ವಾಷಿಂಗ್ಟನ್( ಅಮೆರಿಕ): ಕೋವಿಡ್ ವೇಳೆ ಪ್ರಂಟ್ಲೈನ್ ಕಾರ್ಯಕರ್ತರಾಗಿ ದುಡಿದವರಿಗೆ ಮಾನಸಿಕ ಆರೋಗ್ಯ ಚಿಕಿತ್ಸೆ ಅವಶ್ಯಕವಾಗಿದೆ ಎಂದು ಇಸ್ಟ್ ಆಂಗ್ಲಿಯಾ ವಿಶ್ವವಿದ್ಯಾಲಯದ ಸಂಶೋಧನೆ ತಿಳಿಸಿದೆ. ಕೋವಿಡ್ ಚಿಕಿತ್ಸೆ ವೇಳೆ ಅವರು ಸಾಕಷ್ಟು ಒತ್ತಡ ಮತ್ತು ಆಘಾತ ಅನುಭವಿಸಿದ್ದಾರೆ ಎಂಬುದು ತಿಳಿದು ಬಂದಿದೆ.
ನರ್ಸ್ಗಳು ಮನೆಯಲ್ಲಿ ರೋಗಿಗಳಿಗೆ ಆರೈಕೆ ಮಾಡುವಾಗ ಯಾವುದೇ ರೀತಿಯಲ್ಲಿ ಈ ಪರಿಸ್ಥಿತಿಗೆ ಮಾನಸಿಕವಾಗಿ ಸಿದ್ದರಾಗಿರಲಿಲ್ಲ. ಇದು ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಸಾಂಕ್ರಾಮಿಕದ ವೇಳೆ ಅವರು ಆಘಾತ ಮತ್ತು ನೈತಿಕ ಸಂಕಟವನ್ನು ಅನುಭವಿಸಿದ್ದಾರೆ. ಅವರು ಮಾನಸಿಕವಾಗಿ ಗುಣವಾಗುವಂತೆ ಚಿಕಿತ್ಸೆ ಬೇಕಾಗಿದೆ ಎಂದು ಸಂಶೋಧನಾ ತಂಡ ತಿಳಿಸಿದೆ.
ಕೋವಿಡ್ 19 ಸಾಂಕ್ರಾಮಿಕತೆ ವೇಳೆ ಊಹೆ ಮಾಡದಂತಹ ಪರಿಸ್ಥಿತಿಯನ್ನು ಕೇರ್ ಹೋಮ್ ನರ್ಸ್ಗಳು ತಮ್ಮ ಕೆಲಸದ ವೇಳೆ ಅನುಭವಿಸಿದ್ದಾರೆ. ಅನಾರೋಗ್ಯದ ಪರಿಸ್ಥಿತಿಯಲ್ಲಿರುವಂತಹ ಜನರೊಂದಿಗೆ ಇದ್ದ ಹೋಮ್ ಕೇರ್ ನರ್ಸ್ಗಳು, ಸೋಂಕಿನ ಜೊತೆ ಪದೇ ಪದೆ ಬದಲಾಗುತ್ತಿದ್ದ ಮಾರ್ಗಸೂಚಿ ಮತ್ತು ನಿಯಮಿತ ವೃತ್ತಿಪರರ ಬೆಂಬಲದಿಂದ ತಮ್ಮ ಕೆಲಸವನ್ನು ನಿರ್ವಹಿಸಿದ್ದಾರೆ. ಆರೋಗ್ಯ ಮತ್ತು ಸಾಮಾಜಿಕ ಕಾಳಜಿ ಸಿಬ್ಬಂದಿ ಕೂಡ ಇದರಿಂದ ಗುಣಮುಖರಾಗುತ್ತಿದ್ದಾರೆ.