ನವದೆಹಲಿ: ಇತ್ತೀಚಿನ ಅಧ್ಯಯನವೊಂದು ವಾಯು ಮಾಲಿನ್ಯವು ಡೆಮನ್ಶಿಯಾ ಅಪಾಯ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಸಾಕ್ಷ್ಯಸಮೇತ ತೋರಿಸಿತು. ವಾಯುಮಾಲಿನ್ಯವನ್ನು ತಗ್ಗಿಸಲು ಕಟ್ಟುನಿಟ್ಟಿನ ಕ್ರಮಗಳ ಅವಶ್ಯಕತೆ ಇದೆ ಎಂದು ವೈದ್ಯರು ಕರೆ ನೀಡಿದ್ದಾರೆ. ಡೆಮೆನ್ಶಿಯಾವು ನೆನಪಿನ ಸಾಮರ್ಥ್ಯ, ಆಲೋಚನೆ ಅಥವಾ ನಿರ್ಧಾರ ತೆಗೆದುಕೊಳ್ಳುವಿಕೆ ಸೇರಿದಂತೆ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ.
ಜಾಮಾ ಇಂಟರ್ನ್ಯಾಷನಲ್ ಮೆಡಿಸಿನ್ನಲ್ಲಿ ಪ್ರಕಟವಾದ ಅಧ್ಯಯನ ವರದಿಯಲ್ಲಿ, ಅಧಿಕ ಮಾಲಿನ್ಯ ಪ್ರದೇಶದಲ್ಲಿ ವಾಸಿಸುವ ಜನರಲ್ಲಿ ಡೆಮನ್ಶಿಯಾ ಅಭಿವೃದ್ಧಿಯಾಗುತ್ತದೆ ಎಂದು ತಿಳಿಸಲಾಗಿದೆ. ಅಧ್ಯಯನವು 23,857 ಮಂದಿಯ ಸಮೀಕ್ಷೆ ನಡೆಸಿ ದತ್ತಾಂಶ ನೀಡಿದೆ. ಈ ವೇಳೆ ಅಧಿಕ ಮಾಲಿನ್ಯ ಕಣಗಳಲ್ಲಿ ವಾಸಿಸುವ ಜನರಲ್ಲಿ ಶೇ 15ರಷ್ಟು ಡೆಮನ್ಶಿಯಾ ಅಭಿವೃದ್ಧಿಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ಈ ಹಿಂದಿನ ಅಧ್ಯಯನವು ಕೆಟ್ಟ ವಾಯುಗುಣಮಟ್ಟಗಳು ಡೆಮನ್ಶಿಯಾ ಸೇರಿದಂತೆ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ ಎಂದು ತೋರಿಸಿದೆ. ಹೊಸ ಅಧ್ಯಯನವು ವಾಯು ಮಾಲಿನ್ಯದ ನಿರ್ದಿಷ್ಟ ಕಾರಣಗಳು ಹೇಗೆ ಡೆಮನ್ಶಿಯಾ ಅಭಿವೃದ್ಧಿಯಲ್ಲಿ ಬಲವಾದ ಸಂಬಂಧ ಹೊಂದಿದೆ ಎಂದು ವಿವರಿಸಿದೆೆ. ಈ ಅಧ್ಯಯನ ವರದಿಯು ಭಾರತ ವಾಯುಗುಣಮಟ್ಟದಲ್ಲಿ ನಿರಂತರವಾಗಿ ಸ್ಥಾನ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹೊರಬಂದಿದೆ. ಐದನೇ ವಾರ್ಷಿಕ ವಿಶ್ವ ವಾಯು ಗುಣಮಟ್ಟ ವರದಿ 2022ರ ಪ್ರಕಾರ, ಭಾರತ ವಿಶ್ವದ 8ನೇ ಅತ್ಯಂತ ವಾಯು ಮಾಲಿನ್ಯ ದೇಶ. ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿರುವ ವಾಯುಗುಣಮಟ್ಟಕ್ಕಿಂತ 10 ಬಾರಿ ಹೆಚ್ಚು ಮಾಲಿನ್ಯಕ್ಕೆ ದೇಶ ಒಳಗಾಗಿದೆ.
ದೆಹಲಿಯಲ್ಲಿ ಕಳಪೆ ವಾಯು ಗುಣಮಟ್ಟ: ದೆಹಲಿ ಅತಿ ಹೆಚ್ಚು ಮಾಲಿನ್ಯಕ್ಕೊಳಗಾದ ನಾಲ್ಕನೇ ನಗರ. ಜಾಗತಿಕವಾಗಿ ಹೆಚ್ಚು ಮಾಲಿನ್ಯಗೊಂಡಿರುವ ಎರಡನೇ ರಾಜಧಾನಿಯೂ ಹೌದು. ಭಾರತದಲ್ಲಿ ಗಾಳಿಯಲ್ಲಿನ ಕಣಗಳ ಹೆಚ್ಚಿನ ಸಾಂದ್ರತೆಯು ಸಾಕಷ್ಟು ಸಮಸ್ಯಾತ್ಮಕವಾಗಿದೆ. ಸಣ್ಣ ಮಾಲಿನ್ಯದ ಕಣಗಳು ಮೂಗಿನ ಮೂಲಕ ಮಿದುಳು ತಲುಪಿ, ನರದ ಕೋಶಗಳ ಸಾಯುವಿಕೆಗೆ ಕಾರಣವಾಗುತ್ತದೆ. ಇದರೊಂದಿಗೆ ಡೆಮೆನ್ಶಿಯಾ ಸಂಬಂಧ ಹೊಂದಿದೆ, ಮಾಲಿನ್ಯದಲ್ಲಿನ ಕೆಲವು ಸುಧಾರಿತ ಊರಿಯುತದ ಪ್ರೊಟೀನ್ಗಳು ಮಿದುಳಿನ ಮೇಲೆ ಪರಿಣಾಮ ಬೀರಬಹುದು ಎಂದು ಗುರುಗಾಂವ್ ವೈದ್ಯ ಡಾ.ಪ್ರವೀಣ್ ಗುಪ್ತಾ ತಿಳಿಸಿದರು.