ನಮ್ಮ ತಾಯಿ ಮತ್ತು ಅಜ್ಜಿಯಂದಿರು ಮನೆಯಲ್ಲಿ ಉಳಿದ ಹಾಲಿನಿಂದ ಪನೀರ್ ಅಥವಾ ಮೊಸರು ತಯಾರಿಸುವುದನ್ನು ನಾವು ನೋಡಿದ್ದೇವೆ. ಅದರಲ್ಲಿರುವ ನೀರಿನಂತಹ ವಸ್ತು ಏನು ಎಂದು ಎಂದಾದರೂ ಯೋಚಿಸಿದ್ದೀರಾ? ಪನೀರ್ ತಯಾರಿಸಿದ ನಂತರ ತ್ಯಾಜ್ಯವಾಗಿ ಅದನ್ನು ಎಸೆಯಲಾಗುತ್ತದೆ ಅಥವಾ ಮೊಸರು ಸೇವಿಸಿದ ನಂತರ ಅದು ಉಳಿದಿರುವಂತೆ ಕಂಡುಬರುತ್ತದೆ.
ಇದು ತ್ವರಿತವಾಗಿ ಜೀರ್ಣವಾಗುವ ಕ್ಲಾಸ್ ಒನ್ ಪ್ರೋಟೀನ್. ಈ ಪ್ರೋಟೀನ್ ಅನ್ನು ದೇಹವು ಸುಲಭವಾಗಿ ಹೀರಿಕೊಳ್ಳಬಲ್ಲದು ಮತ್ತು ಲಾಭ ಪಡೆಯಬಹುದು. ಪನೀರ್ ತಯಾರಿಸಿದ ನಂತರ ಉಳಿದಿರುವ ನೀರನ್ನು ಎಸೆಯುವ ಬದಲು ಅಥವಾ ಮೊಸರನ್ನು ದಪ್ಪ ಹಾಗೂ ಕೆನೆಭರಿತವಾಗಿ ಮಾಡಲು ಆ ನೀರನ್ನು ತೆಗೆಯುವ ಬದಲು, ಆ ನೀರನ್ನು ಚಪಾತಿ ಹಿಟ್ಟಿನಲ್ಲಿ, ದಾಲ್, ಪದಾರ್ಥ, ಸೂಪ್ ಮತ್ತು ಅನ್ನ ಬೇಯಿಸುವಾಗ ಸೇರಿಸಿ. ಈ ಪ್ರೋಟೀನ್ ಮೌಲ್ಯಯುತ ಪೌಷ್ಟಿಕಾಂಶ ನಿಡುತ್ತದೆ.
ಕನ್ಸಲ್ಟೆಂಟ್ ಡಯಟಿಷಿಯನ್ ವಂದನಾ ಕಾಕೋಡ್ಕರ್ ಅವರ ಪ್ರಕಾರ, ಸರಿಸುಮಾರು ಒಬ್ಬ ವ್ಯಕ್ತಿಗೆ ತನ್ನ ದೇಹದ ಪ್ರತಿ ಒಂದು ಕೆಜಿಗೆ 0.8ರಿಂದ 1.0 ಗ್ರಾಂ ಪ್ರೋಟೀನ್ ಬೇಕಾಗುತ್ತದೆ. ಉದಾಹರಣೆಗೆ, 50 ಕೆಜಿ ತೂಕದ ವ್ಯಕ್ತಿಗೆ ದಿನಕ್ಕೆ 40-50 ಗ್ರಾಂ ಪ್ರೋಟೀನ್ ಅಗತ್ಯವಿರುತ್ತದೆ. 2-3 ಬೌಲ್ ದ್ವಿದಳ ಧಾನ್ಯಗಳು, 1 -2 ಗ್ಲಾಸ್ ಹಾಲಿನ ಉತ್ಪನ್ನಗಳನ್ನು ಸೇವಿಸುವ ಮೂಲಕ ಇದನ್ನು ಪೂರೈಸಬಹುದು ಮತ್ತು ಉಳಿದವು ಸಿರಿಧಾನ್ಯಗಳಿಂದ (ಅಕ್ಕಿ, ಜೋವರ್, ಗೋಧಿ ಇತ್ಯಾದಿ) ಬರಬಹುದು. ನಾನ್ ವೆಜಿಟೇರಿಯನ್ ವ್ಯಕ್ತಿಯು 2 -3 ತುಂಡು ಮೀನುಗಳನ್ನು ಅಥವಾ 1 ದೊಡ್ಡ ತುಂಡು ಕೋಳಿ ಅಥವಾ 2 ಮೊಟ್ಟೆಗಳನ್ನು ಸೇವಿಸುವ ಮೂಲಕ ಮತ್ತು ಉಳಿದ ಪ್ರೋಟೀನ್ ಅನ್ನು ಅಕ್ಕಿ ಅಥವಾ ಚಪಾತಿಯಂತಹ ಸಿರಿಧಾನ್ಯಗಳ ಮೂಲಕ ಸೇವಿಸಬಹುದು.
ನೈಸರ್ಗಿಕ ಮೂಲಗಳಿಂದ ನಾವು ಪ್ರೋಟೀನ್‌ಗಳನ್ನು ಹೇಗೆ ಪಡೆಯುತ್ತೇವೆ?
ಪ್ರಾಣಿ ಮೂಲಗಳಾದ ಹಾಲು ಮತ್ತು ಹಾಲಿನ ಉತ್ಪನ್ನಗಳು, ಮೊಟ್ಟೆ, ಮೀನು, ಕೋಳಿ, ಮಾಂಸ ಇತ್ಯಾದಿ ಪ್ರೋಟೀನ್‌ಗಳು ಎಲ್ಲಾ ಅಗತ್ಯ ಅಮೈನೋ ಆಮ್ಲಗಳನ್ನು ಹೊಂದಿರುತ್ತವೆ ಮತ್ತು ಅವುಗಳನ್ನು ಸಂಪೂರ್ಣ ಪ್ರೋಟೀನ್ ಅಥವಾ ಹೆಚ್ಚಿನ ಜೈವಿಕ ಮೌಲ್ಯದ ಪ್ರೋಟೀನ್‌ಗಳು ಎಂದು ಕರೆಯಲಾಗುತ್ತದೆ.
ತರಕಾರಿ ಮೂಲಗಳಿಂದ ಬರುವ ಪ್ರೋಟೀನ್‌ಗಳು ಬೀಜಗಳು, ಬೇಳೆಕಾಳುಗಳು, ಸೋಯಾ ಹುರುಳಿ, ದಾಲ್, ಅಣಬೆಗಳು ಕೆಲವು ಅಗತ್ಯವಾದ ಅಮೈನೋ ಆಮ್ಲಗಳನ್ನು ಹೊಂದಿರುವುದಿಲ್ಲ ಮತ್ತು ಅವುಗಳನ್ನು ಅಪೂರ್ಣ ಪ್ರೋಟೀನ್‌ಗಳು ಅಥವಾ ಕಡಿಮೆ ಜೈವಿಕ ಮೌಲ್ಯದ ಪ್ರೋಟೀನ್‌ಗಳು ಎಂದು ಕರೆಯಲಾಗುತ್ತದೆ.
ಆದರೆ 2 ಅಥವಾ ಹೆಚ್ಚಿನ ಅಪೂರ್ಣ ಪ್ರೋಟೀನ್‌ಗಳನ್ನು ಒಟ್ಟಿಗೆ ಸೇವಿಸಿದಾಗ, ಅವು ಒಂದಕ್ಕೊಂದು ಪೂರಕವಾಗಿರುತ್ತವೆ ಮತ್ತು ಅಗತ್ಯವಾದ ಅಮೈನೊ ಆಮ್ಲವನ್ನು ಒದಗಿಸುತ್ತವೆ.
ಆದ್ದರಿಂದ ಚಪಾತಿ ಅಥವಾ ಅಕ್ಕಿಯೊಂದಿಗೆ 1 ಬೌಲ್ ದಾಲ್ ಮತ್ತು 1 ರ್ಬಲ್ ದ್ವಿದಳ ಧಾನ್ಯಗಳನ್ನು (ಬೀನ್ಸ್, ಬಟಾಣಿ, ರಾಜಮಾ, ಹೆಸರು) ಸೇವಿಸಿದರೆ ಇದು ಅಗತ್ಯ ಪ್ರೋಟೀನ್ ಪೂರೈಸುತ್ತದೆ.
1:4ರ ಅನುಪಾತದಲ್ಲಿ ಗೋಧಿ ಹಿಟ್ಟಿಗೆ ಸೋಯಾ ಹಿಟ್ಟನ್ನು ಬಳಸುವುದರಿಂದ ಇದು ಚಪಾತಿಯ ಪ್ರೋಟೀನ್ ಅಂಶವನ್ನು ಹೆಚ್ಚಿಸುತ್ತದೆ. ಸಸ್ಯ ಪ್ರೋಟೀನ್‌ಗಳು ಆರೋಗ್ಯಕರವಾದ ಪ್ರೋಟೀನ್ ನೀಡುವುದರಿಂದ ಅವುಗಳನ್ನು ಹೆಚ್ಚು ಸೇವಿಸಿ ಮತ್ತು ನಿಮ್ಮ ದೇಹವನ್ನು ಹೆಚ್ಚು ಪ್ರಾಣಿ ಪ್ರೋಟೀನ್‌ಗಳನ್ನು ಸೇವಿಸಿ ಓವರ್‌ಲೋಡ್ ಮಾಡಬೇಡಿ.