ನ್ಯೂಯಾರ್ಕ್(ಅಮೆರಿಕ): ಕಳಪೆ ಪೋಷಕಾಂಶವೂ ಟೈಪ್ 2 ಮಧುಮೇಹ ಅಭಿವೃದ್ಧಿ ಮತ್ತು ಖಿನ್ನತೆ, ಆತಂಕದಂತಹ ಮಾನಸಿಕ ಆರೋಗ್ಯದ ಅಪಾಯ ಹೆಚ್ಚಿಸುವ ಎರಡು ಪಾತ್ರವನ್ನು ನಿರ್ವಹಣೆ ಮಾಡುತ್ತದೆ ಎಂದು ಎರಡು ಅಧ್ಯಯನಗಳು ತೋರಿಸಿದೆ.
ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ಪ್ರಕಾರ, ಮಧುಮೇಹ ಹೊಂದಿರದ ಜನರಿಗೆ ಹೋಲಿಕೆ ಮಾಡಿದಾಗ ಮಧುಮೇಹ ಹೊಂದಿರುವವರಲ್ಲಿ ಖಿನ್ನತೆ ಹೊಂದುವ ಅಪಾಯ ಎರಡರಿಂದ ಮೂರು ಪಟ್ಟು ಹೆಚ್ಚಿದೆ ಎಂದಿದೆ. ಪೋಷಕಾಂಶ ಮತ್ತು ಮಾನಸಿಕ ಆರೋಗ್ಯದ ನಡುವಿನ ಸಂಬಂಧ ಅರ್ಥೈಸಿಕೊಳ್ಳಲು ನಡೆಸಿದ ವೈಜ್ಞಾನಿಕ ಅಧ್ಯಯನದಲ್ಲಿ ಇದು ಹೊಸದಾಗಿದೆ.
ಈ ಅಧ್ಯಯನವನ್ನು ಕರ್ನಲ್ ನ್ಯೂಟ್ರಿಯೆಟ್ಸ್ನಲ್ಲಿ ಪ್ರಕಟಿಲಾಗಿದೆ. ಅಧ್ಯಯನದಲ್ಲಿ ಸಂಶೋಧಕರು ಪೋಷಕಾಂಶ, ಮಧುಮೆಹ ಮತ್ತು ಮಾನಸಿಕ ಆರೋಗ್ಯದ ನಡುವಿನ ಸಂಬಂಧವನ್ನು ತಿಳಿಯ ಬಯಸಿದ್ದಾರೆ.
ಅಧ್ಯಯನದ ಫಲಿತಾಂಶದಲ್ಲಿ, ಖಿನ್ನತೆ, ಆತಂಕ ಟೈಪ್ 2 ಮಧುಮೇಹ ಅಭಿವೃದ್ಧಿಯ ಅಪಾಯದೊಂದಿಗೆ ಸಂಬಂಧ ಹೊಂದಿದ್ದು, ಇದರ ಜೊತೆಗೆ ಮಧುಮೇಹವೂ ಖಿನ್ನತೆ, ಆತಂಕ ಹೆಚ್ಚಳದ ಅಪಾಯದೊಂದಿಗೆ ಸಂಬಂಧ ಹೊಂದಿದೆ ಎಂದು ತೋರಿಸಿದೆ. ಪೋಷಕಾಂಶವೂ ಈ ಎರಡು ಮಾನಸಿಕ ಸಮಸ್ಯೆಗೆ ಪರಿಹಾರ ಆಗಬಲ್ಲದು ಎಂಬುದನ್ನು ಸಹ ಕಂಡುಕೊಳ್ಳಲಾಗಿದೆ.