ಕರ್ನಾಟಕ

karnataka

ETV Bharat / sukhibhava

2020ರ ಜನಪ್ರಿಯ ಮನೆಮದ್ದು! - ಕೋವಿಡ್-19 ಸಾಂಕ್ರಾಮಿಕ

2020ರಲ್ಲಿ, ಪ್ರಪಂಚವು ಲಾಕ್‌ಡೌನ್ ಸ್ಥಿತಿಯಲ್ಲಿದ್ದಾಗ ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಮನೆಮದ್ದು ಭಾರತೀಯರ ಮನೆಗಳಲ್ಲಿ ಸಾಮಾನ್ಯವಾಗಿತ್ತು. ಈ ವರ್ಷದ ಕೆಲವು ಸಾಮಾನ್ಯ ಆರೋಗ್ಯ ಸಮಸ್ಯೆಗಳು ಹಾಗೂ ಬಳಕೆಯಾದ ಸಾಮಾನ್ಯ ಅಡುಗೆ ಪದಾರ್ಥಗಳ ಕುರಿತು ನೋಡೋಣ.

home remedies
home remedies

By

Published : Dec 29, 2020, 7:49 PM IST

ಹೈದರಾಬಾದ್: ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಅನೇಕ ಸಮಸ್ಯೆಗಳಿಗೆ ಮನೆಮದ್ದು ಅತ್ಯುತ್ತಮ ಚಿಕಿತ್ಸೆಯಾಗಿದೆ. ಹೊಟ್ಟೆ ನೋವು, ಆ್ಯಸಿಡಿಟಿ, ಶೀತ, ಕೆಮ್ಮು, ತಲೆನೋವು, ವಾಕರಿಕೆ, ವಾಂತಿ ಮುಂತಾದವುಗಳಿಗೆ ಮನೆಯಲ್ಲಿರುವ ಅಡುಗೆ ಪದಾರ್ಥಗಳನ್ನೇ ಬಳಸಬಹುದು. ವಿಶೇಷವಾಗಿ ಈ ವರ್ಷ 2020 ರಲ್ಲಿ, ಪ್ರಪಂಚವು ಲಾಕ್‌ಡೌನ್ ಸ್ಥಿತಿಯಲ್ಲಿದ್ದಾಗ ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಮನೆಮದ್ದು ಭಾರತೀಯರ ಮನೆಗಳಲ್ಲಿ ಸಾಮಾನ್ಯವಾಗಿತ್ತು. ಈ ವರ್ಷದ ಕೆಲವು ಸಾಮಾನ್ಯ ಆರೋಗ್ಯ ಸಮಸ್ಯೆಗಳು ಹಾಗೂ ಬಳಕೆಯಾದ ಸಾಮಾನ್ಯ ಅಡುಗೆ ಪದಾರ್ಥಗಳ ಕುರಿತು ನೋಡೋಣ.

ಸಾಮಾನ್ಯ ಪದಾರ್ಥಗಳು:

ಶುಂಠಿ:

ಆಂಟಿವೈರಲ್ ಮತ್ತು ಆಂಟಿಬ್ಯಾಕ್ಟೀರಿಯಲ್ ಗುಣಲಕ್ಷಣಗಳಿಂದಾಗಿ ಶುಂಠಿ ಯಾವಾಗಲೂ ಭಾರತೀಯ ಅಡುಗೆಮನೆಯಲ್ಲಿ ಪ್ರಮುಖ ಅಂಶವಾಗಿದೆ. ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ವಿವಿಧ ರೀತಿಯ ಸೋಂಕುಗಳನ್ನು ಕಡಿಮೆ ಮಾಡಲು ಶುಂಠಿ ಸಹಾಯ ಮಾಡುತ್ತದೆ.

ಶುಂಠಿ ಪುಡಿ
  • ಒಂದು ಚಿಟಿಕೆ ಒಣ ಶುಂಠಿ ಪುಡಿಯನ್ನು ಒಂದು ಲೋಟ ಬಿಸಿ ನೀರಿಗೆ ಸೇರಿಸಿ ಸೇವಿಸಿದರೆ ಇದು ಜೀರ್ಣಕಾರಿ ಶಕ್ತಿ ಹೆಚ್ಚಿಸುತ್ತದೆ ಮತ್ತು ಹೊಟ್ಟೆ ಉಬ್ಬರ ಕಡಿಮೆ ಮಾಡುತ್ತದೆ.
  • ಶುಂಠಿ ತುರಿದು ನೀರಿನಲ್ಲಿ ಕುದಿಸಿ, ಜೇನುತುಪ್ಪ ಸೇರಿಸಿ ಮತ್ತು ಅದನ್ನು ಕುಡಿದರೆ ಜ್ವರ ಮತ್ತು ಶೀತದ ಸಮಸ್ಯೆ ಪರಿಹಾರವಾಗುತ್ತದೆ. ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಸ್ವಲ್ಪ ನಿಂಬೆ ರಸ ಕೂಡ ಸೇರಿಸಬಹುದು.
  • ಬೆಲ್ಲದೊಂದಿಗೆ ಶುಂಠಿ ರಸ ಸೇವಿಸಿದರೆ ಇದು ಚರ್ಮದ ಅಲರ್ಜಿಗೆ ಸಹಾಯ ಮಾಡುತ್ತದೆ.
  • ಒಂದು ಪಾತ್ರೆಗೆ 4 ಕಪ್ ನೀರನ್ನು ಸುರಿದು ಅದಕ್ಕೆ 2 ಟೀಸ್ಪೂನ್ ಹೊಸದಾಗಿ ತುರಿದ ಶುಂಠಿಯನ್ನು ಸೇರಿಸಿ ಮತ್ತು ನೀರು ಅರ್ಧದಷ್ಟು ಕಡಿಮೆಯಾಗುವವರೆಗೆ ಕುದಿಸಬೇಕು. ಬಳಿಕ ಅದಕ್ಕೆ 1 ಟೀಸ್ಪೂನ್ ಹನಿ ಸೇರಿಸಬೇಕು. ತಣಿದ ಬಳಿಕ ಅದನ್ನು ಕುಡಿದರೆ ಬೆನ್ನು ನೋವು ನಿವಾರಣೆಯಾಗುತ್ತದೆ.
  • ಶುಂಠಿ ರಸದೊಂದಿಗೆ ಜೇನುತುಪ್ಪ ಬೆರೆಸಿ ಸೇವಿಸಿದರೆ ಅದು ಒಣ ಕೆಮ್ಮಿಗೆ ಸಹಕಾರಿ.

ತುಳಸಿ:

ಜನರು ಸಾಮಾನ್ಯವಾಗಿ ತುಳಸಿಯನ್ನು ಸಂಜೀವನಿ ಗಿಡಮೂಲಿಕೆಗೆ ಹೋಲಿಸುತ್ತಾರೆ. ಏಕೆಂದರೆ ಅದರಲ್ಲಿ ಔಷಧೀಯ ಗುಣಗಳು ಹೇರಳವಾಗಿವೆ.

ತುಳಸಿ
  • ಜ್ವರದ ಪರಿಹಾರಕ್ಕಾಗಿ, ಶುಂಠಿಹಾಗೂ ತುಳಸಿ ಎಲೆಗಳನ್ನು ನೀರಿಗೆ ಹಾಕಿ ಅರ್ಧದಷ್ಟು ಕಡಿಮೆಯಾಗುವವರೆಗೆ ಕುದಿಸಿ. ರುಚಿಗೆ ಅನುಗುಣವಾಗಿ ಅಗತ್ಯವಿದ್ದರೆ ಈ ಕಷಾಯಕ್ಕೆ ಜೇನುತುಪ್ಪವನ್ನು ಕೂಡ ಸೇರಿಸಬಹುದು.
  • ಬೆನ್ನು ನೋವು ನಿವಾರಣೆಗೆ, ಒಂದು ಬಾಣಲೆಯಲ್ಲಿ ಒಂದು ಕಪ್ ನೀರು ಸುರಿದು, ಅದಕ್ಕೆ 8-10 ತಾಜಾ ತುಳಸಿ ಎಲೆಗಳನ್ನು ಸೇರಿಸಿ. ನೀರು ಅರ್ಧದಷ್ಟು ಕಡಿಮೆಯಾಗುವವರೆಗೆ ಅದನ್ನು ಕುದಿಸಿ, ಕಷಾಯವನ್ನು ತಣ್ಣಗಾಗಲು ಬಿಡಿ. ಬಳಿಕ ಸ್ವಲ್ಪ ಉಪ್ಪು ಉಪ್ಪು ಸೇರಿಸಿ ಸೇವಿಸಿ.
  • ಪ್ರತಿದಿನ ಬೆಳಿಗ್ಗೆ 5ರಿಂದ 8 ತುಳಸಿ ಎಲೆಗಳನ್ನು ಅಗಿಯುವುದರಿಂದ ಒಣ ಕೆಮ್ಮು ನಿವಾರಣೆಯಾಗುತ್ತದೆ.

ಬೆಳ್ಳುಳ್ಳಿ:

ಬೆಳ್ಳುಳ್ಳಿಯಲ್ಲಿರುವ ಆ್ಯಂಟಿ ಬ್ಯಾಕ್ಟೀರಿಯಲ್ ಮತ್ತು ಆ್ಯಂಟಿವೈರಲ್ ಗುಣಲಕ್ಷಣಗಳು ನೈಸರ್ಗಿಕವಾಗಿ ಅನೇಕ ರೋಗಗಳನ್ನು ನಿವಾರಿಸುತ್ತದೆ.

ಬೆಳ್ಳುಳ್ಳಿ
  • ಒಣ ಕೆಮ್ಮುಗಾಗಿ, 2-3 ಬೆಳ್ಳುಳ್ಳಿಯ ಎಸಳುಗಳನ್ನು ಒಂದು ಕಪ್ ನೀರಿನಲ್ಲಿ ಕುದಿಸಿ, ನಂತರ ಅದಕ್ಕೆ ಜೇನುತುಪ್ಪವನ್ನು ಸೇರಿಸಿ ಸೇವಿಸಬೇಕು.
  • ಜ್ವರ ಬಂದಾಗ, ಬೆಳ್ಳುಳ್ಳಿಯಲ್ಲಿರುವ ಡಯಾಲ್ ಸಲ್ಫೈಡ್ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಬಿಸಿನೀರಿಗೆ ಬೆಳ್ಳುಳ್ಳಿಯನ್ನು ಜಜ್ಜಿ ಸೇರಿಸಿ ಮತ್ತು 10 ನಿಮಿಷಗಳ ನಂತರ ಕುಡಿಯಿರಿ.
  • ಬೆನ್ನು ನೋವಿಗೆ ಮಸಾಜ್ ಮಾಡಲು, ಬಾಣಲೆಯಲ್ಲಿ 4-5 ಟೀಸ್ಪೂನ್ ತೆಂಗಿನ ಎಣ್ಣೆಯನ್ನು ಸೇರಿಸಿ ಮತ್ತು ಸಿಪ್ಪೆ ಸುಲಿದ ಬೆಳ್ಳುಳ್ಳಿಯ 6 ಎಸಳುಗಳನ್ನು ಸೇರಿಸಿ. ಬೆಳ್ಳುಳ್ಳಿ ಗಾಢ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಈಗ ತಣ್ಣಗಾದ ಬಳಿಕ ನೋವಿರುವ ಜಾಗಕ್ಕೆ ಮಸಾಜ್ ಮಾಡಿ.

ಇದಲ್ಲದೆ ಇತರ ಕೆಲವು ಸಾಮಾನ್ಯ ಪದಾರ್ಥಗಳ ಉಪಯೋಗಗಳು ಕೂಡಾ ಇವೆ:

  • ಉತ್ತಮ ಕರುಳು, ಮಧುಮೇಹ ನಿವಾರಣೆ, ಸೌಂದರ್ಯ ವೃದ್ಧಿ, ರಕ್ತದೊತ್ತಡ ನಿಯಂತ್ರಣ ಮತ್ತು ತೂಕ ನಷ್ಟಕ್ಕೆ ಮೆಂತ್ಯ ಬೀಜಗಳು ಸಹಕಾರಿ.
  • ನರಮಂಡಲ, ಉಸಿರಾಟದ ವ್ಯವಸ್ಥೆ, ರಕ್ತಪರಿಚಲನಾ ವ್ಯವಸ್ಥೆ, ಜೀರ್ಣಾಂಗ ವ್ಯವಸ್ಥೆ, ಮೂತ್ರ ವ್ಯವಸ್ಥೆ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆಗೆ ಹಿಂಗ್ ಉಪಕಾರಿ.
  • ಮಧುಮೇಹ, ಬೊಜ್ಜು, ಹೃದಯ ಆರೋಗ್ಯ, ಆಳವಾದ ರಕ್ತನಾಳದ ಥ್ರಂಬೋಸಿಸ್ (ಡಿವಿಟಿ), ಅತಿಸಾರ, ಸೈನಸ್ ಸಮಸ್ಯೆಗಳು, ಚರ್ಮ, ಕೂದಲು ಮತ್ತು ಉಗುರಿನ ಆರೈಕೆಗಾಗಿ ಆಪಲ್ ಸೈಡರ್ ವಿನೆಗರ್ ಸಹಕಾರಿ.
  • ಜೀರ್ಣಕಾರಿ ಅಸ್ವಸ್ಥತೆಗಳು, ವಾಕರಿಕೆ, ಮಧುಮೇಹ, ಕಣ್ಣುಗಳ ಆರೋಗ್ಯ, ಬೊಜ್ಜು, ಗಾಯವನ್ನು ಗುಣಪಡಿಸುವುದು, ಕೂದಲು ಉದುರುವಿಕೆಗೆ ಕರಿಬೇವಿನ ಎಲೆಗಳು ಉಪಕಾರಿ.
    ಮನೆಮದ್ದು

ಕೆಲವು ಸಾಮಾನ್ಯ ಆರೋಗ್ಯ ಸ್ಥಿತಿಗಳು:

ರೋಗನಿರೋಧಕ ಶಕ್ತಿ ವೃದ್ಧಿಸಲು:

ಕೋವಿಡ್-19 ತಡೆಗಟ್ಟುವ ಸಲುವಾಗಿ ವೈದ್ಯಕೀಯ ಮತ್ತು ಸರ್ಕಾರಿ ಅಧಿಕಾರಿಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬಗ್ಗೆ ಒತ್ತು ನೀಡಿದರು. ಅಡುಗೆಮನೆಯಲ್ಲಿಯೇ ಅನೇಕ ಗಿಡಮೂಲಿಕೆಗಳು ಮತ್ತು ಮಸಾಲೆಗಳು ಇದ್ದು, ಅವುಗಳು ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

  • ದಿನವಿಡೀ ಬೆಚ್ಚಗಿನ ನೀರು ಸೇವಿಸುವುದು ಉತ್ತಮ.
  • ತುಳಸಿ, ಡಾಲ್ಚಿನ್ನಿ, ಕರಿಮೆಣಸು, ಶುಂಠಿ) ಮತ್ತು ಒಣದ್ರಾಕ್ಷಿಯಿಂದ ತಯಾರಿಸಿದ ಕಷಾಯ ದಿನಕ್ಕೆ ಒಂದು ಅಥವಾ ಎರಡು ಬಾರಿ ಸೇವಿಸಲು ಆಯುಷ್ ಶಿಫಾರಸು ಮಾಡಿದೆ. ಅಗತ್ಯವಿದ್ದರೆ ಬೆಲ್ಲ ತಾಜಾ ನಿಂಬೆ ರಸವನ್ನು ಸೇರಿಸಬಹುದು.
  • 'ಆಲಿಸಿನ್' ಬೆಳ್ಳುಳ್ಳಿಯ ಮುಖ್ಯ ಸಕ್ರಿಯ ಘಟಕಾಂಶವಾಗಿದ್ದು, ಇದು ದೇಹದ ಆಂತರಿಕ ರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಕಚ್ಚಾ ಬೆಳ್ಳುಳ್ಳಿಯ ಸೇವನೆಯು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
  • ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅರಿಶಿನ ಹಾಲು ಉತ್ತಮವಾಗಿದೆ. ಬಿಸಿ ಹಾಲಿಗೆ ಅರಿಶಿನ ಪುಡಿಯನ್ನು ಸೇರಿಸಿ ದಿನಕ್ಕೆ ಒಂದು ಅಥವಾ ಎರಡು ಬಾರಿ ಸೇವಿಸಿ.

ಅಜೀರ್ಣ ಮತ್ತು ಹೊಟ್ಟೆ ಉಬ್ಬರ:

ಅನಾರೋಗ್ಯಕರ ಆಹಾರ ಪದ್ಧತಿಯೊಂದಿಗೆ ಜನರು ಮನೆಯಲ್ಲಿ ಹೆಚ್ಚು ಸಮಯದವರೆಗೆ ಇರುವಾಗ ಹೊಟ್ಟೆ ನೋವು, ಹೊಟ್ಟೆ ಉಬ್ಬರ, ಅಜೀರ್ಣ ಮುಂತಾದ ಸಮಸ್ಯೆಗಳು ಪ್ರಾರಂಭವಾದವು. ಅವುಗಳ ನಿವಾರಣೆಗೆ ಜನರು ಪ್ರಯತ್ನಿಸಿದ ಕೆಲವು ಮನೆಮದ್ದುಗಳು ಇಲ್ಲಿವೆ:

  • ಮುಂಜಾನೆ 2 ಟೀಸ್ಪೂನ್ ಮೆಂತ್ಯೆ ಸೇವಿಸಿ. ಇದು ಕಿಬ್ಬೊಟ್ಟೆಯ ಅಸ್ವಸ್ಥತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  • 1 ಟೀಸ್ಪೂನ್ ಕಪ್ಪು ಉಪ್ಪು ಮತ್ತು 1 ಟೀಸ್ಪೂನ್ ಜೀರಿಗೆ ತೆಗೆದುಕೊಂಡು ಅದನ್ನು ಪುಡಿ ಮಾಡಿ. ಇದನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ ಮತ್ತು ಊಟ ಮಾಡಿದ ನಂತರ ಕುಡಿಯಿರಿ.
  • ಲವಂಗ, ಓಮ, ಜೀರಿಗೆ, ಕಪ್ಪು ಉಪ್ಪು ತೆಗೆದುಕೊಂಡು ಅದರಿಂದ ಪುಡಿಯನ್ನು ತಯಾರಿಸಿ. ಆಹಾರ ಸೇವಿಸಿದ ಅರ್ಧ ಘಂಟೆಯ ನಂತರ ಇದನ್ನು ತೆಗೆದುಕೊಳ್ಳಿ. ಇದು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  • ಒಂದು ಲೋಟ ಬಿಸಿನೀರನ್ನು ತೆಗೆದುಕೊಂಡು 1 ಟೀಸ್ಪೂನ್ ಶುಂಠಿ ರಸವನ್ನು ಮಿಶ್ರಣ ಮಾಡಿ. 2 ಅಥವಾ 3 ಟೀಸ್ಪೂನ್ ಜೇನುತುಪ್ಪವನ್ನು ಸೇರಿಸಿ ಅದನ್ನು ಕುಡಿಯಿರಿ.

ಜನರು ಈ ವರ್ಷ ಮನೆಯಲ್ಲಿ ಸಣ್ಣ ಸಣ್ಣ ಆರೋಗ್ಯ ಸಮಸ್ಯೆಗಳಿಗೆ ರಾಸಾಯನಿಕವಾಗಿ ಉತ್ಪತ್ತಿಯಾಗುವ ಔಷಧಗಳು ಸೇವನೆಯನ್ನು ತಪ್ಪಿಸಿ, ಮನೆಮದ್ದು ಸೇವನೆಗೆ ಆದ್ಯತೆ ನೀಡಿದರು. ರಾಸಾಯನಿಕವಾಗಿ ಉತ್ಪತ್ತಿಯಾಗುವ ಔಷಧಗಳು ಅಡ್ಡಪರಿಣಾಮಗಳನ್ನು ಹೊಂದಿವೆ. ಆದರೆ, ಹೆಚ್ಚಿನ ಮನೆಮದ್ದುಗಳು ಯಾವುದೇ ಅಡ್ಡಪರಿಣಾಮಗಳನ್ನು ಹೊಂದಿರುವುದಿಲ್ಲ. ಅದಕ್ಕಾಗಿಯೇ ಇದು ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಉಪಯುಕ್ತವಾಗಿದೆ.

ABOUT THE AUTHOR

...view details