ಹೈದರಾಬಾದ್: ಗ್ಯಾಸ್, ಅಸಿಡಿಟಿ ಅಥವಾ ಅಜೀರ್ಣದಂತಹ ಸಮಸ್ಯೆಗಳು ಸಾಮಾನ್ಯವಾಗಿ ಎಲ್ಲರನ್ನು ಕಾಡುತ್ತದೆ. ಅಸಿಡಿಟಿಯಂತಹ ಹೊಟ್ಟೆ ಸಮಸ್ಯೆಯನ್ನು ಎಲ್ಲರಲ್ಲೂ ಸಾಮಾನ್ಯವಾಗಿ ಕಾಣಬಹುದು. ಇದಕ್ಕೆ ಅಂಟಾಸಿಡ್ಸ್ ಪರಿಹಾರವಾಗಿ ಬಳಕೆ ಮಾಡಲಾಗುತ್ತದೆ. ಮಸಾಲೆಯುಕ್ತ ಆಹಾರ ಸೇವನೆ ಮಾಡಿದಾಗ ಇಂತಹ ಹೊಟ್ಟೆ ಸಮಸ್ಯೆ ಕಾಡುವುದು ಸಾಮಾನ್ಯ. ಹೊಟ್ಟೆ ಸಮಸ್ಯೆಗೆ ಅಂಟಾಸಿಡ್ಸ್ ಮಾತ್ರೆ ಆರೋಗ್ಯಕ್ಕೆ ಸುರಕ್ಷಿತವಾಗಿದೆ. ಇದೆ ಕಾರಣಕ್ಕೆ ಈ ಮಾತ್ರೆ ಕೊಳ್ಳಲು ವೈದ್ಯರಿಂದ ಯಾವುದೇ ಪ್ರಿಸ್ಕ್ರಿಪ್ಷನ್ ಅಗತ್ಯವಿಲ್ಲ. ಆದರೆ, ದೀರ್ಘಕಾಲದವರೆಗೆ ಈ ಮಾತ್ರೆಗಳ ಸೇವನೆ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರದೇ ಇರಲಾರದು.
ಮುಂಬೈನ ನ್ಯೂಟ್ರಿಷಿಯನಿಸ್ಟ್ ಮತ್ತು ಡಯಟಿಷಿಯನ್ ಆಗಿರುವ ರುಶೇಲ್ ಜಾರ್ಜ್ ಈ ಕುರಿತು ಮಾತನಾಡಿದ್ದು, ಆಹಾರ ಜೀರ್ಣ ಕ್ರಿಯೆ, ಕೆಲವು ಜ್ಯೂಸ್, ಕ್ವಿಣ ಮತ್ತು ಆ್ಯಸಿಡ್ಗಳು ನಮ್ಮ ದೇಹದ ಚಯಪಚಯಕಕ್ಕೆ ಸಹಾಯ ಮಾಡುತ್ತದೆ. ದೇಹದಲ್ಲಿ ಸಾಮಾನ್ಯ ಪರಿಸ್ಥಿತಿ ಮತ್ತು ಅಗತ್ಯ ಪ್ರಮಾಣವಾದ ಆ್ಯಸಿಡ್ ಉತ್ಪತ್ತಿಯಾಗುತ್ತದೆ. ಇಂತಹ ವೇಳೆ, ಗ್ಯಾಸ್ ಅಥವಾ ಅ್ಯಸಿಡಿಟಿಯಂತಹ ಸಮಸ್ಯೆ ಉದ್ಭವವಾಗುವುದಿಲ್ಲ.
ಆದರೆ, ಕೆಲವು ವೇಳೆ ಸಮೃದ್ದ ಆಹಾರ, ಅನಿಮಿತ ತಿನ್ನುವಿಕೆ, ಅನಾರೋಗ್ಯ ಅಥವಾ ಔಷಧ, ಮತ್ತಿತ್ತರ ಕಾರಣದಿಂದ ಜೀರ್ಣಕ್ರಿಯೆ ವ್ಯವಸ್ಥೆಯಲ್ಲಿ ಆ್ಯಸಿಡ್ ಹೆಚ್ಚು ಉತ್ಪಾದನೆ ಆಗುತ್ತದೆ. ಇದರಿಂದ ತಾತ್ಕಾಲಿಕ ಎದೆ ನೋವು ಉಂಟಾಗುತ್ತದೆ. ಈ ವೇಳೆ, ಎದೆ ಉರಿ ಸಮಸ್ಯೆ, ಗ್ಯಾಸ್, ಅಜೀರ್ಣ ಸಮಸ್ಯೆ ಕಾರಣವಾಗುತ್ತದೆ. ಇಂತಹ ಸಾಮಾನ್ಯ ಸಮಸ್ಯೆ ವೇಳೆ ಯಾವುದೇ ಮೆಡಿಕಲ್ ಪ್ರಿಸ್ಕ್ರಿಪ್ಷನ್ ಅಗತ್ಯವಿಲ್ಲದೇ ಈ ಅಂಟಾಸಿಡ್ಸ್ ಸೇವಿಸಬಹುದು.
ಆದರೆ, ಕೆಲವು ಸಂದರ್ಭದಲ್ಲಿ ಹೊಟ್ಟೆಯಲ್ಲಿ ಹೆಚ್ಚಿನ ಆ್ಯಸಿಡ್ ಉಂಟಾದಾಗ ಇದು ಹೊಟ್ಟೆಯಲ್ಲಿ ಊತ ಮತ್ತು ಗುಳ್ಳೆಗಳು ಉಂಟಾಗುತ್ತದೆ. ಇದು ಗಂಭೀರ ಗ್ಯಾಸ್ಟ್ರೊಫೆಗಲ್ ಸಮಸ್ಯೆಗೆ ಕಾರಣವಾಗುತ್ತದೆ. ಹೊಟ್ಟೆಯ ಕಿಣ್ವ, ಹೊಟ್ಟೆ ಉಬ್ಬರ, ಎದೆ ಹುರಿ, ಹುಳಿ ತೇಗು, ಅಜೀರ್ಣ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ವೈದ್ಯರು ಈ ಗುಣಲಕ್ಷಣಗಳನ್ನು ಕಡಿಮೆ ಮಾಡಲು ಅಂಟಾಸಿಡ್ಸ್ ಶಿಫಾರಸು ಮಾಡುತ್ತಾರೆ.
ಅಂಟಾಸಿಡ್ ಏನು ಮಾಡುತ್ತೆ?:ಅಂಟಾಸಿಡ್ ಹೊಟ್ಟೆಯ ಆಮ್ಲಿಯತೆಯನ್ನು ಕಡಿಮೆ ಮಾಡುತ್ತದೆ. ಇದು ಜೆಲ್, ಸಿರಪ್ ಮತ್ತು ಮಾತ್ರೆ, ಫ್ರೂಟ್ ಸಾಲ್ಟ್ ಮತ್ತು ಪೌಡರ್ ರೂಪದಲ್ಲಿ ಸಿಗುತ್ತದೆ. ಅಂಟಾಸಿಡ್ನಲ್ಲಿ ಮೆಗ್ನಿಷಿಯಂ, ಅಲ್ಯುಮಿನಿಯಂ, ಕ್ಯಾಲ್ಸಿಯಂ, ಸೋಡಿಯಂ ಬೈಕರ್ಬೊನೇಟ್ ಮತ್ತು ಇತರೆ ಉಪ್ಪು ಹಾಗೂ ಇತರೆ ಅಂಶಗಳಿವೆ. ಇದು ಪಿಎಚ್ ಮಟ್ಟವನ್ನು ತಟಸ್ಥಗೊಳಿಸಲು ಸಹಾಯ ಮಾಡಿ, ಜೀರ್ಣ ಕ್ರಿಯೆಗೆ ವ್ಯವಸ್ಥೆ ಸರಾಗವಾಗುವಂತೆ ಮಾಡುತ್ತದೆ.
ಭೋಪಾಲ್ನ ಜನರಲ್ ಫಿಸಿಷಿಯನ್ ಡಾ ರಾಜೇಶ್ ಶರ್ಮಾ ಹೇಳುವಂತೆ, ಅಂಟಾಸಿಡ್ ಸಾಮಾನ್ಯವಾಗಿ ಸುರಕ್ಷಿತ ಔಷಧ ವರ್ಗದಲ್ಲಿದೆ. ಆದರೆ, ದೀರ್ಘವಾಧಿವರೆಗೆ ಇದನ್ನು ಬಳಕೆ ಮಾಡುವುದಿ, ಅನಿಯಮಿತ ಅಥವಾ ಇನ್ನಿತರ ಔಷಧಗಳೊಂದಿಗೆ ಸೇವಿಸುವುದರಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ನೈಸರ್ಗಿಕ ಜೀರ್ಣಕ್ರಿಯೆ ವ್ಯವಸ್ಥೆ ಮೇಲೆ ಇದು ಪರಿಣಾಮ ಬೀರುವ ಹಿನ್ನಲೆ ದೀರ್ಘಾವಧಿ ಕಾಲಕ್ಕೆ ಈ ಮಾತ್ರೆಯನ್ನು ವೈದ್ಯರು ಕೂಡ ಶಿಫಾರಸು ಮಾಡುವುದಿಲ್ಲ. ಜೀರ್ಣಕ್ರಿಯೆಗೆ ಸಹಾಯ ಮಾಡುವ ಕೆಲವು ರಸಗಳನ್ನು ಇದು ರಚನೆ ಮಾಡುತ್ತದೆ. ಇದು ಜೀರ್ಣ ವ್ಯವಸ್ಥೆ ಜೊತೆಗೆ ಇಡೀ ದೇಹದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ ಎಂದು ವಿವರಿಸಿದ್ದಾರೆ.
ವೈದ್ಯರು ಸಾಮಾನ್ಯವಾಗಿ ಇತರೆ ಔಷಧಗಳೊಂದಿಗೆ ಅಮ್ಲೀಯತೆ ಪರಿಣಾಮ ಕಂಡು ಬಂದಾಗ ಸಮಸ್ಯೆ ಪರಿಹಾರದವರೆಗೆ ಮಾತ್ರ ಇದನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡುತ್ತಾರೆ. ಇದನ್ನು ಸೂಚಿಸುವ ಮುನ್ನ ಇತರ ಔಷಧಗಳ ಸಂಯೋಜನೆಯನ್ನು ಪರಿಶೀಲಿಸುತ್ತಾರೆ. ಅಂಟಾಸಿಡ್ನಲ್ಲಿ ವಿಭಿನ್ನ ಅಂಶಗಳ ಸಂಯೋಜನೆ ಇರುವ ಹಿನ್ನಲೆ ಇದು ಕೆಲವು ನಿರ್ದಿಷ್ಟ ಔಷಧಗಳ ಜೊತೆ ತೆಗೆದುಕೊಳ್ಳುವುದು ಹಾನಿಯಾಗುತ್ತದೆ.
ಇದರ ಹೊರತಾಗಿ ಅಂಟಾಸಿಡ್ಗಳನ್ನು ಹೆಚ್ಚಾಗಿ ಸೇವನೆ ಅನೇಕರಲ್ಲಿ ಚಟವಾಗುವ ಸಾಧ್ಯತೆ ಇದೆ. ಈ ಮಾತ್ರೆಯನ್ನು ನಿಯಮಿತವಾಗಿ ಸೇವನೆ ಮಾಡುವವರು ಪಿಪಿಇ ವರ್ಗದಲ್ಲಿ ಬರುತ್ತಾರೆ. ಅವರಿಗೆ ಇದು ಚಟವಾಗಿರುತ್ತದೆ. ವೈದ್ಯರ ಸೂಚನೆ ಇಲ್ಲದೇ ದೀರ್ಘಾವಧಿ ಈ ಮಾತ್ರೆ ಸೇವಿಸುವುದರಿಂದ ಆಗುವ ಪರಿಣಾಮವನ್ನು ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ಆ್ಯಂಟಿಬಯೋಟಿಕ್ ಅಡ್ಡ ಪರಿಣಾಮ ತಡೆಯಲು ಇಲ್ಲಿದೆ ಹೊಸ ಮಾರ್ಗ