ಲಕ್ನೋ: ಮಳೆಗಾಲ ಆರಂಭವಾಗುತ್ತಿದ್ದಂತೆ ಹಲವು ರೀತಿಯ ರೋಗ-ರುಜಿನಗಳು ಹೆಚ್ಚಾಗುತ್ತಿವೆ. ಈ ಸಮಯದಲ್ಲಿ ಹೆಚ್ಚು ವಿಧದ ಸೋಂಕು ಮುನುಷ್ಯರನ್ನು ಕಾಡುತ್ತದೆ. ಅದರಲ್ಲೊಂದು ಗುಲಾಬಿ ಕಣ್ಣಿನ ಸಮಸ್ಯೆ. ಕಾಂಜೆಕ್ಟಿವಿಟಿ ಎಂದು ಕರೆಯುವ ಈ ಪ್ರಕರಣಗಳ ಸಂಖ್ಯೆ ಇದೀಗ ಉತ್ತರ ಪ್ರದೇಶದ ಲಕ್ನೋ ಆಸ್ಪತ್ರೆಯಲ್ಲಿ ಏರಿಕೆ ಕಾಣುತ್ತಿದೆ. ವೈದ್ಯರು ಮುನ್ನೆಚ್ಚರಿಕೆ ವಹಿಸುವಂತೆ ಜನರಿಗೆ ಸಲಹೆ ನೀಡಿದ್ದಾರೆ.
ಕೆಜಿಎಂಯು ಅಧಿಕಾರಿಗಳ ಪ್ರಕಾರ, ಮಾನ್ಸೂನ್ಗೆ ಮುಂಚೆ ವೈದ್ಯರು ದಿನಕ್ಕೆ 35ರಿಂದ 40 ಇಂತಹ ಪ್ರಕರಣಗಳನ್ನು ನೋಡುತ್ತಿದ್ದರು. ಇದೀಗ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ದಿನಕ್ಕೆ 40 ರಿಂದ 46 ಪ್ರಕರಣಗಳು ವರದಿ ಆಗುತ್ತಿದೆ.
ಏನಿದು ಗುಲಾಬಿ ಕಣ್ಣು?:ಮಳೆಗಾಲದಲ್ಲಿ ರೋಗಕಾರಕ ಬ್ಯಾಕ್ಟೀರಿಯಾದ ಬೆಳವಣಿಗೆಗೆ ಅನುಕೂಲಕರ ಪರಿಸ್ಥಿತಿಗಳು ಎದುರಾಗುತ್ತವೆ. ವೈರಸ್ ಅಥವಾ ಬ್ಯಾಕ್ಟೀರಿಯಾದಿಂದ ಕಣ್ಣಿನಲ್ಲಿ ಅಲರ್ಜಿ, ಕೆಂಪಾಗುವಿಕೆ, ಊತ, ಕೆಲವೊಮ್ಮೆ ಪಿಸುರು, ದೃಷ್ಟಿ ಮಂಜಾಗುವಿಕೆ, ಕಿರಿಕಿರಿ, ಬೆಳಕಿನ ಸೂಕ್ಷ್ಮತೆಯಂತಹ ಸಮಸ್ಯೆ ಜಾಸ್ತಿಯಾಗುತ್ತಿದೆ. ಕಾಂಜೆಕ್ಟಿವಿಟಿ ಪ್ರಕರಣಗಳು ಸುಲಭವಾಗಿ ಬೇರೆಯವರಿಗೆ ಹರಡುತ್ತದೆ. ಈ ಹಿನ್ನೆಲೆಯಲ್ಲಿ ಸಮಸ್ಯೆ ಕಂಡು ಬಂದಾಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಕೆಜಿಎಂಯುನ ನೇತ್ರ ತಜ್ಞ ಡಾ. ಅರುಣ್ ಕುಮಾರ್ ಶರ್ಮಾ ಹೇಳುವಂತೆ, ರೋಗಿಗಳು ತಮ್ಮ ಕಣ್ಣಿನಲ್ಲಿ ನೀರು ಮತ್ತು ಮಸುಕಿನ ಲಕ್ಷಣ ಹೊಂದುತ್ತಾರೆ. ಕಣ್ಣು ಹೆಚ್ಚು ಕೆಂಪಾದಾಗ ಅವರು ವೈದ್ಯರನ್ನು ಭೇಟಿ ಮಾಡಬೇಕು. ಕೆಲವರು ಸ್ಥಳೀಯ ಮೆಡಿಕಲ್ ಸ್ಟೋರ್ನಲ್ಲಿ ಸ್ವಯಂ ಚಿಕಿತ್ಸೆಗೆ ಒಳಗಾಗಬೇಕು. ಇಲ್ಲದೇ ಇದ್ದರೆ ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆ ಎಂದಿದ್ದಾರೆ. ಅಲ್ಲದೇ, ಕಣ್ಣಿನ ಸುರಕ್ಷತೆ, ನೈರ್ಮಲ್ಯವನ್ನು ಅನುಸರಿಸುವ ಮೂಲಕ ಸಮಸ್ಯೆ ತಡೆಗಟ್ಟಬಹುದು ಎಂದಿದ್ದಾರೆ.