ಕರ್ನಾಟಕ

karnataka

ETV Bharat / sukhibhava

ಡೌನ್​ ಸಿಂಡ್ರೋಮ್​ ಕಾಯಿಲೆ, ಅರಿವಿನ ಕಾರ್ಯಾಚರಣೆ ಹೆಚ್ಚಿಸುವಲ್ಲಿ ವ್ಯಾಯಾಮ ಸಹಾಯಕ; ಅಧ್ಯಯನ

ನಡಿಗೆಯಂತಹ ಸಣ್ಣ ವ್ಯಾಯಾಮಗಳನ್ನು ಎಂಟು ವಾರಗಳ ಕಾಲ ರೂಢಿಸಿಕೊಂಡಾಗ ಸುಧಾರಿತ ಪ್ರಕ್ರಿಯೆ ಕಾಣಬಹುದಾಗಿದೆ.

regular exercise can help improve the cognitive in Down syndrome  people
regular exercise can help improve the cognitive in Down syndrome people

By ETV Bharat Karnataka Team

Published : Dec 13, 2023, 10:48 AM IST

ಲಂಡನ್​: ಡೌನ್​ ಸಿಂಡ್ರೋಮ್​ ಹೊಂದಿರುವವರಲ್ಲಿ ಅರಿವಿನ ಸುಧಾರಣೆ ಮಾಡುವಲ್ಲಿ ಹಗುರ, ನಿಯಮಿತ ವ್ಯಾಯಾಮವು ಸಹಾಯ ಮಾಡುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.

ಏನಿದು ಡೌನ್​ ಸಿಂಡ್ರೋಮ್​: ಡೌನ್​ ಸಿಂಡ್ರೋಮ್​ ಎಂಬುದು ಅನುವಂಶಿಕ ಕಾಯಿಲೆಯಾಗಿದೆ. ಸಾವಿರದಲ್ಲಿ ಒಂದು ಮಗುವು ಈ ರೀತಿಯ ಸಮಸ್ಯೆಯಿಂದ ಜನಿಸುತ್ತದೆ. ಈ ಸಮಸ್ಯೆ ಹೊಂದಿರುವವರಲ್ಲಿ ಬೆಳವಣಿಗೆ ಕುಂಠಿತವಾಗುವ ಜೊತೆಗೆ ಸೌಮ್ಯದಿಂದ ಸುಧಾರಿತದ ಬೌದ್ಧಿಕ ಅಂಗವೈಕಲ್ಯತೆ ಮತ್ತು ಆಂಗಿಕ ದೈಹಿಕ ಲಕ್ಷಣಗಳ ಅಸ್ವಸ್ಥತೆ ಉಂಟಾಗುತ್ತದೆ.

ಈ ಅಧ್ಯಯನವನ್ನು ಇಂಟರ್ನ್ಯಾಷನಲ್​ ಜರ್ನಲ್​ ಆಫ್​ ಎನ್ವರಮೆಂಟಲ್​ ರಿಸರ್ಚ್​ ಅಂಡ್​ ಪಬ್ಲಿಕ್​ ಹೆಲ್ತ್​ನಲ್ಲಿ ಪ್ರಕಟಿಸಲಾಗಿದೆ. ಇದೇ ಮೊದಲ ಬಾರಿಗೆ ಈ ಅಧ್ಯಯನ ಮೂಲಕ ಡೌನ್ ಸಿಂಡ್ರೋಮ್ ಹೊಂದಿರುವ ಜನರ ಮೇಲೆ ದೈಹಿಕ ವ್ಯಾಯಾಮ ಮತ್ತು ಅರಿವಿನ ವ್ಯಾಯಾಮದ ಪರಿಣಾಮ ಕುರಿತು ಪ್ರಯೋಗ ನಡೆಸಲಾಗಿದೆ.

ನಡಿಗೆಯಂತಹ ಸಣ್ಣ ವ್ಯಾಯಾಮಗಳನ್ನು ಎಂಟು ವಾರಗಳ ಕಾಲ ರೂಢಿಸಿಕೊಂಡಾಗ ಸುಧಾರಣೆ ಕಾಣಬಹುದಾಗಿದೆ. ಅರಿವಿನ ಬೆಳವಣಿಗೆಯಲ್ಲಿ ವ್ಯಾಯಾಮವು ಉತ್ತಮ ಪರಿಣಾಮ ಬೀರಿದ್ದು, ಚಿಂತಿಸುವ ಶಕ್ತಿಯಲ್ಲಿ ಪ್ರಗತಿಯನ್ನು ಕಾಣಬಹುದಾಗಿದೆ. ಡೌನ್ ಸಿಂಡ್ರೋಮ್ ಹೊಂದಿರುವವರು ಪ್ರತಿದಿನ ದೈಹಿಕ ಚಟುವಟಿಕೆಯನ್ನು ಪೂರೈಸುವುದಿಲ್ಲ ಎಂಬುದಕ್ಕೆ ಪುರಾವೆಗಳಿವೆ.

ನಡಿಗೆ ಮತ್ತು ವ್ಯಾಯಾಮಗಳು ಪ್ರಮುಖವಾಗಿವೆ. ಆದರೆ, ಡೌನ್​ ಸಿಂಡ್ರೋಮ್​ ಹೊಂದಿರುವವರಲ್ಲಿ ಈ ರೀತಿ ನೈಸರ್ಗಿಕ ಚಟುವಟಿಕೆಯನ್ನು ಅವರು ಹೊಂದಿರುವುದಿಲ್ಲ. ಅರಿವಿನ ಮತ್ತು ಕಾರ್ಯ ಚಟುವಟಿಕೆ ಅಭಿವೃದ್ಧಿಪಡಿಸಲು ವಾಕಿಂಗ್ ಪ್ರಬಲ ಸಾಧನವಾಗಿದೆ ಎಂಬುದನ್ನು ಈ ಅಧ್ಯಯನವು ತೋರಿಸುತ್ತದೆ.

ಬಹುತೇಕರಿಗೆ ನಡಿಗೆ ಎಂಬುದು ಉಪಪ್ರಜ್ಞೆಯ ಚಟುವಟಿಕೆಯಾಗಿದೆ. ಆದರೆ, ಇದಕ್ಕಿಂತ ಹೆಚ್ಚಿನ ಪ್ರಯೋಜನವನ್ನು ಇದು ನೀಡುತ್ತದೆ. ಇದು ಮಾಹಿತಿ ಪ್ರಕ್ರಿಯೆ ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆಯಲ್ಲಿ ಪ್ರಮುಖ ಪಾತ್ರ. ಡೌನ್ ಸಿಂಡ್ರೋಮ್‌ ಸಮಸ್ಯೆ ಹೊಂದಿದವರು ಈ ಚಟುವಟಿಕೆಯಲ್ಲಿ ಭಾಗಿಯಾಗುವುದರಿಂದ ಅವರಲ್ಲಿ ಅರಿವಿನ ಬೆಳವಣಿಗೆ ಮತ್ತು ಮಾಹಿತಿ ಸಂಸ್ಕರಣೆ, ಜಾಗರೂಕತೆ ಮತ್ತು ಗಮನವನ್ನು ಕಾಣಬಹುದು ಎಂದು ಅಧ್ಯಯನ ವಿವರಿಸಿದೆ.

10 ದೇಶದ 83 ಜನ ವಯಸ್ಕರ ಮೇಲೆ ಈ ಅಧ್ಯಯನ ನಡೆಸಲಾಗಿದ್ದು, ಇದರಲ್ಲಿ 40 ಮಂದಿ ಮಹಿಳೆಯರಾದರೆ, 43 ಮಂದಿ ಪುರುಷರಾಗಿದ್ದಾರೆ. ಇವರೆಲ್ಲಾ 18 ರಿಂದ 48 ವರ್ಷದ ವಯೋಮಾನದವರಾಗಿದ್ದಾರೆ. 8 ವಾರಗಳ ಕಾಲ ಈ ಅಧ್ಯಯನ ನಡೆಸಲಾಗಿದೆ. ಈ ವೇಳೆ ಅವರನ್ನು ಪ್ರತಿನಿತ್ಯ 6 ನಿಮಿಷದ ನಡಿಗೆಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರಲ್ಲಿ ಗಮನಾರ್ಹ ಬದಲಾವಣೆ ಕಂಡಿದೆ ಎಂದಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ದಂಪತಿಗಳಲ್ಲಿ ಒಬ್ಬರಿಗೆ ಬಿಪಿ ಇದ್ದರೂ ಮತ್ತೊಬ್ಬರು ವಹಿಸಬೇಕು ಎಚ್ಚರಿಕೆ; ಕಾರಣ ಇದು

ABOUT THE AUTHOR

...view details