ನವದೆಹಲಿ:ಆಹಾರಗಳು ಹೆಚ್ಚಾಗಿ ಸಂತೋಷದ ನೆನಪುಗಳನ್ನು ಕಲ್ಪಿಸುತ್ತದೆ. ನೆಪೊಲಿಟನ್ ಪಿಜ್ಜಾ, ಗ್ರೀಕ್ ಮೌಸ್ಸಕ ಅಥವಾ ನ್ಯೂಯಾರ್ಕ್ ಚೀಸ್ ಕೇಕ್ ನಂತಹ ಅನೇಕ ಬಾಯಲ್ಲಿ ನೀರೂರಿಸುವ ಸ್ಥಳೀಯ ಆಹಾರಗಳಿಗಾಗಿ ಪ್ರಯಾಣಿಸಲು ಸಿದ್ದರಾಗುತ್ತೇವೆ. ಅಂತಹ ಸ್ಥಳೀಯ ರುಚಿಕರದ ಆಹಾರಗಳ ಪಟ್ಟಿ ಇಲ್ಲಿದೆ.
ಹಂಗೇರಿಯಲ್ಲಿ ಗೌಲಾಶ್ ಮತ್ತು ಲೆಕ್ಸೊ: ಹಂಗೇರಿಯ ಮಂದಿ ತಮ್ಮನ್ನು ರಾಷ್ಟ್ರೀಯ ಸೂಪ್ ಸೇವಿಸುವವರು ಎಂದು ಕರೆಸಿಕೊಳ್ಳುತ್ತಾರೆ. ಇಲ್ಲಿ ಅನೇಕ ಮಂದಿ ವಿಧದ ಸೂಪ್ಗಳನ್ನು ಕಾಣಬಹುದು ಅದರಲ್ಲಿ ಪ್ರಮುಖವಾಗಿರುವುದು ಗೌಲಾಶ್ ಮತ್ತು ಪಾಲೊಕ್ನ ಮೀನಿನ ಸೂಪ್
ಮಸೂರ ಬೇಳೆ, ಆಲೂಗಡ್ಡೆ, ಬಟಾಣಿ, ಬೀನ್ಸ್, ಕೋಸ್ ಮತ್ತು ಕುಂಬಳಕಾಯಿಯಿಂದ ಈ ಸಾಂಪ್ರದಾಯಿಕ ಅಡುಗೆ ತಯಾರಿಸಲಾಗುವುದು. ಪರ್ರಿಕಾ ಹಂಗೇರಿಯ ರಾಷ್ಟ್ರೀಯ ಮಸಾಲೆ ಪದಾರ್ಥ ಆಗಿದ್ದು, ಅನೇಕ ಆಹಾರದಲ್ಲಿ ಕಾಣಬಹುದು. ಚಳಿಗಾಲದಲ್ಲಿ ಮಾಂಸದ ಜೊತೆಗಿನ ಕೋಸಿನ ರೋಲ್ ಅಚ್ಚು ಮೆಚ್ಚಾದರೆ, ಲೆಕ್ಸೊ ಬೇಸಿಗೆಯಲ್ಲಿನ ರುಚಿಕರ ತಿನಿಸಾಗಿದೆ
ಈ ಸ್ಥಳೀಯ ರುಚಿಕರ ಆಹಾರಗಳನ್ನು ಹಂಗೇರಿಯ ಸ್ಥಳೀಯ, ಪುರಾತನ ರೆಸ್ಟೋರೆಂಟ್ ಆದಾ ಗುಂಡೆಲ್ನಲ್ಲಿ ಸವಿಯಬಹುದು. ಇಲ್ಲಿ ನಿಜಕ್ಕೂ ಆಹಾರದ ರುಚಿ ಹೆಚ್ಚಿಸುವ ಆಹಾರ ನಿಮ್ಮ ಮನ ತಣಿಸುತ್ತದೆ. ಇನ್ನು ಇದರ ಹೊರತಾಗಿ 75 ಫ್ಯಾನ್ಸಿ ರೆಸ್ಟೋರೆಂಟ್ ಅನ್ನು ಫ್ರೆಂಚ್ ಗೈಡ್ ಮೂಲಕ ಮೈಕೆಲಿನ್ ಸ್ಟಾರ್, ಬಿಬ್ ಗೌರ್ಮಂಡ್ ಮತ್ತು ಗ್ರೀನ್ ಸ್ಟಾರ್ ವಿಭಾಗಗಳ ಅನ್ವೇಷಣೆ ನಡೆಸಬಹುದು
ಇನ್ನು ಈ ಅಹಾರಗಳನ್ನು ಇಲ್ಲಿನ ಸ್ಥಳೀಯ ವೈನ್ ಆದ ತೊಕಜಿ, ಸ್ಕೆಜಾರ್ಡ್ ಮತ್ತು ವಿಲ್ಲನೆ ಮೂಲಕ ಸಂಪೂರ್ಣಗೊಳಿಸಬಹುದು.
ವಿಯೆಟ್ನಾದ ನತ್ ತ್ರಂಗ್ ನೆಮ್ ನೌಂಗ್ ಮತ್ತು ಕೆಮ್ ಚೌಯಿ:ಫ್ರೆಂಚ್, ಪೂರ್ವ ಏಷ್ಯಾ, ಆಫ್ರಿಕಾ ಮತ್ತು ಪೋರ್ಚುಗೀಸ್ ಹೊರಾತಾಗಿ ವಿಯೆಟ್ನಾದ ಆಹಾರಗಳು ಸ್ಥಳೀಯವಾಗಿ ಹೆಸರುವಾಸಿಯಾಗಿದೆ. ಇಲ್ಲಿನ ದಕ್ಷಿಣ ಕನ್ಹಾ ಹೊಹ್ ಪ್ರದೇಶದಲ್ಲಿರುವ ನಹ್ ತ್ರಂಗ್ದಲ್ಲಿ ಇದರ ಅದ್ಬುತ ರುಚಿ ಸವಿಯಬಹುದು. ಇಲ್ಲಿನ ಕೌಶಲ್ಯಭರಿತ ಚೆಫ್ಗಳು ಕೊಮಚೈನ್, ತೊಮಚಯ್ಬೊಟಿಯ್, ಬನ್ಬೊಹ್, ಕೊಲ್ಔ ಮತ್ತು ಕಂಗ ಆಹಾರ ತಯಾರಿಸುವಲ್ಲಿ ನಿಪುಣರು. ಈ ಆಹಾರಕ್ಕೆ ಹೊಸ ತಂತ್ರಗಳನ್ನು ಬಳಸುವ ಜೊತೆಗೆ ಇವುಗಳ ಸಾಮಗ್ರಿಗಳ ಮೂಲಕ ನದಿ, ಕೃಷಿ ಮತ್ತು ಕರಾವಳಿ ಪದಾರ್ಥಗಳಾಗಿದೆ. ಮನೆ ಅಥವಾ ಬೀದಿ ಅಥವಾ ಸಾಂಪ್ರದಾಯಿಕ ಅಚ್ಚುಮೆಚ್ಚಿನ ಆಹಾರಗಳಿಗೆ ಆಧುನಿಕ ಟಚ್ ನೀಡಿ ಉಣಬಡಿಸಲಾಗುವುದು.
ಜಪಾನ್‌ನ ಓನಿಗಿರಿ ಮತ್ತು ಕುಶಿಕಾಟ್ಸು: ಸೂರ್ಯ ಉದಯಿಸುವ ಈ ಪುಟ್ಟ ದೇಶದಲ್ಲಿ ಪ್ರತಿಯೊಂದು ಪ್ರದೇಶವೂ ರೆಸ್ಟೋರೆಂಟ್‌ಗಳು, ಕೆಫೆಗಳು ಮತ್ತು ಬೀದಿ ಬದಿಯ ತಿನಿಸುಗಳನ್ನು ಹೊಂದಿದೆ. ಸಸ್ಯಾಹಾರಿ ಮತ್ತು ಮಾಂಸಾಹಾರ ಸೊಬಾ, ಉಡಾನ್, ಟಕೋಯಾಕಿ, ಬೂಟಾ-ನೋ-ಸೊಗಯಾಕಿ, ಕಟ್ಸುಡಾನ್, ಒಕೊನೊಮಿಯಾಕಿ, ಯಾಕಿನಿಕು, ಮಿಸೊ ಸೂಪ್, ಗ್ಯೋಜಾ, ಕರೇಜ್ ಆಹಾರವನ್ನು ಗ್ರಾಹಕರಿಗೆ ಒದಗಿಸುತ್ತದೆ. ಜಪಾನಿನ ಆಹಾರ ಪದ್ದತಿ ತೃಪ್ತಿಕರವಾಗಿದೆ. ಚೆಫ್ಗಳು ತಮ್ಮ ಕೌಶಲ್ಯವನ್ನು ಪ್ರದರ್ಶಿಸುತ್ತಾರೆ.
ವಿಶ್ವದ ಮೊದಲ ಟೆಪ್ಪನ್ಯಾಕಿ, ಕೋಬ್‌ನಲ್ಲಿರುವ ಮಿಸೊನೊಕ್ಕೆ ತಪ್ಪದೇ ಸವಿಯಿರಿ. ಜಪಾನ್‌ನ ಆಹಾರ ಸಂಸ್ಕೃತಿಯ ಬಗ್ಗೆ ನಿಮಗೆ ಕುತೂಹಲವಿದ್ದರೆ ಟೋಕಿಯೊದ ತ್ಸುಕಿಜಿ ಮಾರುಕಟ್ಟೆಗೆ ತಪ್ಪದೇ ಭೇಟಿ ನೀಡಿ
ಓಮನ್‌ನ ಲೋಬ್‌ಸ್ಟರ್ ಬಿಸ್ಕ್ ಮತ್ತು ಫ್ರಾಂಕಿನ್ಸೆನ್ಸ್-ಇನ್ಫ್ಯೂಸ್ಡ್ ಚಿಕನ್:ಓಮಾನ್ ಪಾಕ ಪದ್ಧತಿ ಎಂದರೆ ನೆನಪಾಗುವುದೇ ಶುವಾ ಮತ್ತು ಕಬಾಬ್. ಓಮನ್ ಶ್ರೀಮಂತ ಭಕ್ಷ್ಯ ಸವಿಯಲು ಇರುವ ಇರುವ ಉತ್ತಮ ಸ್ಥಳ ಎಂದರೆ ಮಸ್ಕಟ್ನ ಶಾಂಗ್ರಿ-ಲಾ. ಸಮುದ್ರಾಹಾರ, ಓವನ್-ಬೇಕ್ಡ್ ಸೀಬ್ರೀಮ್ ಫಿಲೆಟ್ ಮತ್ತು ಗ್ರಿಲ್ಡ್ ಫಿಶ್ ಸ್ಟೀಕ್ ಜೊತೆಗೆ ಬೈಟ್ ಅಲ್ ಬಹ್ರ್‌ನಲ್ಲಿ ಟ್ಯೂನ ರೋಲ್ ಉತ್ತಮ ಆಯ್ಕೆಯಾಗಿದೆ. ಕ್ಯಾವಿಯರ್ ಮತ್ತು ಹೂಕೋಸು ಫೋಮ್, ಟ್ಯೂನ ಕ್ರೂಡೋ, ಬೀಟ್‌ರೂಟ್ ಕೂಸ್‌ಕಸ್‌ನೊಂದಿಗೆ ಬ್ರೈಸ್ಡ್ ಆಕ್ಟೋಪಸ್ ಮತ್ತು ಪ್ಯಾನ್-ಸೀರ್ಡ್ ಸೀಬಾಸ್‌ನೊಂದಿಗೆ ಲಾಬ್ಸ್ಟರ್ ಬಿಸ್ಕ್ ಅನ್ನು ಆರ್ಡರ್ ಮಾಡಬಹುದು.
ಒಮಾನ್ನಲ್ಲಿ ಉತ್ತಮ ಗುಣಮಟ್ಟದ ಸುಗಂಧ ದ್ರವ್ಯ ಲುಬನ್ ಇಲ್ಲಿ ಹೆಚ್ಚು ಖ್ಯಾತಿ ಪಡೆದಿದೆ.
ಕತಾರ್‌ನ ಲುಕೈಮತ್ ಮತ್ತು ಸಲೂನಾ:ಕತಾರ್ ರುಚಿ ಅಡಗಿರುವುದು ಕರಗುವ ಮಡಕೆಯಲ್ಲಿ. ಇಲ್ಲಿನ ಅಡುಗೆಯಲ್ಲಿ ಭಾರತ, ಪರ್ಷಿಯಾ, ಲೆಬನಾನ್ ಮತ್ತು ಉತ್ತರ ಆಫ್ರಿಕಾದ ರುಚಿಯನ್ನು ಹೊಂದಿದೆ. ಇಲ್ಲಿನ ಸಾಂಪ್ರದಾಯಿಕ ಕತಾರಿ ಆಹಾರ ಎಂದರೆ, ಮಚ್ಬೂಸ್, ಸಲೂನಾ, ಮದ್ರೂಬಾ ಮತ್ತು ಹೇರ್ಸ್ ಪ್ರಮುಖವಾಗಿದೆ. ಇಲ್ಲಿನ ದೋಹಾದ ಮಾರುಕಟ್ಟಯಲ್ಲಿ ಸೌಕ್ ವಾಕಿಫ್‌ನಲ್ಲಿ ಲುಕೈಮತ್ ಮತ್ತು ರಾಗಾಗ್ ಆಹಾರದ ರುಚಿಯನ್ನು ಸವಿಯಬಹುದು. ಹಳೆ ವಿಮಾನ ನಿಲ್ದಾಣ ಪ್ರದೇಶದಲ್ಲಿ ಮಶಾವಿ ಅಲ್ ಅರಬಿಯಲ್ಲಿರುವ ಷಾವರ್ಮಾ ಮತ್ತು ರ್ಡ್ ಕೆನಾನ್‌ನಲ್ಲಿ ಸ್ಟಫ್ಡ್ ಫಲಾಫೆಲ್ ಸೇವಿಸಬಹುದು. ಇಲ್ಲಿ ತಪ್ಪದೇ ಭೇಟಿ ನೀಡುವ ರೆಸ್ಟೋರೆಂಟ್ ಎಂದರೆ ಜಿವಾನ್, ಕಾರ್ಬೋನ್ ದೋಹಾ, ಬೋಹೊ ಸೋಶಿಯಲ್, ಶುಗರ್ ಮತ್ತು ಸ್ಪೈಸ್, ಮೊರಿಮೊಟೊ ದೋಹಾ, ಬೇಟ್ ಎಲ್ ತಲ್ಲೆಹ್, ಐಡಿಎಎಂಗಳಾಗಿದೆ.
ಮಾರಿಷಸ್‌ನಲ್ಲಿ ಕ್ರಿಯೋಲ್ ಕ್ಯಾರಿ ಪೌಲೆ ಮತ್ತು ಬೋಲ್ ರೆನ್ವರ್ಸ್:ಸಾಂಪ್ರದಾಯಿಕ ಮಾರಿಷಿಯನ್ ಅಡುಗೆಯು ಕ್ರಿಯೋಲ್‌ನಿಂದ ಹೆಚ್ಚು ಪ್ರಭಾವಿತವಾಗಿದೆ. ಸ್ಥಳೀಯ ಮಸಾಲೆಗಳು ರುಚಿಯ ಸ್ವಾದವನ್ನು ಹೆಚ್ಚಿಸಿದೆ. ಭಾರತೀಯ, ಚೈನೀಸ್ ಮತ್ತು ಯುರೋಪಿಯನ್ ಪ್ರಭಾವ ಇವರ ಆಹಾರದಲ್ಲಿ ಕಾಣಬಹುದು. ಸಿನೋ-ಮಾರಿಷಿಯನ್ ಸ್ಪ್ರಿಂಗ್ ರೋಲ್‌ಗಳು, ಚಾಪ್ ಸೂಯಿ, ಹಲೀಮ್, ಬೋಲ್ ರೆನ್‌ವರ್ಸ್ ಮತ್ತು ಬೌಲೆಟ್ ಇಲ್ಲಿ ಹೆಚ್ಚು ಖ್ಯಾತಿ ಪಡೆದಿದೆ. ಜೊತೆಗೆ ಕ್ರಿಯೋಲ್ ಕ್ಯಾರಿ ಪೌಲೆ ಅಂದರೆ ಚಿಕನ್ ಕರಿಯನ್ನು ಇಲ್ಲಿನ ಹಿಂದೂ ಮದುವೆ ಸಮಾರಂಭದಲ್ಲಿ ಕಾಣಬಹುದು. (ಐಎಎನ್ಎಸ್)
ಇದನ್ನೂ ಓದಿ: ಮಾನಸಿಕ ಸಮಸ್ಯೆಯ ಚಿಕಿತ್ಸೆಯಲ್ಲಿ ಕಡಿಮೆ ಡೋಸ್ನ ಅಣಬೆಗಳು ಪ್ರಯೋಜನಕಾರಿ: ಸಂಶೋಧನೆ