ಟೊರೊಂಟೊ( ಕೆನಡಾ): 2100ರ ವೇಳೆಗೆ ಜಾಗತಿಕ ತಾಪಮಾನ ಎರಡು ಡಿಗ್ರಿ ಹೆಚ್ಚಾದರೆ, ಮುಂದಿನ ಶತಮಾನದಲ್ಲಿ ಇದರಿಂದ ಒಂದು ಬಿಲಿಯನ್ ಜನರು ಅಂದರೆ ಒಂದು ಕೋಟಿ ಜನರು ತಾಪಮಾನದಿಂದ ಮೃತಪಡುವ ಸಾಧ್ಯತೆ ಇದೆ ಎಂದು ಅಧ್ಯಯನ ಎಚ್ಚರಿಸಿದೆ.
ಕೆನಾಡದ ವೆಸ್ಟರ್ನ್ ಒಂಟಾರಿಯೊ ಯುನಿವರ್ಸಿಟಿ ಅಧ್ಯಯನ ನಡೆಸಿದೆ. ಇದೇ ವೇಳೆ, ಅಧ್ಯಯನವೂ ಆಕ್ರಮಣಕಾರಿ ಇಂಧನ ನಿಯಮಗಳನ್ನು ಕಡಿಮೆ ಮಾಡಬೇಕಿದೆ. ಇಂಗಾಲದ ಹೊರ ಸೂಸುವಿಕೆ ತಗ್ಗಿಸುವ ಮೂಲಕ ಜೀವ ಹಾನಿ ಕಡಿಮೆ ಮಾಡಬಹುದಾಗಿದೆ ಎಂದು ಕರೆ ನೀಡಿದ್ದಾರೆ. ಸಂಶೋಧಕರು ಇದೇ ವೇಳೆ ಅನಿಲ ಮತ್ತು ಇಂಧನ ಉದ್ಯಮ ಜಗತ್ತಿನಲ್ಲಿ ಬಹು ಲಾಭಾದಾಯಕ ಮತ್ತು ಶಕ್ತಿಯುತ ಉದ್ಯಮವಾಗಿದೆ. ಇದು ನೇರವಾಗಿ ಮತ್ತು ಪರೋಕ್ಷವಾಗಿ ಶೇ 40ರಷ್ಟು ಇಂಗಾಲ ಹೊರಸೂಸುವಿಕೆಗೆ ಕಾರಣವಾಗಿದೆ ಎಂದಿದ್ದಾರೆ.
ಈ ಹೊರಸೂಸುವಿಕೆ ಕೋಟ್ಯಂತರ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಹಿಂದುಳಿದ ಮತ್ತು ಕಡಿಮೆ ಸಮುದಾಯದ ಜನರು ಇದರ ಪರಿಣಾಮಕ್ಕೆ ಒಳಗಾಗುತ್ತಾರೆ. ಈ ರೀತಿಯ ಸಾಮೂಹಿಕ ಸಾವುಗಳು ಸ್ವೀಕರಾರ್ಹವಲ್ಲ. ಅದರಲ್ಲೂ ಮಕ್ಕಳ ಸಾವು ನಿಜಕ್ಕೂ ಭಯಗೊಳಿಸುತ್ತದೆ ಎಂದು ಅಧ್ಯಯನ ಪ್ರಮುಖ ಲೇಖಕ ಜೋಶುವಾ ಪಿಯರ್ಸ್ ತಿಳಿಸಿದ್ದಾರೆ.
ಈ ಅಧ್ಯಯನ ಜರ್ನಲ್ ಎನರ್ಜಿಯಲ್ಲಿ ಪ್ರಕಟಿಸಲಾಗಿದೆ. ಇದು ವೈಜ್ಞಾನಿಕ ಸಾಹಿತ್ಯದ 180ಕ್ಕೂ ಹೆಚ್ಚು ಲೇಖನದ ವಿಶ್ಲೇಷಣೆ ಆಧಾರವಾಗಿದೆ. ಪೀರ್-ರಿವ್ಯೂಡ್ ಸಾಹಿತ್ಯದಲ್ಲಿ ಇಂಗಾಲದ ಹೊರಸೂಸುವಿಕೆ ಮಾನವ ಮರಣದ ವೆಚ್ಚಗಳ ಕುರಿತು 1000 ಟನ್ ನಿಯಮದ ಮೇಲೆ ಒಮ್ಮುಖವಾಗಿದೆ ಎಂದು ತಂಡವು ಕಂಡು ಹಿಡಿದಿದೆ. ಇದು ಅಂದಾಜು 1,000 ಟನ್ ಪಳೆಯುಳಿಕೆ ಇಂಗಾಲವನ್ನು ಸುಟ್ಟಾಗ ಪ್ರತಿ ಬಾರಿ ಭವಿಷ್ಯದ ಒಂದು ಅಕಾಲಿಕ ಮರಣವು ಉಂಟಾಗುತ್ತದೆ ಎಂದು ಅಂದಾಜಿಸಲಾಗಿದೆ.