ನ್ಯೂಯಾರ್ಕ್: ಕೊರೊನಾ ವೈರಸ್ ಸೋಂಕಿನ ಅನಾರೋಗ್ಯದಿಂದ ಚೇತರಿಕೆ ಕಂಡ ವರ್ಷದ ಬಳಿಕವೂ ದೀರ್ಘ ಕೋವಿಡ್ ಲಕ್ಷಣ ಕಾಡಬಹುದು ಅಥವಾ ಒಂದು ತಿಂಗಳ ಬಳಿಕ ದೀರ್ಘ ಕೋವಿಡ್ ಲಕ್ಷಣ ಆರಂಭವಾಗಲೂಬಹುದು ಎಂದು ತಿಳಿಸಲಾಗಿದೆ. ವರ್ಷಗಳ ಬಳಿಕ ಕೋವಿಡ್ ಲಕ್ಷಣಗಳ ಆರಂಭದ ಕುರಿತು ಹೊಸ ಅಧ್ಯಯನದಲ್ಲಿ ವಿವರಿಸಲಾಗಿದೆ.
ದೀರ್ಘ ಕೋವಿಡ್ ಸೋಂಕು ಆರಂಭವಾದ ಒಂದು ತಿಂಗಳ ಬಳಿಕ ಅದು ಅಭಿವೃದ್ಧಿ ಹೊಂದುತ್ತದೆ. ಇದು ಅನೇಕ ವಿವಿಧ ಲಕ್ಷಣಗಳನ್ನು ಹೊಂದಿರುತ್ತವೆ. ಈ ಲಕ್ಷಣಗಳು ರೋಗಗ್ರಸ್ಥತೆ ಮತ್ತು ಜೀವನ ಮಟ್ಟ ಕುಗ್ಗಿಸುವುದರೊಂದಿಗೆ ಗಮನಾರ್ಹ ಸಂಬಂಧ ಹೊಂದಿದೆ.
ಶೇ 16ರಷ್ಟು ಕೋವಿಡ್ ಸೋಂಕಿತ ವ್ಯಕ್ತಿಗಳಿಗೆ ಸೋಂಕು ತಗುಲಿ ವರ್ಷಗಳ ನಂತರ ಈ ದೀರ್ಘ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಈ ಕುರಿತು ಅಧ್ಯಯನ ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆಯಲ್ಲಿ (ಸಿಡಿಸಿ) ಕಂಡುಬಂದಿದ್ದು, ಇತ್ತೀಚಿಗೆ ಇದು ವಾರದಲ್ಲಿ ಸಂಭವಿಸಿದ ಸಾವು ಮತ್ತು ರೋಗಗ್ರಸ್ಥತೆ ಕುರಿತು ವರದಿ ಬಿಡುಗಡೆ ಮಾಡಿದೆ.
ಹಿಂದಿನ ಅನೇಕ ಸಂಶೋಧನೆಗಳಲ್ಲಿ ಆ ಸಮಯದಲ್ಲಿ ಒಂದು/ ಎರಡು ಲಕ್ಷಣಗಳನ್ನು ಗುರಿಯಾಗಿಸಿ ಸಂಶೋಧನೆ ನಡೆಸಲಾಗಿತ್ತು. ಆದರೆ, ನಾವು ಹೆಚ್ಚಿನ ರೋಗಲಕ್ಷಣ ಮತ್ತು ಸೂಕ್ಷ್ಮತೆಯೊಂದಿಗೆ ಸ್ಪಷ್ಟವಾಗಿ ವಿವರಿಸಲು ಸಾಧ್ಯವಿಲ್ಲ. ಈ ಅಧ್ಯಯನವು ದೀರ್ಘ ಕೋವಿಡ್ ಲಕ್ಷಣವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಮೌಲ್ಯಮಾಪನ ನಡೆಸಿದೆ. ಇದರ ಜೊತೆಗೆ, ಆರಂಭಿಕ ಸೋಂಕಿನ ಹಂತದಲ್ಲಿರುವ ಲಕ್ಷಣವನ್ನು ದೀರ್ಘ ಕೋವಿಡ್ ಅಭಿವೃದ್ಧಿಯಾಗಿರುವ ಕೋವಿಡ್ ಲಕ್ಷಣದೊಂದಿಗಿನ ವ್ಯತ್ಯಾಸ ಗಮನಿಸಿದೆ.
ಅಧ್ಯಯನದಲ್ಲಿ 1,741 ಭಾಗಿದಾರರು ಭಾಗಿಯಾಗಿದ್ದು, ಇವರಲ್ಲಿ ಮೂರನೇ ಎರಡರಷ್ಟು ಮಹಿಳೆಯರಿದ್ದರು. ಮೂರು ತ್ರೈಮಾಸಿಕದಲ್ಲಿ ಕೋವಿಡ್ ಸಕಾರಾತ್ಮಕತೆ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ ಕೋವಿಡ್ ನೆಗೆಟಿವ್ ಬಂದವರಲ್ಲಿಯೂ ಕೂಡ ಕೆಲಕಾಲಗಳ ಬಳಿಕ ಸೋಂಕಿನ ಕೆಲವು ಲಕ್ಷಣ ಅನುಭವಿಸಿದ್ದಾರೆ. ಇದರಲ್ಲಿ ತಲೆ ಸುತ್ತುವಿಕೆ, ಮೂಗು ಸೋರುವುದು, ತಲೆ ನೋವು, ಗಂಟಲು ಕೆರೆ, ಎದೆ ನೋವು, ಅತಿಸಾರ, ಮರೆವು, ಏಕಾಗ್ರತೆ ಕೊರತೆಯ ಲಕ್ಷಣ ಕಾಣಬಹುದು.
ಕೋವಿಡ್ ಪಾಸಿಟಿವ್ ಭಾಗಿದಾರರಲ್ಲಿ ಈ ಲಕ್ಷಣಗಳು ಬೇಸ್ಲೈನ್ ವರ್ಗದಲ್ಲಿ ಕಂಡುಬಂದಿದೆ. ಅದು ವರ್ಷದ ಬಳಿಕ. ಇನ್ನು ಕೋವಿಡ್ ಪಾಸಿಟಿವ್ ಮತ್ತು ನೆಗಟಿವ್ ರೋಗಿಗಳಲ್ಲಿ ಸೋಂಕಿನ ಲಕ್ಷಣ ಪತ್ತೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ಕೋವಿಡ್ ಪಾಸಿಟಿವ್ ಮತ್ತು ಕೋವಿಡ್ ನೆಗೆಟಿವ್ ಗುಂಪಿನ ನಡುವೆ ಸಾಮಾನ್ಯ ಮಾದರಿ ಹೇಗಿದೆ ಎಂಬುದನ್ನು ನೋಡಿ ನಮಗೆ ಅಚ್ಚರಿಯಾಯಿತು ಎಂದು ಅಧ್ಯಯನಕಾರರು ತಿಳಿಸಿದ್ದಾರೆ.
ಇದನ್ನೂ ಓದಿ:ಕೋವಿಡ್ ರೂಪಾಂತರ EG.5.1 ಸೋಂಕಿನ ಬಗ್ಗೆ ಆತಂಕ ಬೇಡ ಎಂದ ವೈದ್ಯರು