ಕರ್ನಾಟಕ

karnataka

ETV Bharat / sukhibhava

ಚರ್ಮದ ಕಾಯಿಲೆಯ ಮಾತ್ರೆ ಅತಿಯಾದ ಮದ್ಯಸೇವನೆಗೆ ಔಷಧ: ಅಧ್ಯಯನ - ಅಪ್ರೆಮಿಲಾಸ್ಟ್ ಎಂದು ಕರೆಯಲ್ಪಡುವ ಔಷಧಿ

ಇತ್ತೀಚಿನ ಅಧ್ಯಯನವೊಂದರಲ್ಲಿ, ಸಾಮಾನ್ಯ ಚರ್ಮದ ಕಾಯಿಲೆಯ ಚಿಕಿತ್ಸೆಗೆ ಬಳಸುವ ಮಾತ್ರೆಯಿಂದ ಮಿತಿಮೀರಿದ ಮದ್ಯಸೇವನೆ ತಡೆಯಬಹುದು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

pill for skin disease may also curb excessive drinking
ಚರ್ಮದ ಕಾಯಿಲೆಯ ಮಾತ್ರೆಯಿಂದ ಅತಿಯಾದ ಮದ್ಯಸೇವನೆ ತಡೆಯಬಹುದು

By

Published : Feb 22, 2023, 6:04 PM IST

ಸಾಮಾನ್ಯ ಚರ್ಮದ ಕಾಯಿಲೆಗೆ ಚಿಕಿತ್ಸೆಗೆ ಬಳಸುವ ಮಾತ್ರೆಯೊಂದು ಮದ್ಯ ಸೇವನೆಯಿಂದ ಆಗುವ ಅಸ್ವಸ್ಥತೆಗೆ ಅತ್ಯಂತ ಭರವಸೆಯ ಚಿಕಿತ್ಸೆಯಾಗಿದೆ ಎಂಬುದನ್ನು ಒರೆಗಾನ್ ಹೆಲ್ತ್ ಆ್ಯಂಡ್​ ಸೈನ್ಸ್ ವಿಶ್ವವಿದ್ಯಾಲಯ ಮತ್ತು ದೇಶಾದ್ಯಂತದ ಇತರ ಸಂಸ್ಥೆಗಳ ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಈ ಅಧ್ಯಯನವನ್ನು ಇತ್ತೀಚೆಗೆ ಜರ್ನಲ್ ಆಫ್ ಕ್ಲಿನಿಕಲ್ ಇನ್ವೆಸ್ಟಿಗೇಶನ್‌ನಲ್ಲಿ ಪ್ರಕಟಿಸಲಾಗಿದೆ.

ಸರಾಸರಿಯಾಗಿ, ಅಪ್ರೆಮಿಲಾಸ್ಟ್ ಎಂದು ಕರೆಯಲ್ಪಡುವ ಔಷಧಿಗಳನ್ನು ಸ್ವೀಕರಿಸಿದ ಜನರು ತಮ್ಮ ಆಲ್ಕೋಹಾಲ್ ಸೇವನೆಯನ್ನು ಅರ್ಧಕ್ಕಿಂತಲೂ ಹೆಚ್ಚು ಅಂದರೆ ದಿನಕ್ಕೆ ಐದು ಗ್ಲಾಸ್​ ಆಲ್ಕೋಹಾಲ್​ ಕುಡಿಯುತ್ತಿದ್ದವರು ಅವುಗಳನ್ನು ಎರಡಕ್ಕೆ ಇಳಿಸಿದ್ದಾರೆ. "ನಾನು ಎಂದಿಗೂ ಈ ರೀತಿಯ ಬದಲಾವಣೆಯನ್ನು ನೋಡಿರಲಿಲ್ಲ" ಎಂದು OHSU ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ ವರ್ತನೆಯ ನರವಿಜ್ಞಾನದ (behavioural neuroscience) ಸಹಾಯಕ ಪ್ರಾಧ್ಯಾಪಕ ಮತ್ತು ಪೋರ್ಟ್‌ಲ್ಯಾಂಡ್ ವಿಎ ಹೆಲ್ತ್ ಕೇರ್ ಸಿಸ್ಟಮ್‌ನ ಸಂಶೋಧನಾ ಜೀವಶಾಸ್ತ್ರಜ್ಞ, ಸಹ-ಹಿರಿಯ ಲೇಖಕ ಏಂಜೆಲಾ ಓಜ್‌ಬರ್ನ್ ಹೇಳಿದರು.

2015 ರಿಂದ, ಓಜ್ಬರ್ನ್ ಮತ್ತು ಸಹಯೋಗಿಗಳು ಅತಿಯಾದ ಮದ್ಯದ ಬಳಕೆಗೆ ಸಂಬಂಧಿಸಿರುವ ಜೀನ್‌ಗಳ ಅಭಿವ್ಯಕ್ತಿಯನ್ನು ಪ್ರತಿರೋಧಿಸುವ ಸಾಧ್ಯತೆಯಿರುವ ಸಂಯುಕ್ತಗಳನ್ನು ಹುಡುಕುವ ಜೆನೆಟಿಕ್ ಡೇಟಾಬೇಸ್ ಅನ್ನು ಹುಡುಕಿದ್ದಾರೆ. ಅದರಲ್ಲಿ ಸೋರಿಯಾಸಿಸ್ ಮತ್ತು ಸೋರಿಯಾಟಿಕ್ ಸಂಧಿವಾತಕ್ಕೆ ಚಿಕಿತ್ಸೆ ನೀಡಲು ಬಳಸುವ ಎಫ್‌ಡಿಎ-ಅನುಮೋದಿತ ಉರಿಯೂತದ ಔಷಧವಾದ ಅಪ್ರೆಮಿಲಾಸ್ಟ್ ಭರವಸೆಯ ಸಂಯುಕ್ತವಾಗಿ ಕಂಡುಬಂದಿದೆ.

ನಂತರ ಅವರು ಅದನ್ನು ಅತಿಯಾದ ಕುಡಿತದಿಂದ ಆನುವಂಶಿಕ ಅಪಾಯ ಹೊಂದಿರುವ ಎರಡು ವಿಶಿಷ್ಟ ಪ್ರಾಣಿ ಮಾದರಿಗಳಲ್ಲಿ ಪರೀಕ್ಷಿಸಿದ್ದಾರೆ. ಹಾಗೆಯೇ ದೇಶಾದ್ಯಂತದ ಪ್ರಯೋಗಾಲಯಗಳಲ್ಲಿ ಇಲಿಗಳ ಇತರ ತಳಿಗಳ ಮೇಲೂ ಪರೀಕ್ಷಿಸಿದ್ದಾರೆ. ಪ್ರತೀ ಸಂದರ್ಭದಲ್ಲೂ ಅಪ್ರೆಮಿಲಾಸ್ಟ್​ ಮಾತ್ರೆ ವಿವಿಧ ಮಾದರಿಗಳ ನಡುವೆ ಅತಿಯಾದ ಮದ್ಯ ಸೇವನೆಯಿಂದ ಕಡಿಮೆಗೊಳಿಸುತ್ತಾ ಬಂದಿದೆ. ಆಲ್ಕೋಹಾಲ್ ಸೇವನೆಯನ್ನು ನಿಯಂತ್ರಿಸುವಲ್ಲಿ ಒಳಗೊಂಡಿರುವ ಮೆದುಳಿನ ಪ್ರದೇಶವಾದ ನ್ಯೂಕ್ಲಿಯಸ್ ಅಕ್ಯೂಂಬೆನ್ಸ್‌ನಲ್ಲಿ ಅಪ್ರೆಮಿಲಾಸ್ಟ್ ಚಟುವಟಿಕೆಯ ಹೆಚ್ಚಳವನ್ನು ಪ್ರಚೋದಿಸುತ್ತದೆ ಎಂಬುದನ್ನು ಅವರು ಕಂಡುಕೊಂಡರು.

ಕ್ಯಾಲಿಫೋರ್ನಿಯಾದ ಲಾ ಜೊಲ್ಲಾದಲ್ಲಿರುವ ಸ್ಕ್ರಿಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್‌ನ ಸಂಶೋಧಕರು ನಂತರ ಅಪ್ರೆಮಿಲಾಸ್ಟ್ ಅನ್ನು ಮನುಷ್ಯರ ಮೇಲೆ ಪರೀಕ್ಷಿಸಿದರು. ಸ್ಕ್ರಿಪ್ಸ್ ತಂಡವು 51 ದಿನಗಳ ಕಾಲ 51 ಜನರ ಮೇಲೆ ಡಬಲ್-ಬ್ಲೈಂಡ್, ಪ್ಲಸೀಬೊ-ನಿಯಂತ್ರಿತ ಕ್ಲಿನಿಕಲ್ ಪ್ರೂಫ್-ಆಫ್-ಕಾನ್ಸೆಪ್ಟ್ ಅಧ್ಯಯನವನ್ನು ನಡೆಸಿತು. 'ಪರೀಕ್ಷೆಯಲ್ಲಿ ಭಾಗವಹಿಸುವವರಲ್ಲಿ ಕುಡಿಯುವುದನ್ನು ಕಡಿಮೆ ಮಾಡುವಲ್ಲಿ ಅಪ್ರೆಮಿಲಾಸ್ಟ್​ ಪರಿಣಾಮ, ಅತಿಯಾದ ಮದ್ಯಸೇವನೆಯಿಂದ ಅಸ್ವಸ್ಥತೆ ಹೊಂದಿರುವ ಜನರಿಗೆ ಹೊಸ ಚಿಕಿತ್ಸೆಯಾಗಿ ಹೆಚ್ಚಿನ ಮೌಲ್ಯಮಾಪನಕ್ಕೆ ಇದು ಅತ್ಯುತ್ತಮ ಮಾತ್ರೆ ಎಂದು ಸೂಚಿಸುತ್ತದೆ' ಎಂದು ಸ್ಕ್ರಿಪ್ಸ್‌ನಲ್ಲಿನ ಮಾಲಿಕ್ಯುಲರ್ ಮೆಡಿಸಿನ್ ವಿಭಾಗದ ಪ್ರಾಧ್ಯಾಪಕಿ, ಸಹ-ಹಿರಿಯ ಲೇಖಕಿ ಬಾರ್ಬರಾ ಮೇಸನ್ ಹೇಳಿದರು.

ತಂಡ ನಡೆಸಿದ ಕ್ಲಿನಿಕಲ್​ ಅಧ್ಯಯನದಲ್ಲಿ ಅತಿಯಾದ ಮದ್ಯಸೇವನೆಯಿಂದ ಅಸ್ವಸ್ಥತೆ ಹೊಂದಿದ್ದು, ಯಾವುದೇ ಬೇರೆ ಚಿಕಿತ್ಸೆಗೆ ಒಳಪಡದೇ ಇದ್ದವರನ್ನು ಸೇರಿಸಿಕೊಳ್ಳಲಾಗಿತ್ತು. ತಮ್ಮ ಅತಿಯಾದ ಮದ್ಯಸೇವನೆಯನ್ನು ಕಡಿಮೆ ಮಾಡಲು ಬಯಸುವ ವ್ಯಕ್ತಿಗಳಿಗೆ ಅಪ್ರೆಮಿಲಾಸ್ಟ್ ಹೆಚ್ಚು ಪರಿಣಾಮಕಾರಿಯಾಗಬಹುದು ಎಂದು ಮೇಸನ್​ ತಿಳಿಸಿದ್ದಾರೆ. "ಚಿಕಿತ್ಸೆಯನ್ನು ಪಡೆಯುವ ಜನರ ಮೇಲೆ ಹೆಚ್ಚಿನ ಕ್ಲಿನಿಕಲ್ ಪ್ರಯೋಗಗಳನ್ನು ಮಾಡುವುದು ಅತ್ಯಗತ್ಯ. ಈ ಅಧ್ಯಯನದಲ್ಲಿ, ಅಪ್ರೆಮಿಲಾಸ್ಟ್ ಇಲಿಗಳ ಮೇಲೆ ಕೆಲಸ ಮಾಡಿದೆ ಎಂಬುದನ್ನು ನಾವು ನೋಡಿದ್ದೇವೆ. ಇದು ವಿಭಿನ್ನ ಪ್ರಯೋಗಾಲಯಗಳಲ್ಲೂ ಇದು ಕೆಲಸ ಮಾಡಿದೆ ಮತ್ತು ಇದು ಮನುಷ್ಯರ ಮೇಲೂ ಕೆಲಸ ಮಾಡಿದೆ. ಇದು ಸಾಮಾನ್ಯವಾಗಿ ವ್ಯಸನಕ್ಕೊಳಗಾದವರ ಚಿಕಿತ್ಸೆಗೆ ಬಹಳಷ್ಟು ಭರವಸೆ ನೀಡುತ್ತದೆ." ಎಂದು ಓಜ್ಬರ್ನ್ ಹೇಳಿದ್ದಾರೆ.

ಆಲ್ಕೋಹಾಲ್ ದುರುಪಯೋಗ ಮತ್ತು ಮದ್ಯಪಾನದ ರಾಷ್ಟ್ರೀಯ ಸಂಸ್ಥೆ ಪ್ರಕಾರ, ಯುನೈಟೆಡ್ ಸ್ಟೇಟ್ಸ್​ನಲ್ಲಿ ಅಂದಾಜು 95,000 ಜನರು ಆಲ್ಕೊಹಾಲ್-ಸಂಬಂಧಿತ ಕಾಯಿಲೆಗಳಿಂದ ಪ್ರತಿ ವರ್ಷ ಸಾಯುತ್ತಾರೆ. ಪ್ರಸ್ತುತ, ಯುನೈಟೆಡ್ ಸ್ಟೇಟ್ಸ್‌ನಲ್ಲಿ ಆಲ್ಕೋಹಾಲ್ ಬಳಕೆಯ ಅಸ್ವಸ್ಥತೆಗೆ ಮೂರು ಔಷಧಗಳನ್ನು ಅನುಮೋದಿಸಲಾಗಿದೆ. ಆಂಟಾಬ್ಯೂಸ್, ಇದು ಆಲ್ಕೊಹಾಲ್ ಸೇವಿಸಿದಾಗ ಹ್ಯಾಂಗೋವರ್‌ ಅನ್ನು ಹೋಲುವ ತೀವ್ರ ಸಂವೇದನೆಯನ್ನು ಉಂಟುಮಾಡುತ್ತದೆ. ಅಕಾಂಪ್ರೋಸೇಟ್, ಮೆದುಳಿನಲ್ಲಿ ರಾಸಾಯನಿಕ ಸಿಗ್ನಲಿಂಗ್ ಅನ್ನು ಸ್ಥಿರಗೊಳಿಸಲು ಯೋಚಿಸಿದ ಔಷಧಿ, ಇದು ಮರುಕಳಿಸುವಿಕೆಗೆ ಸಂಬಂಧಿಸಿದೆ. ಮತ್ತು ನಾಲ್ಟ್ರೆಕ್ಸೋನ್, ಆಲ್ಕೋಹಾಲ್ ಮತ್ತು ಒಪಿಯಾಡ್‌ಗಳ ಯೂಫೋರಿಕ್ ಪರಿಣಾಮಗಳನ್ನು ತಡೆಯುವ ಔಷಧಿ.

ಇದನ್ನೂ ಓದಿ:ಕಷ್ಟಕರ ಸಮಸ್ಯೆ ನಿರ್ವಹಣೆಗೆ ವಯಸ್ಕರಷ್ಟೇ ಬುದ್ಧಿ ಸಾಮರ್ಥ್ಯವನ್ನು ಮಕ್ಕಳು ಉಪಯೋಗಿಸುತ್ತಾರೆ; ಅಧ್ಯಯನದಲ್ಲಿ ಬಹಿರಂಗ

ABOUT THE AUTHOR

...view details