ಭಾರತೀಯರು ಸೇವಿಸುವ ಆಹಾರದಲ್ಲಿ ಶೇ 60ಕ್ಕಿಂತ ಹೆಚ್ಚು ಕಾರ್ಬೋಹೈಡ್ರೇಟ್‌ಗಳು ಇರುತ್ತವೆ ಎಂದು ಇತ್ತೀಚಿನ ಅಧ್ಯಯನವೊಂದು ಬಹಿರಂಗಪಡಿಸಿದೆ. ಪೌಷ್ಟಿಕತಜ್ಞರ ಪ್ರಕಾರ, ನಮ್ಮ ಆಹಾರದಲ್ಲಿ ಕಾರ್ಬೋಹೈಡ್ರೇಟ್‌ಗಳು ಶೇಕಡಾ 40 ಕ್ಕಿಂತ ಹೆಚ್ಚು ಇರಬಾರದು. ಇದಲ್ಲದೆ ಸರಾಸರಿ ಪ್ರೋಟೀನ್ ಸೇವನೆ 12 ಪ್ರತಿಶತದಷ್ಟಿದ್ದು, ಇದನ್ನು ಕನಿಷ್ಠ ಶೇ 40ಕ್ಕೆ ಹೆಚ್ಚಿಸಬೇಕು. ಕೊಬ್ಬು ಶೇ 20 ರಷ್ಟಿರಬೇಕು. ಎರಡು ತಿಂಗಳ ಕಾಲ ಈ ಲೆಕ್ಕಾಚಾರದಲ್ಲಿ ಸಮತೋಲಿತ ಆಹಾರವನ್ನು ಅನುಸರಿಸಿದರೆ, ದೇಹ ತಾನಾಗಿಯೇ ಮೊದಲಿನಂತೆ ಸಾಮಾನ್ಯ ಆರೋಗ್ಯ ಸ್ಥಿತಿಗೆ ಮರಳುತ್ತದೆ.
ನಮ್ಮಲ್ಲಿ ಹೆಚ್ಚಿನವರಿಗೆ ತಮ್ಮ ಇಷ್ಟದ ಆಹಾರವನ್ನು ನೋಡಿದ ಮೇಲಂತೂ ತಮ್ಮ ಹಸಿವನ್ನು ತಡೆದುಕೊಳ್ಳುವುದು ಭಾರಿ ಕಷ್ದ ಕೆಲಸ. ಅದನ್ನು ತಿನ್ನುವವರೆಗೆ ಸಮಾಧಾನವಿರುವುದಿಲ್ಲ. ಅತಿಯಾದ ಆಸೆಗೆ ಮಣಿದು ನಮ್ಮ ಇಷ್ಟದ ಆಹಾರವೆಂದು ಅತಿಯಾಗಿ ತಿನ್ನುವುದು ಆರೋಗ್ಯಕ್ಕೆ ಹಾನಿಕರ ಎನ್ನುತ್ತಾರೆ ವೈದ್ಯಕೀಯ ತಜ್ಞರು. ನೀವು ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಆಹಾರವನ್ನು ಸೇವಿಸಿದರೆ ರಕ್ತದಲ್ಲಿನ ಗ್ಲೂಕೋಸ್ ಅಂಶ ಹೆಚ್ಚಾಗುವ ಅಪಾಯವಿದೆ ಎಂಬುದು ವೈದ್ಯರ ಎಚ್ಚರಿಕೆಯ ಮಾತು.
ನಮ್ಮ ಇಷ್ಟದ ಆಹಾರವನ್ನೇ ನಿಗದಿತ ಸಮಯದ ಅಂತರದಲ್ಲಿ ಮಿತಿಯಾಗಿ ತಿನ್ನುವುದು ಉತ್ತಮ ಎನ್ನುತ್ತಾರೆ. ಚೆನ್ನೈನ ಅಪೊಲೊ ಸ್ಪೆಕ್ಟ್ರಾ ಆಸ್ಪತ್ರೆಯ ಹಿರಿಯ ಸಲಹೆಗಾರ ಮೆಡಿಕಲ್ ಎಂಡೋಕ್ರಿನೋಲಾಜಿಸ್ಟ್ ಡಾ.ಪಿ.ಜಿ.ಸುಂದರರಾಮನ್. ಮಧುಮೇಹವನ್ನು ತಡೆಗಟ್ಟಲು ಯಾವ ಆಹಾರವನ್ನು ಸೇವಿಸಬೇಕು? ಮಧುಮೇಹಿಗಳು ತಮ್ಮ ಆಹಾರದಲ್ಲಿ ಯಾವ ಬದಲಾವಣೆಗಳನ್ನು ಮಾಡಬೇಕು? ಎಂಬುದನ್ನು ಡಾ.ಸುಂದರರಾಮನ್ ಅವರು 'ಈಟಿವಿ ಭಾರತ'ದೊಂದಿಗಿನ ಸಂದರ್ಶನದಲ್ಲಿ ವಿವರಿಸಿದ್ದಾರೆ.
ನಮ್ಮ ದೇಹಕ್ಕೆ ಸಾಮಾನ್ಯವಾಗಿ ಎರಡು ರೀತಿಯ ಪೋಷಕಾಂಶಗಳು ಬೇಕಾಗುತ್ತವೆ. ಒಂದು ಸೂಕ್ಷ್ಮ ಪೋಷಕಾಂಶಗಳು. ಇವುಗಳು ಸಣ್ಣ ಪ್ರಮಾಣದಲ್ಲಿ ಸಾಕು. ಎರಡನೆಯದು ಮ್ಯಾಕ್ರೋನ್ಯೂಟ್ರಿಯೆಂಟ್ಸ್ ಎಂದರೆ ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್ಗಳು ಮತ್ತು ಕೊಬ್ಬು. ಕಾರ್ಬೋಹೈಡ್ರೇಟ್‌ಗಳು ಸುಲಭವಾಗಿ ಜೀರ್ಣವಾಗುತ್ತವೆ ಮತ್ತು ತ್ವರಿತವಾಗಿ ಗ್ಲೂಕೋಸ್ ಅನ್ನು ರಕ್ತಕ್ಕೆ ಬಿಡುಗಡೆ ಮಾಡುತ್ತವೆ.
ಆಹಾರ ಜೀರ್ಣಗೊಂಡು ಗ್ಲೂಕೋಸ್ ಆಗಿ ಪರಿವರ್ತನೆಯಾಗುತ್ತದೆ. ಇದು ಜೀವಕೋಶಗಳಿಗೆ ಹೋಗಿ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ. ಈ ಪ್ರಕ್ರಿಯೆಯು ಸುಗಮವಾಗಿ ನಡೆಯಲು, ಒಬ್ಬ ಸಾಮಾನ್ಯ ವ್ಯಕ್ತಿಯು ದಿನಕ್ಕೆ ಮೂರು ಬಾರಿ ತಿನ್ನುವ ಅಭ್ಯಾಸವನ್ನು ಹೊಂದಿರಬೇಕು. ಇದಲ್ಲದೆ, ಈ ಊಟಗಳನ್ನು ನಿಗದಿತ ಸಮಯಗಳ ಅಂತರದಲ್ಲಿ ತಿನ್ನಬೇಕು. ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ಪ್ರತಿದಿನ ಒಂದೇ ಸಮಯದಲ್ಲಿ ತೆಗೆದುಕೊಳ್ಳಬೇಕು. ರಾತ್ರಿ 7.30ರ ಮೊದಲು ಊಟ ಮಾಡುವುದು ಆರೋಗ್ಯಕರ. ನೀವು ಸರಿಯಾದ ಸಮಯವನ್ನು ಅನುಸರಿಸಿದರೆ, ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಬಹುದು.
ಇನ್ಸುಲಿನ್ ಏಕೆ ಕೆಲಸ ಮಾಡುವುದಿಲ್ಲ?:ನಾವು ಸೇವಿಸುವ ಆಹಾರದಿಂದ ಬಿಡುಗಡೆಯಾಗುವ ಗ್ಲೂಕೋಸ್ ಅನ್ನು ಜೀವಕೋಶಗಳಿಗೆ ಎಷ್ಟು ಸಾಧ್ಯವೋ ಅಷ್ಟು ಬೇಗ ತಲುಪಬೇಕು. ಇನ್ಸುಲಿನ್ ಆ ಕೆಲಸವನ್ನು ಮಾಡುತ್ತದೆ. ನೀವು ಹೆಚ್ಚು ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸಿದರೆ, ಗ್ಲೂಕೋಸ್‌ನ ಉತ್ಪಾದನೆ ಹೆಚ್ಚಾಗುತ್ತದೆ. ಆ ಹೆಚ್ಚಾದ ಗ್ಲೂಕೋಸ್ನ್ನು ಜೀವಕೋಶಗಳಿಗೆ ತ್ವರಿತವಾಗಿ ಕಳುಹಿಸಲು ಹೆಚ್ಚಿನ ಪ್ರಮಾಣದ ಇನ್ಸುಲಿನ್ ಬೇಕು. ಈ ಪ್ರಕ್ರಿಯೆ ನಡೆಯಲು ಸಾಕಷ್ಟು ಶ್ರಮ ಬೇಕಾಗುತ್ತದೆ.