ಕರ್ನಾಟಕ

karnataka

By

Published : Feb 22, 2023, 12:18 PM IST

ETV Bharat / sukhibhava

ಕಾಫಿ, ಚಹಾ ಸೇವನೆ ಮಾಡುವುದರಿಂದ ಸೊಂಟ ಮುರಿತದ ಅಪಾಯ ಕಡಿಮೆ ಮಾಡಬಹುದು.. ಅಧ್ಯಯನ

ಹೊಸ ಅಧ್ಯಯನವೊಂದರ ಪ್ರಕಾರ ಹೆಚ್ಚಿದ ಪ್ರೋಟೀನ್ ಮತ್ತು ಕಾಫಿ ಮತ್ತು ಚಹಾವನ್ನು ನಿಯಮಿತವಾಗಿ ಸೇವಿಸುವುದರಿಂದ ಮಹಿಳೆಯರಲ್ಲಿ ಸೊಂಟದ ಮುರಿತದ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಸಂಶೋಧಕರು ಕಂಡು ಹಿಡಿದಿದ್ದಾರೆ.

research-claims-women-can-reduce-risk-of-suffering-hip-fractures-by-increasing-intake-of-protein
ಕಾಫಿ, ಚಹಾ ಸೇವನೆ ಮಾಡುವುದರಿಂದ ಸೊಂಟ ಮುರಿತದ ಅಪಾಯ ಕಡಿಮೆ ಮಾಡಬಹುದು.. ಅಧ್ಯಯನ

ಲೀಡ್ಸ್( ಇಂಗ್ಲೆಂಡ್​):ಹೆಚ್ಚು ಹೆಚ್ಚುಪ್ರೋಟೀನ್ ಸೇವನೆ ಮಾಡುವುದು ಮತ್ತು ನಿಯಮಿತವಾಗಿ ಚಹಾ ಅಥವಾ ಕಾಫಿ ಕುಡಿಯುವುದು ಮಹಿಳೆಯರಿಗೆ ಸೊಂಟ ಮುರಿತದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೊಸ ಸಂಶೋಧನೆಯೊಂದು ಹೇಳುತ್ತದೆ. ಇಂಗ್ಲೆಂಡ್​​ನ ಲೀಡ್ಸ್ ವಿಶ್ವವಿದ್ಯಾನಿಲಯದ ಆಹಾರ ವಿಜ್ಞಾನಿಗಳು ಮಹಿಳೆಯರಲ್ಲಿ ದಿನಕ್ಕೆ 25 ಗ್ರಾಂ ಪ್ರೋಟೀನ್ ಹೆಚ್ಚಳವು ಸೊಂಟ ಮುರಿತದ ಅಪಾಯವನ್ನು ಸರಾಸರಿ ಶೇ 14ರಷ್ಟು ಕಡಿಮೆ ಮಾಡಲಿದೆ ಎಂದು ಸಂಶೋಧನೆಯಲ್ಲಿ ಕಂಡುಕೊಂಡಿದೆ. ಅಚ್ಚರಿಯ ಟ್ವಿಸ್ಟ್‌ನಲ್ಲಿ ಅವರು ಕುಡಿಯುವ ಪ್ರತಿ ಹೆಚ್ಚುವರಿ ಕಪ್ ಚಹಾ ಅಥವಾ ಕಾಫಿಯು ಇಂತಹ ಅಪಾಯವನ್ನು ಶೇ 4 ರಷ್ಟು ಕಡಿಮೆ ಮಾಡಲಿದೆ ಎಂಬುದನ್ನು ಕಂಡುಕೊಂಡಿದ್ದಾರೆ.

ಕ್ಲಿನಿಕಲ್ ನ್ಯೂಟ್ರಿಷನ್ ಜರ್ನಲ್‌ನಲ್ಲಿ ಬಂದಿರುವ ವರದಿಯ ಪ್ರಕಾರ, ಸಂಶೋಧಕರು ಕಡಿಮೆ ತೂಕ ಹೊಂದಿರುವ ಮಹಿಳೆಯರಿಗೆ ರಕ್ಷಣಾತ್ಮಕ ಪ್ರಯೋಜನಗಳು ಹೆಚ್ಚು ಎಂದು ಹೇಳಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಪ್ರೋಟೀನ್‌ನಲ್ಲಿ ದಿನಕ್ಕೆ 25 ಗ್ರಾಂ ಹೆಚ್ಚಳವು ಅವರ ಅಪಾಯವನ್ನು ಶೇ 45 ರಷ್ಟು ಕಡಿಮೆ ಮಾಡುತ್ತದೆ. ಪ್ರೋಟೀನ್ ಯಾವುದೇ ರೂಪದಲ್ಲಿ ಬರಬಹುದು, ಮಾಂಸ, ಡೈರಿ ಅಥವಾ ಮೊಟ್ಟೆಗಳು, ಬೀನ್ಸ್, ದ್ವಿದಳಂತಹ ಸಸ್ಯ ಆಧಾರಿತ ಆಹಾರ ಸೇವನೆ ಮಾಡುವವರಿಗೆ ಇದು ಹೆಚ್ಚು ಪ್ರಯೋಜನಕಾರಿ. ಮೂರರಿಂದ ನಾಲ್ಕು ಮೊಟ್ಟೆಗಳು ಅಥವಾ ಸಾಲ್ಮನ್ ಮೀನುಗಳು ಸುಮಾರು 25 ಗ್ರಾಂ ಪ್ರೋಟೀನ್ ಅನ್ನು ಒದಗಿಸುತ್ತವೆ. 100 ಗ್ರಾಂ ತೋಫು ಸುಮಾರು 17 ಗ್ರಾಂ ಪ್ರೋಟೀನ್ ನೀಡುತ್ತದೆ. ಸಂಶೋಧಕರು ಶೇ 3ಕ್ಕಿಂತ ಹೆಚ್ಚು ಮಹಿಳೆಯರು ಸೊಂಟ ಮುರಿತದ ಅನುಭವ ಹೊಂದಿರುವವರನ್ನು ಅಧ್ಯಯನಕ್ಕೆ ಒಳಪಡಿಸಿದ್ದಾರೆ.

ವೀಕ್ಷಣಾ ಅಧ್ಯಯನ: ಆಹಾರ, ಪೋಷಕಾಂಶಗಳು ಮತ್ತು ಸೊಂಟ ಮುರಿತದ ಅಪಾಯ ಹಾಗೂ ಮಧ್ಯವಯಸ್ಕ ಮಹಿಳೆಯರ ನಿರೀಕ್ಷಿತ ಅಧ್ಯಯನ ಎಂಬ ವಿಷಯದ ಕುರಿತಂತೆ ಸಂಶೋಧಕರು ಸುಮಾರು 26,000 ಕ್ಕಿಂತ ಹೆಚ್ಚು ಮಹಿಳೆಯರನ್ನು ವೀಕ್ಷಣೆಗೆ ಒಳಪಡಿಸಿ ವಿಶ್ಲೇಷಣೆ ಮಾಡಿದ್ದಾರೆ. ಈ ಆಧಾರದ ಮೇಲೆ ಆಹಾರ ಮತ್ತು ಆರೋಗ್ಯದ ಅಂಶಗಳ ನಡುವಿನ ಸಂಬಂಧಗಳನ್ನು ಗುರುತಿಸಿದ್ದಾರೆ. ಈ ಅಧ್ಯಯನದ ಮೇಲೇಯೇ ಈ ಬಗ್ಗೆ ಗುರುತಿಸಲು ಸಾಧ್ಯವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ಆದರೆ ಆಹಾರ ಮತ್ತು ಆರೋಗ್ಯದ ನಡುವಣ ಸಂಬಂಧಗಖ ಬಗ್ಗೆ ನೇರ ಕಾರಣ ಮತ್ತು ಪರಿಣಾಮವನ್ನು ಪ್ರತ್ಯೇಕಿಸಲು ಸಾಧ್ಯವಾಗಿಲ್ಲ ಎಂದೂ ಇದೇ ವೇಳೆ ಸಂಶೋಧಕರು ಹೇಳಿದ್ದಾರೆ.

ಅಧ್ಯಯನದ ನೇತೃತ್ವ ವಹಿಸಿರುವ ಲೀಡ್ಸ್‌ನಲ್ಲಿರುವ ಫುಡ್ ಸೈನ್ಸ್ ಅಂಡ್ ನ್ಯೂಟ್ರಿಷನ್ ಸ್ಕೂಲ್‌ನ ಡಾಕ್ಟರೇಟ್ ಸಂಶೋಧಕ ಜೇಮ್ಸ್ ವೆಬ್‌ಸ್ಟರ್ ಪ್ರಕಾರ, "ಜಗತ್ತಿನಾದ್ಯಂತ, ಸೊಂಟ ಮುರಿತದಿಂದ ಸಂಕಷ್ಟಕ್ಕೆ ಒಳಗಾಗುವ ವ್ಯಕ್ತಿಗಳು ಮಾಡುವ ವೆಚ್ಚಗಳು ಅಗಾಧವಾಗಿವೆ. ಸೊಂಟದ ಮುರಿತವು ಸಾಮಾನ್ಯವಾಗಿ ಇತರ ದೀರ್ಘಕಾಲದ ಅನಾರೋಗ್ಯಕ್ಕೆ ಕಾರಣವಾಗಬಹುದು. ನೋವು ಹಾಗೂ ಮರಣಕ್ಕೂ ಒಳಗಾಗಬಹುದು. ಇಂಗ್ಲೆಂಡ್​​​​ನಲ್ಲಿ ಸೊಂಟ ಮುರಿತದ ಪ್ರಕರಣಗಳಲ್ಲಿ ಜನ ಸುಮಾರು £2 ರಿಂದ £3 ಶತಕೋಟಿ ಫೌಂಡ್​ ಹಣವನ್ನು ವೆಚ್ಚ ಮಾಡುತ್ತಾರೆ.

ಆರೋಗ್ಯಕರ ಮೂಳೆಗಳು ಮತ್ತು ಸ್ನಾಯುಗಳನ್ನು ಕಾಪಾಡಿಕೊಳ್ಳುವ ಮೂಲಕ ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಆಹಾರ ಕ್ರಮವು ಅತ್ಯಂತ ಸುರಕ್ಷಿತ ಮಾರ್ಗವಾಗಿದೆ. ಈ ಅಧ್ಯಯನವು ಆಹಾರ ಮತ್ತು ಪೋಷಕಾಂಶಗಳ ಸೇವನೆ ಮತ್ತು ಸೊಂಟ ಮುರಿತದ ಅಪಾಯದ ನಡುವಿನ ಸಂಬಂಧಗಳ ಬಗ್ಗೆ ಹೆಚ್ಚಿನ ಅಧ್ಯಯನಕ್ಕೆ ಒಳಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ನಿಖರವಾದ ಕಾರಣ ಮತ್ತು ಪರಿಹಾರವನ್ನು ಕಂಡು ಕೊಳ್ಳಲಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಪ್ರೋಟೀನ್​ ಮತ್ತು ಚಹಾ- ಕಾಫಿ ಸೇವನೆಯಿಂದ ಲಾಭ:ಹೆಚ್ಚಿನ ಪ್ರೋಟೀನ್, ಚಹಾ ಮತ್ತು ಕಾಫಿ ಸೇವನೆ ಹಾಗೂ ಕಡಿಮೆ ಅಪಾಯದ ನಡುವಿನ ಸಂಬಂಧಗಳನ್ನು ಪುರಾವೆಗಳೊಂದಿಗೆ ಕಂಡು ಕೊಳ್ಳಲಾಗಿದೆ. ಅಷ್ಟೇ ಅಲ್ಲ ಮಹಿಳೆಯರಲ್ಲಿ ಸೊಂಟ ಮುರಿತದ ಅಪಾಯವನ್ನು ಇವು ಕಡಿಮೆ ಮಾಡಲು ಸಹಾಯ ಮಾಡುವ ಸಾಧನಗಳಾಗಿವೆ. ಪ್ರೋಟೀನ್​​ಗಳು ಜೀವನದ ಮೂಲ ಬಿಲ್ಡಿಂಗ್ ಬ್ಲಾಕ್ಸ್ ಆಗಿದ್ದು, ಜೀವಕೋಶಗಳು, ಅಂಗಾಂಶಗಳು ಮತ್ತು ಸ್ನಾಯುಗಳು ಸರಿಯಾಗಿ ಕಾರ್ಯನಿರ್ವಹಿಸಲು ಮತ್ತು ಮೂಳೆಯ ಆರೋಗ್ಯಕ್ಕೆ ಕೊಡುಗೆ ನೀಡಲು ಅಗತ್ಯವಾಗಿರುತ್ತದೆ ಎಂದು ಸಂಶೋಧಕರು ಪತ್ತೆ ಹಚ್ಚಿದ್ದಾರೆ.

ಇಂಗ್ಲೆಂಡ್​ನಲ್ಲಿ ಶಿಫಾರಸು ಮಾಡಲಾದ ಪ್ರೋಟೀನ್ ಸೇವನೆಯು ದಿನಕ್ಕೆ ಒಂದು ಕಿಲೋಗ್ರಾಂ ದೇಹದ ತೂಕಕ್ಕೆ 0.8g ಆಗಿದೆ. ಕೆಲವು ಪೌಷ್ಟಿಕಾಂಶಗಳು ತುಂಬಾ ಕಡಿಮೆ ಇದೆ ಎಂದು ತಜ್ಞರು ನಂಬುತ್ತಾರೆ. ಅಧ್ಯಯನವು ಬಹಿರಂಗಪಡಿಸಿದಂತೆ, ಹೆಚ್ಚಿನ ಪ್ರೋಟೀನ್ ಸೇವನೆಯನ್ನು ಹೊಂದಿರುವ ಜನರು ಸೊಂಟದ ಮುರಿತದ ಅಪಾಯವನ್ನು ಶೀಘ್ರವೇ ಪರಿಹರಿಸಿಕೊಂಡಿದ್ದಾರೆ ಮತ್ತು ಕಡಿಮೆ ಮಾಡಿಕೊಂಡಿದ್ದಾರೆ.

ಆದಾಗ್ಯೂ, ಅತಿ ಹೆಚ್ಚು ಪ್ರೋಟೀನ್‌ನ ಸೇವನೆಯು - 2 ರಿಂದ 3 ಗ್ರಾಂ ಪ್ರೋಟೀನ್ದೇ ದೇಹದ ತೂಕ ಹಾಗೂ ಹೆಚ್ಚಿನ ಸೇವನೆಯು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು. ಈ ಹೆಚ್ಚಿನ ಪ್ರೋಟೀನ್ ಸೇವನೆಯ ಮಟ್ಟವನ್ನು ಅಧ್ಯಯನ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ಸೇವನೆ ಇತಿ-ಮಿತಿಯಲ್ಲಿ ಇರಬೇಕಾದದ್ದು ಅಗತ್ಯ.

ಲೀಡ್ಸ್‌ನಲ್ಲಿ ನ್ಯೂಟ್ರಿಷನಲ್ ಎಪಿಡೆಮಿಯಾಲಜಿ ಗ್ರೂಪ್ ಅನ್ನು ಮುನ್ನಡೆಸುವ ಮತ್ತು ಸಂಶೋಧನೆಯನ್ನು ಮೇಲ್ವಿಚಾರಣೆ ಮಾಡುವ ಪ್ರೊಫೆಸರ್ ಜಾನೆಟ್ ಕೇಡ್ ಹೇಳುವ ಪ್ರಕಾರ, ಇಂಗ್ಲೆಂಡ್​ನಲ್ಲಿ ಹೆಚ್ಚಿನ ಜನರು ಸಾಕಷ್ಟು ಪ್ರಮಾಣದ ಪ್ರೋಟೀನ್ ಅನ್ನು ತಿನ್ನುತ್ತಾರೆ. ಆದಾಗ್ಯೂ, ಸಸ್ಯಾಹಾರಿಗಳು ಅಥವಾ ಸಸ್ಯಾಹಾರಿಗಳಂತಹ ಕೆಲವು ಗುಂಪುಗಳು ತಮ್ಮ ಪ್ರೋಟೀನ್ ಸೇವನೆಯನ್ನು ಪರಿಶೀಲಿಸಬೇಕಾಗಿದೆ. ಆದರೆ ಸಸ್ಯಾಹಾರ ಉತ್ತಮ ಆರೋಗ್ಯಕ್ಕೆ ಹೆಚ್ಚಿನ ನೆರವು ನೀಡುತ್ತದೆ ಎಂದು ಅವರು ಹೇಳಿದ್ದಾರೆ.

ಕಡಿಮೆ ತೂಕದ ಮಹಿಳೆಯರಲ್ಲಿ ಸೊಂಟ ಮುರಿತದ ಅಪಾಯ ಕಡಿಮೆ:ಕಡಿಮೆ ತೂಕ ಹೊಂದಿರುವ ಮಹಿಳೆಯರು, ಮೂಳೆ ಖನಿಜ ಸಾಂದ್ರತೆ ಮತ್ತು ಸ್ನಾಯುವಿನ ದ್ರವ್ಯರಾಶಿಯನ್ನು ಕಡಿಮೆ ಮಾಡುವ ಸಾಧ್ಯತೆಯಿದೆ. ಹಲವಾರು ಆಹಾರಗಳು ಮತ್ತು ಪೋಷಕಾಂಶಗಳ ಸೇವನೆಯನ್ನು ಅವರು ಹೆಚ್ಚಿಸಿಕೊಳ್ಳಬಹುದು. ವಿಶೇಷವಾಗಿ ಪ್ರೋಟೀನ್, ಮೂಳೆ ಮತ್ತು ಸ್ನಾಯುವಿನ ಆರೋಗ್ಯವನ್ನು ಸ್ಥಾಪಿಸಲು ಅಥವಾ ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ. ಈ ಮೂಲಕ ಆರೋಗ್ಯಕರ ಅಥವಾ ಅಧಿಕ ತೂಕದ ಮಹಿಳೆಯರಿಗಿಂತ ಕಡಿಮೆ ತೂಕದ ಮಹಿಳೆಯರಲ್ಲಿ ಸೊಂಟ ಮುರಿತದ ಅಪಾಯ ಕಡಿಮೆ ಇರುತ್ತದೆ.

ಸಮಂಜಸ ಅಧ್ಯಯನ: ಅಧ್ಯಯನದಲ್ಲಿ ಬಳಸಲಾದ ಅಂಕಿ- ಅಂಶವು ಯುನೈಟೆಡ್​​ ಕಿಂಗ್​ಡಂ ಮಹಿಳೆಯರನ್ನು ಅತ್ಯಂತ ಸಮಂಜಸವಾಗಿ ಅಧ್ಯಯನಕ್ಕೆ ಒಳಪಡಿಸಲಾಗಿದ್ದು, ಇದು 1995 ಮತ್ತು 1998 ರ ನಡುವಣ ಮಹಿಳೆಯರನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ನಡೆಸಲಾಗಿದೆ. ಅಧ್ಯಯನದ ಸಮಯದಲ್ಲಿ ಈ ಮಹಿಳೆಯರು 35 ರಿಂದ 69 ವರ್ಷ ವಯಸ್ಸಿನವರಾಗಿದ್ದರು.

ಇದನ್ನು ಓದಿ:ತೀವ್ರ ಮೊಣಕಾಲು ನೋವಾ? ಶಸ್ತ್ರಚಿಕಿತ್ಸೆ ಮತ್ತು ಅದರ ಹೊರತಾದ ಚಿಕಿತ್ಸೆಗಳ ಬಗ್ಗೆ ಇಲ್ಲಿದೆ ಮಾಹಿತಿ

ABOUT THE AUTHOR

...view details