ಕರ್ನಾಟಕ

karnataka

ETV Bharat / sukhibhava

ದೆಹಲಿ ಮಾಲಿನ್ಯದ ಮೂಲ ಪತ್ತೆಗೆ ಮುಂದಾದ ಐಐಟಿ ದೆಹಲಿ: ಪಂಜಾಬ್​ ವಿಶ್ವವಿದ್ಯಾಲಯ ಮತ್ತು ಪಿಜಿಐಯಿಂದಲೂ ಸಂಶೋಧನೆ

ದೆಹಲಿ ಮಾಲಿನ್ಯಕ್ಕೆ ಕಾರಣವಾಗುತ್ತಿರುವ ತ್ಯಾಜ್ಯ ಸುಡುವಿಕೆ ಮಾಪನವನ್ನು ಅಳತೆ ಮಾಡಿ ಈ ಕುರಿತು ಅಧ್ಯಯನ ನಡೆಸಲು ಐಐಟಿ ದೆಹಲಿ, ಪಂಜಾಬ್​ ಯುನಿವರ್ಸಿಟಿ ಮತ್ತು ಪಿಜಿಐ ಮುಂದಾಗಿದೆ

research-on-pollution-problem-in-delhi-ncr-haryana-punjab-iit-delhi-team-pgi-and-pu-team-research-on-pollution
research-on-pollution-problem-in-delhi-ncr-haryana-punjab-iit-delhi-team-pgi-and-pu-team-research-on-pollution

By ETV Bharat Karnataka Team

Published : Oct 26, 2023, 11:41 AM IST

ಚಂಡೀಗಢ: ಚಳಿಗಾಲ ಆರಂಭಕ್ಕೆ ಮುನ್ನವೇ ದೆಹಲಿ ಮತ್ತು ಎನ್​ಸಿಆರ್​ ಪ್ರದೇಶದಲ್ಲಿ ವಾಯುಗುಣಮಟ್ಟ ಕುಸಿತ ಕಾಣುತ್ತದೆ. ಸೆಪ್ಟೆಂಬರ್​ ಅಂತ್ಯದಲ್ಲಿ ಆರಂಭವಾಗುವ ಈ ಹವಾಮಾನಕ್ಕೆ ಕಾರಣ, ಹರ್ಯಾಣ ಮತ್ತು ಪಂಜಾಬ್​ಗಳಲ್ಲಿ ಕೃಷಿ ತ್ಯಾಜ್ಯ ಸುಡುವುದೇ ಕಾರಣ ಎಂದು ಹೇಳಲಾಗುತ್ತದೆ. ಈ ಕಾರಣದಿಂದ ಐಐಟಿ ದೆಹಲಿ, ಪಿಜಿಐ ಮತ್ತು ಪಂಜಾಬ್​​ ಯುನಿವರ್ಸಿಟಿ ಸಂಶೋಧಕರು ಈ ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಈ ತ್ಯಾಜ್ಯ ಸುಡುವಿಕೆ ಮಾಪನ ಮಾಡುವ ಉದ್ದೇಶದಿಂದ ಅಲ್ಲಿಗೆ ಭೇಟಿ ನೀಡಲು ಮುಂದಾಗಿದ್ದಾರೆ.

ಇದಕ್ಕಾಗಿ ಮೊಬೈಲ್​ ವ್ಯಾನ್​ನಲ್ಲಿ ತೆರಳುತ್ತಿದ್ದು, ಈ ವೇಳೆ, ಮಾಲಿನ್ಯದ ಮಾಪನ ಮಾಡುವ ಮೆಷಿನ್​ ಕೂಡ ಜೊತೆಗೆ ಕೊಂಡೊಯ್ಯಲಿದ್ದಾರೆ. ಈ ಸಂಶೋಧನಾ ಅಧ್ಯಯನದಲ್ಲಿ ಅವರು ಯಾವ ಕಣಗಳು ಮತ್ತು ಇವು ಯಾವಾಗ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತೆರಳುತ್ತದೆ ಎಂಬ ಮಾಹಿತಿ ಪಡೆಯಲಿದ್ದಾರೆ. ಇದೇ ವೇಳೆ, ತಳಮಟ್ಟದಲ್ಲಿಯೇ ಅವರು ಜನರಿಗೆ ಮಾಲಿನ್ಯ ಅಳೆಯುವ ಮಷಿನ್​ನಿಂದ ಮಾಹಿತಿಯನ್ನು ನೀಡಲಿದ್ದಾರೆ.

ಈ ಸಂಶೋಧನೆಗೆ ತೆರಳುತ್ತಿರುವ ಐಐಟಿ ದೆಹಲಿ ವಿದ್ಯಾರ್ಥಿಗಳು ಮತ್ತು ಪಂಜಾಬ್​​ ಯುನಿವರ್ಸಿಟಿ ಪರಿಸರ ವಿಭಾಗದ ಮುಖ್ಯಸ್ಥರು ಈ ಟಿವಿ ಭಾರತ್​​ನೊಂದಿಗೆ ಮಾತನಾಡಿದ್ದಾರೆ. ಈ ಸಂಬಂಧ ಮಾತನಾಡಿದ ದೆಹಲಿ ವಿದ್ಯಾರ್ಥಿ, ಮಾಲಿನ್ಯದ ವಿವಿಧ ಕಣಗಳನ್ನು ಮಾಪನ ಮಾಡುವ ಸಾಧನವನ್ನು ಹೊಂದಿದ್ದೇವೆ. ಇದನ್ನು ಸಂಗ್ರಹಿಸಿ ಮಾಹಿತಿ ನೀಡಲಾಗುವುದು. ಇದಕ್ಕಾಗಿ ಮಿಷನ್​ ಕೂಡಾ ಅಳವಡಿಸಿದ್ದೇವೆ ಎಂದರು.

ಹರಿಯಾಣ ಮತ್ತು ಪಂಜಾಬ್​ನಲ್ಲಿ ತ್ಯಾಜ್ಯ ಸುಡುವಿಕೆ ಆರಂಭಿಸಿದ, ಕೆಲವು ದಿನಗಳ ಬಳಿಕ ದೆಹಲಿಯಲ್ಲಿ ಅದರ ಪರಿಣಾಮವನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ. ಆದರೆ, ಇದೀಗ ನಾವು ಮಾಲಿನ್ಯದ ಮೂಲದತ್ತ ತೆರಳುತ್ತಿದ್ದು, ಅಲ್ಲಿ ಈ ಸುಡುವಿಕೆಯಿಂದ ಆಗುವ ಪರಿಣಾವನ್ನು ತಿಳಿಯಲಾಗುವುದು. ಕಳೆದ ನಾಲ್ಕು- ಐದು ವರ್ಷದಿಂದ ನಾವು ದೆಹಲಿಯಲ್ಲಿ ಕುಳಿತು ಕೆಲಸ ಮಾಡಿದ್ದೆವು. ಇದೀಗ ಸಮಸ್ಯೆ ಮೂಲದ ಬಳಿ ಹೋಗುವುದರಿಂದ ಪರಿಣಾಮಕಾರಿ ಕಣಗಳ ವಿಭಿನ್ನತೆ ಅಳೆಯಲು ಸಾಧ್ಯವಾಗುವುದು ಎಂದಿದ್ದಾರೆ ವಿದ್ಯಾರ್ಥಿ ಫೈಜಲ್​.

ಪಂಜಾಬ್​ ಮತ್ತು ದೆಹಲಿ ಮಾಲಿನ್ಯದ ವ್ಯತ್ಯಾಸ: ಈ ಅಧ್ಯಯನದಿಂದ ನಾವು ಗ್ರಾಮೀಣ ಪ್ರದೇಶ ಮತ್ತು ದೆಹಲಿಯಲ್ಲಿ ಆಗುವ ಪರಿಣಾವನ್ನು ಎಷ್ಟರ ಮಟ್ಟಿಗೆ ಇರಲಿದೆ ಎಂದು ತಿಳಿಯುತ್ತೇವೆ. ತಂಡವೂ ವಿವಿಧ ಪ್ರದೇಶಗಳಿಂದ ಈ ಮಾಲಿನ್ಯ ದೆಹಲಿಗೆ ತಲುಪುತ್ತಿದೆಯಾ ಎಂಬ ಸಂಬಂಧ ಕೂತ ತಿಳಿಯಲು ಮುಂದಾಗಿದ್ದಾರೆ. ಇದರ ಅರ್ಥ ಐಐಟಿ ದೆಹಲಿ ತಳಮಟ್ಟದಲ್ಲಿ ಕೆಲಸ ಮಾಡುತ್ತಿದೆ. ನಾವು ವಿವಿಧ ರೀತಿಯ ಮಷಿನ್​ ಹೊಂದಿರುವ ವಾಹನಗಳಿಂದ ಮಾಲಿನ್ಯದ ಕಣಗಳ ಮಾಹಿತಿಯನ್ನು ಸಂಗ್ರಹಿಸುತ್ತೇವೆ. ಇದಾದ ಬಳಿಕ ಇದು ಯಾವ ಮಟ್ಟಿಗೆ ಮನುಷ್ಯರ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಯುತ್ತೇವೆ ಎಂದರು.

ಸ್ಥಳೀಯ ಸಮಸ್ಯೆಗಳು ಮಾಲಿನ್ಯಕ್ಕೆ ಜವಾಬ್ದಾರಿ: ಐಐಟಿ ದೆಹಲಿ ವಿದ್ಯಾರ್ಥಿಕ ಆಂಜನೇಯ ಪಾಂಡೆ ಹೇಳುವಂತೆ, ದೆಹಲಿಯಲ್ಲಿ ಚಳಿಗಾಲದ ಮಾಲಿನ್ಯಕ್ಕೆ ಸ್ಥಳೀಯ ಸಮಸ್ಯೆಗಳು ಮಾತ್ರ ಕಾರಣವಲ್ಲ. ಪಂಜಾಬ್​ನಿಂದ ಬೀಸುವ ಗಾಳಿ ಕೂಡ ಕಾರಣ ಹೊಂದಿದೆ. ಈ ಕೃಷಿ ತ್ಯಾಜ್ಯ ಸುಡುವಿಕೆ ಕಡಿಮೆ ಅವಧಿಯದ್ದಾಗಿದ್ದು, ಕೆಲವು ತಿಂಗಳ ಮಟ್ಟಕ್ಕೆ ಸೀಮಿತವಾಗಿದೆ. ಈ ಹಿನ್ನೆಲೆ ಮಾಲಿನ್ಯ ಎಲ್ಲಿಂದ ಬರುತ್ತದೆ ಎಂಬ ಮೂಲವನ್ನು ಸಂಗ್ರಹಿಸ ಬೇಕಿದೆ ಎಂದರು.

ಸರಿಯಾದ ದಾಖಲೆ ಸಂಗ್ರಹಿಸುವುದು ಅಗತ್ಯ: ಆಂಜನೇಯ ಹೇಳುವಂತೆ ಕೃಷಿ ತ್ಯಾಜ್ಯ ಸುಡುವ ಸ್ಥಳದ ರಾಸಾಯನಿಕ ಮಾಹಿತಿಯು ದೇಶದಲ್ಲಿ ಪ್ರಸ್ತುತ ಸರಿಯಾಗಿ ಲಭ್ಯವಿಲ್ಲ. ಮತ್ತೊಂದೆಡೆ ನಾವು ಎಲ್ಲಾ ಮಷಿನ್​ ಅನ್ನು ತೆಗೆದುಕೊಂಡು ಹೋಗುತ್ತಿದ್ದು, ನೇರವಾಗಿ ಮಾಲಿನ್ಯ ಉತ್ಪಾದನೆ ಪರಿಣಾಮಕ್ಕೆ ಕಾರಣವಾಗುತ್ತಿರುವ ಮೂಲವನ್ನು ತಿಳಿಯುವ ಪ್ರಯತ್ನ ನಡೆಸಲಾಗಿದೆ. ತ್ಯಾಜ್ಯ ಸುಡುವಿಕೆಯಿಂದಾಗುವ ಪರಿಣಾಮವನ್ನು ನಾವು ಆ ದಿಕ್ಕಿನತ್ತ ಪ್ರಯಾಣ ಬೆಳಸಿ ಹೇಳಲು ಸಾಧ್ಯ ಎಂದರು.

ಗ್ರಾಮೀಣ ಪಂಜಾಬ್​ಗೆ ತೆರಳಿರುವ ವಾಹನ: ಪಂಜಾಬ್​ ಯುನಿವರ್ಸಿಟಿ ಪರಿಸರ ವಿಭಾಗದ ಮುಖ್ಯಸ್ಥರು ಮಾತನಾಡಿ, ದೆಹಲಿ ಐಐಟಿ ಮತ್ತು ಪಿಜಿಐ ಈ ಮೊಬೈಲ್​ ವ್ಯಾನ್​ ನಡೆಸುವ ಪ್ರಯತ್ನ ಮಾಡಿದ್ದಾರೆ. ಇದರ ಮೂಲಕ ಪಂಜಾಬ್​ ಗ್ರಾಮೀಣ ಪ್ರದೇಶಕ್ಕೆ ಸಂಚರಿಸುತ್ತೇವೆ. ಮಾಲಿನ್ಯದ ಸ್ಥಳೀಯ ಮೂಲಗಳ ಮೇಲೆ ಕೆಲಸ ಮಾಡಲು ಮತ್ತು ಅದರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ. ಇದರೊಂದಿಗೆ ನಾವು ಯಂತ್ರಗಳ ಮೂಲಕ ಗಾಳಿಯ ಗುಣಮಟ್ಟವನ್ನು ಹೇಗೆ ಅಳೆಯುತ್ತೇವೆ ಎಂಬುದನ್ನು ಸುತ್ತಮುತ್ತಲಿನ ಜನರು ಅರ್ಥಮಾಡಿಕೊಳ್ಳಬೇಕು ಎಂಬುದು ನಮ್ಮ ಪ್ರಯತ್ನದ ಭಾಗವಾಗಿದೆ ಎಂದರು.

ಜನರಲ್ಲೂ ಬೇಕಿದೆ ಅರಿವು:ಮಾಲಿನ್ಯದ ಮಟ್ಟ ಕುರಿತು ಅರಿವು ಜನರಿಗೂ ಬೇಕಾಗಿದ್ದು, ಈ ಕುರಿತು ಅರ್ಥೈಸಿಕೊಳ್ಳಬೇಕಿದೆ. ಈ ಪ್ರಯತ್ನದಲ್ಲಿ ಸಂಗ್ರಹಿಸುವ ದತ್ತಾಂಶಗಳನ್ನು ಬಳಿಕ ಅಧ್ಯಯನ ಮಾಡಲಾಗುವುದು. ತ್ಯಾಜ್ಯ ಸಡುವಿಕೆಗೆ ಜನರು ಎಷ್ಟು ದೂರ ಪ್ರಯಾಣ ಮಾಡುತ್ತಿದ್ದಾರೆ. ಯಾವ ಪ್ರದೇಶಕ್ಕೆ ಹೋಗುತ್ತಿದ್ದಾರೆ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸಲಾಗುವುದು. ಜನರನ್ನು ತಲುಪುವ ಜೊತೆಗೆ ಅವರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿರುವುದು ಉತ್ತಮ ಪ್ರಯತ್ನವಾಗಿದೆ ಎಂದರು.

ಇದನ್ನೂ ಓದಿ: Air pollution: ಭಾರತೀಯರ ಜೀವಿತಾವಧಿಯನ್ನು 5 ವರ್ಷ ಕಡಿಮೆ ಮಾಡಿದೆ ವಾಯುಮಾಲಿನ್ಯ; ಅಧ್ಯಯನ

ABOUT THE AUTHOR

...view details