ನವದೆಹಲಿ:ಇಂದು ತಂತ್ರಜ್ಞಾನವು ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಇದರ ಮೂಲಕ ನಾವು ಪ್ರಪಂಚದಾದ್ಯಂತ ಇರುವ ಜನರನ್ನು ಸಂಪರ್ಕಿಸಬಹುದಾಗಿದೆ. ಅಲ್ಲದೇ ನಮಗೆ ಬೇಕಾದವರ ಬಗ್ಗೆ ನಮ್ಮ ಬೆರಳ ತುದಿಯಲ್ಲೇ ಮಾಹಿತಿ ದೊರೆಯಲಿದೆ. ಮರುಸಂಪರ್ಕಿಸುವ ಪರಿಕಲ್ಪನೆಯು ಅನಾವಶ್ಯಕ ಮತ್ತು ಅತ್ಯಲ್ಪ ಎಂದು ತೋರುತ್ತದೆ. ಆದರೆ, ವಾಸ್ತವದಲ್ಲಿ, ನಾವು ನಮ್ಮವರಿಂದ ದೂರವಾಗುತ್ತಿದ್ದೇವೆ. ನಾವು ನಮ್ಮವರಿಂದ ಎಷ್ಟು ದೂರ ಇರುತ್ತೇವೋ, ಅಷ್ಟೇ ಅವರ ಜೊತೆ ಇರುವಾಗ ನಾವು ಅನಾನುಕೂಲತೆಯನ್ನು ಅನುಭವಿಸುತ್ತೇವೆ.
ತುಂಬಾ ಹಳೆಯ ಸ್ನೇಹಿತರನ್ನು ಬಹಳ ದಿನಗಳ ನಂತರ ಭೇಟಿಯಾಗುವುದರಿಂದ, ನಾವು ಅವರ ಜೊತೆಗಿನ ಹಳೆಯ ನೆನಪುಗಳನ್ನು ಮೆಲುಕು ಹಾಕಬಹುದಾಗಿದೆ. ಆದರೆ, ಅವರನ್ನು ಭೇಟಿಯಾಗುವುದು ನಮಗೆ ದೊಡ್ಡ ಕೆಲಸದಂತೆ ಕಾಣಸಬಹುದು. ಈ ಕೆಳಗಿನ ಕೆಲವು ಸಲಹೆಗಳನ್ನು ಅನುಸರಿಸುವ ಮೂಲಕ ನೀವು ಇದನ್ನು ಸುಲಭವಾಗಿಸಿಕೊಳ್ಳಬಹುದಾಗಿದೆ.
ಭೇಟಿಗೆ ನೀವೆ ಮೊದಲ ಹೆಜ್ಜೆ ಇಡಿ: ತಂತ್ರಜ್ಞಾನವು ಎಷ್ಟು ಒಳ್ಳೆಯದೋ, ಅಷ್ಟೇ ಕೆಟ್ಟದು ಕೂಡ ಹೌದು. ನೀವು ಇದನ್ನು ಒಳ್ಳೆ ಕೆಲಸಕ್ಕೆ ಉಪಯೋಗಿಸಿ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಇದನ್ನು ಬಳಸಿಕೊಳ್ಳಿ. ನೀವು ಹಳೆಯ ಸ್ನೇಹಿತರನ್ನು ಭೇಟಿಯಾಗಲು ಬಯಸಿದರೆ, ಹಿಂಜರಿಕೆಯಿಲ್ಲದೆ ಮುಂದುವರಿಯಿರಿ. ಅಲ್ಲದೇ ಮೊದಲ ಸಂದೇಶವನ್ನು ನೀವೆ ಕಳುಹಿಸಿ. ನೀವು ಈ ರೀತಿ ಮೆಸೇಜ್ ಕಳುಹಿಸುವುದರಿಂದ ನಿಮ್ಮ ಸ್ನೇಹಿತರು, ಈತ ಅಥವಾ ಈಕೆ ನನ್ನ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಕೊಳ್ಳುತ್ತಾರೆ. ಅಲ್ಲದೇ ನಿಮ್ಮನ್ನು ಭೇಟಿಯಾಗುವಂತೆ ಯಾವುದೇ ಒತ್ತಡವನ್ನು ಹಾಕಬೇಡಿ. ಸಣ್ಣ ಮಾತುಗಳು ಹಿಂದಿನ ಸಂಬಂಧವನ್ನು ಪುನರುಜ್ಜೀವನಗೊಳಿಸಲು ನಿಮಗೆ ಸಹಾಯ ಮಾಡುತ್ತದೆ ಎಂಬುದನ್ನು ನೆನಪಿಡಿ.