ಲಂಡನ್:ವಿಜ್ಞಾನಿಗಳ ತಂಡವೊಂದು 35 ಹೊಸ ತಳಿಯ ಬ್ಯಾಕ್ಟೀರಿಯಾಗಳನ್ನು ಪತ್ತೆ ಮಾಡಿದ್ದು, ಇದರಲ್ಲಿ ಕೆಲವು ಬ್ಯಾಕ್ಟೀರಿಯಾಗಳು ಮಾನವರಲ್ಲಿ ಸೋಂಕಿಗೆ ಕಾರಣವಾಗಲಿದೆ ಎಂದು ತಿಳಿಸಿದ್ದಾರೆ.
ಸ್ವಿಟ್ಜರ್ಲೆಂಡ್ನ ಬಾಸೆಲ್ ಯುನಿವರ್ಸಿಟಿ ಮತ್ತು ಯುನಿವರ್ಸಿಟಿ ಹಾಸ್ಪಿಟಲ್ ಬಾಸೆಲ್, 2014ರಿಂದ ರೋಗಿಗಳಲ್ಲಿರುವ ಅಪರಿಚಿತ ಕೀಟಾಣುಗಳ ಮಾದರಿಗಳನ್ನು ಸಂಗ್ರಹಿಸಿ, ವಿಶ್ಲೇಷಿಸಿದ್ದಾರೆ. ವಿವಿಧ ರೀತಿಯ ರೋಗದ ಪರಿಸ್ಥಿತಿಗಳನ್ನು ಹೊಂದಿರುವ ರೋಗಿಗಳ ರಕ್ತ ಮತ್ತು ಅಂಗಾಂಶ ಮಾದರಿಯಲ್ಲಿ ಅಪರಿಚಿತ 61 ಬ್ಯಾಕ್ಟೀರಿಯಾ ರೋಗಾಣುಗಳನ್ನು ತಂಡ ವಿಶ್ಲೇಷನೆ ಮಾಡಿದೆ.
ಸಾಂಪ್ರದಾಯಿಕ ಪ್ರಯೋಗಾಲಯ ವಿಧಾನದ ಮೂಲಕ ಮಾಸ್ ಸ್ಪೆಕ್ಟ್ರೋಸ್ಕೋಪಿ ಅಥವಾ ಬ್ಯಾಕ್ಟೀರಿಯಾದ ಜೀನೋಮ್‌ನ ಸಣ್ಣ ಭಾಗವನ್ನು ಅನುಕ್ರಮಗೊಳಿಸಿ, ಪ್ರತ್ಯೇಕತೆಗಳಿಗೆ ಫಲಿತಾಂಶಗಳನ್ನು ನೀಡಲು ವಿಫಲವಾಗಿವೆ. ಈ ಹಿನ್ನೆಲೆ ಸಂಶೋಧಕರು ಕೆಲವು ವರ್ಷಗಳಿಂದ ಮಾತ್ರ ಲಭ್ಯವಿರುವ ವಿಧಾನವನ್ನು ಬಳಸಿಕೊಂಡು ಬ್ಯಾಕ್ಟೀರಿಯಾದ ಸಂಪೂರ್ಣ ಆನುವಂಶಿಕ ವಸ್ತುಗಳನ್ನು ಅನುಕ್ರಮಗೊಳಿಸಿದ್ದಾರೆ. ಬಳಿಕ ಆನ್ಲೈನ್ ಸಾಧನ ಬಳಕೆ ಮಾಡಿಕೊಂಡು ಅವರು ಅಪರಿಚಿತ ತಳಿಯೊಂದಿಗೆ ಪತ್ತೆ ಮಾಡಿದ ಜೆನೋಮ್ ಸೀಕ್ವೆನ್ಸ್ ಅನ್ನು ಹೋಲಿಕೆ ಮಾಡಿದ್ದಾರೆ.
61 ಬ್ಯಾಕ್ಟೀರಿಯಾಗಳ ವಿಶ್ಲೇಷಣೆಯಲ್ಲಿ 35 ಈ ಹಿಂದೆಯೇ ಅಪರಿಚಿತವಾಗಿದೆ. ಉಳಿತ 26 ತಳಿಗಳನ್ನು ಪತ್ತೆ ಮಾಡುವುದು ಕಷ್ಟವಾಗಿದೆ ಎಂದು ವರ್ಗೀಕರಿಸಿದ್ದಾರೆ. ಅವುಗಳ ಜೀನೋಮ್ ಅನುಕ್ರಮಗಳನ್ನು ಇತ್ತೀಚೆಗೆ ಡೇಟಾಬೇಸ್‌ಗಳಿಗೆ ಸೇರಿಸಲಾಗಿದೆ ಅಥವಾ ರೋಗಕಾರಕಗಳ ಸರಿಯಾದ ಟ್ಯಾಕ್ಸಾನಮಿಕ್ ವಿವರಣೆಯನ್ನು ಬಹಳ ಕಡಿಮೆ ಸಮಯದ ಹಿಂದೆ ರಚಿಸಲಾಗಿದೆ.