ಲಂಡನ್: ಪ್ರಸ್ತುತ ಒತ್ತಡ ಅನ್ನುವುದು ಬಹುತೇಕರನ್ನು ಕಾಡುತ್ತಿರುವ ಸಮಸ್ಯೆಗಳಲ್ಲೊಂದು. ಶಾಲಾ ಮಕ್ಕಳಲ್ಲಿ ಉಂಟಾಗುವ ಒತ್ತಡವನ್ನು ನಿವಾರಿಸುವಲ್ಲಿ ಪ್ರತಿನಿತ್ಯದ ದೈಹಿಕ ವ್ಯಾಯಾಮಗಳು ಸಹಕಾರಿಯಾಗಿದ್ದು, ಇದರಿಂದ ಅವರು ಉತ್ತಮವಾಗಿ ಚೇತರಿಸಿಕೊಳ್ಳಬಹುದು ಎಂದು ಅಧ್ಯಯನದಿಂದ ತಿಳಿದುಬಂದಿದೆ.
ಜರ್ನಲ್ ಆಫ್ ಸೈನ್ಸ್ ಆ್ಯಂಡ್ ಮೆಡಿಸಿನ್ ಇನ್ ಸ್ಪೋಟ್ಸ್ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸ್ಸಿನಂತೆ ದಿನದಲ್ಲಿ ಒಂದು ಗಂಟೆಗಿಂತ ಹೆಚ್ಚು ವ್ಯಾಯಾಮ ಮಾಡಿದ ಭಾಗಿದಾರರಲ್ಲಿ ಒತ್ತಡದ ಹಾರ್ಮೋನ್ ಕಾರ್ಟಿಸೋಲ ಕಡಿಮೆ ಉತ್ಪಾದನೆ ಆಗಿದೆ. ಕಡಿಮೆ ವ್ಯಾಯಾಮ ಚಟುವಟಿಕೆಯಲ್ಲಿ ಭಾಗಿಯಾದ ಮಕ್ಕಳಲ್ಲಿ ಇದರ ಪ್ರಮಾಣ ಹೆಚ್ಚಿದೆ.
ನಿಯಮಿತ ಕ್ರಿಯಾಶೀಲದಿಂದ ಇರುವ ಮಕ್ಕಳು ಮಾನೋವೈಜ್ಞಾನಿಕ ಒತ್ತಡವನ್ನು ಸಾಮಾನ್ಯಕ್ಕಿಂತ ಕಡಿಮೆ ಮಾಡಿದ್ದಾರೆ ಎಂದು ಸ್ವಿಟ್ಜರ್ಲೆಂಡ್ನ ಯುನಿವರ್ಸಿಟಿ ಆಫ್ ಬಸೆಲ್ನ ಪ್ರಮುಖ ಅಧ್ಯಯನಕಾರ ಮನ್ಯೂಯಲ್ ಹಂಕೆ ತಿಳಿಸಿದ್ದಾರೆ.
ಮಕ್ಕಳು ನಿಯಮಿತವಾಗಿ ಓಡು, ಈಜು ಮತ್ತು ಏರುವಿಕೆಯಂತಹ ಚಟುವಟಿಕೆಗಳಿಂದ ಮೆದುಳಿನ ಕಲಿಕೆ ಸಕಾರಾತ್ಮಕವಾಗಿ ಕಾರ್ಟಿಸೋಲ್ ಏರಿಕೆಯೊಂದಿಗೆ ಸಂಬಂಧ ತೋರಿಸಿದೆ. ದೇಹವೂ ಅರಿವಿನ ಸಹಯೋಗವೂ ಉತ್ತಮವಾಗಿ ಪ್ರತಿಕ್ರಿಯಿಸಿದೆ. ಈ ಸಕಾರಾತ್ಮಕ ಭಾವನೆಯು ಪರೀಕ್ಷೆ ಸಮಯದಲ್ಲಿ ಏಕಾಗ್ರತೆಯ ಕಾರ್ಟಿಸೋಲಾ ಏರಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಸೆಬಸ್ಟಿಯನ್ ಲುಡೆಗ ತಿಳಿಸಿದ್ದಾರೆ.