ಕರ್ನಾಟಕ

karnataka

ETV Bharat / sukhibhava

ಗರ್ಭಿಣಿಯರ ಈ ಪೋಷಕಾಂಶಗಳನ್ನು ಸೇವಿಸುವುದರಿಂದ ಮಕ್ಕಳು ಚುರುಕಾಗಿ ಹುಟ್ಟುತ್ತವೆಯಂತೆ..! - ಗರ್ಭಿಣಿಯಾಗುವ ಮೊದಲೇ ಕೆಲವು ನ್ಯೂಟ್ರಿಷಿಯನ್​

ಗರ್ಭಿಣಿಯರು ಅಗತ್ಯ ಪೋಷಕಾಂಶಗಳನ್ನು ಸೇವಿಸುವುದು ಅವಶ್ಯ. ಈ ಪೋಷಕಾಂಶಗಳು ಮಗುವಿನ ಆರೋಗ್ಯದ ಮೇಲೆ ಯಥೇಚ್ಛ ಪರಿಣಾಮ ಬೀರುತ್ತದೆ.

Are you getting these nutrients during pregnancy?
ಗರ್ಭಿಣಿಯರ ಈ ಪೋಷಕಾಂಶಗಳನ್ನು ಸೇವಿಸುವುದರಿಂದ ಮಕ್ಕಳು ಚುರುಕಾಗಿ ಹುಟ್ಟುತ್ತವೆಯಂತೆ..!

By

Published : Feb 15, 2023, 2:56 PM IST

ತಮ್ಮ ಬಿಡುವಿಲ್ಲದ ಜೀವನ ಶೈಲಿಯಲ್ಲಿ ಅನೇಕ ಮಹಿಳೆಯರು ರಕ್ತಹೀನತೆ, ಥೈರಾಯ್ಡ್​​, ಮಧುವೇಹ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳನ್ನು ಹೊಂದಿರುತ್ತಾರೆ. ಗರ್ಭಿಣಿಯಾದ ಬಳಿಕ ಈ ತೊಂದರೆಗಳು ದೊಡ್ಡ ಸಮಸ್ಯೆಯಾಗಲಿದ್ದು, ಹೊಟ್ಟೆಯಲ್ಲಿರುವ ಮಗು ಮತ್ತು ತಾಯಿಗೆ ತೊಂದರೆಯಾಗಲಿದೆ. ಈ ರೀತಿ ಆಗುವುದನ್ನು ತಡೆಗಟ್ಟಲು ಗರ್ಭಿಣಿಯಾಗುವ ಮೊದಲೇ ಕೆಲವು ನ್ಯೂಟ್ರಿಷಿಯನ್​ ಸಲಹೆಗಳನ್ನು ಪಡೆಯಬೇಕು. ಜೊತೆಗೆ ಗರ್ಭಿಣಿಯಾದ ಸಂದರ್ಭದಲ್ಲಿ ಉತ್ತಮ ಆಹಾರದ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು

ಫೈಬರ್​ ಬಗ್ಗೆ ಪರಿಶೀಲಿಸಿ: ಗರ್ಭಿಣಿಯರಲ್ಲಿ ಕಾಡುವ ಸಮಸ್ಯೆ ಮಲಬದ್ಧತೆ. ಫೈಬರ್​ ಇರುವ ಆಹಾರಗಳನ್ನು ಸೇವನೆ ಮಾಡುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬಹುದು. ಬೀನ್ಸ್​, ಬಟಾಣಿ, ಬೆರ್ರಿಸ್​​, ನಟ್ಸ್​, ಡ್ರೈ ಫ್ರೂಟ್ಸ್​ ಮುಂತಾದವುಗಳಲ್ಲಿ ಫೈಬರ್​ ಅಂಶ ಇರುತ್ತದೆ. ಇದನ್ನು ನಿಮ್ಮ ದೈನಂದಿನ ಡಯಟ್​ನಲ್ಲಿ ಸೇರಿಸಿ. ಜೊತೆಗೆ ಕೋಸು ಮತ್ತು ಹೂ ಕೋಸುಗಳಲ್ಲಿ ಹೆಚ್ಚಿನ ಫೈಬರ್​ ಇದ್ದು, ಇದು ಕೂಡ ಬಳಸಬಹುದು. ಇವುಗಳನ್ನು ಹಸಿಯಾಗಿ ಸೇವಿಸುವುದು ಗ್ಯಾಸ್ಟ್ರಿಕ್​ನಂತಹ ಸಮಸ್ಯೆಗೆ ಕೂಡ ಕಾರಣವಾಗಬಹುದು. ಈ ಹಿನ್ನಲೆ ಚೆನ್ನಾಗಿ ಬೇಯಿಸಿ ಅಹಾರವನ್ನು ತಿನ್ನಬೇಕು. ಇದರಿಂದ ಆಹಾರ ಸುಲಭವಾಗಿ ಜೀರ್ಣವಾಗಲಿದೆ.

ಕ್ಯಾಲ್ಸಿಯಂ: ಕ್ಯಾಲ್ಸಿಯಂ ಸೇವನೆ ಭ್ರೂಣದಲ್ಲಿರುವ ಮಗುವಿನ ಮೂಳೆಗಳನ್ನು ಗಟ್ಟಿಯಾಗಿಸಲು ಸಹಕಾರಿಯಾಗಿದೆ. ಗರ್ಭಿಣಿ ಮತ್ತು ಹಾಲೂಣಿಸುವ ತಾಯಂದಿರುರು ಮಗು ಮತ್ತು ತಾಯಿಯ ದೈಹಿಕ ಅಗತ್ಯತೆಯನ್ನು ಪರಿಗಣಿಸಿ ಆಹಾರ ಸೇವಿಸುಬೇಕು ಎಂದು ತಜ್ಞರು ಹೆಳುತ್ತಾರೆ. ಈ ಹಿನ್ನೆಲೆ ಹಾಲು, ಹಾಲಿನ ಉತ್ಪನ್ನ, ತರಕಾರಿ, ಮೊಟ್ಟೆ, ಸಪೋಟಾ, ಮೀನು ಮುಂತಾದ ಕ್ಯಾಲ್ಸಿಯಂ ಸಮೃದ್ಧಿ ಆಹಾರವನ್ನು ಸೇವಿಸಬೇಕು. ಒಂದು ವೇಳೆ, ತಾಯಿ ವೆಗನ್​ ಆಗಿದ್ದರೆ, ಹಾಲಿನ ಬದಲು ಡ್ರೈ ಫ್ರೂಟ್ಸ್​​, ಬ್ರಕೋಲು, ಗ್ರೀನ್ಸ್​ ಮುಂತಾದವುಗಳನ್ನು ತಮ್ಮ ಡಯಟ್​​ಗೆ ಸೇರಿಸಬಹುದು.

ಐರನ್​ ಬಗ್ಗೆಯೂ ಇರಲಿ ಕಾಳಜಿ: ದೇಹದಲ್ಲಿನ ಕಬ್ಬಿಣಾಂಶದ ಕೊರತೆಯಿಂದ ತಾಯಂದಿರಲ್ಲಿ ರಕ್ತಹೀನತೆ ಉಂಟಾಗುತ್ತದೆ. ಇದರಿಂದ ಮಗುವಿನ ಅವಧಿ ಪೂರ್ವ ಜನನ, ಕಡಿಮೆ ತೂಕದ ಜನನ ಮತ್ತು ಇನ್ನಿತರ ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆ. ಇದೇ ಕಾರಣಕ್ಕೆ ತಜ್ಞರು, ತಾಯ್ತನದ ಆರಂಭದಿಂದಲೇ ಕಬ್ಬಿಣಾಂಶದ ಕೊರತೆಯಾಗದಂತೆ ನೋಡಿಕೊಳ್ಳುವಂತೆ ಸಲಹೆ ನೀಡುತ್ತದೆ. ಏಪ್ರಿಕೋಟ್​, ಮೊಟ್ಟೆ ಹಳದಿ ಭಾಗ, ಮೀನು, ಒಣ ಮೀನು, ಹಸಿರು ತರಕಾರಿ, ಓಟ್ಸ್​​ಮ ಸೆರೆಲ್ಸ್​, ಗೋಧಿ ಮುಂತಾದವುಗಳಲ್ಲಿ ಕಬ್ಬಿಣಾಂಶ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಮಾಂಸದಲ್ಲಿನ ಕಬ್ಬಿಣಾಂಶಕ್ಕಿಂತ ತರಕಾರಿ ಮತ್ತು ಹಣ್ಣುಗಳಲ್ಲಿನ ಕಬ್ಬಿಣಾಂಶವನ್ನು ದೇಹ ಬೇಗ ಜೀರ್ಣಗೊಳಿಸುತ್ತದೆ. ಮೊಟ್ಟೆ ಮತ್ತು ಮಾಂಸ ವನ್ನು ತರಕಾರಿಗಳೊಂದಿಗೆ ಸೇವಿಸಿದರೆ ಅದು ಬೇಗ ದೇಹಕ್ಕೆ ಕಬ್ಬಿಣಾಂಶವನ್ನು ಬಿಡುಗಡೆ ಮಾಡುತ್ತದೆ. ಹೆಚ್ಚಿನ ರಕ್ತ ಹೀನತೆಯಿಂದ ಬಳಲುತ್ತಿದ್ದರೆ ವೈದ್ಯರ ಸಲಹೆಯಂತೆ ಚುಚ್ಚುಮದ್ದು ಮತ್ತು ಪೂರಕ ಆಹಾರ ಪಡೆಯುವುದು ಉತ್ತಮ

ಆಯೋಡಿನ್​: ಭ್ರಣದಲ್ಲಿರುವ ಮಗುವಿನ ನರ ವ್ಯವಸ್ಥೆ ಅಭಿವೃದ್ಧಿಯಲ್ಲಿ ಆಯೋಡಿನ್​ ಮಹತ್ವದ ಪಾತ್ರವಹಿಸುತ್ತದೆ. ತಜ್ಞರ ಪ್ರಕಾರ, ಗರ್ಭಿಣಿಯರು ಉತ್ತಮ ಮಟ್ಟದ ಆಯೋಡಿನ್​ ಸೇವನೆಯಿಂದ ಮಕ್ಕಳ ಬುದ್ಧಿವಂತರಾಗುತ್ತಾರೆ ಎನ್ನಲಾಗಿದೆ. ಚೀಸ್​, ಮೊಸರು, ಆಲೂಗಡ್ಡೆ ಮುಂತಾದವುಗಳನ್ನು ಡಯಟ್​ನಲ್ಲಿ ಸೇರಿಸಿ. ಇದೇ ವೇಳೆ ಹೆಚ್ಚಿನ ಸೀಫುಡ್ ಸೇವನೆ ಕೂಡ ಉತ್ತಮವಲ್ಲ. ​

ಫೋಲಿಕ್​ ಆಸಿಡ್​​: ಗರ್ಭಿಣಿಯರು ಆಹಾರದಲ್ಲಿ ಪೋಲಿಕ್​ ಆ್ಯಸಿಡ್​ ಸೇವನೆಯಿಂದ ಮಕ್ಕಳ ಮಿದುಳು ಮತ್ತು ಬೆನ್ನುಹುರಿ ಬೆಳವಣಿಗೆಯಲ್ಲಿ ಸಹಾಯ ಮಾಡುತ್ತದೆ. ಹಸಿರು ತರಕಾರಿ, ಬ್ರಕೋಲಿ, ಕಲ್ಲಂಗಡಿ, ನಟ್ಸ್​, ಬೀನ್ಸ್​ ಅನ್ನು ಡಯಟ್​ನಲ್ಲಿ ಸೇರಿಸಿ. ಜೊತೆಗೆ ವೈದ್ಯರ ಸಲಹೆಯಂತೆ ಫೋಲಿಕಾಮ್​ ಪೂರಕ ಆಹಾರಗಳನ್ನು ಬಳಸಬಹುದು.

ಗರ್ಭಿಣಿಯರು ನಿತ್ಯ 80-85 ಮಿಲಿಗ್ರಾಂನ ವಿಟಮಿನ್​ ಸಿ ಸೇವಿಸುವುದು ಅವಶ್ಯ. ಇದಕ್ಕಾಗಿ ಟೊಮಟೋ, ದ್ರಾಕ್ಷಿ, ಸಿಟ್ರಸ್​ ಹಣ್ಣು, ದಪ್ಪ ಮೆಣಸಿನಕಾಯಿ ಮತ್ತು ಕಿವಿಯನ್ನು ಆಹಾರವನ್ನು ಡಯಟ್​ನಲ್ಲಿ ಇರುವಂತೆ ನೋಡಿಕೊಳ್ಳಬೇಕು.

ಇದನ್ನೂ ಓದಿ: ಕ್ಯಾನ್ಸರ್​​​​ ಪೀಡಿತರ ಮನೋಬಲ ಹೆಚ್ಚಿಸುವಲ್ಲಿ ಯೋಗ, ಪ್ರಕೃತಿ ಚಿಕಿತ್ಸೆಯ ಪಾತ್ರ!

ABOUT THE AUTHOR

...view details