ವಾಷಿಂಗ್ಟನ್: ಕೋವಿಡ್-19 ಸಾಂಕ್ರಾಮಿಕತೆ ಸಮಯದಲ್ಲಿ ಆಸ್ತಮ ಹೊಂದಿದ್ದ ವಯಸ್ಕರಲ್ಲಿ ಖಿನ್ನತೆಯ ಅಪಾಯ ಹೆಚ್ಚಿನ ಮಟ್ಟದಲ್ಲಿತ್ತು ಎಂದು ರೆಸ್ಪಿರ್ಟೊರಿ ಮೆಡಿಸಿನ್ ಡಿಸ್ಕವರಿ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ. ಈ ಸಂಬಂಧ 2000 ಕೆನಡಿಯನ್ನರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಆಸ್ತಮ ಹೊಂದಿರುವ ವಯಸ್ಕರಲ್ಲಿ ಈ ಹಿಂದೆ ಕೂಡ ಖಿನ್ನತೆ ಅನುಭವಿಸಿದ್ದರು. 2020ರ ಚಳಿಗಾಲದ ಸಮಯದಲ್ಲಿ ಹೆಚ್ಚಿನ ಮಂದಿ ಖಿನ್ನತೆಯನ್ನು ಹೆಚ್ಚಾಗಿ ಅನುಭವಿಸಿದ್ದು, ಇದು ಚಿಂತೆಗೆ ಕಾರಣವಾಗಿದೆ. ಆಸ್ತಮಾ ಹೊಂದಿರದ ಅವರ ಗೆಳೆಯರಲ್ಲಿ ಮರುಕಳಿಸುವಿಕೆಯ ಪ್ರಮಾಣಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಒಂಟಿಯಾಗಿರುವವರಲ್ಲಿ ಈ ಖಿನ್ನತೆ ಪ್ರಮಾಣ ಹೆಚ್ಚಿದೆ.
ಸಾಂಕ್ರಾಮಿಕ ರೋಗಕ್ಕೆ ಮುಂಚಿತವಾಗಿ ಆಸ್ತಮಾ ಮತ್ತು ಖಿನ್ನತೆಯ ನಡುವಿನ ಹೆಚ್ಚಿನ ಕೊಮೊರ್ಬಿಡಿಟಿಯನ್ನು (ಒಂದಕ್ಕಿಂತ ಹೆಚ್ಚಿನ ರೋಗ) ಪರಿಗಣಿಸುವಾಗ, ಲಾಕ್ಡೌನ್ನ ದೀರ್ಘ ಅವಧಿಗಗಳು ಒಂಟಿತನದೊಂದಿಗೆ ಒತ್ತಡದ ಅಪಾಯ ಹೊಂದಿದೆ. ಈ ಸಾಂಕ್ರಾಮಿಕ ಸಮಯದಲ್ಲಿ ಮಾನಸಿಕ ಆರೋಗ್ಯದಲ್ಲಿ ತೀವ್ರ ಕುಸಿತ ಅನುಭವಿಸಿದೆ ಎಂಬುದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಎಂದು ಅಧ್ಯಯನ ಮೊದಲ ಲೇಖಕರಾದ ಅ್ಯಂಡಿ ಮ್ಯಾಕ್ನೈಲ್ ತಿಳಿಸಿದ್ದಾರೆ.
ಅಸ್ತಮಾ ಹೊಂದಿರುವವರಿಂದ ಮಾಹಿತಿ ಸಂಗ್ರಹ:ವಯಸ್ಸಾಗುವಿಕೆ ಮೇಲೆ ಕೆನಾಡಿಯನ್ ಜೀವತಾವಧಿ ಅಧ್ಯಯನ ಮಾದರಿ ಬಂದಿದ್ದು, ಈ ಜೀವತಾವಧಿ ಡಾಟಾ ಅನುಸಾರ, 2,017 ಆಸ್ತಮಾ ಹೊಂದಿರುವವರ ವಿಭಿನ್ನ ಪ್ರತಿಕ್ರಿಯೆಗಳನ್ನು ಪಡೆಯಲಾಗಿದೆ. ಇದರಲ್ಲಿ ಕೋವಿಡ್ ಪೂರ್ವ ಖಿನ್ನತೆ ಇತಿಹಾಸ ಹೊಂದಿರುವ ಮತ್ತು ಕೋವಿಡ್ ಪೂರ್ವದಲ್ಲಿ ಯಾವುದೇ ಖಿನ್ನತೆ ಲಕ್ಷಣ ಹೊಂದಿಲ್ಲದವರ ಮಾಹಿತಿ ಪಡೆಯಲಾಗಿದೆ. ಈ ವೇಳೆ ಪ್ರತಿಕ್ರಿಯಿಸಿದವರಲ್ಲಿ ಖಿನ್ನತೆ ಇತಿಹಾಸ ಹೊಂದಿರುವವರು ಹೆಚ್ಚಿನ ಅಪಾಯ ಹೊಂದಿದ್ದಾರೆ. ಈ ಖಿನ್ನತೆ ಇತಿಹಾಸವನ್ನು ಹೊಂದಿಲ್ಲದ ಏಳರಲ್ಲಿ ಒಂದು ಮಂದಿ 2020ರ ಚಳಿಗಾಲದಲ್ಲಿ ಖಿನ್ನತೆಗೆ ಒಳಗಾಗಿದ್ದಾರೆ. ಆಸ್ತಮದ ಜೊತೆ ಅನೇಕ ಮಾನಸಿಕ ಆರೋಗ್ಯದ ಮೇಲೆ ಈ ಸಾಂಕ್ರಾಮಿಕತೆ ಪರಿಣಾಮ ಬೀರಿದೆ.
ಸಾಂಕ್ರಾಮಿಕತೆ ವಯಸ್ಕರಲ್ಲಿ ಅನೇಕ ಮಾನಸಿಕ ಆರೋಗ್ಯ ಸಮಸ್ಯೆಗೆ ಕಾರಣವಾಗಿದೆ. ಅದರಲ್ಲೂ ವಿಶೇಷವಾಗಿ ಧೀರ್ಘಕಾಲದ ಆರೋಗ್ಯ ಸಮಸ್ಯೆ ಹೊಂದಿರುವವರಲ್ಲಿ ಇದು ಹೆಚ್ಚು ಎಂದು ಲೇಖಕರು ತಿಳಿಸಿದ್ದಾರೆ.ಈ ಹಿಂದೆ ಖಿನ್ನತೆ ಲಕ್ಷಣ ಇಲ್ಲದಿರುವ ಅಸ್ತಮ ಹೊಂದಿರುವ ರೋಗಿಗಳಲ್ಲಿ ಸಾಂಕ್ರಾಮಿಕತೆ ವೇಳೆ ಈ ಖಿನ್ನತೆ ಲಕ್ಷಣ ಕಂಡು ಬಂದಿರುವುದಾಗಿ ವೈದ್ಯಕೀಯ ತಜ್ಞರು ಕೂಡ ತಿಳಿಸಿದ್ದಾರೆ.