ಕರ್ನಾಟಕ

karnataka

By

Published : Oct 26, 2022, 1:25 PM IST

Updated : Oct 26, 2022, 4:11 PM IST

ETV Bharat / sukhibhava

ನಿಮ್ಮ ದೇಹದ ತೂಕ ಹೆಚ್ಚಾಗುತ್ತಿದೆಯೇ?: ಅದಕ್ಕೆ ಕಾರಣ ಇವೇ ಇರಬಹುದು..!

ಹೆಚ್ಚಿನ ಜನರ ಸಮಸ್ಯೆ ಎಂದರೆ ಅದು ತೂಕ ಹೆಚ್ಚಳ. ಅಯ್ಯೋ ನನ್ನ ತೂಕ ಕಡಿಮೆ ಇರಬೇಕಿತ್ತು, ನಾನು ಸ್ವಲ್ಪ ದಪ್ಪ ಇರಬೇಕಿತ್ತು. ಹೀಗೆ ಎಲ್ಲರಿಗೂ ಒಂದೊಂದು ರೀತಿಯಲ್ಲೂ ತೂಕದ ಬಗ್ಗೆ ತುಂಬಾನೆ ಯೋಚನೆ ಇರುತ್ತದೆ. ನಿಮ್ಮ ದೇಹದ ತೂಕ ಹೆಚ್ಚಾಗಲು ಕಾರಣಗಳು ಹೀಗಿವೆ..

Reasons to weight gain
Reasons to weight gain

ತೂಕ ಹೆಚ್ಚಾಗುವುದು ಅನೇಕರನ್ನು ಕಾಡುವ ಸಮಸ್ಯೆ. ಅನೇಕ ಜನರು ತೂಕ ಇಳಿಸಿಕೊಳ್ಳಲು ಹಲವಾರು ಕ್ರಮಗಳನ್ನು ಅನುಸರಿಸುತ್ತಾರೆ. ಆದರೆ ತೂಕ ಹೆಚ್ಚಾದ ನಂತರ ತೊಂದರೆಗೆ ಸಿಲುಕುವ ಬದಲು ತೂಕ ಹೆಚ್ಚಾಗಲು ಕಾರಣಗಳನ್ನು ತಿಳಿದುಕೊಂಡು ಸೂಕ್ತ ಮುನ್ನೆಚ್ಚರಿಕೆ ವಹಿಸುವುದು ಉತ್ತಮ.

ತೂಕ ಹೆಚ್ಚಾಗಲು ಕಾರಣಗಳು ಹೀಗಿವೆ..

  • ಖಿನ್ನತೆ:ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ ಜಗತ್ತಿನಾದ್ಯಂತ 350 ಮಿಲಿಯನ್ ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಒಂಟಿತನದಿಂದ ಖಿನ್ನತೆಗೆ ಒಳಗಾದವರಲ್ಲಿ ತೂಕ ಹೆಚ್ಚಾಗುವ ಸಾಧ್ಯತೆ ಹೆಚ್ಚು.
  • ಒತ್ತಡ: ಸಮಯಕ್ಕೆ ಕೆಲಸವನ್ನು ಪೂರ್ಣಗೊಳಿಸಲು ಮತ್ತು ಮನೆಯ ಜವಾಬ್ದಾರಿಗಳು ಸೇರಿ ಇನ್ನೂ ಹಲವು ಕಾರ್ಯಗಳು ಒತ್ತಡವನ್ನು ಹೆಚ್ಚಿಸುತ್ತದೆ. ಒತ್ತಡವೂ ತೂಕವನ್ನು ಹೆಚ್ಚಿಸುತ್ತದೆ.
  • ಥೈರಾಯ್ಡ್ ಸಮಸ್ಯೆ:ಆರೋಗ್ಯ ವ್ಯವಸ್ಥೆ ಸರಿಯಾಗಿರಬೇಕಾದರೆ ಥೈರಾಯ್ಡ್ ಗ್ರಂಥಿಯ ಕಾರ್ಯನಿರ್ವಹಣೆ ಸರಿಯಾಗಿರಬೇಕು. ಇದರಲ್ಲಿ ಯಾವುದೇ ಏರಿಳಿತಗಳು ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ ದೇಹ ತೂಕ ಹೆಚ್ಚಾಗುತ್ತದೆ.
  • ಆಹಾರ ಬಣ್ಣಗಳು: ಆಹಾರವನ್ನು ರುಚಿಕರವಾಗಿ ಮತ್ತು ನೋಡಲು ಆಕರ್ಷಕವಾಗಿಸಲು ವಿವಿಧ ಬಣ್ಣಗಳನ್ನು ಸೇರಿಸಲಾಗುತ್ತದೆ. ಇದು ತೂಕ ಹೆಚ್ಚಳಕ್ಕೂ ಕಾರಣವಾಗುತ್ತದೆ. ಆದ್ದರಿಂದ ಆಹಾರವು ನೈಸರ್ಗಿಕವಾಗಿರುವಂತೆ ನೋಡಿಕೊಳ್ಳುವುದು ಅವಶ್ಯಕ.
  • ಔಷಧಗಳು: ಕೆಲವರು ಪ್ರತಿ ಸಣ್ಣ ವಿಷಯಕ್ಕೂ ಔಷಧಿಯನ್ನು ಬಳಸುತ್ತಾರೆ. ಇದರಿಂದ ತೂಕ ಹೆಚ್ಚಾಗುವ ಸಾಧ್ಯತೆ ಇದೆ. ಅದಕ್ಕಾಗಿಯೇ ಔಷಧಗಳ ಅನಗತ್ಯ ಬಳಕೆಯನ್ನು ಕಡಿಮೆ ಮಾಡಬೇಕು.
  • ದೈಹಿಕ ಶ್ರಮವಿಲ್ಲ: ಈಗ ಎಲ್ಲ ಕೆಲಸಗಳೂ ಯಾಂತ್ರೀಕೃತಗೊಂಡಿದೆ. ದೈಹಿಕವಾಗಿ ಕಷ್ಟಪಡುವ ಅಗತ್ಯವಿಲ್ಲ. ಇದರ ಜೊತೆಗೆ ಫೋನ್, ಲ್ಯಾಪ್‌ಟಾಪ್‌ಗಳಲ್ಲಿ ಗಂಟೆಗಟ್ಟಲೆ ಕಾಲ ಕಳೆಯುತ್ತಿದ್ದಾರೆ. ಇದು ಸುಲಭವಾಗಿ ತೂಕ ಹೆಚ್ಚಾಗಲು ಮುಖ್ಯ ಕಾರಣವಾಗಿದೆ.
  • ಹೆಚ್ಚು ಆಹಾರ: ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚು ಆಹಾರವನ್ನು ಸೇವಿಸುವುದರಿಂದ ಸುಲಭವಾಗಿ ತೂಕ ಹೆಚ್ಚಾಗಬಹುದು.
  • ಜಂಕ್ ಫುಡ್:ಜಂಕ್ ಫುಡ್ ಜಾಸ್ತಿ ತಿಂದರೆ ಸುಲಭವಾಗಿ ತೂಕ ಹೆಚ್ಚುತ್ತದೆ. ಆರೋಗ್ಯ ಸಮಸ್ಯೆಗಳೂ ಹೆಚ್ಚಾಗುತ್ತವೆ.
  • ಆಲ್ಕೋಹಾಲ್:ಆಲ್ಕೋಹಾಲ್ ಕುಡಿಯುವುದರಿಂದ ತೂಕ ಹೆಚ್ಚಾಗಬಹುದು. ಇದರಿಂದ ದೇಹದಲ್ಲಿ ಅನಗತ್ಯ ಕೊಬ್ಬು ಶೇಖರಣೆಯಾಗುತ್ತದೆ.
  • ಉಪ್ಪು: ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಉಪ್ಪನ್ನು ಸೇರಿಸುವುದರಿಂದ ತೂಕ ಹೆಚ್ಚಾಗಬಹುದು.
  • ತಡ ರಾತ್ರಿ ಊಟ:ಮಧ್ಯರಾತ್ರಿ ಊಟ ಮಾಡುವುದು, ತಡವಾಗಿ ಮಲಗುವುದು, ಬೆಳಗ್ಗೆ ತಡವಾಗಿ ಏಳುವುದು ಜೀವನಶೈಲಿಯನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ. ಇದರಿಂದ ಆರೋಗ್ಯ ಸಮಸ್ಯೆಗಳೂ ಹೆಚ್ಚಾಗುತ್ತಿವೆ. ಸಮಯಕ್ಕೆ ಸರಿಯಾಗಿ ತಿಂದರೆ ಇಂತಹ ಸಮಸ್ಯೆಗಳು ಎದುರಾಗುವುದಿಲ್ಲ.

ಇದನ್ನೂ ಓದಿ:ಹಬ್ಬದ ದಿನಗಳಲ್ಲಿ ವಿವಿಧ ಭಕ್ಷ್ಯ ಸೇವಿಸಿ ಆರೋಗ್ಯ ಹದಗೆಟ್ಟಿದೆಯೇ?: ದೇಹಾರೋಗ್ಯ ಕಾಪಾಡಿಕೊಳ್ಳಲು ಹೀಗೆ ಮಾಡಿ!

Last Updated : Oct 26, 2022, 4:11 PM IST

ABOUT THE AUTHOR

...view details