ಕರ್ನಾಟಕ

karnataka

ETV Bharat / sukhibhava

ಕ್ಲಿಷ್ಟಕರ ಆಸನಗಳ ಬದಲಾಗಿ ಈ ಸರಳ ಅಭ್ಯಾಸ ರೂಢಿಸಿಕೊಳ್ಳಿ: ಈ ವ್ಯಾಯಾಮಗಳಿಂದ ಇದೇ ಹೆಚ್ಚಿನ ಲಾಭ - ಬಿಡುವಿಲ್ಲದ ದಿನಚರಿಯಿಂದಾಗಿ

ಸರಳ ಯೋಗ ಆಸನ ಮಾಡುವುದ ಜೊತೆಗೆ ಅಗತ್ಯ ಸ್ಟ್ರೆಚ್​ಗಳನ್ನು ಮಾಡುವುದರಿಂದ ಸ್ನಾಯುಗಳಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಜೊತೆಗೆ ಮಾನಸಿಕ ನೆಮ್ಮದಿ, ಏಕಾಗ್ರತೆಗೆ ವೃದ್ಧಿಗೆ ಇದು ಸಹಾಯಕವಾಗಲಿದೆ.

Practice this simple asana instead of the complicated one; There are many benefits
Practice this simple asana instead of the complicated one; There are many benefits

By

Published : Apr 28, 2023, 1:00 PM IST

ಬೆಂಗಳೂರು​: ಆರೋಗ್ಯದ ದೃಷ್ಟಿಯಿಂದ ಪ್ರತಿನಿತ್ಯದ ವ್ಯಾಯಾಮ ಅಭ್ಯಾಸ ಅಥವಾ ಯೋಗ ಅಭ್ಯಾಸ ರೂಢಿಸಿಕೊಳ್ಳುವುದು ಎಷ್ಟು ಅವಶ್ಯ ಎಂಬುದನ್ನು ಅರಿಯುವುದು ಅವಶ್ಯ. ಆದರೆ, ಬಹುತೇಕ ಜನರು ತಮ್ಮ ಬಿಡುವಿಲ್ಲದ ದಿನಚರಿಯಿಂದಾಗಿ ಅವರು ಯೋಗ ಅಥವಾ ಮತ್ತಿತ್ತರ ವ್ಯಾಯಾಮ ಚಟುವಟಿಕೆ ರೂಶಿಸಿಕೊಳ್ಳುವುದಿಲ್ಲ. ಜೊತೆಗೆ ಯೋಗ ಆಸನದ ಮಾಡುವುದು ಕಷ್ಟಕರ ಎಂಬ ಹಿಂಜರಿಗೆ ಮತ್ತು ತಪ್ಪು ಕಲ್ಪನೆಗಳು ಇದರಲ್ಲಿ ಒಂದು ಕಾರಣವಾಗಿದೆ.

ಈ ಕುರಿತು ಮಾತನಾಡಿರುವ ಬೆಂಗಳೂರಿನ ಫಿಟ್ನೆಸ್​ ತಜ್ಞೆ ಮತ್ತು ಯೋಗ ಗುರು ಮೀನು ವರ್ಮಾ, ಕ್ಲಿಷ್ಟಕರ ಯೋಗ ಆಸನಗಳನ್ನು ಮಾಡಿದಾಕ್ಷಣ ಅದರಿಂದ ಮಾತ್ರ ಲಾಭ ಅಲ್ಲ. ಇದರಲ್ಲೂ ಅನೇಕ ಸರಳ ಆಸನಗಳಿವೆ ಅವು ಕೂಡ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಸರಳ ಯೋಗ ಆಸನ ಮಾಡುವುದ ಜೊತೆಗೆ ಅಗತ್ಯ ಸ್ಟ್ರೆಚ್​ಗಳನ್ನು ಮಾಡುವುದರಿಂದ ಸ್ನಾಯುಗಳಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಜೊತೆಗೆ ಮಾನಸಿಕ ನೆಮ್ಮದಿ, ಏಕಾಗ್ರತೆಗೆ ವೃದ್ಧಿಗೆ ಇದು ಸಹಾಯಕವಾಗಲಿದೆ. ನಿತ್ಯ 20ರಿಂದ 30 ನಿಮಿಷ ಯೋಗಾಸನ ಮಾಡುವುದು ಉತ್ತಮ. ಈ ವೇಳೆ ಇಡೀ ದೇಹ ಸ್ಟ್ರೆಚ್ ಆಗುವುದರಿಂದ ಇದು ಆರೋಗ್ಯಕ್ಕೆ ಹೆಚ್ಚಿನ ಕೊಡುಗೆ ನೀಡುತ್ತದೆ. ​

ಯೋಗದಲ್ಲಿರುವ ಸರಳ ಆಸನಗಳ ಕುರಿತು ವಿವರಣೆ ನೀಡಿರುವ ಅವರು, ಇವು ಮಾಡುವುದು ಸುಲಭ ಜೊತೆಗೆ ಇದಕ್ಕೆ ಹೆಚ್ಚಿನ ಸಮಯ ಬೇಕಿಲ್ಲ ಎಂದಿದ್ದಾರೆ. ನಮ್ಮ ತಜ್ಞರ ಅನುಸಾರ, ಕೆಲವು ಸರಳ ಯೋಗಾಸನಗಳು ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೂ ಅಗತ್ಯವಾಗಿದೆ ಎಂದಿದ್ದಾರೆ. ಅಂತಹ ಆಸನ ಇಲ್ಲಿದೆ.

ತ್ರಿಕೋನಾಸನ:

ತ್ರಿಕೋನಾಸನ
  • ಈ ಆಸನ ಮಾಡಲು ನೇರವಾಗಿ ನಿಂತ ಕಾಲಿನ ನಡುವೆ ಮೂರು ಅಡಿ ಅಂತರ ಕಾಯ್ದುಕೊಳ್ಳಿ
  • ಈ ವೇಳೆ ನಿಮ್ಮ ಮಂಡಿ ನೇರವಾಗಿದೆಯಾ ಎಂಬುದನ್ನು ಗಮನಿಸಿದೆ.
  • ನೇರವಾಗಿ ನೋಡುತ್ತ ನಿಮ್ಮ ಎರಡು ತೋಳುಗಳನ್ನು ನೇರವಾಗಿ ಚಾಚಿ, ಭುಜವನ್ನು ಸ್ಟ್ರೇಚ್​ ಮಾಡಿ.
  • ಬಲ ಕಾಲನ್ನು ಬಲಕ್ಕೆ ಚಾಚಿ.
  • ಅದೇ ರೀತಿ ದೀರ್ಘವಾದ ಉಸಿರು ಎಳೆದುಕೊಂಡು ಅದೇ ಭಂಗಿಯಲ್ಲಿ ಬಲಕ್ಕೆ ನೇರವಾಗಿ ಬಗ್ಗಿ
  • ಅಂಗೈ ಅನ್ನು ನೆಲಕ್ಕೆ ಮುಟ್ಟಿಸಿ. ಈ ವೇಳೆ ನಿಮ್ಮ ಎಡಗೈ ಆಕಾಶವನ್ನು ನೋಡುತ್ತಿರಲಿ.
  • ಇದೇ ರೀತಿ ನೇರವಾಗಿ 10-30 ಸೆಕೆಂಡ್​ ಇರಿ.
  • ಮತ್ತೆ ಇದೀಗ ಮೊದಲಿನ ಭಂಗಿಗೆ ಮೇಲೆ ಏಳಿ. ಬಳಿಕ ಇದನ್ನೇ ಎಡ ಭಾಗದಲ್ಲೂ ಮುಂದುವರೆಸಬೇಕು.
    ತಾಡಾಸನ

ತಾಡಾಸನ:

  • ನೇರವಾಗಿ ನಿಂತು
  • ಬಳಿಕ ನಮಗೆ ನಮಸ್ಕಾರ ಮಾಡುವಂತೆ ನೇರವಾಗಿ ಬಾಗಿ. ಕೈಗಳನ್ನು ಮುಂದೆ ಚಾಚಿ ನೆಲಕ್ಕೆ ಉರಿ.
  • ದೀರ್ಘ ಉಸಿರು ತೆಗೆದುಕೊಂಡ ಬಳಿಕ ಪಾದವನ್ನು ನೆಲದ ಮೇಲೆ ಸಂಪೂರ್ಣವಾಗಿ ಉರಿ. ಈ ವೇಳೆ ಮಂಡಿ ಮಡುಚದಂತೆ ನೋಡಿಕೊಳ್ಳಿ.
  • ಇದೇ ರೀತಿ 10 ರಿಂದ 15 ನಿಮಿಷ ಈ ಆಸನ ಮಾಡಿ ಬಳಿ. ಬಳಿಕ ಮೊದಲಿನ ಭಂಗಿಗೆ ಬನ್ನಿ.
    ಉತ್ತನ್​ ಆಸನ

ಉತ್ತನ್ ​ಆಸನ:

  • ನೇರವಾಗಿ ನಿಂತು ದೀರ್ಘ ಉಸಿರು ಎಳೆದುಕೊಳ್ಳಿ.
  • ಬಳಿಕ ಎರಡು ಕೈಗಳನ್ನು ನೇರವಾಗಿ ಮುಂದೆ ಚಾಚಿ.
  • ಇದೀಗ ಕೈಯನ್ನು ಪಾದಕ್ಕೆ ಮುಟ್ಟಿಸಿ, ಮಂಡಿಯೂರಿ ಕುಳಿತುಕೊಳ್ಳಿ. ಕೈ ಮುಂದೆ ಚಾಚಿದ್ದು, ತಲೆ ಸಂಪೂರ್ಣವಾಗಿ ನೆಲ ಮುಟ್ಟಲಿ
  • ಈ ಆಸನದಲ್ಲಿ 20-30 ಸೆಕೆಂಡ್​ ಇದ್ದು, ದೀರ್ಘ ಉಸಿರು ಎಳೆದುಕೊಳ್ಳಿ.
    ಬಾಲಾಸನ

ಬಾಲಾಸನ:

  • ಯೋಗ ಮ್ಯಾಟ್​ನಲ್ಲಿ ಕುಳಿತು ವಜ್ರಾಸನದಂತೆ ಮಂಡಿಯೂರಿ. ಕೈಗಳನ್ನು ಮುಂದೆ ಉರಿ. ಕಾಲ ಬೆರಳ ಮೇಲೆ ನಿಯಂತ್ರಣ ಸಾಧಿಸಿ
  • ಬಳಿಕ ಉತ್ತನ್​ ಆಸನ ಮಾದರಿ ದೇಹವನ್ನು ನೆಲಕ್ಕೆ ಬಾಗಿಸಿ.
  • ಈ ವೇಳೆ ಕೈಗಳನ್ನು ನೇರವಾಗಿ ಇರುವಂತೆ ನೋಡಿಕೊಳ್ಳಿ
  • ಈ ವೇಳೆ ದೀರ್ಘ ಉಸಿರು ಬಿಡುವಾಗ ನಿಮ್ಮ ಬೆನ್ನುಮೂಳೆಯನ್ನು ಮೇಲೆ ಎತ್ತಿ.

ನಿಯಮಿತವಾಗಿ ಯೋಗ ಆಸನ ಮಾಡುವುದರಿಂದ ಕೇವಲ ಸ್ನಾಯು ಮತ್ತು ದೇಹದ ಆರೋಗ್ಯಕ್ಕೆ ಒಳಿತಾಗದೆ ದೇಹದ ಬಿಗಿತನ ಮತ್ತು ಸ್ನಾಯುವಿನ ಒತ್ತಡ ನಿವಾರಣೆ ಆಗಲಿದೆ. ಇದು ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಆಲಸ್ಯ, ಸೋಮಾರಿತನವನ್ನು ಹೋಗಲಾಡಿಸುತ್ತದೆ. ಇದು ದೇಹದಲ್ಲಿ ರಕ್ತ ಪರಿಚಲನೆಗೆ ಸಹಾಯವಾಗುವುದರ ಜೊತೆಗೆ ರಕ್ತದ ಒತ್ತಡ ಕಡಿಮೆ ಮಾಡುತ್ತದೆ. ಎಲ್ಲಾ ವಯೋಮಾನದವರು ಈ ಆಸನಗಳನ್ನು ಸುಲಭವಾಗಿ ಮಾಡಬಹುದಾಗಿದೆ. ಇನ್ನು ಈ ಸರಳ ಇರಲಿ ಅಥವಾ ಕ್ಲಿಷ್ಟಕರ ಯೋಗಾಸನಗಳನ್ನು ಆರಂಭಿಸುವಾಗ ತರಬೇತುದಾರ ಮಾರ್ಗದರ್ಶನ ಅಗತ್ಯವಾಗಿರುತ್ತದೆ.

ಸ್ನಾಯು, ಮೋಳೆ ಅಥವಾ ಗಾಯದ ಸಮಸ್ಯೆಗಳಿಂದ ಬಳಲುತ್ತಿರುವವರು ವೈದ್ಯರ ಸಲಹೆ ಪಡೆದ ಬಳಿಕವೇ ಈ ಯೋಗಾಸನ ರೂಢಿಸಿಕೊಳ್ಳಬೇಕು.

ABOUT THE AUTHOR

...view details