ಜೋಧಪುರ :ಕಳೆದ ಕೆಲ ತಿಂಗಳುಗಳಿಂದ ವಿಶ್ವಾದ್ಯಂತ ಕೊರೊನಾ ಮಹಾಮಾರಿಯ ಕರಿನೆರಳು ಆವರಿಸಿದೆ. ರೋಗ ನಿರೋಧಕ ಶಕ್ತಿ ಇಲ್ಲದವರು ಕೊರೊನಾ ವೈರಸ್ ಸೇರಿ ಇನ್ನಿತರ ವೈರಸ್ಗಳ ದಾಳಿಗೆ ಬಹುಬೇಗನೆ ತುತ್ತಾಗುತ್ತಾರೆ ಎಂಬುದು ಅಧ್ಯಯನಗಳಿಂದ ಸಾಬೀತಾಗಿದೆ. ಹೀಗಾಗಿ ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಎಲ್ಲಾ ಭಾರತೀಯರೂ ಮುಂದಾಗಬೇಕಿದೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಯೋಗ ಹಾಗೂ ಪ್ರಾಣಾಯಾಮ ಅತ್ಯಂತ ಪರಿಣಾಮಕಾರಿ ಎಂದು ಇಲ್ಲಿನ ಯೋಗ ಶಿಕ್ಷಕಿ ರಚನಾ ರಾಂಕಾವತ್ ತಿಳಿಸಿದ್ದಾರೆ. ಲಾಕ್ಡೌನ್ನ ಸಮಯದಲ್ಲಿ ಮನೆಯಲ್ಲಿ ಇರುವ ಜನತೆ ಬೆಳಗ್ಗೆ ಹಾಗೂ ಸಂಜೆ ಸೂರ್ಯ ನಮಸ್ಕಾರ ಮತ್ತು ಪ್ರಾಣಾಯಾಮಗಳನ್ನು ಅಭ್ಯಾಸ ಮಾಡಬೇಕು. ಇದರಿಂದ ಶರೀರ ಸದೃಢವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಕಳೆದ 15 ವರ್ಷಗಳಿಂದ ಯೋಗ ಕಲಿಸುತ್ತಿರುವ ರಚನಾ ರಾಂಕಾವತ್ ಸಲಹೆ ನೀಡಿದ್ದಾರೆ.