ಕರ್ನಾಟಕ

karnataka

By

Published : Dec 3, 2022, 10:56 AM IST

ETV Bharat / sukhibhava

ಕರುಳಿನ ಸೂಕ್ಷ್ಮಜೀವಿಗಳ ಮೇಲೆ ಕಡಲೆಕಾಯಿ, ಗಿಡಮೂಲಿಕೆಗಳಿಂದ ಅದ್ಭುತ ಪರಿಣಾಮ

ಮಾನವನ ಕರುಳಿನ ಸೂಕ್ಷ್ಮಜೀವಿಯು ಕರುಳಿನೊಳಗೆ ವಾಸಿಸುವ ಟ್ರಿಲಿಯನ್ಗಟ್ಟಲೆ ಸೂಕ್ಷ್ಮಜೀವಿಗಳ ಸಂಗ್ರಹವಾಗಿದೆ. ಅಲ್ಲಿನ ಬ್ಯಾಕ್ಟೀರಿಯಾಗಳು ಚಯಾಪಚಯ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ನಿರ್ವಹಿಸುವ ಜೊತೆಗೆ ದೇಹದ ಎಲ್ಲಾ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರತ್ತದೆ.

ಕರುಳಿನ ಸೂಕ್ಷ್ಮಜೀವಿಗಳ ಮೇಲೆ ಕಡಲೆಕಾಯಿ, ಗಿಡಮೂಲಿಕೆಗಳಿಂದ ಸಕಾರಾತ್ಮಕ ಪರಿಣಾಮ; ಅಧ್ಯಯನ
positive-effect-of-peanuts-herbs-on-gut-microbes-study

ವಾಷಿಂಗ್ಟನ್​​:ಪ್ರತಿದಿನ ಒಂದು ಮುಷ್ಟಿ ಕಡಲೆಕಾಯಿ ಅಥವಾ ಒಂದು ಟೀ ಸ್ಪೂನ್​ ಗಿಡಮೂಲಿಕೆಗಳು ಮತ್ತು ಮಸಾಲೆಗಳನ್ನು ತಿನ್ನುವುದು ಕರುಳಿನ ಸೂಕ್ಷ್ಮ ಸಂಯೋಜನೆಯ ಮೇಲೆ ಪ್ರಭಾವ ಬೀರಬಹುದು. ಇದು ಒಟ್ಟಾರೆ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರಲಿದೆ ಎಂದು ನ್ಯೂ ಪೆನ್​ ಸ್ಟೇಟ್​ ಸಂಶೋಧನೆಯಲ್ಲಿ ತಿಳಿಸಿದೆ. ಅಮೆರಿಕದ ಜನರ ಡಯಟ್​ನಲ್ಲಿ ಆದ ಸಣ್ಣ ಬದಲಾವಣೆ ಕರುಳಿನ ಸೂಕ್ಷ್ಮಜೀವಿಯಲ್ಲಿ ಪರಿಣಾಮ ಕಂಡು ಬಂದಿದೆ ಎಂದು ಮತ್ತೊಂದು ಅಧ್ಯಯನಲ್ಲಿ ತಿಳಿಸಲಾಗಿದೆ.

ಮಾನವನ ಕರುಳಿನ ಸೂಕ್ಷ್ಮಜೀವಿಯು ಕರುಳಿನೊಳಗೆ ವಾಸಿಸುವ ಟ್ರಿಲಿಯನ್​ಗಟ್ಟಲೆ ಸೂಕ್ಷ್ಮಜೀವಿಗಳ ಸಂಗ್ರಹವಾಗಿದೆ. ಅಲ್ಲಿನ ಬ್ಯಾಕ್ಟೀರಿಯಾಗಳು ಚಯಾಪಚಯ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ನಿರ್ವಹಿಸುವ ಜೊತೆಗೆ ದೇಹದ ಎಲ್ಲಾ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರತ್ತದೆ. ಉತ್ತಮ ಆಹಾರ ಮತ್ತು ಉತ್ತಮ ಡಯಟ್​ ಹೊಂದಿರುವವರಲ್ಲಿ ವಿಭಿನ್ನ ಸೂಕ್ಷ್ಮಜೀವಿಗಗಳು ಇರುತ್ತವೆ ಎಂದು ಸಂಶೋಧನೆ ತಿಳಿಸಿದೆ ಎಂದು ಇವಾನ್ ಪಗ್ ವಿಶ್ವವಿದ್ಯಾಲಯದ ಪೌಷ್ಟಿಕಾಂಶ ವಿಜ್ಞಾನಗಳ ಪ್ರಾಧ್ಯಾಪಕ ಪೆನ್ನಿ ಎಂ. ಕ್ರಿಸ್-ಎಥರ್ಟನ್ ತಿಳಿಸಿದ್ದಾರೆ.

ಕಡಲೆಕಾಯಿ ಅಧ್ಯಯನದಲ್ಲಿ, ಪ್ರತಿ ನಿತ್ಯ 28 ಗ್ರಾಂ ಕಡಲೆಬೀಜವನ್ನು ದಿನನಿತ್ಯ ಸೇವಿಸಿದಾಗ ಅತಿ ಹೆಚ್ಚು ಕಾರ್ಬೋಹೈಡ್ರೇಟ್​ ಸ್ನಾಕ್​ ಕ್ರಾಕರ್​ ಮತ್ತು ಚೀಸ್​ ವಿರುದ್ಧ ಇರುತ್ತದೆ. ಆರು ವಾರದ ಕಡೆಯಲ್ಲಿ ರುಮಿನೋಕೊಕೇಸಿಯ ಹೆಚ್ಚಿದ್ದು, ಆರೋಗ್ಯಯುತ ಯಕೃತ್​ ಮತ್ತು ಪ್ರತಿರೋಧಕ ಶಕ್ತಿಹೊಂದಿರುವ ಬ್ಯಾಕ್ಟೀರಿಯಾವನ್ನು ಕಾಣಬಹುದಾಗಿದೆ.

ಗಿಡಮೂಲಿಕೆ ಮತ್ತು ಮಸಾಲೆ ಅಧ್ಯಯನದಲ್ಲಿ, ಚಕ್ಕೆ, ಶುಂಠಿ, ಜೀರಿಗೆ, ಹಳದಿ, ರೋಸ್​ಮರಿ, ಒರೆಗಾನೊ, ತುಳಸಿ ಮತ್ತು ಥೈಮ್​ಗಳು ಹೃದಯರಕ್ತನಾಳದ ರೋಗದ ಅಪಾಯವನ್ನು ನಿಯಂತ್ರಿಸುತ್ತದೆ. ಪ್ರತಿ ನಿತ್ಯ 1/8 ಟೀಸ್ಪೂನ್, 3/4 ಟೀಸ್ಪೂನ್​ ಮತ್ತು 1 1/2 ಟೀಸ್ಪೂನ್​ ಈ ರೀತಿ ​ಮೂರು ಬಗೆಯಲ್ಲಿ ಇದನ್ನು ತಂಡ ಅಧ್ಯಯನ ನಡೆಸಿದೆ. ನಾಲ್ಕು ವಾರಗಳ ಬಳಿಕ ಸಂಶೋಧನಾ ಭಾಗಿದಾರರ್ಲಿ ಕರುಳಿನ ಬ್ಯಾಕ್ಟೀರಿಯದಲ್ಲಿ ವಿವಿಧತೆ ಹೆಚ್ಚಿದ್ದು, ರುಇನೋಕೊಕೇಸಿಯ ಕೂಡ ಹೆಚ್ಚಿದೆ. ಅದರಲ್ಲೂ ಈ ಏರಿಕೆ ಸಾಮಾನ್ಯ ಮತ್ತು ಅತಿ ಹೆಚ್ಚಿನ ಡೋಸ್​ಗಳ ಗಿಡಮೂಲಿಕೆ ಮತ್ತು ಮಸಾಲೆ ವಸ್ತುಗಳನ್ನು ಸೇವಿಸಿದಾಗ ಕಂಡು ಬಂದಿದೆ.

ಇದು ಸರಳವಾಗಿದ್ದು, ಜನರು ಮಾಡಬದಾಗಿದೆ. ಅಮೆರಿದ ಬಹುತೇಕ ಜನರ ಡಯಟ್​ ಉತ್ತಮವಾಗಿಲ್ಲ. ಹಾಗಾಗಿ ಈ ಗಿಡಮೂಲಿಕೆ ಮತ್ತು ಮಸಾಲೆಗಳನ್ನು ತಮ್ಮ ಡಯಟ್​ನಲ್ಲಿ ಬಳಕೆ ಮಾಡಬೇಕಿದೆ. ಇದರ ಜೊತೆಗೆ ನಿಮ್ಮ ಡಯಟ್​ನಲ್ಲಿನ ಸೋಡಿಯಂ ಕಡಿಮೆಗೆ ದಾರಿ ಇದಾಗಿದೆ ಎಂದು ಕ್ರಿಸ್-ಎಥರ್ಟನ್ ತಿಳಿಸಿದ್ದಾರೆ.

ಎರಡೂ ಅಧ್ಯಯನದಲ್ಲಿ ರುಮಿನೋಕೊಕೇಸಿಯ ಮತ್ತು ಬ್ಯಾಕ್ಟೀರಿಯಾದ ವೈವಿದ್ಯತೆ ಹೆಚ್ಚಿದ್ದು, ಸಕಾರಾತ್ಮಕತೆ ಕಂಡು ಬಂದಿದೆ. ವಿಜ್ಞಾನಿಗಳು ಕರುಳಿನ ಸೂಕ್ಷ್ಮಜೀವಿಗಳು ಮತ್ತು ಆರೋಗ್ಯ ಅಂಶಗಳ ಮಧ್ಯೆದ ಸಂಬಂಧ ಕುರಿತು ನಿರಂತರ ಕಲಿಕೆ ನಡೆಸಿದ್ದಾರೆ. ಒಟ್ಟಾರೆ ಆರೋಗ್ಯದ ದೃಷ್ಟಿಯಿಂದ ಅದರ ಸರಿಯಾದ ಸ್ಥಳ ಯಾವುದು ಎಂಬುದನ್ನು ನೋಡಲು ನಮಗೆ ಸೂಕ್ಷ್ಮಜೀವಿಯ ಕುರಿತು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ ಎಂದು ಕ್ರಿಸ್-ಎಥರ್ಟನ್ ತಿಳಿಸಿದ್ದಾರೆ.

ಇದನ್ನೂ ಓದಿ: ಮಿತಿಮೀರಿದ ಕೋಪವು ಸಹ ಒಂದು ಕಾಯಿಲೆ.. ಇದರ ನಿಯಂತ್ರಣಕ್ಕೆ ಇಲ್ಲಿವೆ ಸಲಹೆಗಳು

ABOUT THE AUTHOR

...view details