ಕರ್ನಾಟಕ

karnataka

ETV Bharat / sukhibhava

ಟ್ರೆಂಡ್​ ಆಗುತ್ತಿದೆ ಸೈಲೆಂಟ್​ ವಾಕಿಂಗ್​; ಇದರಿಂದ ಆರೋಗ್ಯ ಪ್ರಯೋಜನವೂ ಹೆಚ್ಚು - ವಾಕಿಂಗ್​ನ ಆರೋಗ್ಯ ಪ್ರಯೋಜನ

ಸೈಲೆಂಟ್​ ವಾಕಿಂಗ್​ ಎಂದರೆ ಫೋನ್​, ಎಲೆಕ್ಟ್ರಾನಿಕ್​ ಮತ್ತು ಸ್ಮಾರ್ಟ್​​ ವಾಚ್​​ ಜೊತೆಯಿಲ್ಲದೇ, ಯಾರೊಂದಿಗೂ ಮಾತನಾಡದೇ ನಿಶಬ್ಧವಾಗಿ ನಡೆಯುವುದಾಗಿದೆ. ಇದರಿಂದ ಏನು ಆರೋಗ್ಯ ಪ್ರಯೋಜನ ಅಂತೀರಾ? ಹಾಗಾದರೆ ಈ ಸ್ಟೋರಿ ಓದಿ.

silent walking becoming trend what is the health benefits
silent walking becoming trend what is the health benefits

By ETV Bharat Karnataka Team

Published : Dec 21, 2023, 11:34 AM IST

ಹೈದರಾಬಾದ್​:ಅನೇಕ ಮಂದಿ ನಡಿಗೆ (ವಾಕಿಂಗ್​​) ಹೋದರೆ, ಅವರಿಗೆ ಯಾರಾದರೂ ಒಬ್ಬರೂ ಜೊತೆಯಲ್ಲಿ ಇರಲೇಬೇಕು. ಅನೇಕ ಮಂದಿ ಬೆಳಗಿನ ವಾಕ್​ ವೇಳೆ ಸ್ನೇಹಿತರು ಅಥವಾ ಫೋನ್​ನಲ್ಲಿ ಏನಾದರೂ ಹಾಡು ಕೇಳುವುದು ಕಡ್ಡಾಯವಾಗಿರುತ್ತದೆ. ಆದರೆ, ಇದೀಗ ಈ ಕಾಲ ಬದಲಾಗಿದೆ. ಸೈಲೆಂಟ್​ ವಾಕಿಂಗ್​ ಹೆಚ್ಚು ಜನಮನ್ನಣೆ ಪಡೆಯುತ್ತಿದೆ. ಈ ಸೈಲೆಂಟ್​ ವಾಕಿಂಗ್​ ಎಂದರೇನು ಎಂಬುದನ್ನು ಒಂದೊಂದಾಗಿಯೇ ತಿಳಿದುಕೊಳ್ಳೋಣ

ಸಂಶೋಧಕರು ಹೇಳುವಂತೆ ವಾಕಿಂಗ್​ಗೆ ಹೋಗುವಾಗ ಒಂದು ವೇಳೆ 10 ಮಂದಿ ಜೊತೆ ಮಾತನಾಡಿದಿರಿ ಎಂದರೆ, ಈ ವೇಳೆ ರಾಜಕೀಯ, ಮನೆಯಲ್ಲಿನ ಸಮಸ್ಯೆ, ಹಳೆಯ ಘಟನೆಗಳನ್ನು ಕೆದಕುವ ಪ್ರಯತ್ನ ನಡೆಯುತ್ತದೆ. ಇದರಿಂದ ನೀವು ಕೋಪಗೊಳ್ಳಲೂಬಹುದು. ಇದೇ ರೀತಿ ಮತ್ತೊಂದು ಅಧ್ಯಯನ ತಿಳಿಸಿದಂತೆ ಗ್ಯಾಜೆಟ್​ ಹಿಡಿದುಕೊಂಡು ಮುಂಜಾನೆ ವಾಕಿಂಗ್​ ಮಾಡಿದರೆ, ಮನಸು ಮತ್ತು ದೇಹ ಹಗರುದ ಜೊತೆಗೆ ಭಾರದ ಅನುಭವ ನೀಡುತ್ತದೆ.

ವಾಕಿಂಗ್​ ವೇಳೆ ಇಂತಹ ವಿಚಲಿತ ಘಟನೆಗಳಿಂದ ಹೊರ ಬರುವ ಉದ್ದೇಶದಿಂದ ಇದೀಗ ಸೈಲೆಂಟ್​ ವಾಕಿಂಗ್​ ಟ್ರೆಂಡ್​ ಆಗುತ್ತಿದೆ. ಈ ಸೈಲೆಂಟ್​ ವಾಕಿಂಗ್​ ಎಂದರೆ ಫೋನ್​, ಎಲೆಕ್ಟ್ರಾನಿಕ್​ ಮತ್ತು ಸ್ಮಾರ್ಟ್​​ ವಾಚ್​​​ ಜೊತೆಯಿಲ್ಲದೇ, ಯಾರೊಂದಿಗೂ ಮಾತನಾಡದೇ ನಿಶಬ್ಧವಾಗಿ ನಿಮ್ಮ ಪಾಡಿಗೆ ನೀವು ನಡೆಯುವುದಾಗಿದೆ. ನಮ್ಮ ಜೊತೆಯೇ ವಾಕಿಂಗ್​ ಮಾಡುವುದು ಧ್ಯಾನದಂತೆ ಅನುಭವ ನೀಡುತ್ತದೆ.

ಎರಡು ಪ್ರಮುಖ ಪ್ರಯೋಜನ: ಸೈಲೆಂಟ್​ ವಾಕಿಂಗ್​ನಿಂದ ಏಕಾಗ್ರತೆ ಹೆಚ್ಚಳವಾಗುತ್ತದೆ. ಸೈಲೆಂಟ್​ ವಾಕಿಂಗ್​​ ನಿಮ್ಮ ಯೋಚನೆಯನ್ನು ಚುರುಕುಗೊಳಿಸಿ, ಗುರಿಯತ್ತ ಗಮನಹರಿಸುವಂತೆ ಮಾಡುತ್ತದೆ. ವಾಕಿಂಗ್​ ಮಾಡುವಾಗ ಎಲೆಕ್ಟ್ರಾನಿಕ್​ ಸಾಧನ, ಮೊಬೈಲ್​ ಫೋನ್​​ಗಳ ಜೊತೆ ಸಾಗಿದಾಗ ಹೇಗೆ ಅವರಲ್ಲಿ ಹೊಸ ಯೋಚನೆಗಳು ಬರುತ್ತದೆ ಎಂದು ಕೇಳುತ್ತಾರೆ ಕೆಲವು ಸೈಲೆಂಟ್​ ವಾಕರ್ಸ್​​​. ಇದೆ ಕಾರಣಕ್ಕೆ ಅವರು ಇದೀಗ ಗುಂಪಿನಲ್ಲಿ ಜೊತೆಗೆ ಗ್ಯಾಜೆಟ್​​ಗಳಿಲ್ಲದೇ ಅಡೆತಡೆಯಿಲ್ಲದ ವಾಕಿಂಗ್​ಗೆ ಮೊರೆ ಹೋಗುತ್ತಿದ್ದಾರೆ. ಸೈಲೆಂಟ್​ ವಾಕಿಂಗ್​ನಿಂದ ಎರಡು ಪ್ರಯೋಜನ ಇದೆ. ಮೊದಲಿಗೆ ಅದು ನಿಮ್ಮ ಯೋಜನೆಯನ್ನು ನೀವು ಕೇಳುವಂತೆ ಮಾಡುತ್ತದೆ. ಎರಡನೇಯದು ನಿಸರ್ಗದ ಸೌಂದರ್ಯ ಆಹ್ಲಾದಿಸಲು ಪ್ರೇರೇಪಿಸುತ್ತದೆ. ಇದೀಗ ವಾಕಿಂಗ್​​ ಮಾಡುವ ಮಂದಿ ತಮ್ಮ ಆರೋಗ್ಯದಲ್ಲಿ ಕೆಲವು ಬದಲಾವಣೆಗೆ ಸೈಲೆಂಟ್​ ವಾಕಿಂಗ್​​ ಕಾರಣವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಒತ್ತಡ ನಿವಾರಣೆ: ಸೈಲೆಂಟ್​ ವಾಕಿಂಗ್​​ ಅನ್ನು ದಿನದಲ್ಲಿ ಕನಿಷ್ಠ ಅರ್ಧಗಂಟೆಯಾದರೂ ಮಾಡಬೇಕು. ಈ ವೇಳೆಯ ಯಾವುದೇ ಸಂವಹನ ಇರಬಾರದು. ಇದು ನಿಮ್ಮ ಮಾನಸಿಕ ಸಮಸ್ಯೆಗಳಾದ ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡುತ್ತದೆ. ಅರ್ಧ ಗಂಟೆಗಳ ಕಾಲ ಮೊಬೈಲ್​ಗಳಿಲ್ಲದೇ ವಾಕಿಂಗ್​ ಮಾಡುವುದರಿಂದ ನೀವು ಗ್ಯಾಜೆಟ್​​​ ಮುಕ್ತ ಸಮಯ ಆಹ್ಲಾದಿಸಿ, ಫೋನ್​ ಇಲ್ಲದೇ ಜೀವಿಸಲು ಕಲಿಯುವುದರ ಜೊತೆಗೆ ಇದು ಜೀವನದಲ್ಲಿ ನೆಮ್ಮದಿ ತರುತ್ತದೆ ಎಂಬುದನ್ನು ಮನಗಾಣಲು ಸಹಕಾರಿಯಾಗಿದೆ.

ಧ್ಯಾನ: ಸೈಲೆಂಟ್​ ವಾಕಿಂಗ್​​ ಧ್ಯಾನದ ಎಲ್ಲಾ ಪ್ರಯೋಜನವನ್ನು ಹೊಂದಿದೆ. ಸೈಲೆಂಟ್​ ವಾಕಿಂಗ್​​​ ನಿಮಗೆ ಬಿಡುವಿಲ್ಲದ ಜೀವನದ ನಕಾರಾತ್ಮಕ ಯೋಚನೆಗಳಿಂದ ಮುಕ್ತಿ ನೀಡಿ, ಸಕಾರಾತ್ಮಕತೆಯ ಚಿಂತನೆಯನ್ನು ನಿರಂತರವಾಗಿ ಮೂಡಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ಶ್ವಾಸಕೋಶ ರೋಗಿಗಳಿಗೆ ಬೀಟ್​ರೂಟ್​ ಜ್ಯೂಸ್​ನ ಪೂರಕಗಳು ಪ್ರಯೋಜನಕಾರಿ: ಅಧ್ಯಯನ

ABOUT THE AUTHOR

...view details