ಹೈದರಾಬಾದ್:ಭ್ರೂಣದ ಸಾವು, ಸತ್ತ ಮಗುವಿನ ಜನನ, ಅಥವಾ ಹುಟ್ಟಿದ ತಕ್ಷಣ ನವಜಾತ ಶಿಶು ಸಾವನ್ನಪ್ಪುವ ಸಂಗತಿ ಯಾವುದೇ ಕುಟುಂಬವಾಗಿದ್ದರೂ ಅದು ಅವರಿಗೆ ನೋವಿನ ಸಂಗತಿಯೇ ಆಗಿರುತ್ತದೆ. ಜನನದ ಮೊದಲು ಅಥವಾ ಹುಟ್ಟಿದ ತಕ್ಷಣ ತಾಯಿಯ ಹೊಟ್ಟೆಯಲ್ಲಿ ಮರಣ ಹೊಂದಿದ ನವಜಾತ ಶಿಶುಗಳನ್ನು ನೆನಪಿಸಿಕೊಳ್ಳುವ ಉದ್ದೇಶದಿಂದ ಅಕ್ಟೋಬರ್ ಅನ್ನು 'ಗರ್ಭಧಾರಣೆ ಮತ್ತು ಶಿಶುಗಳ ನಷ್ಟದ ನೆನಪು ಹಾಗೂ ಜಾಗೃತಿ ತಿಂಗಳು' ಎಂದು ಆಚರಿಸಲಾಗುತ್ತದೆ.
ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿಶ್ವಸಂಸ್ಥೆಯ ಪ್ರಕಾರ, ಪ್ರತಿ ವರ್ಷ ಎರಡು ದಶಲಕ್ಷಕ್ಕೂ ಹೆಚ್ಚು ಸತ್ತ ಮಗುವಿನ ಜನನ ಪ್ರಕರಣಗಳು ವರದಿಯಾಗುತ್ತವೆ. ಮತ್ತೊಂದೆಡೆ, ನಾವು ವರ್ಷವಾರು ಅಂಕಿ- ಅಂಶಗಳನ್ನು ಗಮನಿಸಿದೆ 2015 ರಲ್ಲಿ, ಸುಮಾರು 2.6 ಮಿಲಿಯನ್ ಸತ್ತ ಮಗುವಿನ ಜನನ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಒಂದು ದಿನಕ್ಕೆ ಸತ್ತ ಮಗುವಿನ ಜನನಗಳ ಸಂಖ್ಯೆ ಸುಮಾರು 7,178 ಆಗಿತ್ತು. ಸೋಜಿಗ ಎಂಬಂತೆ ಈ ಪ್ರಕರಣಗಳಲ್ಲಿ ಹೆಚ್ಚಿನವು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ವರದಿಯಾಗಿವೆ.
ಅಮೆರಿಕದಲ್ಲಿ ಆಚರಿಸಲ್ಪಡುತ್ತಿದ್ದ ದಿನ:'ಗರ್ಭಧಾರಣೆ ಮತ್ತು ಶಿಶುಗಳ ನಷ್ಟದ ನೆನಪಿನ ಮಾಸ'ವನ್ನು ಪ್ರತಿ ವರ್ಷ ಅಕ್ಟೋಬರ್‌ನಲ್ಲಿ ವಿಶ್ವಾದ್ಯಂತ ಆಚರಿಸಲಾಗುತ್ತದೆ. ಇದು ಕೇವಲ ಸತ್ತ ಜನನಗಳನ್ನು ಮಾತ್ರವಲ್ಲದೇ ಗರ್ಭಪಾತಕ್ಕೆ ಒಳಗಾದ ಭ್ರೂಣಗಳನ್ನು ಮತ್ತು ಹುಟ್ಟಿದ ತಕ್ಷಣ ತಮ್ಮ ಜೀವವನ್ನು ಕಳೆದುಕೊಳ್ಳುವ ನವಜಾತ ಶಿಶುಗಳನ್ನು ನೆನಪಿಟ್ಟುಕೊಳ್ಳುವ ಕಾರಣಕ್ಕಾಗಿ ಆಚರಿಸಲ್ಪುಡುತ್ತದೆ. ಈ ಘಟನೆಯನ್ನು ಮೊದಲು ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಲ್ಲಿ ಗರ್ಭಧಾರಣೆ ಮತ್ತು ಶಿಶುಗಳ ನಷ್ಟದ ನೆನಪಿನ ದಿನ ಎಂದು ಪರಿಚಯಿಸಲಾಯಿತು.
ವಿಶ್ವಸಂಸ್ಥೆಯ ಅಧ್ಯಕ್ಷ ರೊನಾಲ್ಡ್ ರೇಗನ್ ಅವರು ಅಕ್ಟೋಬರ್ 25, 1988 ರಂದು ಗರ್ಭಧಾರಣೆ ಮತ್ತು ಮಕ್ಕಳ ನಷ್ಟದ ನೆನಪಿನ ದಿನವನ್ನು ಆಚರಿಸುವುದಾಗಿ ಮೊದಲು ಘೋಷಿಸಿದ್ದರು. 2000 ರಲ್ಲಿ, ರಾಬಿನ್ ಬೇರ್, ಲಿಸಾ ಬ್ರೌನ್ ಮತ್ತು ಟಮ್ಮಿ ನೊವಾಕ್ ಅವರು ಅಕ್ಟೋಬರ್ 15 ಅನ್ನು ಗರ್ಭಾವಸ್ಥೆ ಮತ್ತು ಶಿಶು ನಷ್ಟದ ಸ್ಮರಣಾರ್ಥ ದಿನ ಎಂದು ಗುರುತಿಸಲು ಫೆಡರಲ್ ಸರ್ಕಾರಕ್ಕೆ ಮನವಿ ಮಾಡಿದರು. ಅಂದಿನಿಂದ, ಪ್ರತಿ ವರ್ಷ ಪ್ರಪಂಚದಾದ್ಯಂತ ಅಕ್ಟೋಬರ್ 15 ರಂದು ಮತ್ತು ಅಕ್ಟೋಬರ್ ತಿಂಗಳನ್ನು ಗರ್ಭಧಾರಣೆ ಮತ್ತು ಶಿಶುಗಳ ನಷ್ಟದ ನೆನಪಿನ ತಿಂಗಳು ಎಂದು ಆಚರಿಸಲಾಗುತ್ತದೆ.
ಗರ್ಭಾವಸ್ಥೆಯಲ್ಲಿ, ಜನನದ ಸಮಯದಲ್ಲಿ ಅಥವಾ ಹುಟ್ಟಿದ ಸ್ವಲ್ಪ ಸಮಯದಲ್ಲೇ ಮರಣ ಹೊಂದಿದ ಮಕ್ಕಳನ್ನು ನೆನಪಿಸಿಕೊಳ್ಳುವುದು ಮಾತ್ರವಲ್ಲದೆ ಗರ್ಭಪಾತ, ಹೆರಿಗೆ ಮತ್ತು ನವಜಾತ ಶಿಶುವಿನ ಸಾವಿಗೆ ಕಾರಣಗಳು ಮತ್ತು ತಡೆಗಟ್ಟುವಿಕೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಗರ್ಭಾವಸ್ಥೆ ಮತ್ತು ಮಕ್ಕಳ ನಷ್ಟ ಸ್ಮರಣಾರ್ಥ ಮಾಸವನ್ನು ಆಚರಿಸುವ ಉದ್ದೇಶವಾಗಿದೆ.
ಈ ಒಂದು ತಿಂಗಳ ಅವಧಿಯಲ್ಲಿ, ಜನಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಅಲ್ಲಿ ಗರ್ಭಾವಸ್ಥೆಯಲ್ಲಿ, ಹುಟ್ಟಿದಾಗ ಅಥವಾ ಯಾವುದೇ ಕಾರಣದಿಂದ ಮರಣ ಹೊಂದಿದ ಮಕ್ಕಳನ್ನು ನೆನಪಿಸಿಕೊಳ್ಳಲಾಗುತ್ತದೆ. ಮುಖ್ಯವಾಗಿ ಅಕ್ಟೋಬರ್ 15 ರಂದು, ಗರ್ಭಧಾರಣೆ ಮತ್ತು ಶಿಶುಗಳ ನಷ್ಟದ ಸ್ಮರಣಾರ್ಥ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ.