ಕರ್ನಾಟಕ

karnataka

ETV Bharat / sukhibhava

ನೇಸಲ್​ ಡಿಕಂಜೆಸ್ಟಂಟ್​ ಔಷಧ ಬಳಕೆಯಿಂದ ಪಾರ್ಶ್ವವಾಯುವಿನ ಅಪಾಯ; ಫ್ರಾನ್ಸ್​ ಆರೋಗ್ಯ ತಜ್ಞರ ಎಚ್ಚರಿಕೆ - ಅಪಾಯವನ್ನು ಹೆಚ್ಚಿಸುವ ಸಾಧ್ಯತೆ ಇದೆ

ಓರಲ್​ ನೇಸಲ್​ ಡಿಕಂಜೆಸ್ಟಂಟ್​ ಔಷಧದಲ್ಲಿ ಸ್ಯೂಡೋಫೆಡ್ರಿನ್ ಎಂಬ ಅಂಶ ಇದ್ದು, ಇದು ಹೃದಯಾಘಾತ ಅಥವಾ ಪಾರ್ಶ್ವವಾಯುವಿನ ಅಪಾಯವನ್ನು ಹೊಂದಿದೆ.

Risk of stroke from nasal decongestant medications
Risk of stroke from nasal decongestant medications

By ETV Bharat Karnataka Team

Published : Oct 25, 2023, 12:16 PM IST

ಪ್ಯಾರಿಸ್​​: ಸಾಮಾನ್ಯ ಮೂಗಿನ ಔಷಧವಾಗಿರುವ ಡಿಕಂಜೆಸ್ಟಂಟ್​ ಅನ್ನು ಬಳಕೆ ಮಾಡದಂತೆ ಫ್ರಾನ್ಸ್​​ ಆರೋಗ್ಯ ಅಧಿಕಾರಿಗಳು ಎಚ್ಚರಿಸಿದ್ದಾರೆ. ಈ ಔಷಧಗಳು ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯವನ್ನು ಹೆಚ್ಚಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಫ್ರಾನ್ಸ್​​ ಮೆಡಿಸಿನ್​ ಏಜೆನ್ಸಿ ಪ್ರಕಾರ, ಓರಲ್​ ನೇಸಲ್​ ಡಿಕಂಜೆಸ್ಟಂಟ್​​ ಔಷಧದಲ್ಲಿ ಸ್ಯೂಡೋಫೆಡ್ರಿನ್ ಎಂಬ ಅಂಶ ಇದ್ದು, ಇದು ಹೃದಯಾಘಾತ ಅಥವಾ ಪಾರ್ಶ್ವವಾಯುವಿನ ಅಪಾಯವನ್ನು ಹೊಂದಿದೆ.

ಸುಡಾಫೆಡ್, ಗಾಲ್ಪ್‌ಸ್ಯೂಡ್, ಬೂಟ್ಸ್ ಡಿಕೊಂಜೆಸ್ಟಾಟ್ ಮತ್ತು ಕೇರ್ ಡಿಕೊಂಜೆಸ್ಟೆಂಟ್, ಆಕ್ಟಿಫೆಡ್ ರೂಮ್, ಡೊಲಿರುಮ್ ಪ್ಯಾರೆಸಿಟಮಾಲ್ ಮತ್ತು ಸ್ಯೂಡೋಫೆಡ್ರಿನ್, ಮತ್ತು ಹ್ಯೂಮೆಕ್ಸ್ ರೂಮ್ ಮುಂತಾದ ಬ್ರಾಂಡ್ ಹೆಸರುಗಳ ಅಡಿಯಲ್ಲಿ ಮಾರಾಟ ಮಾಡಲಾಗುತ್ತದೆ.

ಈ ಬ್ರಾಂಡ್​ಗಳ ಔಷಧಗಳನ್ನು ಬಳಕೆ ಮಾಡದಂತೆ ಫ್ರಾನ್ಸ್​​ ಆರೋಗ್ಯ ಅಧಿಕಾರಿಗಳು ಎಚ್ಚರಿಸಿದ್ದು, ಕಟ್ಟಿದ ಮೂಗಿನಿಂದ ಪಾರ್ಶ್ವವಾಯು ಅಪಾಯ ಎದುರಿಸಲು ಸಾಧ್ಯವಿಲ್ಲ ಎಂದು ಫ್ರಾನ್ಸ್​ ರಾಷ್ಟ್ರೀಯ ಎಜೆನ್ಸಿಯ ನಿರ್ದೇಶಕ ಕ್ರಿಸ್ಟೆಲೆ ರ್ಯಾಟಿಜಿನೈರ್​​ ಕಾರ್ಬೊನ್ನೆಲ್​​ ತಿಳಿಸಿದ್ದಾರೆ. ಪ್ರಿಸ್ಕ್ರಿಪ್ಷನ್​ ಇಲ್ಲದ ಬಾಯಿಯ ಮಾತ್ರೆ ಅಥವಾ ಮೂಗಿನ ಔಷಧಗಳು ಲಭ್ಯವಿದೆ ಎಂದು ಎನ್​ಎಸ್​ಎಂ ತಿಳಿಸಿದೆ.

ಸ್ಯೂಡೋಫೆಡ್ರಿನ್​ ಹೆಚ್ಚಾಗಿ ಬಳಕೆ ಮಾಡುವ ಡಿಕಂಜೆಸ್ಟಂಟ್​ ಆಗಿದ್ದು, ಇದು ರಕ್ತನಾಳವನ್ನು ಕಿರಿದಾಗಿಸುತ್ತದೆ. ದೇಹದ ಇತರೆ ಭಾಗದಲ್ಲಿ ಕೂಡ ರಕ್ತನಾಳ ಸಂಕುಚಿತಗೊಳಿಸಿ, ರಕ್ತದೊತ್ತಡ ಮತ್ತು ಹೃದಯ ಬಡಿತ ಹೆಚ್ಚಿಸುತ್ತದೆ ಎಂದಯ ಯುರೋನ್ಯೂಸ್​ ವರದಿ ಮಾಡಿದೆ.

ಸಾಮಾನ್ಯ ಡಿಕಂಜೆಸ್ಟಂಟ್​ ಅನ್ನು ಬಹುತೇಕ ಮಂದಿ ಸುರಕ್ಷಿತವಾಗಿದ್ದು, ಯಾವುದೇ ಹೊಸ ಔಷಧಗಳನ್ನು ಬಳಕೆ ಮಾಡುವ ಮುನ್ನ ಆರೋಗ್ಯ ವೃತ್ತಿಪರರ ಸಮಾಲೋಚನೆ ನಡೆಸುವುದು ಅವಶ್ಯವಾಗಿದೆ, ಅದರಲ್ಲೂ ಆರೋಗ್ಯ ಸಮಸ್ಯೆ ಹೊಂದಿರುವ ಅಥವಾ ಇತರೆ ಔಷಧಗಳನ್ನು ತೆಗೆದುಕೊಳ್ಳುತ್ತಿರುವವರು ಈ ಕ್ರಮ ಅನುಸರಿಸುವುದು ಅವಶ್ಯ ಎಂದು ತಿಳಿಸಿದ್ದಾರೆ.

ಬೆಲ್ಜಿಯನ್​ ಆರೋಗ್ಯ ಅಧಿಕಾರಿಗಳು ಹೇಳುವಂತೆ, ಸ್ಯೂಡೋಫೆಡ್ರಿನ್​ ಶೀತದ ಔಷಧಗಳು ಪ್ರಯೋಜನದ ಜೊತೆಗೆ ಅಪಾಯದ ಅಂಶವನ್ನು ಸಮತೋಲನವಾಗಿ ಹೊಂದಿದೆ ಎಂದಿದ್ದಾರೆ.

ಈ ನಡುವೆ ಅಮೆರಿಕದ ಫುಡ್​ ಅಂಡ್​ ಡ್ರಗ್​ ಆಡ್ಮಿನಿಸ್ಟ್ರೇಷನ್​ ಫಿನೈಲ್ಫಿನ್​ ಎಂಬ ಔಷಧ ಪ್ರಯೋಜನಕಾರಿಯಲ್ಲ ಎಂದು ತಿಳಿಸಿದೆ. ಇದರ ಜೊತೆಗೆ ಸುಡಾಫೆಡ್​, ಮ್ಯೂಸಿನೆಕ್ಸ್​​, ವಿಕ್ಸ್​​, ಅಲೆಗ್ರಾ ಮತ್ತು ಡೇಕ್ವಿಲ್​ ಗಳು ಕೂಡ ಹೆಚ್ಚಿನ ಪರಿಹಾರ ನೀಡುವುದಿಲ್ಲ ಎಂದು ಎಫ್​ಡಿಎ ನಾನ್​ ಪ್ರಿಸ್ಕ್ರಿಪ್ಷನ್​ ಡ್ರಗ್ಸ್​ ಅಡ್ವೈಸರಿ ಕಮಿಡಿ (ಎನ್​ಡಿಎಸಿ)ಯ 16 ಮಂದಿ ಸದಸ್ಯರು ಸರ್ವಾನುಮತದಿಂದ ನಿರ್ಧರಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಶೌಚಾಲಯಕ್ಕಿಂತಲೂ 60 ಸಾವಿರ ಪಟ್ಟು ಹೆಚ್ಚು ಕೀಟಾಣು ಕಾಲೇಜ್​ ಕೆಫೆಟರಿಯಾಗಳಲ್ಲಿರುತ್ತಂತೆ.. ಕಾರಣ ಇದೇ ಅಂತೆ!

ABOUT THE AUTHOR

...view details