ ಶುಷ್ಕತೆ ಮತ್ತು ಕಿರಿಕಿರಿ ಉಂಟಾಗುತ್ತದೆ.
ಯಾರು ತೊಂದರೆಯಲ್ಲಿದ್ದಾರೆ?
- ಕೇಶ ವಿನ್ಯಾಸಕರು, ಬ್ಯೂಟಿಷಿಯನ್ಗಳು
- ಕಟ್ಟಡ ನಿರ್ಮಾಣ ಕಾರ್ಮಿಕರು
- ಮೆಟಲ್ ವರ್ಕರ್ಸ್
- ಹೆಲ್ತ್ಕೇರ್ ವರ್ಕರ್ಸ್
- ಆಟೋ ಮೆಕ್ಯಾನಿಕ್ಸ್
- ಕ್ಲೀನರ್ಸ್
- ತೋಟಗೆಲಸಗಾರರು
- ಕೃಷಿ ಕಾರ್ಮಿಕರು
ಚರ್ಮವೈದ್ಯರನ್ನು ಅಥವಾ ಸಂಬಂಧಪಟ್ಟ ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು?
ಏಕಾಏಕಿ ಚರ್ಮ ತುರಿಕೆ, ಕೆಂಪು ರ‍್ಯಾಶಸ್ ಕಾಣಿಸಿಕೊಂಡಾಗ
ರ‍್ಯಾಶಸ್ ದೇಹದ ಇತರ ಭಾಗಗಳಿಗೆ ಹರಡಿದಾಗ
ರ‍್ಯಾಶಸ್ ವಾರದೊಳಗೆ ಸುಧಾರಿಸುವುದಿಲ್ಲ
ಚರ್ಮವು ಸೋಂಕಿಗೊಳಗಾದಾಗ-ಕೀವು ಸುರಿಯುತ್ತದೆ
ಜ್ವರ ಕಾಣಿಸಿಕೊಳ್ಳುತ್ತದೆ
ಕಾಂಟ್ಯಾಕ್ಟ್ ಡರ್ಮಟೈಟಿಸ್ ಚಿಕಿತ್ಸೆ:
ಚರ್ಮದ ಮೇಲೆ ರಿಯಾಕ್ಷನ್ ಆಗುತ್ತಿರುವ ಕಾರಣವನ್ನು ಕಂಡುಹಿಡಿಯುವುದು ಮತ್ತು ಡರ್ಮಟೈಟಿಸ್ ಅನ್ನು ಪ್ರಚೋದಿಸುವ ಉದ್ರೇಕಕಾರಿ ಅಥವಾ ಅಲರ್ಜಿನ್ ಸಂಪರ್ಕವನ್ನು ತಪ್ಪಿಸುವುದು ಮೊದಲನೆಯದು. ಇದು ಚರ್ಮವನ್ನು ಗುಣಪಡಿಸಲು ಅನುವು ಮಾಡಿಕೊಡುತ್ತದೆ ಮತ್ತು ಮತ್ತಷ್ಟು ಹೆಚ್ಚಾಗುವುದನ್ನು ತಡೆಯುತ್ತದೆ.