ಕರ್ನಾಟಕ

karnataka

ETV Bharat / sukhibhava

ಆರ್​ಟಿಪಿಸಿಆರ್ ಟೆಸ್ಟ್​ನಿಂದ ಹೊಸ ರೂಪಾಂತರ ವೈರಸ್​ ಪತ್ತೆ ಸಾಧ್ಯವಿಲ್ಲ.. - COVID symptoms

ಪ್ರತಿ ರೋಗಿಗೆ ಕೃತಕ ಆಮ್ಲಜನಕದ ಅಗತ್ಯವಿಲ್ಲ. ಯಾರಾದರೂ ಕೊರೊನಾ ವೈರಸ್ ಪಾಸಿಟಿವ್​ ಹೊಂದಿದ್ದರೇ ಅವನು, ಅವಳು ಆಮ್ಲಜನಕದ ಮಟ್ಟದ ಮೇಲ್ವಿಚಾರಣೆ ಮಾಡಬೇಕು. ಅದು 88 ಎಸ್‌ಪಿಒ 2ಗಿಂತ ಕಡಿಮೆಯಿದ್ದರೆ, ಅವರು ವೈದ್ಯರನ್ನು ಸಂಪರ್ಕಿಸಬೇಕು..

Helvetia Medical Centre
Helvetia Medical Centre

By

Published : Apr 23, 2021, 9:27 PM IST

ನವದೆಹಲಿ :ಕೋವಿಡ್ -19 ಎರಡನೇ ಅಲೆಯ ಹೊಸ ತಳಿಗಳೊಂದಿಗೆ ಇಂಗ್ಲೆಂಡ್​ ಮತ್ತು ಬ್ರೆಜಿಲ್‌ನ ರೂಪಾಂತರ ಸೋಂಕು ಹಲವು ರಾಜ್ಯಗಳಲ್ಲಿ ಇರುವುದು ದೃಢಪಟ್ಟಿದೆ.

ರಿವರ್ಸ್​ ಟ್ರಾನ್ಸ್​​ಕ್ರಿಪ್ಷನ್​ ಪಾಲಿಮರೇಸ್ ಚೈನ್ ರಿಯಾಕ್ಷನ್ (ಆರ್​​ಟಿ-ಪಿಸಿಆರ್) ಪರೀಕ್ಷೆಯಲ್ಲಿ ಪತ್ತೆ ಹಚ್ಚುವುದು ಸಾಧ್ಯವಿಲ್ಲ ಎಂದು ದೆಹಲಿಯ ಹೆಲ್ವೆಟಿಯಾ ವೈದ್ಯಕೀಯ ಕೇಂದ್ರದ ಸಲಹೆಗಾರ ವೈದ್ಯ ಡಾ.ಸೌರದೀಪ್ತಾ ಚಂದ್ರ ಹೇಳಿದ್ದಾರೆ.

ಡಬಲ್ ಮತ್ತು ಟ್ರಿಪಲ್ ರೂಪಾಂತರಿತ ಪ್ರಭೇದಗಳನ್ನು ಕಂಡು ಹಿಡಿಯಲಾಗುತ್ತಿಲ್ಲ. ವೈರಸ್​ ರಚನೆಯಲ್ಲಿನ ಬದಲಾವಣೆಯಿಂದಾಗಿ ಆರ್‌ಟಿ-ಪಿಸಿಆರ್ ಪರೀಕ್ಷೆಗಳು ಅದನ್ನು ಸರಿಯಾಗಿ ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ ಎಂದರು.

ಗಂಟಲು ನೋವು, ದೇಹ ಬಾಧೆ, ಜ್ವರ, ವಾಸನೆ ಮತ್ತು ರುಚಿಯ ನಷ್ಟದಂತಹ ಸಾಮಾನ್ಯ ಲಕ್ಷಣಗಳ ಹೊರತಾಗಿ, ಹೊಸ ವಿಧನವು ಅತಿಸಾರ, ಮೂಗಿನ ಮೂಲಕ ರಕ್ತಸ್ರಾವ, ಕಾಂಜಂಕ್ಟಿವಿಟಿಸ್‌ನಂತಹ ಕೆಲವು ರೋಗಲಕ್ಷಣಗಳನ್ನು ರೋಗಿಗಳಲ್ಲಿ ಸೇರ್ಪಡೆಯಾಗಿವೆ ಎಂದು ಹೇಳಿದರು.

ನಾವು ಅತಿಸಾರ, ಹೊಟ್ಟೆ ನೋವು, ದದ್ದುಗಳು, ಕಾಂಜಂಕ್ಟಿವಿಟಿಸ್, ಗೊಂದಲ ಸ್ಥಿತಿ, ಮೆದುಳಿನ ಮಂಜು, ಬೆರಳುಗಳು ಮತ್ತು ಕಾಲ್ಬೆರಳುಗಳ ನೀಲಿ ಬಣ್ಣ, ಮೂಗಿನ ಮೂಲಕ ರಕ್ತಸ್ರಾವದಿಂದ ಬಳಲುತ್ತಿರುವ ರೋಗಿಗಳನ್ನು ನಾವು ನೋಡುತ್ತಿದ್ದೇವೆ ಎಂದು ಡಾ.ಚಂದ್ರ ತಿಳಿಸಿದ್ದಾರೆ.

ಕೋವಿಡ್​-19 ರೋಗಿಗಳಿಗೆ ಚಿಕಿತ್ಸೆ ನೀಡಲು ಸೂಕ್ತ ಹಂತದಲ್ಲಿ ಔಷಧಿಯನ್ನು ನೀಡುವ ಅಗತ್ಯವಿದೆ. ರೆಮ್ಡಿಸಿವಿರ್ ಎಲ್ಲರಿಗೂ ಕಡ್ಡಾಯವಲ್ಲ. ಆರಂಭಿಕ ಹಂತದಲ್ಲಿ ಔಷಧಗಳ ಕಾಕ್​ಟೈಲ್ ಬಳಕೆಯ ವಿರುದ್ಧ ಎಚ್ಚರಿಕೆ ವಹಿಸಬೇಕಿದೆ.

ನಮ್ಮಲ್ಲಿ ಆಂಟಿ-ವೈರಲ್ ಔಷಧವಿಲ್ಲದ ಕಾರಣ ನಾವು ರೆಮ್ಡೆಸಿವಿರ್ ಬಳಸಬಹುದು. ಲಕ್ಷಣರಹಿತ ವ್ಯಕ್ತಿಗಳು, ಸೌಮ್ಯ ರೋಗಲಕ್ಷಣ ಹೊಂದಿರುವವರಿಗೆ ಮೊದಲೇ ನೀಡಿದರೆ ಯಾವುದೇ ಪ್ರಯೋಜನವಿಲ್ಲ. ತಡವಾಗಿ ನೀಡಿದರೂ ಪ್ರಯೋಜನವಿಲ್ಲ ಎಂದರು.

ದೇಶದಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆಯ ಮಧ್ಯೆ, ಕೋವಿಡ್-19 ಪ್ರಕರಣಗಳ ಹೆಚ್ಚಳದಿಂದಾಗಿ ಆಕ್ಸಿಜನ್​ ಬೇಡಿಕೆ ಮೂರು ಪಟ್ಟು ಹೆಚ್ಚಾಗಿದೆ. ರೋಗಿಗಳಿಗೆ ಆಮ್ಲಜನಕವನ್ನು ಅನಗತ್ಯವಾಗಿ ಸಂಗ್ರಹಿಸುವುದನ್ನು ತಪ್ಪಿಸಲು ಸಲಹೆ ನೀಡಿದ ಅವರು, ಪ್ರತಿ ರೋಗಿಯು ಕೃತಕ ಆಮ್ಲಜನಕ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದರು.

ಪ್ರತಿ ರೋಗಿಗೆ ಕೃತಕ ಆಮ್ಲಜನಕದ ಅಗತ್ಯವಿಲ್ಲ. ಯಾರಾದರೂ ಕೊರೊನಾ ವೈರಸ್ ಪಾಸಿಟಿವ್​ ಹೊಂದಿದ್ದರೇ ಅವನು, ಅವಳು ಆಮ್ಲಜನಕದ ಮಟ್ಟದ ಮೇಲ್ವಿಚಾರಣೆ ಮಾಡಬೇಕು. ಅದು 88 ಎಸ್‌ಪಿಒ 2ಗಿಂತ ಕಡಿಮೆಯಿದ್ದರೆ, ಅವರು ವೈದ್ಯರನ್ನು ಸಂಪರ್ಕಿಸಬೇಕು.

ಕೆಲವೊಮ್ಮೆ ಇದು ತುಂಬಾ ಸಾಮಾನ್ಯವಾಗಿದೆ. ಆದ್ದರಿಂದ, ಆಮ್ಲಜನಕ ಸಿಲಿಂಡರ್‌ಗಳನ್ನು ಸಂರಕ್ಷಿಸಿ ಮತ್ತು ಅಗತ್ಯವಿರುವ ರೋಗಿಗಳಿಗೆ ಬಳಸಲಿ ಎಂದು ಡಾ. ಚಂದ್ರ ಹೇಳಿದರು.

ABOUT THE AUTHOR

...view details