ಕರ್ನಾಟಕ

karnataka

ETV Bharat / sukhibhava

Six-pack Abs: ಸಿಕ್ಸ್​ ಪ್ಯಾಕ್ ಆ್ಯಬ್ಸ್​ ಸಾಧನೆ, ನಿರ್ವಹಣೆ ಬಲು ಕಷ್ಟ; ಕಾರಣ ಇದು! - ಫಿಟ್​ನೆಸ್

ಸಿಕ್ಸ್​ ಪ್ಯಾಕ್​ ಆ್ಯಬ್ಸ್‌​ ಸಾಧನೆ ಮಾಡುವ ಅನುಭವ ಒಂದು ರೀತಿ ಫುಲ್​ ಟೈಮ್​ ಉದ್ಯೋಗದಂತೆ. ಇದು ಕಷ್ಟವಾಗಲು ಕಾರಣವಿದೆ.

Six pack abs are very difficult to achieve and maintain; This is the reason!
Six pack abs are very difficult to achieve and maintain; This is the reason!

By

Published : Jun 29, 2023, 4:18 PM IST

ಯುಕೆ: ತಮ್ಮ ಆರೋಗ್ಯದ ಫಿಟ್​ನೆಸ್​ಗಾಗಿ ಅನೇಕ ಜನರು ಜಿಮ್​ ಗುರಿಗಳನ್ನು ಹೊಂದುತ್ತಾರೆ. ಅದರಲ್ಲಿ ಸಿಕ್ಸ್​ ಆ್ಯಬ್ಸ್​ (ಕಿಬ್ಬೊಟ್ಟೆ ಸ್ನಾಯು) ಬೆಳೆಸುವುದು ಅನೇಕರ ಇಚ್ಛೆ. ಸೆಲೆಬ್ರಿಟಿಗಳೂ ಸೇರಿದಂತೆ ಅನೇಕ ಮಂದಿ ಇದಕ್ಕಾಗಿ ಕಷ್ಟಪಡುತ್ತಾರೆ. ಕಾಮಿಡಿಯನ್​ ಎರಿಕ್​ ಆ್ಯಂಡ್ರೆ ಹೇಳುವಂತೆ ಸಿಕ್ಸ್​​ ಪ್ಯಾಕ್​ ಆ್ಯಬ್ಸ್‌ ನಿರೀಕ್ಷೆಗಿಂತ ಹೆಚ್ಚಿನ ಸವಾಲು ಹೊಂದಿವೆ. ಸಾಧನೆ ಮಾಡುವ ಅನುಭವ ಒಂದು ರೀತಿ ಫುಲ್​ ಟೈಮ್​ ಉದ್ಯೋಗದಂತೆ. ಇದು ಕಷ್ಟವಾಗುವುದಕ್ಕೆ ಅನೇಕ ಕಾರಣಗಲಿವೆ. ಸುಸ್ಥಿರ ಶ್ರಮ ಮತ್ತು ಕಟ್ಟು ನಿಟ್ಟಿನ ಆಹಾರ ಕ್ರಮದೊಂದಿಗೆ ಉತ್ತಮ ಆರೋಗ್ಯವೂ ಅವಶ್ಯಕ ಎನ್ನುತ್ತಾರೆ.

ಯಾವುದೇ ಸ್ನಾಯುವನ್ನು ಬೆಳೆಸಲು ನೀವು ನಿಯಮಿತವಾಗಿ ತೂಕ ನಿರ್ವಹಣೆ ತರಬೇತಿಯೊಂದಿಗೆ ಆರೋಗ್ಯಯುತ ಅಧಿಕ ಪ್ರೋಟಿನ್​ ತರಬೇತಿ ಪಡೆಯಬೇಕು. ತೂಕ ತರಬೇತಿಯೂ ಸ್ನಾಯು ಪ್ರೋಟಿನ್​ ಸಿಂಥಸಿಸ್​ ಆಗಿ ಕೆಲಸ ಮಾಡುತ್ತದೆ. ಪ್ರೋಟಿನ್​ಗಳು ಸ್ನಾಯುಗಳ ಬಿಲ್ಡಿಂಗ್ ಬ್ಲಾಕ್ಸ್ ಆಗಿರುವುದರಿಂದ ಸ್ನಾಯು ಪ್ರೋಟೀನ್ ಸಂಶ್ಲೇಷಣೆಯು ತೊಡೆದು ಹಾಕುವ ಹಳೆಯ ಪ್ರೋಟಿನ್​ಗಳನ್ನು ಬದಲಿಸಲು ನಿರಂತರವಾಗಿ ಹೊಸ ಪ್ರೋಟಿನ್​ಗಳನ್ನು ತಯಾರಿಸುವುದು ಮುಖ್ಯ.

ಸ್ನಾಯು ಪ್ರೋಟಿನ್​ ಸಿಂಥಸೀಸ್​ ನಿರಂತರವಾಗಿ ಪ್ರೋಟಿನ್​ ಆಹಾರ ಸೇವನೆಯಿಂದ ಹೆಚ್ಚಾಗುತ್ತದೆ. ಆದರೆ, ಇದಕ್ಕೆ ಮೊದಲು ನೀವು ತೂಕ ತರಬೇತಿ ಆರಂಭಿಸಿದರೆ, ಇನ್ನಷ್ಟು ಹೆಚ್ಚಿಸಬೇಕಿದೆ. ದಿನಕ್ಕೆ ನಿಯಮಿತ ತೂಕ ತರಬೇತಿಯ ಜೊತೆಗೆ 20 ಗ್ರಾಂ ಪ್ರೋಟಿನ್​ ಅನ್ನು ಪ್ರತಿ ಆಹಾರದಲ್ಲಿ ಸೇವಿಸಬೇಕು. ಸಮಯ ಕಳೆದಂತೆ ಇದು ನಿಮ್ಮ ಸ್ನಾಯು ಬೆಳವಣಿಗೆಗೆ ಅವಕಾಶ ನೀಡುತ್ತದೆ.

ಸ್ನಾಯುಗಳ ಅಭಿವೃದ್ದಿಗೆ ಕೇವಲ ಪ್ರೋಟಿನ್​ ಸಹಾಯ ಮಾಡುವುದಿಲ್ಲ. ವ್ಯಾಯಾಮವೂ ಇದಕ್ಕೆ ಪ್ರಮುಖ. ಇದರಿಂದ ಒಟ್ಟಾರೆ ಸ್ನಾಯು ಉತ್ತಮ ದೇಹಾಕೃತಿ ಪಡೆಯಲು ಸಾಧ್ಯ. ಅಂದರೆ ವಿವಿಧ ವ್ಯಾಯಾಮ ಅಭ್ಯಾಸಗಳ ಮೂಲಕ ಎಲ್ಲ ಪ್ರಮುಖ ಸ್ನಾಯು ಗುಂಪಿನ ಬೆಳವಣಿಗೆ ಕಾಣಬಹುದು. ನೀವು ಸಿಕ್ಸ್​ ಪ್ಯಾಕ್​ ಸಾಧನೆ ಮಾಡಬೇಕೆಂದರೆ, ಹೆಚ್ಚಾಗಿ ಕಿಬ್ಬೊಟ್ಟೆ ವ್ಯಾಯಾಮವನ್ನು ಮಾಡಬೇಕು.

ಪ್ರತಿ ಎರಡು ದಿನಕ್ಕೊಮ್ಮೆಯಾದರೂ ನಿಗದಿತ ಗುರಿಯ ಸ್ನಾಯುವಿನ ವ್ಯಾಯಾಮ ಮಾಡಬೇಕು. ಇದರಿಂದ ಉತ್ತಮ ಪ್ರತಿಕ್ರಿಯೆ ನಿರ್ವಹಣೆ ಮಾಡಬಹುದು. ವಾರ ಅಥವಾ ತಿಂಗಳು ಕಾಲ ಈ ರೀತಿಯ ನಿರ್ವಹಣೆ ಮಾಡುವುದರಿಂದ ಗಮನಾರ್ಹ ಸ್ನಾಯು ಗಾತ್ರದ ಬದಲಾವಣೆ ಆಗುತ್ತದೆ.

ಸಿಕ್ಸ್​ ಪ್ಯಾಕ್​ ಪಡೆಯಲು ತರಬೇತಿಯೊಂದೇ ನಿಮಗೆ ಸಾಲದು. ಇದೇ ಸಮಯದಲ್ಲಿ ನೀವು ಒಟ್ಟಾರೆ ದೇಹದ ಕೊಬ್ಬು ಕರಗಿಸಬೇಕಾಗುತ್ತದೆ. ಅದರಲ್ಲೂ ಕಿಬ್ಬೊಟ್ಟೆಯ ಕೊಬ್ಬರು ಸ್ನಾಯು ಮತ್ತು ಚರ್ಮದ ಮಧ್ಯೆ ಪದರದಲ್ಲಿ ಇರುತ್ತದೆ. ದೇಹದ ಕೊಬ್ಬು ಕರಗಿಸಲು ಶಕ್ತಿಯು ಬೇಕಾಗುತ್ತದೆ. ಹೆಚ್ಚು ಕ್ಯಾಲೋರಿ ಬರ್ನ್​​ ಮಾಡಲು ಅದರ ಸೇವನೆ ಕೂಡ ಮಾಡಬೇಕು. ಅನೇಕ ವಾರಗಳ ಕಾಲ ನಿಯಮಿತದ ವ್ಯಾಯಾಮ ಆಹಾರ ಕ್ರಮದಿಂದ ಕೊಬ್ಬು ಕರಗಬಹುದು. ಆದರೆ, ಹೊಟ್ಟೆಯ ಕೊಬ್ಬು ಸಾಮಾನ್ಯವಾಗಿ ಸರಾಸರಿಗಿಂತ ಕಡಿಮೆ ದೇಹದ ಕೊಬ್ಬಿನ ಶೇಕಡಾವಾರು ಅಗತ್ಯವಿರುತ್ತದೆ. ಶೇ 5ರಿಂದ 10ರಷ್ಟು ಪುರುಷರಲ್ಲಿ ಹೆಚ್ಚಿದ್ದರೆ, ಮಹಿಳೆಯರಲ್ಲಿ ಶೇ 15ರಷ್ಟು ಇರುತ್ತದೆ.

ಈ ಗುರಿ ಸಾಧಿಸಲು ಪ್ರಯತ್ನಿಸುವುದು ಸವಾಲಿನದು. ಎರಡನ್ನೂ ಒಂದೇ ಸಮಯದಲ್ಲಿ ಮಾಡುವುದು ಇನ್ನೂ ಹೆಚ್ಚು ಸವಾಲೇ ಸರಿ. ಶಕ್ತಿಯ ಕೊರತೆಯಲ್ಲಿರುವಾಗ ಸ್ನಾಯುವಿನ ಗಾತ್ರವನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಸಂಶೋಧನೆ ತೋರಿಸುತ್ತದೆ. ನೀವು ವಾರದಲ್ಲಿ ಆರು ದಿನಗಳಲ್ಲಿ ಹೆಚ್ಚಿನ ಪ್ರಮಾಣದ ವ್ಯಾಯಾಮ ತರಬೇತಿ ಹೊಂದಿರಬೇಕು. ಸಂಪೂರ್ಣ ದೇಹ ತೂಕದ ತರಬೇತಿ ಮತ್ತು ಹೆಚ್ಚಿನ ತೀವ್ರತೆಯ ಮಧ್ಯಂತರ ತರಬೇತಿಯಂತಹ ವಿಭಿನ್ನ ಜೀವನಕ್ರಮಗಳ ಸಂಯೋಜನೆಯನ್ನು ಮಾಡಬೇಕಾಗುತ್ತದೆ. ಕ್ಯಾಲೋರಿ ಕೊರತೆಯಿರುವಾಗ ನೀವು ಶಿಫಾರಸು ಮಾಡಿದ ದೈನಂದಿನ ಪ್ರೋಟೀನ್‌ನ ಮೂರು ಪಟ್ಟು ಹೆಚ್ಚು ತಿನ್ನಬೇಕು.

ಮಾನಸಿಕವಾಗಿಯೂ ಈ ಅಭ್ಯಾಸಗಳ ಸುಸ್ಥಿರತೆ ಕಾಡುವುದು ಗಣನೀಯವಾಗಿ ಕಷ್ಟವಾಗಲಿದೆ. ಇದಕ್ಕೆ ಹೆಚ್ಚಿನ ಸಮಯದ ಜೊತೆಗೆ ಹಲವು ವಿಷಯಗಳಲ್ಲಿ ಹೊಂದಾಣಿಕೆ ಜೊತೆಗೆ ಇತರೆ ಅಭ್ಯಾಸಗಳನ್ನು ನಿರ್ಲಕ್ಷಿಸಬೇಕಾಗುತ್ತದೆ. ಸಿಕ್ಸ್​​ ಪ್ಯಾಪ್​ ನಿರ್ವಹಣೆ ಮಾಡುವುದು ಕೂಡ ನಿರಂತರ ಶ್ರಮ ಮತ್ತು ಸಮರ್ಪಣೆ ಮೇಲೆ ಅವಲಂಬಿಸಿರುತ್ತದೆ. ಕಾರಣ, ನಾವು ಸ್ನಾಯುಗಳನ್ನು ಕಳೆದು ಕೊಳ್ಳುತ್ತಿದ್ದಂತೆ, ವ್ಯಾಯಾಮ ನಿಲ್ಲಿಸಿದಾಗ ಈ ಸ್ನಾಯುಗಳನ್ನು ಮತ್ತೆ ವಾರದಲ್ಲಿ ಮತ್ತೆ ಪಡೆಯುತ್ತೇವೆ.

ಇದನ್ನೂ ಓದಿ: Obesity: ಸ್ಥೂಲಕಾಯದ ವಿರುದ್ಧ ಹೋರಾಡಲು ಇದೀಗ ಮಾತ್ರೆ ಸಾಕು!

ABOUT THE AUTHOR

...view details