ಕರ್ನಾಟಕ

karnataka

ETV Bharat / sukhibhava

ಒಮಿಕ್ರಾನ್ ರೂಪಾಂತರಗಳನ್ನು ಸರಿದೂಗಿಸುವ ಅಲ್ಟ್ರಾ-ಪೋಟೆಂಟ್ ಆ್ಯಂಟಿಬಾಡಿ ಕಂಡುಹಿಡಿದ ವಿಜ್ಞಾನಿಗಳು - ಕೋವಿಡ್ ಲಸಿಕೆ

ಅಂತಾರಾಷ್ಟ್ರೀಯ ಸಂಶೋಧಕರ ತಂಡವೊಂದು ಪ್ಯಾನ್-ವೇರಿಯಂಟ್ ಮತ್ತು ಅಲ್ಟ್ರಾ-ಪೋಟೆಂಟ್ ನ್ಯೂಟ್ರಲೈಸಿಂಗ್ ಆ್ಯಂಟಿಬಾಡಿಯನ್ನು ಗುರುತಿಸಿದ್ದು, ಅದು ಒಮಿಕ್ರಾನ್ ರೂಪಾಂತರಗಳನ್ನು ಸರಿದೂಗಿಸಬಹುದು ಎಂದು ತಿಳಿಸಿದೆ.

ಒಮಿಕ್ರಾನ್ ರೂಪಾಂತರ
Omicron variants

By

Published : Oct 31, 2022, 12:16 PM IST

ನ್ಯೂಯಾರ್ಕ್: ಒಮಿಕ್ರಾನ್ ರೂಪಾಂತರಗಳನ್ನು ಸರಿದೂಗಿಸುವ ಪ್ಯಾನ್-ವೇರಿಯಂಟ್ ಮತ್ತು ಅಲ್ಟ್ರಾ-ಪೋಟೆಂಟ್ ನ್ಯೂಟ್ರಲೈಸಿಂಗ್ ಆ್ಯಂಟಿಬಾಡಿಯನ್ನು ಅಂತಾರಾಷ್ಟ್ರೀಯ ಸಂಶೋಧಕರ ತಂಡವೊಂದು ಗುರುತಿಸಿದೆ.

ಈ ಆ್ಯಂಟಿಬಾಡಿಗೆ 'S2X324' ಎಂದು ಹೆಸರಿಸಲಾಗಿದೆ. ಈ ಕುರಿತು ಸೈನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು ಮಾಹಿತಿ ನೀಡಿದೆ. ಕಾಕ್ಟೈಲ್‌ನಲ್ಲಿ ಈ ಆ್ಯಂಟಿಬಾಡಿಯನ್ನು ಇತರರೊಂದಿಗೆ ಸಂಯೋಜಿಸುವುದರಿಂದ ವೈರಸ್ ಪ್ರತಿಕಾಯ-ಚಿಕಿತ್ಸೆ ನಿರೋಧಕವಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಒಮಿಕ್ರಾನ್ ರೂಪಾಂತರಗಳಿಗೆ ಪ್ರತಿರಕ್ಷಣಾ ವ್ಯವಸ್ಥೆಯ ಪ್ರತಿಕ್ರಿಯೆಯ ಮೇಲೆ SARS-CoV-2 ಸ್ಪೈಕ್ ಆ್ಯಂಟಿಜೆನ್ ಅಥವಾ ಪ್ರತಿರಕ್ಷಣಾ- ಪ್ರಚೋದಿಸುವ ಪ್ರೊಟೀನ್‌ನ ಹಿಂದಿನ ರೂಪಗಳಿಗೆ ಒಡ್ಡಿಕೊಂಡ ಪರಿಣಾಮಗಳ ಹಲವಾರು ಅಂಶಗಳನ್ನು ತಂಡವು ಗಮನಿಸಿದೆ.

ಈ ಸಂಶೋಧನೆಯು ಮುಂದಿನ ಪೀಳಿಗೆಯ ಕೋವಿಡ್ ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಮತ್ತು ಮೌಲ್ಯಮಾಪನ ಮಾಡುವ ಪ್ರಯತ್ನಗಳಿಗೆ ಬೆಂಬಲವನ್ನು ನೀಡುತ್ತದೆ. ಏಕೆಂದರೆ ಮೂಗಿನ ಮೂಲಕ ಸಾಮಾನ್ಯವಾಗಿ ವೈರಸ್ ದೇಹವನ್ನು ಪ್ರವೇಶಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಇದನ್ನೂ ಓದಿ:ಅತ್ಯಧಿಕ ಸಾಂಕ್ರಾಮಿಕ ಹೊಸ ಓಮಿಕ್ರಾನ್ ಉಪ ರೂಪಾಂತರ BF.7 ಭಾರತದಲ್ಲಿ ಪತ್ತೆ

ಸದ್ಯಕ್ಕೆ ಭಾರತದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದ್ದು, ಈ ಮಧ್ಯೆ ಹೊಸ ಒಮಿಕ್ರಾನ್ ಉಪ ರೂಪಾಂತರವು ದೇಶದಲ್ಲಿ ಹೊಸ ಆತಂಕ ಸೃಷ್ಟಿಸುತ್ತಿದೆ. ಕೆಲವು ವರದಿಗಳ ಪ್ರಕಾರ, ಓಮಿಕ್ರಾನ್ ಉಪ ರೂಪಾಂತರ BF.7 ನ ಮೊದಲ ಪ್ರಕರಣವನ್ನು ಗುಜರಾತ್ ಜೈವಿಕ ತಂತ್ರಜ್ಞಾನ ಸಂಶೋಧನಾ ಕೇಂದ್ರವು ಪತ್ತೆಹಚ್ಚಿದೆ. ಈ ಹೊಸ ಓಮಿಕ್ರಾನ್ ರೂಪಾಂತರವು ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ಹೇಳಲಾಗಿದ್ದು, ಬಹುಬೇಗ ಹರಡುತ್ತದೆ ಎನ್ನಲಾಗ್ತಿದೆ. ಒಮಿಕ್ರಾನ್ ಉಪ ರೂಪಾಂತರಗಳಾದ BA.5.1.7 ಮತ್ತು BF.7 - ಚೀನಾದ ಮಂಗೋಲಿಯಾದ ಪ್ರದೇಶದಿಂದ ಬಂದಿದ್ದು, ಈಗ ಇತರ ಭಾಗಗಳಿಗೆ ಹರಡಿ ಹೊಸ ಬೆದರಿಕೆಗಳನ್ನು ಒಡ್ಡುತ್ತಿವೆ.

ABOUT THE AUTHOR

...view details