ಹೈದರಾಬಾದ್:ಅನೇಕ ಜನರು ಪಾರ್ಶ್ವವಾಯು ಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ. ಇಲ್ಲವೇ ಸಾಮಾನ್ಯವಾಗಿ ಪಾರ್ಶ್ವವಾಯು ರೋಗಲಕ್ಷಣಗಳನ್ನು ತಪ್ಪಾಗಿ ಗ್ರಹಿಸುತ್ತಾರೆ. ಇದು ಸಮಸ್ಯೆ ಮತ್ತಷ್ಟು ಹದಗೆಡಿಸಲು ಕಾರಣವಾಗುತ್ತದೆ. ಆದ್ದರಿಂದ ದೇಹವು ನೀಡುವ ಸಂಕೇತಗಳನ್ನು ಅರ್ಥಮಾಡಿಕೊಳ್ಳಬೇಕು. ಅಷ್ಟೇ ಅಲ್ಲ ಅಂತಹ ಲಕ್ಷಣಗಳು ಕಂಡು ಬಂದಲ್ಲಿ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ.
ಪಾರ್ಶ್ವವಾಯುನ ಲಕ್ಷಣಗಳೇನು?
* ದೇಹದ ಒಂದು ಭಾಗದಲ್ಲಿ ದುರ್ಬಲ ಭಾವನೆ ಆಗಾಗ ಕಾಣಿಸಿಕೊಂಡರೆ ಸೂಕ್ತ ಮುಂಜಾಗ್ರತೆ ಕೈಗೊಳ್ಳಿ
* ಮಂದ ಮುಖ ಭಾವ ಇದ್ದರೇ ಇದು ಪಾರ್ಶ್ವವಾಯು ಲಕ್ಷಣವಾಗಿರಬಹುದು
* ಬಾಯಿ ಒಂದು ಕಡೆ ಜಾರುವುದು, ಅಸ್ಪಷ್ಟ ಮಾತುಗಳಿದ್ದರೆ ಅದು ಲಕ್ವದ ಲಕ್ಷಣಗಳಲ್ಲೊಂದು