ಕರ್ನಾಟಕ

karnataka

ETV Bharat / sukhibhava

ನವಜಾತ ಶಿಶುಗಳಿಗೆ ಆ್ಯಂಟಿಬಯೋಟಿಕ್​ ನೀಡುವಾಗ ಗಮನಿಸಬೇಕಾದ ಅಂಶಗಳೇನು ಗೊತ್ತೆ? - ಆ್ಯಂಟಿಬಯೋಟಿಕ್​ ಜೆಂಟಾಮಿಸಿನ್‌​ ಆಗಿದೆ

ಆ್ಯಂಟಿಬಯೋಟಿಕ್​ ಡೋಸೆಜ್​ ನೀಡುವಾಗ ಮಗುವಿನ ತೂಕ ಲೆಕ್ಕ ಹಾಕುವ ವಿಧಾನ ಅವಶ್ಯಕವಾಗುತ್ತದೆ ಎಂಬುದನ್ನು ಅಧ್ಯಯನದಲ್ಲಿ ತಿಳಿಸಲಾಗಿದೆ.

Researchers suggest antibiotic regimen for newborns
Researchers suggest antibiotic regimen for newborns

By

Published : Jul 5, 2023, 4:56 PM IST

ವಾಷಿಂಗ್ಟನ್​: ಅನಾರೋಗ್ಯಕರ ನವಜಾತ ಶಿಶುಗಳ ಚಿಕಿತ್ಸೆಯಲ್ಲಿ ಬಳಕೆ ಮಾಡುವ ಸಾಮಾನ್ಯ ಆ್ಯಂಟಿಬಯೋಟಿಕ್​ ಜೆಂಟಾಮಿಸಿನ್‌​ ಆಗಿದೆ. ಇದು ನೀರಿನ ರೂಪಲ್ಲಿದ್ದು, ಇದರ ಮೂತ್ರದ ಮೂಲಕ ಮಗುವಿನ ದೇಹದಿಂದ ಹೊರ ಹೋಗುತ್ತದೆ. ಫಲಿತಾಂಶವಾಗಿ ಒಟ್ಟಾರೆ ದೇಶದ ತೂಕ ಇದು ದೇಹದ ನೀರಿನ ತೂಕವನ್ನು ಒಳಗೊಂಡಿರುತ್ತದೆ. ಇದರ ಲೆಕ್ಕಾಚಾರದ ಮೇಲೆ ಜೆನ್ಟಮಿಸಿನ್​ ನೀಡಲಾಗುವುದು. ಆರೋಗ್ಯಯುತ ನವಜಾತ ಶಿಶುವಿನ ಒಟ್ಟಾರೆ ನೀರಿನ ಅಂಶಗಳು ಮತ್ತೊಂದೆಡೆ ಪ್ರಸವಪೂರ್ವ ಶಿಶುವಿನ ತೂಕಕ್ಕಿಂತ ಭಿನ್ನವಾಗಿದೆ.

ಫಲಿತಾಂಶವಾಗಿ, ಜೆಂಟಾಮಿಸಿನ್‌​ ಡೋಸೇಜ್​ ಅನ್ನು ಪ್ರಿಸ್ಕ್ರಿಪ್ಷನ್​ ಬದಲಾಗಿ ಮಗುವಿನ ತೂಕದ ಮೇಲೆ ನೀಡಲಾಗುತ್ತದೆ. ಅವಧಿಪೂರ್ವ ಜನಿಸಿದ ಮಕ್ಕಳು ದುರ್ಬಲ ಕಿಡ್ನಿ ಹೊಂದಿದಾಗ ಔಷಧಿಯ ಡೋಸೇಜ್​ಗಳು ವ್ಯತ್ಯಾಸ ಆಗಲಿದ್ದು, ಇದು ಮೂತ್ರಪಿಂಡದ ಕಾರ್ಯಚಾರಣೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಈ ಫಲಿತಾಂಶವಾಗಿದೆ ಆ್ಯಂಟಿಬಯೋಟಿಕ್​ ಡೋಸೇಜ್​ ನೀಡುವಾಗ ಮಗುವಿನ ತೂಕ ಲೆಕ್ಕ ಹಾಕುವ ವಿಧಾನ ಅವಶ್ಯಕವಾಗುತ್ತದೆ. ಈ ಸಂಶೋಧನೆ ಫಲಿತಾಂಶವನ್ನು ಪಿಡಿಯಾಟ್ರಿಕ್ಸ್​ ಇನ್ವೆಸ್ಟಿಗೇಷನ್​ನಲ್ಲಿ ಜೂನ್​ 8, 2023ರಲ್ಲಿ ಪ್ರಕಟಿಸಲಾಗಿದೆ.

ಕೊಬ್ಬು ಮತ್ತು ಕೊಬ್ಬು ಮುಕ್ತ ದೇಹದ ಅಳತೆಯನ್ನು ಪಡೆಯುವುದು ಮುಖ್ಯವಾಗುತ್ತದೆ. ಇದು ಕೂಡ ದೇಹದ ಮಾಪನ ಲೆಕ್ಕಹಾಕಲು ಬಳಕೆ ಮಾಡಲಾಗುತ್ತದೆ. ಫ್ಯಾಟ್​ ಮಾಸ್​​ ಎಂಬುದು ದೇಹದ ಒಟ್ಟಾರೆ ಕೊಬ್ಬು ಆಗಿದೆ. ಕೊಬ್ಬುರಹಿತ ಮಾಸ್​​ ಎಂಬುದು ಕೊಬ್ಬಿನಿಂದ ಕಳೆಯಲಾದ ದೇಹದ ತೂಕವಾಗಿದೆ. ಬೆಹ್ರಿನ್​ನ ಅರಬಿಯನ್​ ಗಲ್ಫ್​​ ಯುನಿವರ್ಸಿಟಿ ಈ ಅಧ್ಯಯನ ನಡೆಸಿದ್ದು, ಡಾ ಕಣ್ಣನ್​ ಶ್ರೀಧರನ್​ ಇದರ ನೇತೃತ್ವ ವಹಿಸಿದ್ದಾರೆ.

ನಮ್ಮ ಹೈಪಾಥಿಸಿಸ್​ ತಿಳಿಸುವಂತೆ ಜೆನ್ಟಮಿಸಿನ್​ ಅನ್ನು ಹೊಂದಾಣಿಕೆ ಡೋಸೇಜ್​ ಮೇಲೆ ನೀಡಲಾಗುವುದು. ತೀವ್ರವಾಗಿ ಅಸ್ವಸ್ಥಗೊಂಡ ನವಜಾತ ಶಿಶುಗಳ ರಕ್ತದಲ್ಲಿನ ಜೆಂಟಾಮಿಸಿನ್‌ನ ಅತ್ಯಧಿಕ ಮತ್ತು ಕಡಿಮೆ ಸಾಂದ್ರತೆಯನ್ನು ತಂಡವು ಎರಡು ಡೋಸ್‌ಗಳ ಪ್ರತಿಜೀವಕವನ್ನು ನೀಡಿದ ನಂತರ ಅಳೆಯಲಾಯಿತು. ಕೊಬ್ಬು ರಹಿತ ಮಾಸ್​ ಆಧಾರದ ಮೇಲೆ ಜೆಂಟಾಮಿಸಿನ್ ಸಾಂದ್ರತೆಯನ್ನು ಅಳೆಯಲು ತಂಡವು ಲ್ಯಾಟೆಕ್ಸ್-ವರ್ಧಿತ ಇಮ್ಯುನೊಟರ್ಬಿಡಿಮೆಟ್ರಿಕ್ ವಿಧಾನವನ್ನು ಬಳಸಿದೆ. ನವಜಾತ ಶಿಶುಗಳ ಟ್ರೈಸ್ಪ್‌ಗಳ ಸುತ್ತ ಚರ್ಮದ ಪದರದ ದಪ್ಪವನ್ನು ಅಳೆಯುವ ಮೂಲಕ ಅವರು ದೇಹದ ಕೊಬ್ಬು ಮತ್ತು ಕೊಬ್ಬು-ಮುಕ್ತ ಮಮಾಸ್​ ಅನ್ನು ನಿರ್ಧರಿಸಿದರು.

ಅವಧಿಪೂರ್ವ ಜನನದ ಮಕ್ಕಳಿಗೆ ಹೋಲಿಸಿದರೆ ಅಕಾಲಿಕ ಶಿಶುಗಳು ರಕ್ತದಲ್ಲಿ ಹೆಚ್ಚಿನ ಜೆಂಟಾಮಿಸಿನ್ ಸಾಂದ್ರತೆಯನ್ನು ಹೊಂದಿದ್ದಾರೆ ಎಂದು ಸಂಶೋಧನೆಯಲ್ಲಿ ತಿಳಿದು ಬಂದಿದೆ. ಅವಧಿಪೂರ್ವ ಮಕ್ಕಳಲ್ಲಿ ರಕ್ತದಲ್ಲಿನ ಹೆಚ್ಚಿನ ಜೆಂಟಾಮಿಸಿನ್​ ಹೊಂದಿದೆ ಎಂಬುದನ್ನು ತಂಡ ಗುರುತಿಸಿದೆ. ಕಡಿಮೆ ತೂಕದ ಮಗುವು ಕೂಡ ಅಧಿಕ ರಕ್ತದ ಆ್ಯಂಟಿಬಯೋಟಿಕ್​ ಹೊಂದಿದೆ ಎಂದು ತೋರಿಸಿದೆ. ಜೊತೆಗೆ ಅವಧಿಪೂರ್ವ ಮಗುವಿನ ಕೊಬ್ಬಿನ ಮಾಸ್​​ ಸಾಮಾನ್ಯ ನವಜಾತ ಶಿಶುಗಿಂತ ಶೇ 21ರಷ್ಟು ಹೆಚ್ಚಿದೆ. ಪ್ರಸವಪೂರ್ವ ನವಜಾತ ಶಿಶುಗಳಲ್ಲಿ ಒಟ್ಟು ಪ್ಯಾರೆನ್ಟೆರಲ್ ಪೋಷಣೆಯ ಆಡಳಿತವು ಇದಕ್ಕೆ ಅತಿ ಹೆಚ್ಚಾಗಲು ಕಾರಣವಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಕೊಬ್ಬು ಮುಕ್ತ ಮಾಸ್ ಆಧಾರಿತ ಜೆಂಟಾಮಿಸಿನ್ ಡೋಸೇಜ್ನ ಸುರಕ್ಷತೆಯನ್ನು ಸ್ಥಾಪಿಸಲು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ. ಇಡೀ ದೇಹದ ತೂಕದ ಆಧಾರದ ಮೇಲೆ ಆ್ಯಂಟಿಬಯೋಟಿಕ್​​ ಡೋಸೇಜ್​​ ಲೆಕ್ಕಾಚಾರಕ್ಕೆ ಅಧ್ಯಯನ ಭರವಸೆ ನೀಡುತ್ತದೆ.

ಇದನ್ನೂ ಓದಿ: ಕೋವಿಡ್​ 19 ಸಾವು ಮತ್ತು ಗಂಭೀರತೆಯಿಂದ ಪಾರಾಗಲು ಗರ್ಭಾವಸ್ಥೆಯಲ್ಲಿ ಲಸಿಕೆ ಪಡೆಯುವುದು ಅವಶ್ಯ; ಅಧ್ಯಯನ

ABOUT THE AUTHOR

...view details