ಲಂಡನ್: ಯಾವುದೇ ಕೊರತೆ ಇಲ್ಲದೇ ಸುಖಾ ಸುಮ್ಮನೆ ಮಲ್ಟಿವಿಟಮಿನ್ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಕ್ಯಾನ್ಸರ್ ಹೆಚ್ಚಾಗುವ ಅಪಾಯ ಇದೆ ಎಂದು ಅಧ್ಯಯನ ಎಚ್ಚರಿಸಿದೆ. ಸ್ವೀಡನ್ನ ಕರೊಲಿನ್ಸಕಾ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ವಿಟಮಿನ್ ಸಿ ಮತ್ತು ಇತರೆ ಆ್ಯಂಟಿ ಆಕ್ಸಿಡೆಂಟ್ಗಳು ಶ್ವಾಸಕೋಶದಲ್ಲಿನ ಕ್ಯಾನ್ಸರ್ ಗಡ್ಡೆಗಳ ಹೊಸ ರಕ್ತನಾಳ ಆಗುವುದಕ್ಕೆ ಪ್ರಚೋದಿಸುತ್ತದೆ ಎಂದು ತಿಳಿಸಿದ್ದಾರೆ.
ದಿ ಜರ್ನಲ್ ಆಫ್ ಕ್ಲಿನಿಕಲ್ ಇನ್ವೆಸ್ಟಿಗೇಷನ್ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ, ಆ್ಯಂಟಿಆಕ್ಸಿಡೆಂಟ್ನಲ್ಲಿರುವ ಡಯಟರಿ ಪೂರಕಗಳು ಟ್ಯೂಮರ್ ಬೆಳವಣಿಗೆ ಮತ್ತು ಮೆಟಾಸಸಿಸ್ ಹೆಚ್ಚಿಸುತ್ತದೆ. ಆದಾಗ್ಯೂ ಹೆಚ್ಚಿನ ಮಟ್ಟದಲ್ಲಿ ತೆಗೆದುಕೊಂಡಾಗ ಮಾತ್ರ ಈ ಅಪಾಯ ಎಂದಿದ್ದಾರೆ.
ಆ್ಯಂಟಿ ಆಕ್ಸಿಡೆಂಟ್ ಕ್ಯಾನ್ಸರ್ ಟ್ಯೂಮರ್ಗಳನ್ನು ಹೊಸ ರಕ್ತನಾಳಗಳನ್ನು ರೂಪಿಸಲು ಕಾರಣವಾಗುವ ಕಾರ್ಯ ವಿಧಾನವನ್ನು ಸಕ್ರಿಯಗೊಳಿಸುತ್ತದೆ ಎಂದು ನಾವು ಪತ್ತೆ ಮಾಡಿದ್ದೇವೆ. ಹಿಂದಿನ ಅಧ್ಯಯನದಲ್ಲಿ ಆ್ಯಂಟಿ ಆಕ್ಸಿಡೆಂಟ್ಗಳು ರಕ್ಷಣಾತ್ಮಕ ಪರಿಣಾಮವನ್ನು ಹೊಂದಿದೆ ಎಂದು ತಿಳಿದಿದ್ದೆವು ಎಂದು ಅಧ್ಯಯನದ ಲೇಖಕ ಸ್ವೀಡನ್ನ ಕಾರೊಲಿನ್ಸಕಾ ಸಂಸ್ಥೆಯ ಜೈವಿಕ ವಿಜ್ಞಾನ ಮತ್ತು ನ್ಯೂಟ್ರಿಷಿಯನ್ ವಿಭಾಗದ ಪ್ರೋ ಮಾರ್ಟಿನ್ ಬರ್ಗೊ ತಿಳಿಸಿದ್ದಾರೆ.
ಹೊಸ ರಕ್ತ ನಾಳಗಳು ಟ್ಯೂಮರ್ ಪೋಷಿಸುತ್ತದೆ ಮತ್ತು ಬೆಳವಣಿಗೆ ಮತ್ತು ಹರಡಲು ಸಹಾಯ ಮಾಡುತ್ತದೆ ಎಂದಿದ್ದಾರೆ. ಆ್ಯಂಟಿ ಆಕ್ಸಿಡೆಂಟ್ ನ್ಯೂಟ್ರಲೈಸ್ ಆಮ್ಲಜನಕದ ರ್ಯಾಡಿಕಲ್ಗಳಿಂದ ಮುಕ್ತವಾಗಿರುತ್ತದೆ. ಇದು ದೇಹವನ್ನು ಹಾನಿ ಮಾಡುತ್ತದೆ. ಇದು ಸಾಮಾನ್ಯವಾಗಿ ಡಯಟರಿ ಪೂರಕದಲ್ಲಿ ಕಂಡು ಬರುತ್ತದೆ. ಇದರ ಹೈ ಡೋಸ್ ಹಾನಿಕಾರಕವಾಗಿದೆ.