ಕರ್ನಾಟಕ

karnataka

ETV Bharat / sukhibhava

ಆತಂಕ, ನಿದ್ರಾಹೀನತೆಗೆ ನೀಡುವ ಔಷಧದಿಂದ ಗರ್ಭಪಾತ ಅಪಾಯ: ಅಧ್ಯಯನ - ಗರ್ಭಾಪಾತದ ಅಪಾಯ

ಗರ್ಭಾವಸ್ಥೆಯ ಸಂದರ್ಭದಲ್ಲಿ ಬಳಸುವ ಬೆಂಜೊಡಿಯಜೆಪೈನ್ ಔಷಧ​ ಗರ್ಭಪಾತದೊಂದಿಗೆ ಸಂಬಂಧ ಹೊಂದಿದೆ ಎಂದು ಅಧ್ಯಯನ ವರದಿ ಹೇಳಿದೆ.

pregnancy anxiety and insomnia drug linked with miscarriage
pregnancy anxiety and insomnia drug linked with miscarriage

By ETV Bharat Karnataka Team

Published : Dec 29, 2023, 3:19 PM IST

Updated : Dec 29, 2023, 3:37 PM IST

ನವದೆಹಲಿ:ಗರ್ಭಾವಸ್ಥೆಯ ಸಮಯದಲ್ಲಿ ಕಾಡುವ ಆತಂಕ, ನಿದ್ರಾಹೀನತೆಗೆ ಬಳಕೆ ಮಾಡುವ ಬೆಂಜೊಡಿಯಜೆಪೈನ್ ಔಷಧವು ಗರ್ಭಪಾತದ ಅಪಾಯಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂದು ಅಧ್ಯಯನ ವರದಿ ಎಚ್ಚರಿಸಿದೆ. ನ್ಯಾಷನಲ್​ ತೈವಲ್​ ಯೂನಿವರ್ಸಿಟಿ ಸಂಶೋಧಕರು ಈ ಕುರಿತು ಅಧ್ಯಯನ ನಡೆಸಿದ್ದಾರೆ. ತೈವಾನ್‌ನಾದ್ಯಂತ ಜನಸಂಖ್ಯಾಧಾರಿತ ಪ್ರಕರಣದಲ್ಲಿ ಗರ್ಭಾವಸ್ಥೆ ಸಂದರ್ಭದಲ್ಲಿ ಬಳಕೆ ಮಾಡುವ ಬೆಂಜೊಡಿಯಜೆಪೈನ್​ ಗರ್ಭಪಾತದೊಂದಿಗೆ ಸಂಬಂಧ ಹೊಂದಿದೆ. ಇದು ಇತರೆ ಕಾರಣಗಳ ಹೊರತಾಗಿ ಶೇ.70ರಷ್ಟು ಗರ್ಭಪಾತದ ಅಪಾಯ ಉಂಟುಮಾಡುತ್ತದೆ ಎನ್ನುವುದನ್ನು ಅವರು ಕಂಡುಕೊಂಡಿದ್ದಾರೆ.

2004 ಮತ್ತು 2018ರ ನಡುವೆ ಗರ್ಭಪಾತಕ್ಕೆ ಕಾರಣವಾದ ಗರ್ಭಧಾರಣೆ ಪ್ರಕರಣಗಳ ಅಧ್ಯಯನ ನಡೆಸಲಾಗಿದೆ. ಇದನ್ನು ಗರ್ಭಪಾತ ನಿಯಂತ್ರಣ ಪ್ರಕರಣದೊಂದಿಗೆ 1:1 ಅನುಪಾತದಲ್ಲಿ ಹೊಂದಾಣಿಕೆ ಮಾಡಲಾಗಿದೆ. ಈ ಅಧ್ಯಯನ ವರದಿಯನ್ನು ಜರ್ನಲ್​ ಜಾಮಾ ಸೈಕಿಯಾಟ್ರಿನಲ್ಲಿ ಪ್ರಕಟಿಸಲಾಗಿದೆ.

19 ಲಕ್ಷ ಮಹಿಳೆಯರ 30,76,122 ಗರ್ಭಾವಸ್ಥೆಯ ಪ್ರಕರಣಗಳನ್ನು ಅಧ್ಯಯನ ನಡೆಸಲಾಗಿದೆ. ಗರ್ಭಾವಸ್ಥೆಯ ಸಂದರ್ಭದಲ್ಲಿ 1.61,343 ಮಹಿಳೆಯರು ಗರ್ಭಾಪಾತಕ್ಕೆ ಒಳಗಾಗಿದ್ದು, ಇದರ ದರ 4.4ರಷ್ಟಿದೆ ಎಂಬುದು ಪತ್ತೆಯಾಗಿದೆ.

ಔಷಧಗಳ ಮೌಲ್ಯಮಾಪನ: ಗರ್ಭಾಪಾತವನ್ನು ಮಹಿಳೆಯೊಬ್ಬರು ಗರ್ಭಿಣಿಯಾದ ಮೊದಲ 8 ವಾರದಿಂದ 19 ವಾರ ಪೂರೈಸುವ ಮುನ್ನ ಮಗುವನ್ನು ಕಳೆದುಕೊಳ್ಳುವ ಅವಧಿಯಾಗಿ ಪರಿಗಣಿಸಲಾಗಿದೆ. ಈ ಅವಧಿಯಲ್ಲಿ ಮಹಿಳೆಯಲ್ಲಿ ಆತಂಕ ಮತ್ತು ನಿದ್ರಾ ಸಮಸ್ಯೆ ಕೂಡ ಕಂಡು ಬರುತ್ತದೆ. ಇದಕ್ಕೆ ನೀಡುವ ಚಿಕಿತ್ಸೆಗಳನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕಿದೆ. ಇವು ತಾಯಿ ಮತ್ತು ಮಗುವಿನ ಮೇಲೆ ಪರಿಣಾಮ ಬೀರುವ ಅಂಶವಾಗಿದೆ ಎಂದು ಅಧ್ಯಯನ ಹೇಳುತ್ತದೆ.

ಅಧ್ಯಯನದಲ್ಲಿ ಸಂಶೋಧಕರು ಗರ್ಭಪಾತದ ಅಪಾಯವೂ ಗರ್ಭಾವಸ್ಥೆಯಲ್ಲಿ ಬೆಂಜೊಡಿಯಜೆಪೈನ್ ಬಳಕೆಯೊಂದಿಗೆ ಸಂಬಂಧ ಹೊಂದಿದೆ ಎಂದು ಪತ್ತೆ ಮಾಡಿದ್ದಾರೆ. ಗರ್ಭಪಾತದ ಅಪಾಯ ಹೆಚ್ಚಳವೂ ಸಾಮಾನ್ಯವಾಗಿ ಬಳಕೆ ಮಾಡುವ ಬೆಂಜೊಡಿಯಜೆಪೈನ್ ಬಳಕೆಯೊಂದಿಗೆ ಸಂಬಂಧ ಹೊಂದಿದೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.

ಗರ್ಭಾವಸ್ಥೆ ಸಮಯದಲ್ಲಿ ಬೆಂಜೊಡಿಯಜೆಪೈನ್ ಬಳಕೆಯ ಬದಲಾಗಿ ಆತಂಕ ಮತ್ತು ನಿದ್ರಾಹೀನತೆಯಿಂದ ಬಳಲುತ್ತಿರುವರಿಗೆ ಮನೋವೈದ್ಯಕೀಯ ಚಿಕಿತ್ಸೆ ಮತ್ತು ನಿದ್ರೆಯ ಪರಿಹಾರ ಮಾರ್ಗಗಳನ್ನು ಸಲಹೆ ನೀಡಬಹುದು. ಬೆಂಜೊಡಿಯಜೆಪೈನ್ ಅಗತ್ಯತೆಯ ಮೌಲ್ಯಮಾಪನ ನಡೆಸಿ, ತಾಯಿ-ಮಗುವಿನ ಮೇಲಿನ ಅಪಾಯ ಕಡಿಮೆ ಮಾಡುವ ನಿಟ್ಟಿನಲ್ಲಿ ಸಮತೋಲನ ನಡೆಸಬೇಕಿದೆ ಎಂದು ಲೇಖಕರು ಸಲಹೆ ನೀಡಿದ್ದಾರೆ. (ಪಿಟಿಐ)

ಇದನ್ನೂ ಓದಿ: ಗರ್ಭಿಣಿಯರಿಗೆ ಆರಂಭಿಕ ಗರ್ಭಾವಸ್ಥೆಯಲ್ಲಿ ವಾಂತಿಯಾಗುವುದೇಕೆ?

Last Updated : Dec 29, 2023, 3:37 PM IST

ABOUT THE AUTHOR

...view details