ನ್ಯೂಯಾರ್ಕ್:ಸುರಕ್ಷಿತ ಎಂದು ಕುಡಿಯುವ ನೀರಿನ ಬಾಟಲ್ಗಳು ಸಾವಿರಾರು ತಿಳಿಯದ ಸಣ್ಣ ತುಣುಕು ಜೊತೆಗೆ ತಿಳಿಯದ ಸೂಕ್ಷ್ಮಪ್ಲಾಸ್ಟಿಕ್ (ನ್ಯಾನೋಪ್ಲಾಸ್ಟಿಕ್) ಕಣಗಳನ್ನು ಹೊಂದಿದ್ದು, ಇದು ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಎಂಬ ಆಘಾತಕಾರಿ ಮಾಹಿತಿಯನ್ನು ಸಂಶೋಧನೆ ಹೊರಹಾಕಿದೆ.
ಭೂಮಿ ಮೇಲೆ ಎಲ್ಲೆಡೆ ಕಾಣಿಸಿಕೊಳ್ಳುತ್ತಿರುವ ಮೈಕ್ರೊಪ್ಲಾಸ್ಟಿಕ್ ಎಂಬ ಸಣ್ಣ ಕಣಗಳು ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುವ ಹೆಚ್ಚು ಕಾಳಜಿಯ ವಿಷಯವಾಗಿದೆ. ಈ ಸೂಕ್ಷ್ಮ ಕಣಗಳು ಧ್ರುವ ಪ್ರದೇಶದಿಂದ ಮಣ್ಣಿನವರೆಗೆ ಕುಡಿಯುವ ನೀರಿನಿಂದ ಆಹಾರದವರೆಗೆ ಕಂಡು ಬರುತ್ತಿದ್ದು, ಇವು ಆರೋಗ್ಯಕ್ಕೆ ಅಪಾಯವನ್ನು ತರುತ್ತದೆ ಎಂದು ಈಗಾಗಲೇ ಹಲವು ಅಧ್ಯಯನಗಳು ಎಚ್ಚರಿಸಿವೆ.
ನ್ಯಾನೋಪ್ಲಾಸ್ಟಿಕ್ಸ್ ಎಂಬುದು ಮೈಕ್ರೋಪ್ಲಾಸ್ಟಿಕ್ ಅನ್ನು ಇನ್ನುಷ್ಟು ಕಾಣದ ರೀತಿಯ ತುಂಡರಿಸಿದ ಕಣಗಳಾಗಿದ್ದು, ಈ ಅಧ್ಯಯನದಲ್ಲಿ ಇವುಗಳ ಬಗ್ಗೆ ಗಮನ ಹರಿಸಲಾಗಿದೆ. ಈ ಅಧ್ಯಯನವನ್ನು ಜರ್ನಲ್ ಪ್ರೋಸಿಡಿಂಗ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ನಲ್ಲಿ ಪ್ರಕಟಿಸಲಾಗಿದೆ.
ಅಮೆರಿಕದ ಕೊಲಂಬಿಯಾ ಯುನಿವರ್ಸಿಟಿ ತಂಡವೂ ಹೊಸದಾಗಿ ಶುದ್ದೀಕರಿಸಿದ ತಂತ್ರಜ್ಞಾನದಲ್ಲಿ ಬಳಕೆ ಮಾಡಿದ ನೀರಿನ ಬಾಟಲ್ನಲ್ಲಿ ಈ ಅತಿ ಸೂಕ್ಷ್ಮ ಕಣಗಳನ್ನು ಪತ್ತೆ ಮತ್ತು ಎಣಿಕೆ ಮಾಡಿದ್ದಾರೆ. ಈ ವೇಳೆ ಅವರು ಒಂದು ಲೀಟರ್ನಲ್ಲಿ 2,40,000 ಪತ್ತೆ ಮಾಡಬಹುದಾದ ಪ್ಲಾಸ್ಟಿಕ್ ತುಣುಕನ್ನು ಪತ್ತೆ ಮಾಡಿದ್ದಾರೆ. ಈ ಹಿಂದೆ ಅಂದಾಜಿಸಿದ್ದಕ್ಕಿಂತ 10 ರಿಂದ 100 ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಈ ಕಣಗಳು ಪತ್ತೆಯಾಗಿವೆ.
ನ್ಯಾನೋ ಪ್ಲಾಸ್ಟಿಕ್ಗಳು ಮೈಕ್ರೋ ಪ್ಲಾಸ್ಟಿಕ್ಗಳಿಗಿಂತ ತುಂಬಾ ಸೂಕ್ಷ್ಮವಾಗಿದ್ದು, ಅವು ನಮ್ಮ ಕರುಳು ಮತ್ತು ಶ್ವಾಸಕೋಶದ ಮೂಲಕ ಸಾಗಿ ನೇರವಾಗಿ ರಕ್ತನಾಳಗಳಿಗೆ ತಲುಪಬಹುದು. ಅಲ್ಲಿಂದ ಅವು ಹೃದಯ ಮತ್ತು ಮೆದುಳಿನಿಂದ ಅಂಗಾಂಗಗಳಿಗೆ ಸಾಗಬಹುದಾಗಿದೆ. ಅವು ಪ್ರತ್ಯೇಕ ಕೋಶಕ್ಕೆ ತಲುಪಬಹುದಾಗಿದ್ದು, ಪ್ಲೆಸೆಂಟಾ ಮೂಲಕ ಹುಟ್ಟಲಿರುವ ಮಗುವಿನ ದೇಹವನ್ನು ತಲುಪಬಹುದು. ಈ ಹಿಂದಿನ ಅಧ್ಯಯನದಲ್ಲಿ ಈ ಬಗ್ಗೆ ಹೆಚ್ಚಿನ ಗಮನಹರಿಸಿರಲಿಲ್ಲ. ಇದರಲ್ಲಿ ಏನಿರಬಹುದು ಎಂದು ಅಂದಾಜಿಸಲಾಗಿತ್ತು ಎಂದು ಬಿಜೆಹನ್ ಯಾನ್ ತಿಳಿಸಿದ್ದಾರೆ. ಇದೀಗ ನಾವು ಈ ಮೊದಲು ತೆರೆದುಕೊಳ್ಳದ ಪ್ರಪಂಚದಲ್ಲಿ ಇದೀಗ ನೋಡಬುದಾಗಿದೆ ಎಂಬುದನ್ನು ಈ ಅಧ್ಯಯನ ತಿಳಿಸಿದೆ.
ಈ ಅಧ್ಯಯನಕ್ಕೆ ಮ್ಯುಲಟೆಡ್ ರಾಮನ್ ಸ್ಕಾಟ್ಟರಿಂಗ್ ಮೈಕ್ರೋಸ್ಕೋಪ್ ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದೆ. ಎರಡು ಏಕಕಾಲಿಕ ಲೇಸರ್ಗಳ ಪ್ರಚೋದನಾಕಾರಿ ಮೂಲಕ ಮಾದರಿಗಳನ್ನು ತನಿಖೆ ನಡೆಸಲಾಗಿದೆ. ಇದಕ್ಕಾಗಿ ಅಮೆರಿಕದ ಪ್ರತಿಷ್ಠಿತ ಬ್ರಾಂಡ್ಗಳ ನೀರಿನ ಬಾಟಲ್ ಬಳಕೆ ಮಾಡಲಾಗಿದೆ. 100 ನ್ಯಾನೋಮೀಟರ್ ಗಾತ್ರದಲ್ಲಿ ಈ ಪ್ಲಾಸ್ಟಿಕ್ ಕಣಗಳನ್ನು ವಿಶ್ಲೇಷಿಸಲಾಗಿದೆ.
ಈ ವೇಳೆ ಪ್ರತಿ ಲೀಟರ್ ಬಾಟಲ್ನಲ್ಲಿ 1.10.000 ರಿಂದ 3,70,000 ಕಣಗಳು ಕಂಡು ಬಂದಿದೆ, ಇದರಲ್ಲಿ ಶೇ 90ರಷ್ಟು ನ್ಯಾನೋಪ್ಲಾಸ್ಟಿಕ್ ಆಗಿದ್ದು, ಉಳಿದವು ಮೈಕ್ರೋಪ್ಲಾಸ್ಟಿಕ್ ಆಗಿದೆ. ಇವುಗಳಲ್ಲಿ ಪಿಇಟಿ, ನೈಲನ್ ರೀತಿಯ ಪಾಲಿಮೈಡ್, ಪಾಲಿಸ್ಟೈರೆನೆ, ಪಾಲಿವಿನ್ಯಲ್ ಕ್ಲೋರೈಡ್ ಮತ್ತು ಪಾಲಿಮೆಥಿಯಲ್ ಮೆತಕ್ರೈಲೆಟ್ ಕಂಡು ಬಂದಿದ್ದು, ಇವುಗಳನ್ನೆಲ್ಲಾ ಕೈಗಾರಿಕ ಪ್ರಕ್ರಿಯೆಯಲ್ಲಿ ಬಳಕೆ ಮಾಡುತ್ತಾರೆ.
ಸಂಶೋಧಕರು ಶೋಧಿಸಿದ ಪ್ಲಾಸ್ಟಿಕ್ ಪ್ರಕಾರಗಳು ಅವರು ಮಾದರಿಗಳಲ್ಲಿ ಕಂಡುಕೊಂಡ ಎಲ್ಲಾ ನ್ಯಾನೊಪರ್ಟಿಕಲ್‌ಗಳಲ್ಲಿ ಕೇವಲ 10 ಪ್ರತಿಶತದಷ್ಟು ಮಾತ್ರ ಇದ್ದು, ಉಳಿದವು ಏನೆಂದು ಅವರಿಗೆ ತಿಳಿದಿಲ್ಲ. ಅವು ಎಲ್ಲಾವೂ ನ್ಯಾನೋಪ್ಲಾಸ್ಟಿಕ್ ಆಗಿದ್ದರೆ, ಪ್ರತಿ ಲೀಟರ್ನಲ್ಲಿ ಮಿಲಿಯಂತಾರಗಳು ಇರುತ್ತವೆ ಎಂದು ಸಂಶೋಧಕರು ತಿಳಿಸಿದ್ದಾರೆ. ಅವು ನೀರಿನ ಮಾದರಿಯಲ್ಲಿ ಸಂಕೀರ್ಣ ಸರಳ ಮಾದರಿ ಸಂಯೋಜನೆಯಂತೆ ಕಾಣುತ್ತದೆ ಎಂದು ಲೇಖಕರು ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ತರಕಾರಿ ಕಟಿಂಗ್ ಬೋರ್ಡ್ ಉತ್ಪಾದಿಸುತ್ತವೆ ಹಾನಿಕಾರಕ ಮೈಕ್ರೋಪ್ಲಾಸ್ಟಿಕ್ಗಳು: ಎಚ್ಚರ