ಕೈಯಲ್ಲಿನ ಉಗುರುಗಳು ಅಂದವನ್ನು ಹೆಚ್ಚಿಸುವ ನಮ್ಮ ಆರೋಗ್ಯವನ್ನು ಕೂಡ ಪ್ರತಿಬಿಂಬಿಸುತ್ತವೆ. ಇದೇ ಕಾರಣಕ್ಕೆ ಈ ಬಗ್ಗೆ ಹೆಚ್ಚಿನ ಗಮನವನ್ನು ನೀಡಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ. ಉಗುರಿನ ಸ್ವಚ್ಛತೆ ಕಾಯ್ದುಕೊಳ್ಳುವುದರಿಂದ ಆರೋಗ್ಯಯುತ ಆಹಾರ ಸೇವಿಸಬಹುದು. ಇನ್ನು ಹುಡುಗಿಯರು ಈ ಬೆರಳಿಗೆ ತುಸು ಹೆಚ್ಚಿನ ಕಾಳಜಿ ವಹಿಸುವುದು ಸಾಮಾನ್ಯ. ಇದಕ್ಕಾಗಿ ವಿಶೇಷ ಕಾಳಜಿವಹಿಸಿ ಅದಕ್ಕೆ ಸುಂದರ ಆಕಾರವನ್ನು ನೀಡುತ್ತಾರೆ. ಕಾಲ ಕಾಲಕ್ಕೆ ಉಗುರಿಗೆ ಬಣ್ಣ ಹಚ್ಚುವುದು. ಅದರ ಆರೈಕೆಗೆ ಗಮನಹರಿಸುತ್ತಾರೆ. ಇಷ್ಟೆಲ್ಲ ಕಾಳಜಿವಹಿಸಿದರೂ ಮನೆ ಕೆಲಸ ಅಥವಾ ವಿಟಮಿನ್ ಕೊರತೆಯಿಂದಾಗಿ ಉಗುರು ತುಂಡಾಗುತ್ತದೆ. ಈ ರೀತಿ ಉಗುರು ತುಂಡಾಗದಂತೆ ಮುನ್ನೆಚ್ಚರಿಕೆ ವಹಿಸಲು ಕೆಲವು ಸರಳ ಉಪಾಯಗಳಿವೆ.
ಉಗುರಿನ ಅಂದ ಕಾಪಾಡಲು ಅದರ ತಜ್ಞರು ಅಥವಾ ಪಾರ್ಲರ್ಗಳಿಗೆ ಹೋಗಬೇಕು ಎಂದಿಲ್ಲ. ಮನೆಯಲ್ಲಿಯೇ ಸಿಗುವ ಕೆಲವು ವಸ್ತುಗಳ ಮೂಲಕ ಅದಕ್ಕೆ ಕಾಲ ಕಾಲಕ್ಕೆ ಆರೈಕೆ ನಡೆಸಬಹುದಾಗಿದೆ. ಅಂತಹ ಕೆಲವು ಸಲಹೆಗಳು ಇಲ್ಲಿವೆ.
ಬೆಳುಳ್ಳಿ ಎಣ್ಣೆ: ಬೆಳ್ಳುಳ್ಳಿ ಎಸುಳನ್ನು ಚೆನ್ನಾಗಿ ಜಜ್ಜಿ ಅದನ್ನು ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು. ಈ ಎಣ್ಣೆಯನ್ನು ಉಗುರಿಗೆ ಹಾಕಿ ಮಸಾಜ್ ಮಾಡಬೇಕು. ನಿತ್ಯ ಈ ರೀತಿ ಮಸಾಜ್ ಮಾಡುವುದರಿಂದ ಉಗುರು ಆರೋಗ್ಯಯುತವಾಗಿ ಬೆಳೆದು ಅದು ಬಲವಾಗುತ್ತದೆ.
ಮೊಟ್ಟೆ ಸಿಪ್ಪೆ: ಮೊಟ್ಟೆ ಸಿಪ್ಪೆಗಳನ್ನು ಎಸೆಯುವ ಬದಲು ಅದನ್ನು ಉಗುರಿಗೆ ಹಾಕುವುದರಿಂದ ಕೂಡ ಅದನ್ನು ಬಲಗೊಳಿಸಬಹುದು. ಇದಕ್ಕೆ ಮಾಡಬೇಕಿರುವುದು ಇಷ್ಟೆ. ಮೊಟ್ಟೆ ಸಿಪ್ಪೆಯನ್ನು ಸ್ವಚ್ಛವಾಗಿ ತೊಳೆದು ಅದನ್ನು ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಈ ಮಿಶ್ರಣವನ್ನು ನೀರಿನಲ್ಲಿ ಬೆರೆಸಿ ಉಗುರಿಗೆ ಸವರಿ. ಈ ರೀತಿ ಮಾಡುವುದರಿಂದ ಉಗುರು ಶೀಘ್ರವಾಗಿ ಬೆಳೆಯುವ ಜೊತೆಗೆ ತುಂಡಾಗುವುದು ಕೂಡ ತಪ್ಪುತ್ತದೆ.