ವಾಷಿಂಗ್ಟನ್: ಕೆಲವರು ಆಹಾರವನ್ನು ಇಷ್ಟಪಟ್ಟು ಮತ್ತು ಇಷ್ಟವಿಲ್ಲದೇ ತಿನ್ನುತ್ತಾರೆ. ಆಹಾರವನ್ನು ಅಲಂಕೃತಗೊಳಿಸಿ ಉಣಬಡಿಸಿದಾಗ ಇಷ್ಟವಿಲ್ಲದೇ ತಿನ್ನುವವರ ಮೇಲೆ ಯಾವ ರೀತಿ ಪರಿಣಾಮವನ್ನು ಬೀರುತ್ತದೆ ಎಂಬುದರ ಬಗ್ಗೆ ಸಂಶೋಧಕರು ಅಧ್ಯಯನ ನಡೆಸಿದ್ದಾರೆ. ಹಿಂದಿನ ಸಂಶೋಧನೆಯಲ್ಲಿ ಆಹಾರದ ವಾಸನೆ ಮತ್ತು ವಿನ್ಯಾಸವು ಇಷ್ಟವಿಲ್ಲದೆ ತಿನ್ನುವವರ ರುಚಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಹೇಳಲಾಗಿತ್ತು.
ಪೋರ್ಟ್ಸ್‌ಮೌತ್ ವಿಶ್ವವಿದ್ಯಾನಿಲಯದ ತಂಡವು ನಡೆಸಿದ ಸಂಶೋಧನೆಯಿಂದ, ಆಹಾರವನ್ನು ಬಡಿಸುವಾಗ ವಿಧ ವಿಧವಾದ ಬಣ್ಣದಿಂದ ಬಟ್ಟಲಿನಲ್ಲಿ ಅಲಂಕಾರ ಮಾಡಿ ಬಡಸಿದಾಗ, ಅದು ರುಚಿಯ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ಕಂಡುಕೊಂಡಿದೆ.
ಈ ಪ್ರಯೋಗವು ಆಹಾರದ ನಿಯೋಫೋಬಿಯಾವನ್ನು ಅಳೆಯಲು ಸುಮಾರು 50 ಜನರನ್ನು ಒಳಗೊಂಡಿತ್ತು. ಇದರಲ್ಲಿ ಆಹಾರವನ್ನು ತಿನ್ನಲು ಅಥವಾ ಪ್ರಯತ್ನಿಸಲು ಇಷ್ಟವಿಲ್ಲದಿರುವವರು ಇದ್ದರು. ಪಿಕ್ಕಿ ಮತ್ತು ನಾನ್-ಪಿಕ್ಕಿ ಎಂದು ವಿಂಗಡಿಸಿದವರು ಇದರಲ್ಲಿ ಭಾಗವಹಿಸಿದ್ದರು. ಕೆಂಪು, ಬಿಳಿ ಮತ್ತು ನೀಲಿ ಬಣ್ಣಗಳಿಂದ ಅಲಂಕಾರ ಮಾಡಿ ಬಡಿಸಿದ ಒಂದೇ ರೀತಿಯ ತಿಂಡಿಗಳ ರುಚಿ ನೋಡಿದರು. ಆಹಾರದ ರುಚಿಯಿಂದ ತಿನ್ನಲು ಇಷ್ಟಪಡದವರು ಆಹಾರದ ಮೇಲೆ ಮಾಡಲಾದ ಅಲಂಕಾರ ಮತ್ತು ಅದರ ಬಣ್ಣವನ್ನು ನೋಡಿ ತಿಂದಿದ್ದಾರೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.
ನಿರ್ದಿಷ್ಟವಾಗಿ ಹೇಳುವುದಾದರೆ, ತಿಂಡಿಯನ್ನು ಕೆಂಪು, ನೀಲಿ ಮತ್ತು ಬಿಳಿ ಬಟ್ಟಲಿನಲ್ಲಿ ಬಡಿಸಿದಾಗ ಉಪ್ಪಿನಂಶ ಹೆಚ್ಚು ಎಂದು ರೇಟ್ ಮಾಡಲಾಗಿದೆ. UK ಯಲ್ಲಿ ಉಪ್ಪು ತಿಂಡಿಗಳನ್ನು ಹೆಚ್ಚಾಗಿ ನೀಲಿ ಪ್ಯಾಕೇಜಿಂಗ್‌ನಲ್ಲಿ ಮಾರಾಟ ಮಾಡಲಾಗುತ್ತದೆ. ಇದು ಉಪ್ಪಿನಂಶದ ಕೆಲವು ಸಂಶೋಧನೆಗಳನ್ನು ವಿವರಿಸುತ್ತದೆ ಎಂದು ತಂಡವು ನಂಬುತ್ತದೆ.