ನವದೆಹಲಿ: ನವರಾತ್ರಿ ಸಂಭ್ರಮದಲ್ಲಿ ಆಹಾರಗಳು ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲೂ ಸಸ್ಯಹಾರಿಗಳು ತಮ್ಮ ಹೆಚ್ಚಿನ ಆಹಾರದ ಆದ್ಯತೆಯಲ್ಲಿ ಆಲೂಗಡ್ಡೆಯನ್ನು ಕೇಂದ್ರವಾಗಿಸುತ್ತಾರೆ. ನವರಾತ್ರಿಯ ಪ್ರಮುಖ ಆಹಾರಗಳಾದ ಕಿಚಡಿ, ಆಲೂ ಟಿಕ್ಕಿ, ಆಲೂ ಚಾಟ್ ಮತ್ತು ಕಟ್ಲೆಟ್ಜಗಳು ಆಲೂಗಡ್ಡೆಯಿಂದಲೇ ಕೂಡಿರುತ್ತವೆ. ಆಲೂಗಡ್ಡೆಯು ಹಬ್ಬದ ಸಂಭ್ರಮ ಹೆಚ್ಚಿಸುವ ತಿಂಡಿಗಳಲ್ಲಿ ಪ್ರಾಧಾನ್ಯತೆ ಪಡೆದುಕೊಂಡಿದೆ.
ಕೇವಲ ನವರಾತ್ರಿ ಮಾತ್ರವಲ್ಲದೇ, ಎಲ್ಲ ಋತುಗಳಲ್ಲಿ ಕೂಡ ಈ ಆಲೂಗಡ್ಡೆ ಭಾರತೀಯರ ನಾಲಿಗೆ ರುಚಿ ತಣಿಸುತ್ತದೆ. ಶೇ 65ರಷ್ಟು ಭಾರತೀಯರು ಆಲೂಗಡ್ಡ ಆಧಾರಿತ ಆಹಾರ ಪ್ರಿಯರಾಗಿದ್ದು, ಇದು ಬೆಸ್ಟ್ ಸ್ನಾಕ್ ಆಗಿ ಹೊರ ಹೊಮ್ಮುತ್ತದೆ. STTEM - ಸುರಕ್ಷತೆ, ತಂತ್ರಜ್ಞಾನ, ರುಚಿ, ಸುಲಭ ಮತ್ತು ಮೂಡ್ ಅಪ್‌ಲಿಫ್ಟರ್' - ದಿ ಇಂಡಿಯಾ ಸ್ನ್ಯಾಕಿಂಗ್ ವರದಿಯಲ್ಲಿ ಫ್ರೋಜನ್ ರೆಡಿ-ಟು- ಕ್ಷೇತ್ರದಲ್ಲಿ ಪ್ರವರ್ತಕ ಬ್ರಾಂಡ್ ಆಗಿರುವ ಗೋದ್ರೇಜ್ ಯುಮ್ಮಿಜ್ ಆಲೂಗಡ್ಡೆಯು ಭಾರತೀಯರ ಆಹಾರದಲ್ಲಿ ಪಡೆದಿರುವ ಸ್ಥಾನ ಕುರಿತು ಅಧ್ಯಯನ ನಡೆಸಿದೆ. ಈ ವರದಿಯಲ್ಲಿ ಭಾರತೀಯರ ಆಹಾರ ರುಚಿ ಬಗ್ಗೆ ತಿಳಿಸಲಾಗಿದ್ದು, ಅವರ ಪಾಕ ಶಾಲೆಯ ರುಚಿ ತಿಳಿಸಿದೆ.
ಆಲೂ ಬಳಕೆಗೆ ಹೆಚ್ಚಿನ ಮನ್ನಣೆ: ವರದಿ ಅನುಸಾರ, ಎಲ್ಲ ಪ್ರದೇಶಗಳಲ್ಲಿ ನಾವು ಗಮನಿಸಿದಂತೆ, ಭಾರತೀಯರು ಆಲೂಗಡ್ಡೆ ಆಧಾರಿತ ಸ್ನಾಕ್ಸ್ಗಳಿಗೆ ಹೆಚ್ಚಿನ ಒಲವು ವ್ಯಕ್ತವಾಗಿದ್ದು, ಇದರಲ್ಲಿ ಪೂರ್ವ ಭಾರತದ ಪ್ರದೇಶದ ಜನರು ಹೆಚ್ಚಿನ ಆಲೂಗಡ್ಡೆ ಬಳಸುವುದು ದಾಖಲಾಗಿದೆ. ನಂತರದಲ್ಲಿ ಉತ್ತರ ಭಾರತ ಇದ್ದು, ಇದಲ್ಲಿ ಶೇ 69ರಷ್ಟು ಜನ ತಮ್ಮ ಆಹಾರದ ಆಯ್ಕೆಯಲ್ಲಿ ಆಲೂಗಡ್ಡೆಗೆ ಸ್ಥಾನ ನೀಡಿದ್ದರೆ. ಇನ್ನು ಆಲೂಗಡ್ಡೆಯನ್ನು ಹೆಚ್ಚಾಗಿ ಬಳಕೆ ಮಾಡುವ ಭಾರತದ ಮೂರನೇ ಸ್ಥಾನ ಪಡೆದಿರುವ ಪ್ರದೇಶ ಪಶ್ಚಿಮ ಪ್ರದೇಶವಾಗಿದ್ದು, ಇಲ್ಲಿ ಶೇ 65ರಷ್ಟು ಬಳಕೆ ಮಾಡುತ್ತದೆ. ದಕ್ಷಿಣ ಭಾರತವೂ ಶೇ 62ರಷ್ಟು ಸ್ಕೋರ್ ಮಾಡಿದ್ದು, ಇಲ್ಲಿ ಕೂಡ ಆಲೂಗಡ್ಡೆ ಆಧಾರಿತ ಸ್ನಾಕ್ಸ್ಗೆ ಮಣೆ ಹಾಕುವುದು ತಿಳಿದು ಬಂದಿದೆ.
ಗೋದ್ರೇಜ್ ಟೈಸನ್ ಫುಡ್ ಲಿಮಿಡೆಟ್ (ಜಿಟಿಎಫ್ಎಲ್)ನ ಯಮ್ಮಿಸ್ನ ಎವಿಪಿ ಮೊಹಿತ್ ಮರ್ವಾಹ ಮಾತನಾಡಿ, ಗ್ರೋದ್ರೇಜ್ ಯಮ್ಮಿಸ್ ಗ್ರಾಹಕರನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದು, ಫ್ರೋಜನ್ ರೆಡಿ - ಟು - ಕುಕ್ ವಿಭಾಗವನ್ನು ಮರುವ್ಯಾಖ್ಯಾನಿಸುವ ಪ್ರವೃತ್ತಿಯನ್ನು ರೂಪಿಸುತ್ತದೆ. ಭಾರತೀಯ ಸ್ನ್ಯಾಂಕಿಂಗ್ ವರದಿಯು ಭಾರತೀಯರ ಆಹಾರದ ಟ್ರೆಂಡ್ ಅನ್ನು ವಿಶ್ಲೇಷಿಸುವ, ಊಹಿಸುವ ಕಾರ್ಯ ಮಾಡಿದೆ. ವರದಿಯಲ್ಲಿ ಆಲೂಗಡ್ಡೆ ಸಾಂಸ್ಕೃತಿಕ ಸ್ಥಾನವನ್ನು ಹೊಂದಿದ್ದು, ಹಲವು ಸಂದರ್ಭದಲ್ಲಿ ಅಗತ್ಯ ಆಹಾರವಾಗಿ ಸ್ಥಾನ ಪಡೆದುಕೊಂಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ.